ಶೂಟಿಂಗ್ ಕಂಪ್ಲೀಟ್ ಮಾಡಿದ ಪೆಟ್ರೋಮ್ಯಾಕ್ಸ್!; ಇದು ನೀರ್​ದೋಸೆ ನಿರ್ದೇಶಕನ ಸಿನಿಮಾ!

petromax kannada movie: ಸತೀಶ್ ನೀನಾಸಂ ಹಾಗೂ ಹರಿಪ್ರಿಯಾ ನಟನೆಯ ‘ಪೆಟ್ರೋಮ್ಯಾಕ್ಸ್’ ಸಿನಿಮಾ ಚಿತ್ರೀಕರಣ ಮುಗಿಸಿಕೊಂಡಿದೆ. ಬಹುತೇಕ ಸಿನಿಮಾವನ್ನು ಮೈಸೂರಿನಲ್ಲಿ ಶೂಟಿಂಗ್ ಮಾಡಿಕೊಂಡಿರುವ ತಂಡ, ಇದೀಗ ಕುಂಬಳಕಾಯಿಯನ್ನೂ ಅರಮನೆ ನಗರಿಯಲ್ಲಿಯೇ ಒಡೆದಿದೆ, ಆ ಮೂಲಕ ಹೊಸ ವರ್ಷದ ಮೊದಲ ದಿನವೇ ಬಿಡುಗಡೆಯತ್ತ ಚಿತ್ತ ನೆಟ್ಟಿದೆ

ಪೆಟ್ರೋಮ್ಯಾಕ್ಸ್

ಪೆಟ್ರೋಮ್ಯಾಕ್ಸ್

  • Share this:
ವಿಜಯ್ ಪ್ರಸಾದ್ ನಿರ್ದೇಶನದಲ್ಲಿ 2016ರಲ್ಲಿ ನೀರ್ ದೋಸೆ ಸಿನಿಮಾ ರಿಲೀಸ್ ಆಗಿತ್ತು. ಅದಾಗಿ ನಾಲ್ಕು ವರ್ಷಗಳಾಗಿವೆ. ವಿಜಯ ಪ್ರಸಾದ್ ನಿರ್ದೇಶನದ ಯಾವುದೇ ಚಿತ್ರಗಳು ತೆರೆಗೆ ಬಂದಿಲ್ಲ. ಈ ಗ್ಯಾಪ್ ನಲ್ಲಿ ವಿಜಯ್ ಪ್ರಸಾದ್ ನಿರ್ದೇಶನದ ಮೂರ್ನಾಲ್ಕು ಚಿತ್ರಗಳು ಘೋಷಣೆಯಾದವು. ಅದರಲ್ಲಿ ಜಗ್ಗೇಶ್, ಧನಂಜಯ್ ನಟನೆಯ ‘ತೋತಾಪುರಿ’ ಶೂಟಿಂಗ್ ಕೂಡ ನಡೆಸಿದೆ. ಹಾಗೆಯೇ, ಲೂಸ್ ಮಾದ ಯೋಗಿ, ಸತೀಶ್ ನಟನೆಯಲ್ಲಿ ಮತ್ತೊಂದು ಸಿನಿಮಾ ಅನೌನ್ಸ್ ಆಗಿತ್ತು. ಅದುವೇ ‘ಪರಿಮಳ ಲಾಡ್ಜ್’, ಈ  ಚಿತ್ರದ ಟೀಸರ್ ಸಹ ರಿಲೀಸ್ ಆಗಿ ಸೌಂಡ್ ಮಾಡಿತ್ತು. ಆದರೆ ಕಾರಣಾಂತರಗಳಿಂದ ಪರಿಮಳ ಲಾಡ್ಜ್ ಸಿನಿಮಾ ಸಹ ಕಂಪ್ಲೀಟ್ ಆಗಲಿಲ್ಲ. ಆದರೀಗ ಶುರುವಾದ ಫೋರ್ಸ್​ನಲ್ಲೇ, ಅಷ್ಟೇ ವೇಗವಾಗಿ ಶೂಟಿಂಗ್ ಮುಗಿಸಿ ಕುಂಬಳಕಾಯಿ ಹೊಡೆದಿದೆ ಪೆಟ್ರೋಮ್ಯಾಕ್ಸ್.

ಹೌದು. ಸತೀಶ್ ನೀನಾಸಂ ಹಾಗೂ ಹರಿಪ್ರಿಯಾ ನಟನೆಯ ‘ಪೆಟ್ರೋಮ್ಯಾಕ್ಸ್’ ಸಿನಿಮಾ ಚಿತ್ರೀಕರಣ ಮುಗಿಸಿಕೊಂಡಿದೆ. ಬಹುತೇಕ ಸಿನಿಮಾವನ್ನು ಮೈಸೂರಿನಲ್ಲಿ ಶೂಟಿಂಗ್ ಮಾಡಿಕೊಂಡಿರುವ ತಂಡ, ಇದೀಗ ಕುಂಬಳಕಾಯಿಯನ್ನೂ ಅರಮನೆ ನಗರಿಯಲ್ಲಿಯೇ ಒಡೆದಿದೆ, ಆ ಮೂಲಕ ಹೊಸ ವರ್ಷದ ಮೊದಲ ದಿನವೇ ಬಿಡುಗಡೆಯತ್ತ ಚಿತ್ತ ನೆಟ್ಟಿದೆ.

ಈ ಸಿನಿಮಾದಲ್ಲಿ ಚೇಷ್ಠೆಯೇ ಮುಖ್ಯ ಕಥಾಹಂದರ. ಆ ಹಿನ್ನೆಲೆಯನ್ನಿಟ್ಟುಕೊಂಡೆ  ಸಿನಿಮಾ ನೋಡಿಸಿಕೊಂಡು ಹೋಗುತ್ತಂತೆ. ಇಲ್ಲಿ ಸಾಮಾನ್ಯರ ಬದುಕಿನಲ್ಲಿ ನಡೆಯುವ ಕಥೆಯನ್ನು ತೋರಿಸಲಿದ್ದೇವೆ. ಇದು ಚಿತ್ರದ ಮಹತ್ವದ ಘಟ್ಟ ಎನ್ನುವ ನಟ ಸತೀಶ್ ನೀನಾಸಂ, ಕಳೆದ ಮೂರು ವರ್ಷದ ಹಿಂದೆಯೇ ಈ ಸಿನಿಮಾ ಶುರುವಾಗಬೇಕಿತ್ತು. ಕಾರಣಾಂತರಗಳಿಂದ ಆಗಲಿಲ್ಲ. ಆ ಬಗ್ಗೆ ನಿರ್ದೇಶಕರಿಗೆ ನಾನು ಕೇಳುತ್ತಲೇ ಬಂದೆ. ಕೊರೋನಾ ಸಮಯದಲ್ಲಿ ಚಿತ್ರ ಮಾಡುವ ಮನಸ್ಸಾಯ್ತು. ಇದೀಗ ಶೂಟಿಂಗ್​ ಸಹ ಮುಗಿಸಿದ್ದೇವೆ ಎಂಬುದು ಸತೀಶ್ ಅಂಬೋಣ.ಸತೀಶ್ ನೀನಾಸಂಗೆ, ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದಾರೆ. ಹಾಗೆ ಚಿತ್ರದ ಪ್ರಮುಖ ಪಾತ್ರದಲ್ಲಿ  ಕಾರುಣ್ಯ ರಾಮ್ ಕಾಣಿಸಿಕೊಂಡಿದ್ದಾರೆ. ವಿಶೇಷ ಪಾತ್ರದಲ್ಲಿ ವಿಜಯಲಕ್ಷ್ಮೀ ಸಿಂಗ್ ನಟಿಸಿದ್ದಾರೆ.
ಅಂದಹಾಗೆಯೇ, ಒಟ್ಟು 36 ದಿನಗಳ ಕಾಲ ಚಿತ್ರೀಕರಣ ಮಾಡಿಕೊಂಡಿರುವ ಪೆಟ್ರೋಮ್ಯಾಕ್ಸ್ ಚಿತ್ರ ತಂಡ, ಮೈಸೂರಿನಲ್ಲಿಯೇ ಶೂಟಿಂಗ್ ಶುರುಮಾಡಿ, ಅಲ್ಲಿಯೇ ಮುಗಿಸಿಕೊಂಡಿದೆ.

ಕಾರುಣ್ಯ ರಾಮ್ -ಹರಿಪ್ರಿಯಾ- ಸತೀಶ್ ನೀನಾಸಂ


ವಿಶೇಷ ಏನೆಂದರೆ ಈ ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜತಗೆ ಸತೀಶ್ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ. ಸತೀಶ್ ಪಿಕ್ಚರ್ ಹೌಸ್ ಅಡಿ ಬಂಡವಾಳ ಹೂಡಿದ್ದಾರೆ ಸತೀಶ್ ನೀನಾಸಂ. ಸ್ಟುಡಿಯೋ 18 ಮತ್ತು ಪೆಟ್ರೋಮ್ಯಾಕ್ಸ್ ಪಿಕ್ಚರ್ಸ್ ಸಹ ನಿರ್ಮಾಣದಲ್ಲಿ ಸಾಥ್ ನೀಡಿದೆ. ಕತೆ, ಚಿತ್ರಕತೆ, ಸಂಗೀತ ನಿರ್ದೇಶನ ಅನೂಪ್ ಸೀಳಿನ್, ಕ್ಯಾಮರಾ ನಿರಂಜನ್‌ಬಾಬು, ಸಂಕಲನ ಸುರೇಶ್ ಅರಸ್, ಹೊಸ್ಮನೆ ಮೂರ್ತಿ ಕಲೆ, ವಿನಯ್ ಸಹ ನಿರ್ದೇಶನ ಚಿತ್ರಕ್ಕಿದೆ. ಸದ್ಯ ಶೂಟಿಂಗ್ ಮುಗಿಸಿರೋ ಈ ಚಿತ್ರ ಪೋಸ್ಟ್ ಪ್ರೊಡಕ್ಷನ ಹಂತಕ್ಕೆ ಬಂದಿದ್ದು, ಶೀಘ್ರದಲ್ಲೇ ಥಿಯೇಟರ್ ಕದ ತಟ್ಟೋ ಸಾಧ್ಯತೆ ಇದೆ.
Published by:Harshith AS
First published: