ನಯನತಾರಾ (Nayanthara) ಮತ್ತು ವಿಘ್ನೇಶ್ ಶಿವನ್ (Vignesh Shivan) ಅವರ ಅದ್ಧೂರಿ ಮದುವೆಯ ಫೋಟೋಗಳು ಇಂಟರ್ನೆಟ್ನಲ್ಲಿ (Internet) ಸಂಚಲನ ಮೂಡಿಸಿದ್ದು, ಎಲ್ಲಿ ನೋಡಿದರೂ ಅವರ ಫೋಟೋಗಳು ಕಾಣಿಸುತ್ತದೆ. ಅದರಲ್ಲೂ ಅವರು ಧರಿಸಿದ್ದ ಬಟ್ಟೆ (Saree) ಎಲ್ಲರ ಕಣ್ಣು ಅರಳಿಸಿತ್ತು. ನಯನತಾರಾ ಅಭಿಮಾನಿಗಳಿಗಂತೂ ಫೋಟೋದಿಂದ ಕಣ್ಣು ತೆಗೆಯಲೇ ಸಾಧ್ಯವಾಗಿಲ್ಲ ಎಂದರೆ ತಪ್ಪಾಗಲ್ಲ.
ಪ್ರಿಯಾಂಕಾ ಬಟ್ಟೆ ಕಾಪಿ ಮಾಡಿದ್ರಾ ನಯನತಾರಾ?
ನಯನತಾರಾ ಮತ್ತು ವಿಘ್ನೇಶ್ ಇಬ್ಬರೂ MK ಜೇಡ್ ಲೇಬಲ್ನಿಂದ ವೀಶೇಷವಾಗಿ ಡಿಸೈನ್ ಮಾಡಿದ ಬಟ್ಟೆಗಳನ್ನು ಧರಿಸಿದ್ದರು. ನಟಿ ಕೆಂಪು ಸೀರೆಯಲ್ಲಿ ರಾಣಿಯಂತೆ ಮೆರೆದರೆ, ವಿಘ್ನೇಶ್ ಸರಳವಾಗಿ ಕುರ್ತಾ ಮತ್ತು ಪಂಚೆ ಹಾಗೂ ಶಾಲಿನಲ್ಲಿ ಕಾಣಿಸಿಕೊಂಡಿದ್ದಾರೆ. ನಯನತಾರಾ ಬಹಳ ಸುಂದರವಾಗಿ ಕಾಣುತ್ತಿದ್ದರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ನಯನತಾರಾ ಅವರ ಲುಕ್ ಹಲವಾರು ಜನರಿಗೆ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಮದುವೆಯನ್ನು ನೆನಪಿಸಿದೆ. ಅದ್ಯಾಕೆ ಅಂತ ಯೋಚನೆ ಮಾಡ್ತಿದ್ರೆ ಈ ಸ್ಟೋರಿ ಓದಿ.
ನಯನತಾರಾ, ತಮ್ಮ ಈ ವಿಶೇಷ ದಿನದಂದು ಸಾಂಪ್ರದಾಯಿಕ ವಧುವಾಗಿ ಕಂಗೊಳಿಸುತ್ತಿದ್ದರು.ವರ್ಮಿಲಿಯನ್ ಬಣ್ಣದ ವಿಶೇಷವಾಗಿ ಅವರಿಗಾಗಿಯೇ ಡಿಸೈನ್ ಮಾಡಿದ್ದ, ಸೀರೆಯನ್ನು ಧರಿಸಿದ್ರು. ಇನ್ನು ಅವರು ಧರಿಸಿದ್ದ ಸೀರೆಯ ಮೇಲಿನ ಕಸೂತಿ ಹೊಯ್ಸಳರ ದೇವಾಲಯಗಳ ಕೆತ್ತನೆಗಳಿಂದ ಪ್ರೇರಿತವಾಗಿದೆ ಎಂಬ ಮಾತು ಕೂಡ ಇದೆ. ನಯನತಾರಾ ಧರಿಸಿದ್ದ ಆಭರಣಗಳ ವಿಚಾರಕ್ಕೆ ಬಂದರೆ ಬಹಳ ಚೆಂದನೇಯ ನೆಕ್ಲೇಸ್, ಲೇಯರ್ಡ್ ಸರ ಧರಿಸಿದ್ದರು. ತನ್ನ ಮದುವೆಯ ಸೀರೆಗೆ ಸೂಕ್ತವಾಗುವ ಲೇಯರ್ಡ್ ನೆಕ್ಲೇಸ್ಗಳು, ಸುಂದರವಾದ ಬೈತಲೆ ಬೊಟ್ಟು, ದೊಡ್ಡ ಸ್ಟಡ್ಗಳು ಮತ್ತು ಅಲಂಕೃತ ಬಳೆಗಳನ್ನು ಧರಿಸಿ ನಿಜಕ್ಕೂ ಅಪ್ಸರೆಯಂತೆ ಕಾಣುತ್ತಿದ್ದರು.
ಇದನ್ನೂ ಓದಿ: ಚಾರ್ಲಿಗೂ ಇದೆ ಅಭಿಮಾನಿ ಬಳಗ, ಸಿನಿಮಾ ಹಿಟ್ ಆಗ್ಲಿ ಅಂತ ವಿಶ್ ಮಾಡಿದ ಸ್ಪೆಷಲ್ ಟೀಮ್
ಕೆಂಪು ಬಣ್ಣದ ಲೆಹೆಂಗಾ ಧರಿಸಿದ್ದ ಪಿಗ್ಗಿ
ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಜೊತೆ ಹಿಂದೂ ಸಂಪ್ರದಾಯದಂತೆ ಮದುವೆಯಾದ ಸಮಯದಲ್ಲಿ ಅವರು ಕೂಡ ಇದೇ ರೀತಿಯ ಬಟ್ಟೆ ಹಾಕಿದ್ದು, ಇದೀಗ ಇಬ್ಬರ ಬಟ್ಟೆಯ ಸಾಮ್ಯತೆಯ ಬಗ್ಗೆ ಚರ್ಚೆಯಾಗುತ್ತಿದೆ. ಪ್ರಿಯಾಂಕಾ ಕೂಡ ತಮ್ಮ ಲುಕ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅವರು ಕೂಡ ಇದೇ ರೀತಿ ಕೆಂಪು ಬಣ್ಣದ ಕಸೂತಿ ಇರುವ ಲೆಹೆಂಗಾ ಧರಿಸಿದ್ದರು. ಇಬ್ಬರ ಬಟ್ಟೆಯಲ್ಲಿ ಬಹಳ ಸಾಮ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ಪ್ರಿಯಾಂಕಾ ಧರಿಸಿದ್ದ ಆಭರಣಗಳ ಬಗ್ಗೆ ಹೇಳುವುದಾದರೆ, ಪ್ರಿಯಾಂಕಾ ಕೂಡ ಲೇಯರ್ಡ್ ನೆಕ್ಲೇಸ್ಗಳು ಮತ್ತು ಬೈಲೆ ಬೊಟ್ಟನ್ನು ದರಿಸಿ ಮಿಂಚಿದ್ದರು. ವ್ಯತ್ಯಾಸವೆಂದರೆ ನಯನತಾರಾ ಅವರ ಮದುವೆಯ ಆಭರಣಗಳು ಪಚ್ಚೆಗಳನ್ನು ಒಳಗೊಂಡಿತ್ತು ಎಂಬುದು ಮುಖ್ಯ, ಆದರೆ ಪ್ರಿಯಾಂಕ ಅವರು ಡೈಮಂಡ್ ಆಭರಣಗಳನ್ನು ಧರಿಸಿದ್ದರು. ಇನ್ನೊಂದು ವ್ಯತ್ಯಾಸವೆಂದರೆ ಪ್ರಿಯಾಂಕಾ ಚೋಪ್ರಾ ಲೆಹೆಂಗಾ ಧರಿಸಿದ್ರು, ಆದರೆ ನಯನತಾರಾ ಸೀರೆ ಉಟ್ಟಿದ್ದಾರೆ. ಇನ್ನು ಪ್ರಿಯಾಂಕಾ ಚೋಪ್ರಾ ಅವರ ಲೆಹೆಂಗಾವನ್ನು ಸಭ್ಯಸಾಚಿ ಅವರು ಡಿಸೈನ್ ಮಾಡಿದ್ದರು.
ಮಹಾಬಲಿಪುರಂನ ಖಾಸಗಿ ಹೋಟೆಲ್ವೊಂದರಲ್ಲಿ ಸಪ್ತಪದಿ ತುಳಿದ ನಯನತಾರಾ ಹಾಗೂ ವಿಘ್ನೇಶ್ ಶಿವನ್, ಮದುವೆಯ ಫೋಟೋಗಳನ್ನು ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಫೋಟೋಗಳು ಫುಲ್ ವೈರಲ್ ಆಗಿದ್ದು, ಇಬ್ಬರೂ ಬಹಳ ಮುದ್ದಾಗಿ ಕಾಣುತ್ತಿದ್ದಾರೆ.
ಇದನ್ನೂ ಓದಿ: ಇವಳು ಅಪ್ಸರೆಯೋ, ಧರೆಗಿಳಿದ ತಾರೆಯೋ! ಅದ್ಧೂರಿ ಡ್ರೆಸ್ನಲ್ಲಿ ನಯನ ಮನೋಹರವಾಗಿ ಕಾಣಿಸಿದ ಲೇಡಿ ಸೂಪರ್ ಸ್ಟಾರ್
ಕೆಂಪು ಬಣ್ಣದ ಸೀರೆಯಲ್ಲಿ ನಯನತಾರಾ ಮಿಂಚಿದ್ದರೆ, ಶಿವನ್ ಗೋಲ್ಡಿಶ್ ವೈಟ್ ಶರ್ಟ್ ಮತ್ತು ಗೋಲ್ಡನ್ ಪಂಚೆಯಲ್ಲಿ ಮೆರೆದಿದ್ದಾರೆ. ತಮ್ಮ ಸೀರೆಗೆ ಸೂಕ್ತವಾಗುವ ಆಭರಣಗಳನ್ನು ಧರಿಸಿ ಅಪ್ಸರೆಯಂತೆ ಕಂಗೊಳಿಸುತ್ತಿದ್ದರು ನಟಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ