Ranbir Kapoor: ಮದುವೆಯ ಬಳಿಕ ರಣಬೀರ್ ಕಪೂರ್ ತುಂಬಾನೇ ಬದಲಾಗಿದ್ದಾರಂತೆ! ತಾಯಿ ನೀತು ಕಪೂರ್ ಹೀಗಂದ್ದಿದ್ದೇಕೆ?

ಇತ್ತೀಚೆಗೆ ಮದುವೆಯಾದ ಬಾಲಿವುಡ್ ನಟ ರಣಬೀರ್ ಕಪೂರ್ ಅವರ ಬಗ್ಗೆ ಹೇಳುತ್ತಿದ್ದಾರೆ ನೋಡಿ. ಅಷ್ಟಕ್ಕೂ ಈ ಮಾತನ್ನು ಹೇಳಿದವರು ಯಾರು ಅಂತ ನಿಮಗೆ ಗೊತ್ತೇ? ಖುದ್ದು ಅವರ ತಾಯಿಯಾದ ನೀತು ಕಪೂರ್ ಅವರೇ ತಮ್ಮ ಮಗನ ಬಗ್ಗೆ ಇಂತಹ ಮಾತುಗಳನ್ನು ಆಡುತ್ತಿದ್ದಾರೆ ಎಂದು ಹೇಳಿದರೆ ನಿಮಗೆ ಸ್ವಲ್ಪ ಶಾಕ್ ಆಗುವುದು ಗ್ಯಾರೆಂಟಿ.

ರಣಬೀರ್ ಕಪೂರ್, ಆಲಿಯಾ ಮತ್ತು ನೀತು ಕಪೂರ್

ರಣಬೀರ್ ಕಪೂರ್, ಆಲಿಯಾ ಮತ್ತು ನೀತು ಕಪೂರ್

  • Share this:
ಸಾಮಾನ್ಯವಾಗಿ ಯಾವುದೇ ವ್ಯಕ್ತಿ (Person) ಯಾರನ್ನಾದರೂ ಮದುವೆಯಾಗಲಿ (Marriage), ‘ಅವನು ಮದುವೆಯಾದ ನಂತರ ತುಂಬಾನೇ ಬದಲಾಗಿದ್ದಾನೆ, ಮೊದಲಿನ ಥರ ಇಲ್ಲ ಬಿಡಿ ಅವನು’ ಎಂಬ ಮಾತುಗಳು ನಮ್ಮ ಕಿವಿಯ ಮೇಲೆ ಅನೇಕ ಬಾರಿ ಬಿದ್ದಿರುತ್ತದೆ. ಇದೇ ಮಾತನ್ನು ಈಗ ಇತ್ತೀಚೆಗೆ ಮದುವೆಯಾದ ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಅವರ ಬಗ್ಗೆ ಹೇಳುತ್ತಿದ್ದಾರೆ ನೋಡಿ. ಅಷ್ಟಕ್ಕೂ ಈ ಮಾತನ್ನು ಹೇಳಿದವರು ಯಾರು ಅಂತ ನಿಮಗೆ ಗೊತ್ತೇ? ಖುದ್ದು ಅವರ ತಾಯಿಯಾದ ನೀತು ಕಪೂರ್ (Neethu Kapoor) ಅವರೇ ತಮ್ಮ ಮಗನ ಬಗ್ಗೆ ಇಂತಹ ಮಾತುಗಳನ್ನು ಆಡುತ್ತಿದ್ದಾರೆ ಎಂದು ಹೇಳಿದರೆ ನಿಮಗೆ ಸ್ವಲ್ಪ ಶಾಕ್ ಆಗುವುದು ಗ್ಯಾರೆಂಟಿ.

ತನ್ನ ಮಗ, ಸೊಸೆಯ ಬಗ್ಗೆ ಹೇಳಿಕೊಂಡ ನೀತು ಕಪೂರ್
ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಅವರ ವಿವಾಹವು ಈ ವರ್ಷದ ಅತ್ಯಂತ ಚರ್ಚಿತ ಘಟನೆಗಳಲ್ಲಿ ಒಂದಾಗಿತ್ತು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಜೋಡಿ ಏಪ್ರಿಲ್ 14 ರಂದು ಖಾಸಗಿಯಲ್ಲಿಯೇ ಅದ್ದೂರಿಯಾಗಿ ವಿವಾಹವಾದರು. ಈಗ, ಆಲಿಯಾ ಅವರ ಅತ್ತೆ ಎಂದರೆ ಹಿರಿಯ ನಟಿ ನೀತು ಕಪೂರ್ ಮದುವೆಯ ನಂತರದ ಜೀವನದ ಬಗ್ಗೆ ಮತ್ತು ಮಗ-ಸೊಸೆ ಹೇಗಿದ್ದಾರೆ ಎಂಬುದರ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ ನೋಡಿ.

ಇದನ್ನೂ ಓದಿ:  Prabhas: ದೀಪಿಕಾ ಮೇಲೆ ಅಸಮಾಧಾನಗೊಂಡ ಪ್ರಭಾಸ್, ರೂಮರ್ಸ್​ಗಳ ಬಗ್ಗೆ ಸ್ಪಷ್ಟನೆ ನೀಡಿದ ಅಶ್ವಿನಿದತ್

ತಮ್ಮ ಮುಂಬರುವ ಫ್ಯಾಮಿಲಿ ಎಂಟರ್ಟೈನರ್ ‘ಜುಗ್ ಜುಗ್ ಜೀಯೋ’ ಚಿತ್ರದ ಪ್ರಚಾರದಲ್ಲಿದ್ದ ನೀತು ಕಪೂರ್ ಅವರು ರಣಬೀರ್ ಮದುವೆಯ ನಂತರ ಅವರ ಜೀವನವು ಹೇಗೆ ಬದಲಾಗಿದೆ ಎಂಬುದರ ಬಗ್ಗೆ ಸುದ್ದಿ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ . ಆದರೆ ನೀತು ಅವರು ತಮ್ಮ ಮಗನ ಬದಲಾವಣೆಯನ್ನು ಒಳ್ಳೆಯ ರೀತಿಯ ಬದಲಾವಣೆ ಎಂದು ಹೇಳಿದ್ದಾರೆ.

ಸೊಸೆ ಬಗ್ಗೆ ಹೇಳಿದ್ದು ಹೀಗೆ
"ನಾನು ಇಂದು ತುಂಬಾನೇ ಸಂತೋಷವಾಗಿದ್ದೇನೆ. ಏಕೆಂದರೆ ನನ್ನ ಸೊಸೆ ಆಲಿಯಾ ನನ್ನ ಮಗನಿಗೆ ಸಾಕಷ್ಟು ಪ್ರೀತಿ ಮತ್ತು ಆತ್ಮೀಯತೆಯನ್ನು ನೀಡುತ್ತಾಳೆ. ಅವನಲ್ಲಿನ ಆ ಬದಲಾವಣೆಯನ್ನು ನಾನು ನೋಡುತ್ತಿದ್ದೇನೆ. ಅವರು ಇಬ್ಬರು ದಂಪತಿಗಳು ಒಟ್ಟಿಗೆ ತುಂಬಾನೇ ಚೆನ್ನಾಗಿ ಕಾಣುತ್ತಾರೆ. ಆಲಿಯಾ ನಮ್ಮ ಕುಟುಂಬಕ್ಕೆ ಬಂದಿರುವುದಕ್ಕೆ ನಾನು ತುಂಬಾ ಸಂತೋಷವಾಗಿದ್ದೇನೆ ಮತ್ತು ನನ್ನನ್ನು ನಾನು ತುಂಬಾನೇ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ" ಎಂದು ನೀತು ಅವರ ಮಗನ ಮತ್ತು ಸೊಸೆಯ ಬಗ್ಗೆ ಹೇಳಿದ್ದಾರೆ. ಆದ್ದರಿಂದ, ಜೀವನವು ನಿಜವಾಗಿಯೂ ಬದಲಾಗಿದೆ ಮತ್ತು ನಾನು ಈ ಬದಲಾವಣೆಯಿಂದ ತುಂಬಾನೇ ಸಂತೃಪ್ತಳಾಗಿದ್ದೇನೆ ಎಂದು ನಟಿ ನೀತು ಅವರು ಹೇಳಿದರು.

ಇದನ್ನೂ ಓದಿ:  Father's Day Special: ಅಪ್ಪ-ಮಗ ಅಂದ್ರೆ ಹೀಗಿರಬೇಕು, ಕೊನೆ ಸಿನಿಮಾದಲ್ಲೂ ಒಂದೇ ಸಂದೇಶ ಕೊಟ್ಟ ಪುನೀತ್-ರಾಜ್​ಕುಮಾರ್!

“ಯಾವುದೇ ತಂದೆ ತಾಯಂದಿರಿಗೆ ತಮ್ಮ ಮಕ್ಕಳ ಮದುವೆ ಇನ್ನೂ ಆಗಿಲ್ಲ ಅಂತ ಚಿಂತೆ ಇರುತ್ತಲ್ಲ, ಅದು ಈವಾಗ ಇಲ್ಲ. ಮದುವೆ ಆಗಿ ಹೋಗಿದೆ" ಎಂದು ನೀತು ಹೇಳಿದರು. ಇವರಿಬ್ಬರ ಆತ್ಮೀಯ ವಿವಾಹವು ಚರ್ಚೆಯ ಮತ್ತೊಂದು ವಿಷಯವಾಗಿತ್ತು. ಮದುವೆಯಲ್ಲಿ ಸುಮಾರು 40 ನಿಕಟ ಸದಸ್ಯರಿಗೆ ಮಾತ್ರ ಅವಕಾಶ ನೀಡಲಾಯಿತು. "ಇದು ಅನೇಕರಿಗೆ ಮಾದರಿಯಾಗಿದೆ. ನೀವು ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡಿ ಮದುವೆಯನ್ನು ಮಾಡಬೇಕಾಗಿಲ್ಲ. ನೀವು ಸಂತೋಷವಾಗಿರಬೇಕು ಅಷ್ಟೇ ಮುಖ್ಯವಾಗುತ್ತದೆ ಮತ್ತು ಕುಟುಂಬವು ಆನಂದಿಸುವ ಮದುವೆಯನ್ನು ನೀವು ಮಾಡಬೇಕು. ಇಲ್ಲದಿದ್ದರೆ, ನಾವು ಬೇರೆಯವರನ್ನು ಖುಷಿ ಪಡಿಸುವುದರಲ್ಲಿಯೇ ಮುಳುಗಿ ಹೋಗುತ್ತೇವೆ" ಎಂದು ನಟಿ ಹೇಳಿದರು.

ನೀತು ಕಪೂರ್ ಅವರ ಮುಂದಿನ ಸಿನೆಮಾ
ನೀತು ಅನೇಕ ಸಂದರ್ಭಗಳಲ್ಲಿ ಹೆಮ್ಮೆಯ ಅತ್ತೆಯಂತೆ ತಮ್ಮ ಸೊಸೆ ಆಲಿಯಾ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ. 2010ರ 'ದೊ ದೂನಿ ಚಾರ್' ಚಿತ್ರದ ನಂತರ 'ಜುಗ್ ಜುಗ್ ಜೀಯೋ' ಚಿತ್ರದ ಮೂಲಕ ನೀತು ಮತ್ತೊಮ್ಮೆ ಬಾಲಿವುಡ್ ಗೆ ಮರಳಲಿದ್ದಾರೆ. ಈ ಚಿತ್ರದಲ್ಲಿ ಅನಿಲ್ ಕಪೂರ್, ವರುಣ್ ಧವನ್, ಕಿಯಾರಾ ಅಡ್ವಾಣಿ ಮತ್ತು ಮನೀಶ್ ಪಾಲ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೂನ್ 24 ರಂದು ಈ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
Published by:Ashwini Prabhu
First published: