Nayanthara: OTTಯಲ್ಲಿ ಬರ್ತಿದೆ ನಯನತಾರಾ ಮದುವೆ ಮ್ಯಾಜಿಕಲ್ ಡಾಕ್ಯುಮೆಂಟರಿ; ನೆಟ್​ಫಿಕ್ಸ್​ನಿಂದ ಟೀಸರ್ ರಿಲೀಸ್​

ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಅವರ ಸಾಕ್ಷ್ಯಚಿತ್ರದ ಪ್ರೀಮಿಯರ್ ದಿನಾಂಕವನ್ನು ನೆಟ್​ಫಿಕ್ಸ್​ ಇನ್ನೂ ಘೋಷಣೆ ಮಾಡಿಲ್ಲ, ಅದ್ರೆ ನೆಟ್‌ಫ್ಲಿಕ್ಸ್  ಮದುವೆ ಡಾಕ್ಯುಮೆಂಟರಿ ಕುರಿತು ಪ್ರೋಮೋ ಒಂದನ್ನು ರಿಲೀಸ್​ ಮಾಡಿದೆ.

ನಯನತಾರಾ, ವಿಘ್ನೇಶ್ ಶಿವನ್​

ನಯನತಾರಾ, ವಿಘ್ನೇಶ್ ಶಿವನ್​

  • Share this:
ಕಾಲಿವುಡ್​ ಲೇಡಿ ಸೂಪರ್​ ಸ್ಟಾರ್​ ನಯನತಾರಾ (Nayanthara) ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan) ಅವರ ಮದುವೆಯ ಮ್ಯಾಜಿಕಲ್ ಡಾಕ್ಯುಮೆಂಟರಿ (Magical Documentary) ಶೀಘ್ರದಲ್ಲೇ ನೆಟ್‌ಫ್ಲಿಕ್ಸ್‌ನಲ್ಲಿ (Netflix) ಬಿಡುಗಡೆಯಾಗಲಿದೆ. ನಯನತಾರಾ: ಬಿಯಾಂಡ್ ದಿ ಫೇರಿಟೇಲ್ ಎಂಬ ಶೀರ್ಷಿಕೆಯಡಿಯಲ್ಲಿ ಡಾಕ್ಯುಮೆಂಟರಿ ರಿಲೀಸ್ (Release)​ ಆಗಲಿದೆ. ಪ್ರಸಿದ್ಧ ನಟರಾದ ರಜನಿಕಾಂತ್, ಶಾರುಖ್ ಖಾನ್, ಸೂರ್ಯ ಮತ್ತು ಇತರ ಅನೇಕ ಸೆಲೆಬ್ರಿಟಿ ಅತಿಥಿಗಳು ಭಾಗವಹಿಸಿದ್ದ ಅದ್ದೂರಿ ವಿವಾಹದ ಡಾಕ್ಯುಮೆಂಟರಿ ರಿಲೀಸ್​ ಆಗಲಿದೆ.

ಡಾಕ್ಯುಮೆಂಟರಿ ಕುರಿತು ಪ್ರೋಮೋ ರಿಲೀಸ್​

ವಿಘ್ನೇಶ್ ಮತ್ತು ನಯನತಾರಾ ಅವರ ಸಾಕ್ಷ್ಯಚಿತ್ರದ ಪ್ರೀಮಿಯರ್ ದಿನಾಂಕವನ್ನು ನೆಟ್​ಫಿಕ್ಸ್​ ಇನ್ನೂ ಘೋಷಣೆ ಮಾಡಿಲ್ಲ, ಅದ್ರೆ ನೆಟ್‌ಫ್ಲಿಕ್ಸ್  ಮದುವೆ ಡಾಕ್ಯುಮೆಂಟರಿ ಕುರಿತು ಪ್ರೋಮೋ ಒಂದನ್ನು ರಿಲೀಸ್​ ಮಾಡಿದೆ. ನಯನತಾರಾ ಬಗ್ಗೆ ಪ್ರೀತಿ ಮಾತಾಡಿದ ಪತಿ ವಿಘ್ನೇಶ್, ನಯನತಾರಾ ಅವರನ್ನು 'ಸ್ಫೂರ್ತಿದಾಯಕ' ಮತ್ತು 'ಹಾರ್ಟ್ಲಿ ಬ್ಯುಟಿಫುಲ್​'​ ಎಂದು ಕರೆದಿದ್ದಾರೆ.

ಜೂನ್ 9 ರಂದು ನಡೆದಿತ್ತು ಅದ್ಧೂರಿ ವಿವಾಹ

ಜೂನ್ 9 ರಂದು ನಯನತಾರಾ ಮತ್ತು ವಿಘ್ನೇಶ್ ಚೆನ್ನೈ ಬಳಿ ವಿವಾಹವಾದರು. ಮಹಾಬಲಿಪುರಂನ ಶೆರಾಟನ್ ಗ್ರ್ಯಾಂಡ್‌ನಲ್ಲಿ ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಯನತಾರಾ ಹಸೆ ಮಣೆ ಏರಿದ್ರು. ನಟರಾದ ಕತ್ರಿನಾ ಕೈಫ್ ಮತ್ತು ಸಮಂತಾ ರುತ್ ಪ್ರಭು ಕೂಡ ನವವಿವಾಹಿತರಿಗೆ ವಿಶ್​ ಮಾಡಿದ್ರು. ಶಾರುಖ್ ಮತ್ತು ಚಲನಚಿತ್ರ ನಿರ್ಮಾಪಕ ಮಣಿರತ್ನಂ ಸೇರಿದಂತೆ ಅನೇಕ ಗಣ್ಯರು ಮದುವೆಯಲ್ಲಿ ಭಾಗವಹಿಸಿದ್ದರು.


View this post on Instagram


A post shared by Netflix India (@netflix_in)


ಗೂಗಲ್​ ಟ್ರೆಂಡ್​ ಆಗಿದ್ದ ಜೋಡಿ

ಸಾಮಾಜಿಕ ಜಾಲತಾಣದಲ್ಲಿ ಇವರ ಮದುವೆ ಕುರಿತು ಅಪ್ ಡೇಟ್​ಗಳನ್ನು ಅಭಿಮಾನಿಗಳು ಸರ್ಚ್​ ಮಾಡಿದ್ರು. ಗೂಗಲ್​ ಟ್ರೆಂಡ್​ ಆಗಿದ್ದ ಜೋಡಿ, ನಯನತಾರಾ ಮದುವೆಯ ನಂತರ, ಇವರ ಮದುವೆಯ ಸ್ಥಳ, ವಧುವಿನ ಉಡುಗೆ, ಸೆಲೆಬ್ರಿಟಿ ಅತಿಥಿಗಳ ಪಟ್ಟಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅಭಿಮಾನಿಗಳು ಸರ್ಚ್​ ಮಾಡಿದ್ರು. ಇದೀಗ ನೆಟ್‌ಫ್ಲಿಕ್ಸ್‌ ಅಭಿಮಾನಿಗಳ ಕುತೂಹಲಕ್ಕೆ ತೆರೆ ಬೀಳುವ ಟೈಮ್​ ಬಂದಿದೆ.  ಬಿಯಾಂಡ್ ದಿ ಫೇರಿಟೇಲ್‌ನಲ್ಲಿ, ದಂಪತಿಯ ಮದುವೆ ವಿಡಿಯೋ ಹಾಗೂ ನೂತನ ಜೋಡಿಯ ತೆರೆಮರೆಯ ಕೆಲವು ಕುತೂಹಕಾರಿ ವಿಚಾರಗಳನ್ನು ಈ ಡಾಕ್ಯುಮೆಂಟರಿಯಲ್ಲಿ ಅಭಿಮಾನಿಗಳು ನೋಡಬಹುದಾಗಿದೆ.

ಇದನ್ನೂ ಓದಿ: Nayanthara: 75ನೇ ಸಿನಿಮಾಗೆ ನಯನತಾರಾ ತಗೊಳ್ತಿರೋ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ! ಬಾಲಿವುಡ್ ನಟಿಯರ ಲಿಸ್ಟ್​ಗೆ ಸೌತ್ ನಟಿ

ಇನ್‌ಸ್ಟಾಗ್ರಾಮ್‌ನಲ್ಲಿ ಟೀಸರ್​ ಶೇರ್​

ನೆಟ್​ಫಿಕ್ಸ್​ ನಯನತಾರಾ ಕನಸಿನ ವಿವಾಹದ ಕುರಿತು ಡಾಕ್ಯುಮೆಂಟರಿಯ ಟೀಸರ್ ಬಿಡುಗಡೆ ಮಾಡಿದೆ. ನೆಟ್‌ಫ್ಲಿಕ್ಸ್ ಇಂಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಟೀಸರ್​ ಹಂಚಿಕೊಂಡಿದ್ದಾರೆ. ನಯನತಾರಾ ಮತ್ತು ವಿಘ್ನೇಶ್ ಅವರ ಅದ್ದೂರಿ ವಿವಾಹದ ಬಗ್ಗೆ ಮ್ಯಾಜಿಕಲ್​ ಡಾಕ್ಯುಮೆಂಟರಿ ಸಿದ್ಧವಾಗಿದ್ದ, ಶೀಘ್ರವೇ ನಯನತಾರಾ: ಬಿಯಾಂಡ್ ದಿ ಫೇರಿಟೇಲ್ ನೆಟ್‌ಫ್ಲಿಕ್ಸ್‌ಗೆ ಬರುತ್ತಿದೆ ಎಂದು ಬರೆದುಕೊಂಡಿದೆ.ಸ್ಫೂರ್ತಿದಾಯಕ' ಮತ್ತು 'ಹಾರ್ಟ್ಲಿ ಬ್ಯುಟಿಫುಲ್​'

​ಟೀಸರ್​ನಲ್ಲಿ ದಂಪತಿ ಒಟ್ಟಿಗೆ ವಿಶೇಷ ಕ್ಷಣಗಳನ್ನು ಹಂಚಿಕೊಳ್ಳುವ ಸಣ್ಣ ವಿಡಿಯೋ ಕ್ಲಿಪ್​ ಕೂಡ ಇದೆ. “ನಾನು ಕೆಲಸ ಮಾಡುವುದನ್ನು ಮಾತ್ರ ನಂಬುತ್ತೇನೆ. ನಿಮ್ಮ ಸುತ್ತಲೂ ತುಂಬಾ ಪ್ರೀತಿ ಇದೆ ಎಂದು ತಿಳಿಯಲು ಖಂಡಿತವಾಗಿಯೂ ಸಂತೋಷವಾಗಿದೆ. ”ಎಂದು ನಯನತಾರಾ ಹೇಳಿದ್ದಾರೆ .ವೀಡಿಯೊದಲ್ಲಿ, ವಿಘ್ನೇಶ್ ಅವರು ನಯನತಾರಾರನ್ನು ಹೊಗಳಿದ್ದಾರೆ. ನಾನು ಅವರ ಸ್ವಭಾವವನ್ನು ಪ್ರೀತಿಸುತ್ತೇನೆ. ಅವಳ ಪಾತ್ರವು ತುಂಬಾ ಸ್ಪೂರ್ತಿದಾಯಕವಾಗಿದೆ ಮತ್ತು ಅವಳು 'ಹಾರ್ಟ್ಲಿ ಬ್ಯುಟಿಫುಲ್​'​ ಎಂದು ಪತ್ನಿ ಬಗ್ಗೆ ವಿಘ್ನೇಶ್ ಮೆಚ್ಚುಗೆ ಮಾತಾಡಿದ್ದಾರೆ.

ನೆಟ್‌ಫ್ಲಿಕ್ಸ್ ಇಂಡಿಯಾ ಹಂಚಿಕೊಂಡ ವೀಡಿಯೋಗೆ ಅಭಿಮಾನಿಗಳು ಕೂಡ ಕಾಮೆಂಟ್ ಮಾಡ್ತಿದ್ದಾರೆ. ಒಬ್ಬ ಅಭಿಮಾನಿ, "ನಾನು ಕಾಯಲು ಸಾಧ್ಯವಿಲ್ಲ" ಎಂದು ಬರೆದ್ರೆ. ಇನ್ನೊಬ್ಬ ವ್ಯಕ್ತಿ, "ಇದು ನೆಟ್‌ಫ್ಲಿಕ್ಸ್‌ನಲ್ಲಿ ಯಾವಾಗ ಸ್ಟ್ರೀಮ್ ಆಗಲಿದೆ?" ಎಂದು ಪ್ರಶ್ನೆ ಮಾಡಿದ್ದಾರೆ.
Published by:Pavana HS
First published: