ನಟಿ ನಯನತಾರಾ (Nayanthara) ಅವರು ನಿರ್ದೇಶಕ ವಿಘ್ನೇಶ್ ಶಿವನ್ (Vighnesh Shivan) ಜೊತೆ ಪುಟ್ಟ ಮಕ್ಕಳನ್ನು ಎತ್ತಿಕೊಂಡು ಏರ್ಪೋರ್ಟ್ನಲ್ಲಿ (Airport) ಕಾಣಿಸಿಕೊಂಡರು. ಪತಿ ವಿಘ್ನೇಶ್ ಜೊತೆ ಮುಂಬೈ ಏರ್ಪೋರ್ಟ್ನಲ್ಲಿದ್ದರು ನಟಿ (Actress). ಇದು ಮಕ್ಕಳ ಜೊತೆ ಅವರ ಮೊದಲ ಪಬ್ಲಿಕ್ ಅಪಿಯರೆನ್ಸ್. ಸೌತ್ ನಟಿ ನಯನತಾರಾ ಅವರ ಪತಿ ಹಾಗೂ ತಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಮುಂಬೈನಲ್ಲಿ (Mumbai) ಕಾಣಿಸಿಕೊಂಡಿದ್ದು ಅವರ ಮುದ್ದು ಮಕ್ಕಳನ್ನೂ ಎತ್ತಿಕೊಂಡಿದ್ದರು. ಅವರನ್ನು ಕಾಣುತ್ತಿದ್ದಂತೆ ಮಾಧ್ಯಮದವರು ಫೋಟೋ ಕ್ಲಿಕ್ಕಿಸಿಕೊಂಡು ವಿಡಿಯೋ (Video) ಕೂಡಾ ಮಾಡಿದ್ದಾರೆ.
ಫ್ಯಾಮಿಲಿ ಔಟಿಂಗ್ ಸಂದರ್ಭ ನಯನತಾರಾ ಬ್ಯ್ಲಾಕ್ ಟೀ ಶರ್ಟ್ ಬ್ಲ್ಯಾಕ್ ಜೀನ್ಸ್ ಧರಿಸಿದ್ದರು. ವಿಘ್ನೇಶ್ ಹಸಿರು ಟೀಶರ್ಟ್ ಹಾಗೂ ಬ್ಲ್ಯಾಕ್ ಜೀನ್ಸ್ ಧರಿಸಿದ್ದರು. ಮಕ್ಕಳು ಮ್ಯಾಚಿಂಗ್ ಡ್ರೆಸ್ ಧರಿಸಿದ್ದರು. ಕೆಂಪು ಹಾಗೂ ಕಪ್ಪು ಕಾಂಬಿನೇಷನ್ ಡ್ರೆಸ್ ಧರಿಸಿದ್ದರು. ನಯನತಾರಾ ಹಾಗೂ ವಿಘ್ನೇಶ್ ನಗುತ್ತಾ ಕ್ಯಾಮೆರಾಗೆ ಕೈಬೀಸಿದ್ದಾರೆ.
ಜೂನ್ನಲ್ಲಿ ಮದುವೆಯಾಗಿದ್ದ ಜೋಡಿ
ನಯನತಾರಾ ಹಾಗೂ ವಿಘ್ನೇಶ್ ಶಿವನ್ ಚೆನ್ನೈನಲ್ಲಿ ವಿವಾಹಿತರಾದರು. ಜೂನ್ 9 2022ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಪ್ತ ಸ್ನೇಹಿತರು ಹಾಗೂ ಕೆಲವೇ ಅತಿಥಿಗಳ ಸಮ್ಮುಖದಲ್ಲಿ ಅವರು ವಿವಾಹಿತರಾದರು. ಸರೋಗಸಿ ಮೂಲಕ ಈ ಜೋಡಿ ಅವಳಿ ಮಕ್ಕಳಿಗೆ ಪೋಷಕರಾದರು. ಉಯಿರ್ ಹಾಗೂ ಉಲಗಂ ಇವರ ಮಕ್ಕಳ ಹೆಸರು. ಈ ಜೋಡಿ ತಮ್ಮ ಮಕ್ಕಳ ಪಾದಗಳನ್ನು ಕಿಸ್ ಮಾಡುತ್ತಿದ್ದ ಫೊಟೋ ಶೇರ್ ಮಾಡಿದ್ದರು.
View this post on Instagram
ನಟಿ ನಯನತಾರಾ 2003ರಲ್ಲಿ ಮನಸಿನಕ್ಕರೆ ಸಿನಿಮಾ ಮೂಲಕ ಮಾಲಿವುಡ್ಗೆ ಎಂಟ್ರಿ ಕೊಟ್ಟರು. ನಂತರದ ವರ್ಷಗಳಲ್ಲಿ ತಮಿಳಿನಲ್ಲಿ ಅಯ್ಯ(2005), ತೆಲುಗಿನಲ್ಲಿ ಲಕ್ಷ್ಮಿ(2006), ಕನ್ನಡದಲ್ಲಿ ಸೂಪರ್(2010)ರಲ್ಲಿ ನಟಿಸಿದ್ದರು.
ನಯನತಾರಾ ಹಾಗೂ ವಿಘ್ನೇಶ್ ರೌಡಿ ಪಿಕ್ಚರ್ಸ್ ಎನ್ನುವ ಪ್ರೊಡಕ್ಷನ್ ಹೌಸ್ ನಿರ್ಮಿಸಿದ್ದು 2021ರಲ್ಲಿ ಲಾಂಚ್ ಮಾಡಿದ್ದಾರೆ. ಇದರಲ್ಲಿ ಕೂಳಂಗಳ್, ನೆಟ್ರಿಕನ್, ಕಾತುವಾಕುಲ ರಂಡು ಕಾದಲ್ ಸಿನಿಮಾ ನಿರ್ಮಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ