ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanthara) ಬಹುನಿರೀಕ್ಷಿತ ಚಿತ್ರ ಕನೆಕ್ಟ್ (Connect Movie) ಪ್ರಚಾರದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇದೇ ಡಿ.22ರಂದು ಕನೆಕ್ಟ್ ಸಿನಿಮಾ ಬಿಡುಗಡೆಯಾಗಲಿದೆ. ಸಿನಿಮಾ ಪ್ರಚಾರದ (Cinema Promotion) ಸಂದರ್ಶನವೊಂದರಲ್ಲಿ ಮಾತಾಡಿದ ನಯನತಾರಾ, ನಟ ಜೂನಿಯರ್ ಎನ್ಟಿಆರ್ (Junior NTR) ಹಾಗೂ ಪ್ರಭಾಸ್ರನ್ನು (Prabhas) ಕೊಂಡಾಡಿದ್ದಾರೆ. ಈ ಇಬ್ಬರು ನಟರ ಜೊತೆ ಕೆಲಸ ಮಾಡುವುದೇ ಖುಷಿ ಎಂದಿದ್ದಾರೆ.
ಟಾಪ್ ನಟರ ಬಗ್ಗೆ ನಯನತಾರಾ ಮಾತು
ಪ್ರಭಾಸ್ ಮತ್ತು ಜೂನಿಯರ್ ಎನ್ಟಿಆರ್ ಜೊತೆ ಸಿನಿಮಾ ಮಾಡಿದ ನೆನಪನ್ನು ನಟಿ ನಯನತಾರಾ ಮೆಲುಕು ಹಾಕಿದ್ದಾರೆ. ಇಬ್ಬರು ನಟರು ಕೂಡ ಸೆಟ್ನಲ್ಲಿ ಜೋಕ್ ಮಾಡುತ್ತಾ ಎಲ್ಲರನ್ನು ನಗಿಸುತ್ತಾ ಕೆಲಸ ಮಾಡ್ತಾರೆ ಎಂದು ಹೇಳಿದ್ದಾರೆ. ತೆಲುಗು ಇಂಡಸ್ಟ್ರಿಯಲ್ಲಿ ಟಾಪ್ ಸ್ಟಾರ್ಗಳ ಜೊತೆ ನಟಿ ನಯನತಾರಾ ಅಭಿನಯಿಸಿದ್ದು, ಕೆಲ ನಾಯಕ ನಟರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತರ್ಲೆ, ತಮಾಷೆ ಮಾಡ್ತಿದ್ದ ಪ್ರಭಾಸ್ ಇದೀಗ ಬಿಗ್ ಸ್ಟಾರ್
ನಟ ಪ್ರಭಾಸ್ ಬಗ್ಗೆ ಮಾತಾಡಿದ ನಯನತಾರಾ, ಆತ ಮಗುನಂತೆ ಎಂದಿದ್ದಾರೆ. ಸಿನಿಮಾ ಸೆಟ್ನಲ್ಲಿ ಎಲ್ಲರ ಕಾಲೆಳೆಯುತ್ತಾ. ಎಲ್ಲರ ಜೊತೆ ತಮಾಷೆ ಮಾಡಿಕೊಂಡು ಚಿಕ್ಕ ಹುಡುಗನಂತೆ ಜಿಗಿಯುತ್ತಾ ಕೆಲಸ ಮಾಡುತ್ತಿದ್ದ, ಇದೀಗ ಪ್ರಭಾಸ್ ದೊಡ್ಡ ನಟರಾಗಿ ಬೆಳೆದಿದ್ದಾರೆ. ಹೀಗೆ ಹೆಸರು ಮಾಡಿರುವ ಪ್ರಭಾಸ್ರನ್ನು ನೋಡಲು ಖುಷಿಯಾಗುತ್ತದೆ ಎಂದು ನಯನತಾರಾ ಹೇಳಿದ್ದಾರೆ.
#nayanthara talking About #Prabhas ❤️🤩 darlings 🔥🔥 pic.twitter.com/3U0TQkPvkq
— venkata Prabhas (@venkataPrabhas5) December 20, 2022
2010ರಲ್ಲಿ ಜೂನಿಯರ್ NTR ಜೊತೆ ನಯನತಾರಾ ಅಧುರ್ಸ್ ಸಿನಿಮಾ ಮಾಡಿದ್ದಾರೆ. ಜೂನಿಯರ್ NTR ಬಗ್ಗೆ ಮಾತಾಡಿದ ನಯನತಾರಾ, ನಟನನ್ನು ಕೊಂಡಾಡಿದ್ದಾರೆ. ಜೂನಿಯರ್ ಎನ್ಟಿಆರ್ರನ್ನು "ಒಬ್ಬ ಬ್ರಾಟ್" ಎಂದು ಹೇಳಿದ್ದಾರೆ.
1 ದಿನ ಜೂ NTR ಶೂಟಿಂಗ್ ಮಾಡುತ್ತಿದ್ದಾಗ ತಮ್ಮ ಮೇಕಪ್ ನೋಡುತ್ತಿದ್ರು. ಯಾಕೆ ನೋಡುತ್ತಿದ್ದೀರಿ ಎಂದು ಹೇಳಿದೆ. ಯಾರು ನಿನ್ನನ್ನು ನೋಡಲ್ಲ, ಎಲ್ಲರೂ ನೋಡೋದು ನನ್ನನ್ನೇ ಎಂದು ತಮಾಷೆ ಮಾಡಿದ್ರು. NTR ತುಂಬಾ ಕ್ಯೂಟ್ ಎಂದರು. ನಿಜಕ್ಕೂ ಅವರು ಡ್ಯಾನ್ಸ್ ಮಾಡುವ ರೀತಿ ಮತ್ತು ಪರದೆಯ ಮೇಲೆ ತನ್ನನ್ನು ತಾನು ಬದಲಾಯಿಸಿಕೊಳ್ಳುವ ರೀತಿ ನೋಡಿ ನನಗೆ ತುಂಬಾ ಆಶ್ಚರ್ಯವಾಗಿತ್ತು ಎಂದು ನಯನತಾರಾ ಹೇಳಿದ್ದಾರೆ.
Single Take Dancer in india.. @tarak9999 🔥🔥#Nayanthara #NTR30 pic.twitter.com/8wg02KqgcV
— Raju (@Im_Raju9) December 20, 2022
ಜೂನಿಯರ್ NTR ರಿಹರ್ಸಲ್ ಮಾಡುವುದನ್ನು ನಾನು ಯಾವತ್ತೂ ನೋಡಿಲ್ಲ. ರಿಹರ್ಸಲ್ ಮಾಡದೆ ನಟಿಸುವ ಏಕೈಕ ಹೀರೋ ಅಂದ್ರೆ ಅದು ಎನ್ಟಿಆರ್ ಎಂದು ನಯನತಾರಾ ಹೇಳಿದ್ದಾರೆ. ಈಗ ಅವರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ನಾವು ಶೂಟಿಂಗ್ ಮಾಡುವಾಗ ಅವರು ಸೆಟ್ಗಳಿಗೆ ಹೋಗಿ, ಸ್ಟೆಪ್ಗಳನ್ನು ನೋಡಿ ಸರಾಗವಾಗಿ ಅಭಿನಯಿಸಿದರು. ನಾನು ರಿಹರ್ಸಲ್ಗೆ ಕೇಳಿದಾಗಲೂ ಅವರು ಸಿದ್ಧ ಎಂದು ಹೇಳುತ್ತಾರೆ ಎಂದು ನಯನತಾರಾ ಹೇಳಿದ್ದಾರೆ.
ಇದನ್ನು ಓದಿ: Rashmika-Sai Pallavi: ಪುಷ್ಪಾ 2 ಚಿತ್ರದಿಂದ ರಶ್ಮಿಕಾ ಮಂದಣ್ಣಗೆ ಗೇಟ್ ಪಾಸ್!? ಸಾಯಿ ಪಲ್ಲವಿಗೆ ಸಿಕ್ಕಿದೆ ಸಖತ್ ಚಾನ್ಸ್!
ನಯನತಾರಾ ಈ ವರ್ಷ ಜೂನ್ 9 ರಂದು ಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್ ಜೊತೆ ವಿವಾಹದ್ರು. ಮದುವೆ ಆದಾಗಿನಿಂದ ನಯನತಾರಾ ಸಖತ್ ಸುದ್ದಿಯಲ್ಲಿದ್ದಾರೆ. ಕೆಲವು ತಿಂಗಳ ಹಿಂದೆ ಬಾಡಿಗೆ ತಾಯ್ತನದ ಮೂಲಕ ಅವಳಿ ಗಂಡು ಮಕ್ಕಳನ್ನು ಪಡೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ