HOME » NEWS » Entertainment » NEENA GUPTAS AUTOBIOGRAPHY LAUNCHED BY KAREEN KAPOOR STG SESR

Neena Gupta: ಬಾಲಿವುಡ್ ತಾರೆ ನೀನಾ ಗುಪ್ತಾ ಆತ್ಮಚರಿತ್ರೆ ಬಿಡುಗಡೆ; ವಿವಿಯನ್ ರಿಚರ್ಡ್ಸ್ ಸಂಬಂಧದ ಬಗ್ಗೆ ಹೇಳಿದ್ದೇನು?

ತನ್ನ ಬಾಳಿನ ಆಗು ಹೋಗು ಗಳನ್ನು ಮರೆಮಾಚಿಲ್ಲದೆ ಆತ್ಮಚರಿತ್ರೆಯಲ್ಲಿ ಸಲೀಸಾಗಿ ಬಿಚ್ಚಿಟ್ಟಿದ್ದಾರೆ ನೀನಾ ಗುಪ್ತಾ

Trending Desk
Updated:June 15, 2021, 8:49 PM IST
Neena Gupta: ಬಾಲಿವುಡ್ ತಾರೆ ನೀನಾ ಗುಪ್ತಾ ಆತ್ಮಚರಿತ್ರೆ ಬಿಡುಗಡೆ; ವಿವಿಯನ್ ರಿಚರ್ಡ್ಸ್ ಸಂಬಂಧದ ಬಗ್ಗೆ ಹೇಳಿದ್ದೇನು?
ನೀನಾ ಗುಪ್ತಾ
  • Share this:
ತಾನು ಹೃದಯಾಂತರಾಳದಿಂದ ಬಾಳ ಸಂಗಾತಿಯಾಗಿ ಪ್ರೀತಿಸಿದ ವ್ಯಕ್ತಿ, ಮದುವೆಗೆ ಮುನ್ನ ಕೆಲವೇ ದಿನಗಳು ಬಾಕಿ ಇರುವಾಗ ತನ್ನನು ತೊರೆದು ಹೋದ. ನಾನು ಈಗಲೂ ಅವನ್ನನ್ನು ಅಷ್ಟೇ ಪ್ರೀತಿಸುತ್ತಿದ್ದೇನೆ, ಎಂದು ಹೃದಯದಂಗಳವನ್ನು ಬಿಚ್ಚಿಟ್ಟು ತನ್ನ ಜೀವನದ ಪಯಣವನ್ನು ಬಾಲಿವುಡ್ ತಾರೆ ನೀನಾ ಗುಪ್ತಾ ತೆರೆದಿಟ್ಟಿದ್ದಾರೆ. ಕರೀನಾ ಕಪೂರ್ ಜೊತೆ ನಡೆದ ಸಂದರ್ಶನದಲ್ಲಿ ತನ್ನ ಬಾಳಿನ ಹಲವು ರಹಸ್ಯಗಳನ್ನು ನೀನಾ ಗುಪ್ತಾ ಸಾಮಾಜಿಕ ಜಾಲ ತಾಣವಾದ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ತನ್ನ ಬಾಳಿನ ತುಂಬು ಯೌವ್ವನದ, ಹದಿಹರೆಯ ದಿನಗಳಲ್ಲಿ ತಾವು ಒಬ್ಬಂಟಿಯಾಗಿಯೇ ಬದುಕಿದೆನು. ತಾನು ಬಾಲಿವುಡ್‌ಗೆ ಕಾಲಿರಿಸಿದ ನಂತರ ಚಿಕ್ಕ ಪುಟ್ಟ ಅಫೇರ್‌ಗಳಾದವೇ ಹೊರತು ಬಾಂಧವ್ಯಗಳು ಆಗಲಿಲ್ಲ. ತಾನು ಏಕಾಂಗಿಯಾಗಿಯೇ ಬಾಳಿನ ಬಹುಪಾಲು ಬದುಕಬೇಕಾಯಿತು ಎಂದು ತನ್ನ ನೆನಪುಗಳನ್ನು ಈ ಸಮಯದಲ್ಲಿ ನೀನಾ ಹಂಚಿಕೊಂಡರು.

ಮದುವೆಗಾಗಿ ಬಟ್ಟೆಗಳನ್ನು ಖರೀದಿಸುತ್ತಿರುವಾಗ ತಾನು ಅತಿಯಾಗಿ ಪ್ರೀತಿಸಿದ ವ್ಯಕ್ತಿಯೇ ಮದುವೆ ನಿರಾಕರಿಸುತ್ತಿರುವುದಾಗಿ ತಿಳಿಸಿದ. ಈಗಲೂ ಅದಕ್ಕೆ ಕಾರಣವೇನು ಎಂಬುದು ತಿಳಿದಿಲ್ಲ. ಅವನನ್ನು ಮದುವೆಯಾಗಲು ನಾನು ತುಂಬಾ ಇಷ್ಟಪಟ್ಟಿದ್ದೆ. ಅವನ ತಂದೆಯ ಬಗ್ಗೆ ನನಗೆ ತುಂಬಾ ಗೌರವವಿದೆ. ಆದರೆ ತಾನು ಏನುಮಾಡಲು ಸಾಧ್ಯ. ಅವನು ತನ್ನ ಪತ್ನಿ, ಮಕ್ಕಳೊಂದಿಗೆ ಹಾಯಾಗಿ ಸಂಸಾರ ಮಾಡುತ್ತಿದ್ದಾನೆ, ಎಂದು ಅವರು ತನ್ನ ಮುರಿದು ಹೋದ ಮದುವೆಯ ಬಗ್ಗೆ ಭಾವನೆಗಳನ್ನು ಮೆಲುಕು ಹಾಕುತ್ತ ತಮ್ಮ ನೆನಪುಗಳನ್ನು ಹಂಚಿಕೊಂಡರು.

ಗತ ಕಾಲದ ವೆಸ್ಟ್ ಇಂಡೀಸ್‌ನ ಮಾಜಿ ಖ್ಯಾತ ಬ್ಯಾಟ್ಸ್‌ಮನ್‌ ವಿವಿಯನ್ ರಿಚರ್ಡ್ಸ್ ಜೊತೆಗಿನ ಸಂಬಂಧದ ಕುರಿತು ಕೂಡ ತಿಳಿಸಿದ್ದಾರೆ. ರಿಚರ್ಡ್ಸ್​ ಸಂಬಂಧದಿಂದ ಹುಟ್ಟಿದ ಮಸಾಬ ಗುಪ್ತಾಳ ತಾಯಿಯಾದ ನೀನಾ " ತಾನು ತನ್ನ ಜೀವನವನ್ನು ತನ್ನ ಇಚ್ಛೆಯಂತೆ ಬಾಳಲು ಸಾಧ್ಯವಾಗಲಿಲ್ಲ. ನಾನು ತಪ್ಪು ಮಾಡಿದಾಗ ಅದನ್ನು ಒಪ್ಪಿಕೊಂಡು ಮುಂದೆ ಸಾಗಿದೆ. ವಿವಿಯನ್ ದೂರವಿದ್ದರಿಂದ ಅವನನ್ನು ಭೇಟಿಯಾಗುವುದು ತುಂಬಾ ಕಡಿಮೆ ಹಾಗೂ ಕಷ್ಟಪ್ರದವಾಗಿತ್ತು. ಸಾಮಾನ್ಯ ಜನರಂತೆ ನನಗೂ ಗಂಡ , ಮಕ್ಕಳು , ಅತ್ತೆ ಮಾವ ಹಾಗೂ ತುಂಬೂ ಮನೆಯ ಕುಟುಂಬ ಬೇಕಾಗಿತ್ತು. ಆದರೆ ಅದು ನನ್ನ ಹಣೆಬರಹದಲ್ಲಿ ಇರಲಿಲ್ಲ. ಆದ್ದರಿಂದ ಇಂತಹ ಸಂಬಂಧಗಳನ್ನು ಕಂಡಾಗ ಅಸೂಯೆ ಉಂಟಾಗುತ್ತದೆ" ಎಂದು ವಿವೇಕ್ ಮೆಹ್ರಾ ಅವರನ್ನು ಮದುವೆಯಾದ ನೀನಾ ಗುಪ್ತಾ ತನ್ನ ಮನಸ್ಸಿನ ತುಮುಲುಗಳನ್ನು ಈ ಸಮಯದಲ್ಲಿ ಹಂಚಿ ಕೊಂಡರು.

ಇದನ್ನು ಓದಿ: ಉರ್ದು ಪದ ಹೇಳಲು ತೊದಲಿದೆ ವರ; ಮುರಿದು ಬಿತ್ತು ಮದುವೆ

ತನ್ನ ಬಾಳಿನ ಆಗು ಹೋಗು ಗಳನ್ನು ಮರೆಮಾಚಿಲ್ಲದೆ ತನ್ನ ಆತ್ಮಚರಿತ್ರೆಯಲ್ಲಿ ಸಲೀಸಾಗಿ ಬಿಚ್ಚಿಟ್ಟ ನೀನಾ, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಿಂದ ಪ್ರಾರಂಭವಾದ ಬೆಳ್ಳಿತೆರೆಯ ಬದುಕು, ಮುಂಬೈಗೆ ಬಂದ ನಂತರ ಕಾಡಿದ ಒಂಟಿತನ ಹಾಗು ಬಾಲಿವುಡ್‌ನಲ್ಲಿರುವ ರಾಜಕೀಯ, ಕಾಸ್ಟಿಂಗ್ ಕೌಚ ಮುಂತಾದ ಅನುಭವಗಳನ್ನು ಈ ಪುಸ್ತಕ ಒಳಗೊಂಡಿದೆ ಎಂದು ಅವರು ಕರೀನಾ ಜೊತೆಗಿನ ಸಂದರ್ಶನದಲ್ಲಿ ತಿಳಿಸಿದರು. ಯಾವುದೇ ಗಾಡ್ ಫಾದರ್ ಇಲ್ಲದೆ ಚಿತ್ರರಂಗದಲ್ಲಿ ಬದುಕುವ ಬಗೆಯನ್ನು ಯುವ ಪೀಳಿಗೆಯ ಕಲಾವಿದರಿಗೆ ' ಸಚ್ ಕಹೂಂ ತೋ' ಮೂಲಕ ತಿಳಿಹೇಳಿದ್ದಾರೆ.
Youtube Videoನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
First published: June 15, 2021, 8:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories