• Home
  • »
  • News
  • »
  • entertainment
  • »
  • Nayanthara-Vignesh Shivan: ನಯನತಾರಾ-ವಿಘ್ನೇಶ್ ಶಿವನ್ ಮದುವೆ ಟೀಸರ್ ರಿಲೀಸ್

Nayanthara-Vignesh Shivan: ನಯನತಾರಾ-ವಿಘ್ನೇಶ್ ಶಿವನ್ ಮದುವೆ ಟೀಸರ್ ರಿಲೀಸ್

ನಯನತಾರಾ-ವಿಘ್ನೇಶ್ ಶಿವನ್

ನಯನತಾರಾ-ವಿಘ್ನೇಶ್ ಶಿವನ್

Nayanthara - Vignesh Shivan: ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆ ವಿಡಿಯೋ ಟೀಸರ್ ಶೇರ್ ಮಾಡಲಾಗಿದ್ದು ಇದರಲ್ಲಿ ಸೌತ್ ಸೆಲೆಬ್ರಿಟಿ ಜೋಡಿಯ ಅದ್ಧೂರಿ ವಿವಾಹದ ಒಂದು ನೋಟವನ್ನು ನೀವು ಕಾಣಬಹುದು.

  • Share this:

ಸೌತ್​ನ ಖ್ಯಾತ ನಟಿ ನಯನತಾರಾ (Nayantara) ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan) ವಿವಾಹ ಅದ್ಧೂರಿಯಾಗಿ ನಡೆದಿತ್ತು. ಗ್ರ್ಯಾಂಡ್ ವೆನ್ಯೂನಲ್ಲಿ ನಡೆದ ವಿವಾಹದ (Marriage) ಡೆಕೊರೇಷನ್​ನಿಂದ ಹಿಡಿದು ವಧೂ ವರರ ಉಡುಗೆಯ ತನಕ ಎಲ್ಲವೂ ತುಂಬಾ ಡಿಫರೆಂಟಾಗಿ ಮೂಡಿಬಂದಿತ್ತು. ಈ ಮದುವೆ ಸ್ಟ್ರೀಮಿಂಗ್​ಗಾಗಿ ಒಟಿಟಿಯಿಂದ (OTT) ದಂಪತಿ ಅಡ್ವಾನ್ಸ್ ಪಡೆದಿದ್ದೂ ನಂತರ ಫೋಟೊಗಳು (Photo) ಲೀಕ್ ಆಗಿ ಈ ಅಗ್ರೀಮೆಂಟ್ ಕ್ಯಾನ್ಸಲ್ ಆಗಿದ್ದು ಎಲ್ಲವೂ ಹಳೆಯ ವಿಚಾರ. ಅಂತೂ ಇಂತೂ ಇವರ ವಿವಾಹದ ವಿಡಿಯೋ ಈಗ ವೈರಲ್ ಆಗಿದೆ. ಇನ್​ಸ್ಟಾಗ್ರಾಮ್​​ನಲ್ಲಿ ರೌಡಿ ಪಿಕ್ಚರ್ಸ್ ಖಾತೆಯಿಂದ ನಯನತಾರಾ-ವಿಘ್ನೇಶ್ ಶಿವನ್ ಮದುವೆ ಟೀಸರ್ (Teaser) ಶೇರ್ ಮಾಡಲಾಗಿದ್ದು ಅಭಿಮಾನಿಗಳು ಇದನ್ನು ನೋಡಿ ಥ್ರಿಲ್ ಆಗಿದ್ದಾರೆ.


ನಯನತಾರಾ - ಬಿಯಾಂಡ್ ದಿ ಫೇರಿಟೇಲ್


ಒಟಿಟಿ ಸ್ಟ್ರೀಮಿಂಗ್ ನೆಟ್‌ಫ್ಲಿಕ್ಸ್ ನಿರ್ದೇಶಕ ವಿಘ್ನೇಶ್ ಶಿವನ್ ಹಾಗೂ ನಟಿ ನಯನತಾರಾ ಅವರ ಮದುವೆಯ ಡ್ರೀಮಿ ಟೀಸರ್ ಅನ್ನು ಶನಿವಾರ ಶೇರ್ ಮಾಡಿದೆ. ಇದನ್ನು 'ನಯನತಾರಾ - ಬಿಯಾಂಡ್ ದಿ ಫೇರಿಟೇಲ್' ಎಂಬ ಸಾಕ್ಷ್ಯಚಿತ್ರದಲ್ಲಿ ಪ್ರದರ್ಶಿಸಲಾಗುತ್ತದೆ.


ಸೌತ್ ಜೋಡಿಯ ಪ್ರೇಮ ಪಯಣ- ಡೇಟಿಂಗ್​ನಿಂದ ವೆಡ್ಡಿಂಗ್ ತನಕ


ಝಾಕಿರ್ ಖಾನ್ ಮತ್ತು ನಟ ಪ್ರಜಕ್ತಾ ಕೋಲಿ ಅವರು ಆಯೋಜಿಸಿದ್ದ ಸ್ಟ್ರೀಮಿಂಗ್ ಪೋರ್ಟಲ್‌ನ ಟುಡಮ್ 2022 ಈವೆಂಟ್‌ನಲ್ಲಿ ಟೀಸರ್ ಅನ್ನು ಅನಾವರಣಗೊಳಿಸಲಾಯಿತು. ಒಂದು ನಿಮಿಷದ ಟೀಸರ್ ನಯನತಾರಾ ಅವರನ್ನು ಲೇಡಿ ಸೂಪರ್‌ಸ್ಟಾರ್ ಎಂದು ಟ್ಯಾಗ್ ಮಾಡಲಾಗಿದೆ. ಈ ಟೀಸರ್ ವಿಘ್ನೇಶ್ ಹಾಗೂ ನಯನತಾರಾ ಅವರ ಡೇಟಿಂಗ್‌ನಿಂದ ಅವರ ಮದುವೆಯವರೆಗಿನ ಚಂದದ ಲವ್ ಜರ್ನಿಯನ್ನು ತೋರಿಸುತ್ತದೆ.


ಇದನ್ನೂ ಓದಿ: Nayanthara-Vignesh Shivan: ನಯನತಾರಾ-ವಿಘ್ನೇಶ್ ಶಿವನ್ ಮದುವೆ ಟೀಸರ್ ರಿಲೀಸ್


ಟೀಸರ್​​ನಲ್ಲಿ ಏನೇನಿದೆ?


ತನ್ನ ಜೀವದ ಗೆಳತಿ ಬಗ್ಗೆ ಮಾತನಾಡುತ್ತಾ ವಿಘ್ನೇಶ್ ಶಿವನ್ ಅವಳು ಅದ್ಭುತ ಎಂದು ಹೇಳುವುದನ್ನು ಟೀಸರ್​​ನಲ್ಲಿ ನಾವು ಕಾಣಬಹುದು. ಟೀಸರ್ ನಿಧಾನವಾಗಿ ಮೂಡಿ ಬಂದಿದೆ. ನಿಧಾನವಾಗಿ ತೆರೆದುಕೊಳ್ಳುವ ಟೀಸರ್​​ನಲ್ಲಿ ನಯನತಾರಾ ತನ್ನ ಜೀವನದ ಬಿಗ್​ ಡೇಗಾಗಿ ತಯಾರಿ ನಡೆಸುವುದನ್ನು ಕೂಡಾ ನಾವು ಕಾಣಬಹುದು.

View this post on Instagram


A post shared by Netflix India (@netflix_in)

ಟೀಸರ್‌ನಲ್ಲಿ ಫೋರ್ಬ್ಸ್ ಇಂಡಿಯಾ ಸೆಲೆಬ್ರಿಟಿ 100 2018 ರ ಲಿಸ್ಟ್​​ನಲ್ಲಿ ಸ್ಥಾನ ಪಡೆದಿರುವ ನಯನತಾರಾ ತನ್ನ ಪ್ರಯಾಣದ ಬಗ್ಗೆ ಮಾತನಾಡುತ್ತಾ, ‘ಇದೆಲ್ಲವೂ ಪ್ರಾರಂಭವಾದಾಗ, ಇದು ಹೇಗೆ ನಡೆಯಲಿದೆ ಎಂದು ನನಗೆ ತಿಳಿದಿರಲಿಲ್ಲ. ನಾನು ಕೇವಲ ಸಾಮಾನ್ಯ ಹುಡುಗಿ, ನಾನೇನು ಮಾಡಿದರೂ ಅಲ್ಲಿ ನನ್ನ 100 ಶೇಕಡಾವನ್ನು ನೀಡಲು ಬಯಸುತ್ತೇನೆ ಎಂದಿದ್ದಾರೆ.


ಇದನ್ನೂ ಓದಿ: Nayanthara: ಪತಿ ಜೊತೆ ಫ್ಲೈಟ್​ನಲ್ಲಿ ನಯನತಾರಾ ರೊಮ್ಯಾನ್ಸ್; ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್


ಈ ಸಾಕ್ಷ್ಯಚಿತ್ರವನ್ನು ಗೌತಮ್ ವಾಸುದೇವ್ ಮೆನನ್ ನಿರ್ದೇಶಿಸಿದ್ದಾರೆ. ನಯನತಾರಾ ಮತ್ತು ಶಿವನ್ 2015 ರಿಂದ ಡೇಟಿಂಗ್ ಮಾಡುತ್ತಿದ್ದರು. ಇಬ್ಬರೂ ಜೂನ್ 2022 ರಲ್ಲಿ ಮಹಾಬಲಿಪುರಂನಲ್ಲಿ ವಿವಾಹವಾದರು. ಇವರ ವಿವಾಹದ ಬಗ್ಗೆ ಅವರ ಅಭಿಮಾನಿಗಳಿಗೆ ಬಹಳಷ್ಟು ಸಮಯದಿಂದ ಕುತೂಹಲವಿತ್ತು. ಅಂತೂ ಇಂತೂ ಈ ಸಿನಿಮಾ ಜೋಡಿ ಸತಿ ಪತಿಯಾಗಿದ್ದಾರೆ.


ಇತ್ತೀಚೆಹಗಷ್ಟೇ ನಯನತಾರಾ ಪತಿ ವಿಘ್ನೇಶ್ ಬರ್ತ್​ಡೇಗೆ ವಿಶೇಷ ಸರ್ಪೈಸ್ ಕೊಟ್ಟಿದ್ದರು. ಬುರ್ಜ್ ಖಲೀಫಾ ಮುಂದೆ ಸೌತ್​​ನ ಈ ಸೂಪರ್ ಜೋಡಿ ಬರ್ತ್​ಡೇ ಸಂದರ್ಭ ಫನ್ ಮಾಡಿದ್ದರು. ನಟಿ ಇನ್​​ಸ್ಟಾಗ್ರಾಮ್​ನಲ್ಲಿ ಇರದಿದ್ದರೂ ವಿಘ್ನೇಶ್ ಅವರು ಅವರ ಲವ್ಲೀ ಮೊಮೆಂಟ್​ಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡುತ್ತಿರುತ್ತಾರೆ.

Published by:Divya D
First published: