Nayanthara Wedding: ವಿಘ್ನೇಶ್​ ಬಾಳಲ್ಲಿ ತಾರೆಯಾದ ನಯನ, ಸ್ಟಾರ್ ಜೋಡಿ ಮದುವೆಯ ಎಕ್ಸ್​ಕ್ಲೂಸಿವ್ ಫೋಟೋ

Weeding Photo Goes Viral: ಬಹುಭಾಷಾ ನಟಿ ನಯನತಾರಾ ಗೆಳೆಯ ನಿರ್ದೇಶಕ ವಿಘ್ನೇಶ್ ಶಿವನ್ ಮದುವೆಯ ಫೋಟೋ ಹೊರ ಬಂದಿದ್ದು, ಅಭಿಮಾನಿಗಳು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಸ್ಯಾಂಡಲ್​ವುಡ್​ನಿಂದ ಹಿಡಿದು ದಕ್ಷಿಣ ಭಾರತದ ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ನಯನತಾರಾ ಹಸೆಮಣೆ ಏರಿದ್ದು, ಅಭಿಮಾನಿಗಳು ಮದುವೆಯ ಫೋಟೋಗಾಗಿ ಕಾಯುತ್ತಿದ್ದರು.

ಮದುವೆಯ ಸುಂದರ ಫೋಟೋ

ಮದುವೆಯ ಸುಂದರ ಫೋಟೋ

  • Share this:
ಬಹುಭಾಷಾ ನಟಿ ನಯನತಾರಾ (Nayanthara) ಗೆಳೆಯ ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan)  ಜೊತೆ ಸಪ್ತಪದಿ ತುಳಿದಿದ್ದು, ಮದುವೆಯಲ್ಲಿ ವಿವಿಧ ಭಾಷೆಯ ಸ್ಟಾರ್​ಗಳು ಭಾಗವಹಿಸಿದ್ದು, ಇದೀಗ ಮದುವೆಯ ಫೋಟೋ ವೈರಲ್ ಆಗುತ್ತಿದೆ. ಈ ತಾರಾ ಮದುವೆಗೆ ಬಾಲಿವುಡ್​ ಬಾದ್​ ಶಾ ಶಾರುಖ್ ಖಾನ್​, ಸೂಪರ್ ಸ್ಟಾರ್ ರಜನಿಕಾಂತ್, ನಟರಾದ ದಳಪತಿ ವಿಜಯ್, ಸೂರ್ಯ, ಕಾರ್ತಿ ಸೇರಿದಂತೆ ಹಲವಾರು ಜನರು ಭಾಗವಹಿಸಿದ್ದಾರೆ.

ಅಭಿಮಾನಿಗಳು ಬೆಳಗ್ಗೆಯಿಂದ ಯಾವಾಗ ಮದುವೆಯ ಫೋಟೋ ಬರುತ್ತದೆ ಎಂದು ಕಾದು ಕುಳಿತಿದ್ದರು. ಇದೀಗ ವಿಘ್ನೇಶ್​ ಟ್ವಿಟ್ಟರ್​ನಲ್ಲಿ ಒಂದು ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳು ಸುಂದರ ಜೋಡಿಗೆ ಹಾರೈಸಿದ್ದಾರೆ.

ಸಾಮಾಜಿಕ ಜಾಲಾತಾಣದಲ್ಲಿ ಫೋಟೋ ಹಾಕಿಕೊಂಡಿರುವ ಶಿವನ್, ದೇವರ ಕೃಪೆ ಗುರು ಹಿರಿಯರು ಹಾಗೂ ಸ್ನೇಹಿತರ ಆಶೀರ್ವಾದದೊಂದಿಗೆ ನಾವು ಮದುವೆಯಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.ಸ್ಯಾಂಡಲ್​ವುಡ್​ನಿಂದ ಹಿಡಿದು ದಕ್ಷಿಣ ಭಾರತದ ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ನಯನತಾರಾ ಹಸೆಮಣೆ ಏರಿದ್ದು, ಅಭಿಮಾನಿಗಳು ಮದುವೆಯ ಫೋಟೋಗಾಗಿ ಕಾಯುತ್ತಿದ್ದಾರೆ.  ಸಿನಿಮಾ ಶೂಟಿಂಗ್ ಸಮಯದಲ್ಲಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ನಡುವಿನ ಸ್ನೇಹ ಪ್ರೇಮಕ್ಕೆ ತಿರುಗಿ ಇದೀಗ ಸತಿಪತಿಗಳಾಗಿದ್ದು, ಈ ಅದ್ಧೂರಿ ಮದುವೆಗೆ ದಕ್ಷಿಣ ಭಾರತದ ಚಿತ್ರರಂಗ ಸಾಕ್ಷಿಯಾಗಿದೆ.

ಇನ್ನು ಮದುವೆಗೂ ಮೊದಲು ವಿಘ್ನೇಶ್​ ಶಿವನ್ ಪ್ರೀತಿಯ ಹುಡುಗಿಗೆ ಒಲವಿನ ಪತ್ರ ಬರೆದಿದ್ದು, ಅವರ ಜೊತೆ ಇದ್ದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.  ನನ್ನ ಜೀವನದ ಪ್ರತಿಕ್ಷಣದಲ್ಲಿ ಜೊತೆ ಇದ್ದವರಿಗೆ ಧನ್ಯವಾದಗಳು. ಒಳ್ಳೆಯ ಮನುಷ್ಯರನ್ನು ನನ್ನ ಜೀವನದಲ್ಲಿ ನೀಡಿದ ದೇವರಿಗೆ ಸಹ ಧನ್ಯವಾದಗಳು. ಪ್ರತಿ ಒಳ್ಳೆಯ ಕ್ಷಣ, ಪ್ರತಿ ಒಳ್ಳೆಯ ಕಾಕತಾಳೀಯ, ಪ್ರತಿ ಆಶೀರ್ವಾದ ಜೀವನವನ್ನು ಸುಂದರವಾಗಿಸಿದೆ. ಎಲ್ಲದಕ್ಕೂ ನಾನು ಋಣಿಯಾಗಿದ್ದೇನೆ ಎಂದಿದ್ದಾರೆ.

ಈಗ, ಇದೆಲ್ಲವೂ ನನ್ನ ಪ್ರೀತಿಗೆ ಸಮರ್ಪಿತವಾಗಿದೆ! ಕೆಲವೇ ಗಂಟೆಗಳಲ್ಲಿ ನಿನ್ನನ್ನ ವಧುವಾಗಿ ನೋಡಲು ಕಾಯುತ್ತಿದ್ದೇನೆ. ಹೊಸ ಬದುಕಿಗೆ ಕುಟುಂಬ ಮತ್ತು ಸ್ನೇಹಿತರ ಮುಂದೆ ಹೆಜ್ಜೆ ಇಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನಯನತಾರಾ ಮದುವೆಗೆ ಹೋಗ್ತಿಲ್ವಾ ಉಪ್ಪಿ? ಆಹ್ವಾನ ಇದಿಯೋ, ಇಲ್ವೋ?

ಇನ್ನು ಮದುವೆಯನ್ನು ಸಹ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದ ಜೋಡಿ, ತಮ್ಮ ವಿವಾಹದ ಆಚರಣೆಯ ಭಾಗವಾಗಿ, ನಯನತಾರಾ ಮತ್ತು ವಿಗೇಶ್ ಶಿವನ್ ಅವರು ಜೂನ್ 9 ರಂದು ತಮಿಳುನಾಡಿನಾದ್ಯಂತ ಸುಮಾರು 18,000 ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಅನಾಥ ಮಕ್ಕಳಿಗೆ ಈ ರೀತಿ ಊಟದ ವ್ಯವಸ್ತೆ ಮಾಡಿದ್ದು, ನಯನತಾರಾ ಹಾಗೂ ವಿಘ್ನೇಶ್​ ಅವರ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
Published by:Sandhya M
First published: