Nayanthara Wedding: ನಯನತಾರಾ ಮದುವೆಗೆ ಹೋಗ್ತಿಲ್ವಾ ಉಪ್ಪಿ? ಆಹ್ವಾನ ಇದಿಯೋ, ಇಲ್ವೋ?

Nayanthara and Vignesh Shivan Wedding: ಹೌದು, ಮಲಯಾಳಂ, ತೆಲುಗು ಮತ್ತು ತಮಿಳಿನಲ್ಲಿ ಮಿಂಚಿದ್ದ ನಯನತಾರಾ ಮೊದಲ ಬಾರಿಗೆ ಕನ್ನಡದಲ್ಲಿ ಕಾಣಿಸಿಕೊಂಡಿದ್ದು, ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ.

ಉಪೇಂದ್ರ ಮತ್ತು ನಯನತಾರಾ

ಉಪೇಂದ್ರ ಮತ್ತು ನಯನತಾರಾ

  • Share this:
ಬಹುಭಾಷಾ ನಟಿ ನಯನತಾರಾ (Nayanthara) ಇಂದು ಬಹುಕಾಲದ ಗೆಳೆಯ ವಿಘ್ನೇಶ್​ ಶಿವನ್ (Vignesh Shivan) ಜೊತೆ ಹಸೆಮಣೆ ಏರುತ್ತಿದ್ದಾರೆ. ಈಗಾಗಲೇ ಮದುವೆಯ (Wedding) ವಿಧಿ ವಿಧಾನಗಳು ಆರಂಭವಾಗಿದ್ದು, ಮಧ್ಯಾಹ್ನ 12 ಗಂಟೆಗೆ ಮುಹೂರ್ತವಿದೆ ಎಂಬ ಮಾಹಿತಿ ಇದೆ. ಇನ್ನು ಬಹು ದಿನಗಳಿಂದ ದಕ್ಷಿಣ ಸಿನಿರಂಗದಲ್ಲಿ (Film Industry) ಚರ್ಚಿತ ವಿಚಾರವೆಂದರೆ ನಯನತಾರಾ ಮದುವೆ, ಅಭಿಮಾನಿಗಳು (Fans) ಹಾಗು ಸಿನಿ ರಂಗದವರು ಬಹಳ ದಿನಗಳಿಂದ ಕಾಯುತ್ತಿದ್ದ ಮದುವೆ ಇದು. ಈ ಮದುವೆಗೆ ದಕ್ಷಿಣ ಭಾರತದ (South Indian Film Industry) ಬಹುತೇಕ ಸ್ಟಾರ್ ನಟರಿಗೆ ಆಹ್ವಾನ ನೀಡಲಾಗಿದೆ. ಆದರೆ ನಮ್ಮ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರಿಗೆ ಆಹ್ವಾನ ಹೋಗಿಲ್ವಾ? ಅಥವಾ ಶೂಟಿಂಗ್ ಬ್ಯುಸಿ ಇರುವ ಅವರು ಮದುವೆಗೆ ಹೋಗಲು ಸಾಧ್ಯವಾಗುತ್ತಿಲ್ಲವಾ? ಎನ್ನುವ ಪ್ರಶ್ನೆ ಇದೀಗ ಮೂಡಿದೆ.  

ಸ್ಯಾಂಡಲ್​ವುಡ್​ನಲ್ಲಿ ರಿಯಲ್ ಸ್ಟಾರ್ ಜೊತೆ ಅಭಿನಯಿಸಿದ್ದ ನಯನತಾರಾ

ಹೌದು, ಮಲಯಾಳಂ, ತೆಲುಗು ಮತ್ತು ತಮಿಳಿನಲ್ಲಿ ಮಿಂಚಿದ್ದ ನಯನತಾರಾ ಮೊದಲ ಬಾರಿಗೆ ಕನ್ನಡದಲ್ಲಿ ಕಾಣಿಸಿಕೊಂಡಿದ್ದು, ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ. ಉಪೇಂದ್ರ ಅವರ ಸೂಪರ್ ಹಿಟ್ ಚಿತ್ರ ಸೂಪರ್​ನಲ್ಲಿ  ರಿಯಲ್ ಸ್ಟಾರ್​ಗೆ ನಾಯಕಿಯಾಗಿದ್ದರು. ಹಾಗಾಗಿ ಅವರು ಉಪೇಂದ್ರ ಅವರನ್ನು ಖಂಡಿತಾ ಮದುವೆಗೆ ಕರೆದಿರುತ್ತಾರೆ ಎನ್ನಲಾಗುತ್ತಿದೆ. ಆದರೂ ಕೂಡ ಈ ಬಗ್ಗೆ ಎಲ್ಲೂ ಸುದ್ದಿಯಾಗದ ಕಾರಣ ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ.

ಮೂಲಗಳ ಪ್ರಕಾರ ಉಪೇಂದ್ರ ಅವರನ್ನು ಸಹ ನಯನತಾರಾ ಮದುವೆಗೆ ಆಹ್ವಾನಿಸಿದ್ದಾರೆ. ಆದರೆ ಉಪ್ಪಿ ಹೋಗುತ್ತಾರೋ ಇಲ್ಲವೋ ಗೊತ್ತಿಲ್ಲ. ಮಹಾಬಲಿಪುರಂನಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಮದುವೆ ನಡೆಯುತ್ತಿದ್ದು, ಇನ್ನು ಹಲವಾರು ದಿನಗಳಿಂದ ಪ್ರೀತಿಸುತ್ತಿದ್ದ  ನಯನತಾರಾ ಹಾಗೂ ನಿರ್ದೇಶಕ  ಶಿವನ್ ಇಂದು ಕುಟುಂಬಸ್ಥರ ಸಮ್ಮುಖದಲ್ಲಿ ಹಸೆಮಣೆ ಏರುತ್ತಿದ್ದಾರೆ.

ಇದನ್ನೂ ಓದಿ: ಹಿಂದಿಯತ್ತ ಮುಖ ಮಾಡಿದ ರಾಧಿಕಾ ನಾರಾಯಣ್, ವೆಬ್​ ಸಿರೀಸ್​ನಲ್ಲಿ ರಂಗಿತರಂಗ ಸುಂದರಿ

ಮದುವೆಗೆ ರಜನಿಕಾಂತ್ ಆಗಮನ 

ಈ ಬಗ್ಗೆ ನಿನ್ನೆ ಅಧಿಕೃತವಾಗಿ ಮಾಹಿತಿ ನೀಡಿದ ಜೋಡಿ, ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದೇವೆ.  ಮೊದಲು ತಿರುಪತಿಯಲ್ಲಿ ಮದುವೆಯಾಗಬೇಕೆಂದುಕೊಂಡಿದ್ದೆವು, ಆದರೆ ಸೆಲೆಬ್ರಿಟಿಗಳು ಅಲ್ಲಿಗೆ ಬರಲು ಕೂಡ ಕಷ್ಟವಾಗುತ್ತದೆ. ಯಾರಿಗೂ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮದುವೆಯ ಸ್ಥಳವನ್ನು ಮಹಾಬಲಿಪುರಂಗೆ ಬದಲಾಯಿಸಿದ್ದೇವೆ ಎಂದಿದ್ದಾರೆ.

ಮದುವೆಯ ಎಲ್ಲಾ ಫೋಟೋಗಳನ್ನು ಮಧ್ಯಾಹ್ನದ ನಂತರ ನಾವು ನಿಮಗೆ ನೀಡುತ್ತೇವೆ. ಅದೇ ರೀತಿ ಜೂನ್ 11ರಂದು ನಾನು ಮತ್ತು ನಯನತಾರಾ ನಿಮ್ಮೆಲ್ಲರನ್ನೂ ಪ್ರತ್ಯೇಕವಾಗಿ ಭೇಟಿಯಾಗುತ್ತೇನೆ ಎಂದು ಮಾಧ್ಯಮಗಳಿಗೆ ವಿಘ್ನೇಶ್ ಶಿವನ್ ತಿಳಿಸಿದ್ದು, ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ ಎಂದು ಕೇಳಿಕೊಂಡಿದ್ದರು.

ಇತ್ತೀಚೆಗಷ್ಟೇ ತಮಿಳುನಾಡು ಸಿಎಂ ಸ್ಟಾಲಿನ್ ಬಳಿ ತೆರಳಿ ನಯನತಾರಾ ಹಾಗೂ ವಿಘ್ನೇಶ್ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡಿದ್ದರು ಎಂದು ತಿಳಿದುಬಂದಿದೆ. ಅವರ ಜೊತೆಯಲ್ಲಿ ಈಗಾಗಲೇ ಹಲವಾರು ಸೆಲೆಬ್ರಿಟಿಗಳಿಗೆ ಸಹ ಆಮಂತ್ರಣ ನೀಡಿದ್ದು, ಸೂಪರ್ ಸ್ಟಾರ್ ರಜನಿಕಾಂತ್ ಈಗಾಗಲೇ ಮದುವೆಗೆ ಆಗಮಿಸಿದ್ದಾರೆ.

ಇದನ್ನೂ ಓದಿ: ಪ್ರೀತಿಯ ಹುಡುಗಿಗೆ ವಿಘ್ನೇಶ್ ಶಿವನ್ ಒಲವಿನ ಪತ್ರ, ನಯನತಾರಾ ಮದುವೆಗೆ ಕ್ಷಣಗಣನೆ

ಅಲ್ಲದೇ, ಕಮಲ್ ಹಾಸನ್ ಸೇರಿದಂತೆ ಟಾಲಿವುಡ್ ಮತ್ತು ಕಾಲಿವುಡ್ ನ ಪ್ರಮುಖರು ಮದುವೆಗೆ ಆಗಮಿಸುವ ನಿರೀಕ್ಷೆಯಿದ್ದು, ಇನ್ನೂ ಒಬ್ಬೊಬ್ಬರಾಗಿ ಬರುತ್ತಿದ್ದಾರೆ. ಇನ್ನು ನಯನತಾರಾ ಹಾಗೂ ವಿಘ್ನೇಶ್​ ಶಿವನ್ ಮದುವೆಯ ಆಮಂತ್ರಣ ಪತ್ರಿಕೆ ಕೂಡ ಫುಲ್ ವೈರಲ್ ಆಗಿದ್ದು, ಅಭಿಮಾನಿಗಳಿಗೆ ಬಹಳ ಇಷ್ಟವಾಗಿದೆ.
Published by:Sandhya M
First published: