ಹೈ ಪ್ರೊಫೈಲ್ ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(Narcotics Control Bureau) ಆರ್ಯನ್ ಖಾನ್ಗೆ (Aryan Khan) 'ಕ್ಲೀನ್ ಚಿಟ್' ನೀಡಿದೆ ಎಂದು ಸಿಎನ್ಎನ್-ನ್ಯೂಸ್ 18 ಗೆ ಮೂಲಗಳು ತಿಳಿಸಿವೆ. ಬಾಲಿವುಡ್ (Bollywood) ಸೂಪರ್ಸ್ಟಾರ್ ಶಾರುಖ್ ಖಾನ್ (Shah Rukh Khan) ಅವರ ಪುತ್ರನನ್ನು ಹಾಗೂ ಇನ್ನೂ ಕೆಲವರನ್ನು ಕಳೆದ ವರ್ಷ ಮುಂಬೈ ಕರಾವಳಿಯಲ್ಲಿ ಕ್ರೂಸ್ ದಾಳಿ ನಡೆಸಿ ಡ್ರಗ್ಸ್ ಪತ್ತೆಯಾದ ಕಾರಣ ಇತರ ಹಲವರನ್ನು ಬಂಧಿಸಿತ್ತು, ಬಳಿಕ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಡ್ರಗ್ಸ್ ಪ್ರಕರಣದಲ್ಲಿ 14 ಮಂದಿಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಸಾಕ್ಷ್ಯಾಧಾರಗಳ ಕೊರತೆಯಿಂದ ಆರು ಮಂದಿ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ. ಡಾಕ್ಯುಮೆಂಟ್ ಸಲ್ಲಿಸಲು ಕೋರ್ಟ್ ನೀಡಿದ್ದ 60 ದಿನಗಳ ವಿಸ್ತರಣಾ ಅವಧಿಯು ಮೇ 29 ರಂದು ಮುಕ್ತಾಯಗೊಳ್ಳುತ್ತಿದ್ದಂತೆ ಎನ್ಸಿಬಿ ತನ್ನ 'ಅಂತಿಮ' ಆರೋಪಪಟ್ಟಿಯನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಆರ್ಯನ್ ಬಳಿ ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. “02.10.2021 ರಂದು NCB ಮುಂಬೈನ ಇನ್ಪುಟ್ ಆಧರಿಸಿ, ಕಾರ್ಡೆಲಿಯಾ ಕ್ರೂಸ್ನಲ್ಲಿ ಇಂಟರ್ನ್ಯಾಷನಲ್ ಪೋರ್ಟ್ ಟರ್ಮಿನಲ್, MbPT ಮತ್ತು ನೂಪುರ್, ಮೊಹಕ್ ಮತ್ತು ಮುನ್ಮುನ್ನಲ್ಲಿ ವಿಕ್ರಾಂತ್, ಇಶ್ಮೀತ್, ಅರ್ಬಾಜ್, ಆರ್ಯನ್ ಮತ್ತು ಗೋಮಿತ್ ಅನ್ನು ತಡೆದು ಪರಿಶೀಲನೆ ಮಾಡಲಾಗಿತ್ತು. ಆರ್ಯನ್ ಮತ್ತು ಮೊಹಕ್ ಹೊರತುಪಡಿಸಿ ಎಲ್ಲಾ ಆರೋಪಿಗಳು ಮಾದಕ ದ್ರವ್ಯಗಳನ್ನು ಹೊಂದಿದ್ದರು ಎಂದು ಸಂಸ್ಥೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಆರ್ಯನ್ ಖಾನ್ ಡ್ರಗ್ಸ್ ಕೇಸ್ ಸಂಬಂಧ ಎನ್ಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು. ಇದೀಗ ಎನ್ಸಿಬಿ ಅಧಿಕಾರಿಗಳು ಆರ್ಯನ್ಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ದಾಳಿ ವೇಳೆ ಆರ್ಯನ್ ಖಾನ್ ಬಳಿ ಡ್ರಗ್ಸ್ ಪತ್ತೆಯಾಗಿಲ್ಲ. ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಸಿಂಡಿಕೇಟ್ನ ಭಾಗವಾಗಿದ್ದರು ಎಂಬ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಎಸಿಬಿ ವರದಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಜಾಕ್ಲಿನ್ ಗಾಗಿ ಕಿಚ್ಚ ಸ್ಪೆಷಲ್ ಡ್ಯಾನ್ಸ್, ರಕ್ಕಮ್ಮ ಸ್ಟೆಪ್ ಈಗ ಸಖತ್ ವೈರಲ್
ಕಳೆದ ವರ್ಷ ಅಕ್ಟೋಬರ್ 2ರಂದು ಡ್ರಗ್ಸ್ ಪಾರ್ಟಿ ಮೇಲೆ ಎನ್ಸಿಬಿ ದಾಳಿ ಮಾಡಿತ್ತು. ಮುಂಬೈನ ಗ್ರೀನ್ ಗೇಟ್ನಲ್ಲಿರುವ ಅಂತರಾಷ್ಟ್ರೀಯ ಕ್ರೂಸ್ ಟರ್ಮಿನಲ್ನಲ್ಲಿ ಕ್ರೂಸ್ ಹಡಗಿನ ಕಾರ್ಡೆಲಿಯಾ ಮೇಲೆ ದಾಳಿ ನಡೆಸಲಾಗಿತ್ತು. ಡ್ರಗ್ಸ್ ಪಾರ್ಟಿಯ ಖಚಿತ ಆಧಾರದ ಮೇಲೆ ಕಳೆದ ವರ್ಷ ಅಕ್ಟೋಬರ್ 2 ರ ರಾತ್ರಿ ಅಧಿಕಾರಿಗಳು ಮತ್ತು ಕೆಲವು ಸಾಕ್ಷಿಗಳ ತಂಡ ರೇಡ್ ಮಾಡಿತ್ತು.
ಆ ವೇಳೆ ಕ್ರೂಸ್ ಹಡಗಿನಿಂದ 13 ಗ್ರಾಂ ಕೊಕೇನ್, ಐದು ಗ್ರಾಂ ಮೆಫೆಡ್ರೋನ್, 21 ಗ್ರಾಂ ಗಾಂಜಾ, 22 ಎಂಡಿಎಂಎ (ಎಕ್ಸ್ಟಸಿ) ಮಾತ್ರೆಗಳು ಮತ್ತು ₹ 1.33 ಲಕ್ಷ ನಗದನ್ನು ಎನ್ಸಿಬಿ ವಶಪಡಿಸಿಕೊಂಡಿತ್ತು. ಈ ಪಾರ್ಟಿಯಲ್ಲಿ ಸ್ನೇಹಿತರ ಜೊತೆಗೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸಹ ಇದ್ದರು.
ಇದನ್ನೂ ಓದಿ: ಫ್ರೆಂಡ್ ಮದ್ವೆಯಲ್ಲಿ ರಶ್ಮಿಕಾ ಫುಲ್ ಬ್ಯುಸಿ, ಈ ಸಲ ಎಷ್ಟು ಚೆಂದದ ಸೀರೆ ಉಟ್ಟು ರೆಡಿಯಾಗಿದ್ದಾರೆ ನೋಡಿ ಕೊಡಗಿನ ಕುವರಿ
ಪ್ರಕರಣದ ವಿಚಾರಣೆ ಬಾಂಬೆ ಹೈಕೋರ್ಟ್ನಲ್ಲಿ ನಡೆದಿತ್ತು. ಜೈಲಿನಲ್ಲಿದ್ದ ಶಾರುಖ್ ಖಾನ್ ಪುತ್ರನಿಗೆ 2021ರ ಅಕ್ಟೋಬರ್ 28 ರಂದು ಜಾಮೀನು ನೀಡಲಾಗಿತ್ತು. ಇದೀಗ ಆರ್ಯನ್ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ