• Home
  • »
  • News
  • »
  • entertainment
  • »
  • Nayanthara: ಎಲ್ಲದಕ್ಕೂ ಟೈಮ್ ಬರಬೇಕು ಎಂದ ನಯನತಾರಾ! ಬಾಲಿವುಡ್​ಗೆ ಎಂಟ್ರಿ

Nayanthara: ಎಲ್ಲದಕ್ಕೂ ಟೈಮ್ ಬರಬೇಕು ಎಂದ ನಯನತಾರಾ! ಬಾಲಿವುಡ್​ಗೆ ಎಂಟ್ರಿ

ನಯನತಾರಾ

ನಯನತಾರಾ

ಕಳೆದ ಎರಡು ದಶಕಗಳಿಂದ ದಕ್ಷಿಣದಲ್ಲಿ ಹೆಸರು ಮಾಡಿರುವ ನಯನತಾರಾ 'ಲೇಡಿ ಸೂಪರ್‌ಸ್ಟಾರ್' ಎಂದೇ ಖ್ಯಾತಿ ಪಡೆದವರು. ಆದ್ರೆ ಇತ್ತೀಚಿನವರೆಗೂ ಬಾಲಿವುಡ್ ಆಕೆಯನ್ನು ಗಮನಿಸಿದ್ದು ಕಡಿಮೆ. ಇತ್ತೀಚಿಗಿನ ಸೌತ್‌ ಸೂಪರ್‌ ಹಿಟ್‌ ಮೂವಿಗಳಾದ "RRR", "ಪುಷ್ಪಾ" ಮತ್ತು "KGF" ಯಶಸ್ಸು ಹಿಂದಿ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಅವಕಾಶವನ್ನು ಸೃಷ್ಟಿಸಿದೆ ಅಂದರೆ ತಪ್ಪಾಗೋದಿಲ್ಲ.

ಮುಂದೆ ಓದಿ ...
  • Share this:

ನಯನತಾರಾ, ತೆಲುಗು, ತಮಿಳು, ಮಲಯಾಳಂನಲ್ಲಿ ದೊಡ್ಡ ಹೆಸರು ಮಾಡಿರುವ ನಟಿ. ಕನ್ನಡದಲ್ಲೂ (Kannada) ಕೆಲ ಚಿತ್ರಗಳಲ್ಲಿ ಅಭಿನಯಿಸಿರುವ ನಯನತಾರಾ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಹಿಂದಿ (Hindi) ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಟ ಶಾರುಖ್‌ ಖಾನ್‌ ಜೊತೆಗೆ ಜವಾನ್‌ ಚಿತ್ರದಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಈ ಮಧ್ಯೆ ಬದಲಾಗುತ್ತಿರುವ ಫಿಲ್ಮ್‌ (Film) ಇಂಡಸ್ಟ್ರಿಯೊಂದಿಗೆ ಹಿಂದಿ ಉದ್ಯಮದಲ್ಲಿ ಕಾಲಿಡುವಂಥ ಬೋಲ್ಡ್‌ (Bold) ನಿರ್ಧಾರ ತೆಗೆದುಕೊಳ್ಳಲು ಇದು ಸರಿಯಾದ ಸಮಯ ಎಂದು ನಯನತಾರಾ (Nayanthara) ಹೇಳಿದ್ದಾರೆ.


38 ವರ್ಷದ ನಯನತಾರಾ ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ “ಲೇಡಿ ಸೂಪರ್‌ಸ್ಟಾರ್‌” ಅಂತಲೇ ದೊಡ್ಡ ಹೆಸರು ಮಾಡಿರೋ ನಟಿ. ಸದ್ಯ ತಮ್ಮ ತಮಿಳು ಹಾರರ್‌ ಮೂವಿ ಕನೆಕ್ಟ್‌ ಅನ್ನು ಹಿಂದಿ ಭಾಷೆಯಲ್ಲಿ ಬಿಡುಗಡೆಗೊಳಿಸಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಹಿಂದಿ ಮಾರುಕಟ್ಟೆ ಪ್ರವೇಶಿಸಿದ್ದಾರೆ.


“ಚಿತ್ರರಂಗದಲ್ಲಿನ ಬದಲಾವಣೆ ಆತ್ಮವಿಶ್ವಾಸ ಮೂಡಿಸಿದೆ”


“ಭಾರತೀಯ ಚಿತ್ರೋದ್ಯಮದಲ್ಲಿನ ಬದಲಾವಣೆಯು ಎಲ್ಲರಿಗೂ ಆತ್ಮವಿಶ್ವಾಸವನ್ನು ನೀಡಿದೆ. ಇದು ನಮ್ಮ ಚಲನಚಿತ್ರಗಳನ್ನು ಇತರ ಭಾಷೆಗಳಲ್ಲಿ ಬಿಡುಗಡೆ ಮಾಡುವ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ನಮ್ಮನ್ನು ಪ್ರೇರೇಪಿಸಿದೆ. ಇಲ್ಲಿನ ಜನರಿಗೆ ದಕ್ಷಿಣದ ಸ್ಟಾರ್ ಅಥವಾ ನಿರ್ದೇಶಕರ ಬಗ್ಗೆ ಅಷ್ಟೊಂದು ತಿಳಿದಿರುವುದಿಲ್ಲ" ಎಂದು ನಯನತಾರಾ ಹೇಳಿದ್ದಾರೆ.


ಕಳೆದ ಎರಡು ದಶಕಗಳಿಂದ ದಕ್ಷಿಣದಲ್ಲಿ ಹೆಸರು ಮಾಡಿರುವ ನಯನತಾರಾ 'ಲೇಡಿ ಸೂಪರ್‌ಸ್ಟಾರ್' ಎಂದೇ ಖ್ಯಾತಿ ಪಡೆದವರು. ಆದ್ರೆ ಇತ್ತೀಚಿನವರೆಗೂ ಬಾಲಿವುಡ್ ಆಕೆಯನ್ನು ಗಮನಿಸಿದ್ದು ಕಡಿಮೆ. ಇತ್ತೀಚಿಗಿನ ಸೌತ್‌ ಸೂಪರ್‌ ಹಿಟ್‌ ಮೂವಿಗಳಾದ "RRR", "ಪುಷ್ಪಾ" ಮತ್ತು "KGF" ಯಶಸ್ಸು ಹಿಂದಿ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಅವಕಾಶವನ್ನು ಸೃಷ್ಟಿಸಿದೆ ಅಂದರೆ ತಪ್ಪಾಗೋದಿಲ್ಲ.


ಇದನ್ನೂ ಓದಿ: Samantha: ವೆಬ್ ಸೀರಿಸ್​ನಿಂದಲೂ ಸಮಂತಾಗೆ ಗೇಟ್ ಪಾಸ್! 3 ತಿಂಗಳು ಕಂಪ್ಲೀಟ್ ರೆಸ್ಟ್!


ಎಲ್ಲದಕ್ಕೂ ಟೈಂ ಬರಬೇಕು!


"ಎಲ್ಲದಕ್ಕೂ ಸರಿಯಾದ ಸಮಯವಿದೆ. ಪೂರ್ಣಪ್ರಮಾಣದ ಹಿಂದಿ ಚಿತ್ರ ಅಥವಾ ಸರಿಯಾದ ಹಿಂದಿ ಡಬ್ಬಿಂಗ್ ಚಿತ್ರ ಮಾಡುವ ಅವಕಾಶ ನನಗೆ ಸಿಗಲಿಲ್ಲ. ಅಲ್ಲದೆ, ಮೊದಲಿನ ಪರಿಸ್ಥಿತಿಗಳು ವಿಭಿನ್ನವಾಗಿತ್ತು. ಆದ್ರೆ ಇಂದು ಅದು ಬದಲಾಗಿದೆ ಮತ್ತು ನಾವು ಪರಿಸ್ಥಿತಿಗೆ ಅನುಗುಣವಾಗಿ ಚಲಿಸಬೇಕು" ಎಂದು ಅವರು ಹೇಳಿದರು. ರಿಚ್ ಕಂಟೆಂಟ್ ಇರುವ ಚಿತ್ರವು  ಭಾಷೆಯನ್ನು ಲೆಕ್ಕಿಸದೆ ದೇಶ ಮತ್ತು ಪ್ರಪಂಚಕ್ಕೆ ತಲುಪುತ್ತದೆ. ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ ಎಂದು ನಯನತಾರಾ ನಂಬಿದ್ದಾರೆ.




ಜನರಿಗೆ ಒಳ್ಳೆ ಚಿತ್ರ ನೋಡಿದಾಗ ಸಂತೋಷವಾಗುತ್ತದೆ


"ಜನರು ಒಳ್ಳೆಯ ಚಿತ್ರವನ್ನು ನೋಡಿದರೆ, ಅವರು ಸಂತೋಷಪಡುತ್ತಾರೆ. ಅದು ತಮಿಳು, ತೆಲುಗು, ಮಲಯಾಳಂ, ಕನ್ನಡ ಅಥವಾ ಹಿಂದಿಯಲ್ಲಿರಲಿ, ಕನೆಕ್ಟ್ ಆಗುತ್ತಾರೆ ಎಂದು ನಾವು ನಂಬುತ್ತೇವೆ. ಕಂಟೆಂಟ್ ಚೆನ್ನಾಗಿದ್ದರೆ ಅದು ಎಲ್ಲೆಡೆ ಕೆಲಸ ಮಾಡುತ್ತದೆ" ಎಂದು ನಯನತಾರಾ ಹೇಳಿದ್ದಾರೆ. ಅಲ್ದೇ, ಯಶಸ್ಸಿನೊಂದಿಗೆ ಜವಾಬ್ದಾರಿಯೂ ಬರುತ್ತದೆ. ದಕ್ಷಿಣ ಚಿತ್ರರಂಗವು ತನಗಾಗಿ ಹೊಂದಿಸಿರುವ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ ಎಂದು ನಯನತಾರಾ ಹೇಳಿದ್ದಾರೆ.


ಸುಸಾನ್ ಮುರುಗಸನ್ ಪಾತ್ರದಲ್ಲಿ ನಯನತಾರಾ


ಇನ್ನು, "ಮಾಯಾ" ಮತ್ತು "ಗೇಮ್ ಓವರ್" ಖ್ಯಾತಿಯ ಅಶ್ವಿನ್ ಸರವಣನ್ ನಿರ್ದೇಶನದ ಕನೆಕ್ಟ್ "ಹಿಂದಿ ಪ್ರೇಕ್ಷಕರನ್ನು ಆಕರ್ಷಿಸಲು ಸರಿಯಾದ ಅಂಶಗಳನ್ನು ಹೊಂದಿದೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕನೆಕ್ಟ್‌ ತಮಿಳು ಆವೃತ್ತಿಯು ಡಿಸೆಂಬರ್ 22 ರಂದು ಬಿಡುಗಡೆಯಾಗಿದ್ದರೆ, ಹಿಂದಿ ಆವೃತ್ತಿಯು ಗುರುವಾರ ಹೊರಬಂದಿದೆ. ಸತ್ಯರಾಜ್, ಅನುಪಮ್ ಖೇರ್, ಮತ್ತು ವಿನಯ್ ರೈ, ಹನಿಯಾ ನಫೀಸಾ ನಟಿಸಿರುವ "ಕನೆಕ್ಟ್", ನಯನತಾರಾ ಮತ್ತು ಅವರ ಪತಿ ವಿಘ್ನೇಶ್ ಶಿವನ್ ಅವರ ರೌಡಿ ಪಿಕ್ಚರ್ಸ್ ನಿರ್ಮಾಣದ ಚಿತ್ರವಾಗಿದೆ.


"ಕನೆಕ್ಟ್" ನಲ್ಲಿ, ನಯನತಾರಾ ಸುಸಾನ್ ಮುರುಗಸನ್ ಪಾತ್ರದಲ್ಲಿ ನಟಿಸಿದ್ದಾರೆ. "ಕನೆಕ್ಟ್' ಒಂದು ಥಿಯೇಟರ್ ಅನುಭವವಾಗಿದೆ ಮತ್ತು ಪ್ರೇಕ್ಷಕರು ದೊಡ್ಡ ಪರದೆಯ ಮೇಲೆ ಹಾರರ್‌ ಚಿತ್ರವನ್ನು ನೋಡುವ ಥ್ರಿಲ್ ಅನ್ನು ಇಷ್ಟಪಡುತ್ತಾರೆ ಎಂಬುದಾಗಿ ನಯನತಾರಾ ಅಭಿಪ್ರಾಯ ಪಡುತ್ತಾರೆ.

First published: