Nayanthara: ಅರೇ.. ಇವ್ರು ಕೂಡ ಬಾಡಿಗೆ ತಾಯಿ ಮೂಲಕ ಮಗು ಪಡೀತಾರಂತೆ! ಏನಿದು ನಯನತಾರಾ ಬಗ್ಗೆ ಹೊಸ ಗುಸುಗುಸು?

ಈಗಾಗಲೇ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರು ಸೀಕ್ರೇಟ್ ಆಗಿ ಮದುವೆ ಆಗಿದ್ದು, ಶೀಘ್ರದಲ್ಲೇ ಬಾಡಿಗೆ ತಾಯಿ(Baby Via Surrogacy) ಮೂಲಕ ಮಗು ಪಡೆಯಲು ಪ್ಲ್ಯಾನ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಕೇಳಿಬಂದಿದೆ.

ವಿಘ್ನೇಶ್​, ನಯನತಾರಾ

ವಿಘ್ನೇಶ್​, ನಯನತಾರಾ

  • Share this:
ಕಾಲಿವುಡ್ ನಟಿ(Kollywood Actress) ನಯನತಾರಾ(Nayanthara) ಇತ್ತೀಚಿನ ಕೆಲ ವರ್ಷಗಳಲ್ಲಿ ಸಿನಿಮಾಗಿಂತ ಹೆಚ್ಚಾಗಿ ಅವರ ವೈಯಕ್ತಿಕ ಬದುಕಿನಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ನಿನ್ನೆ ಮೊನ್ನೆ ತಾನೇ ನಿರ್ದೇಶಕ ವಿಘ್ನೇಶ್ ಶಿವನ್(Vignesh Shivan)ಜೊತೆ ಲೇಡಿ ಸೂಪರ್ ಸ್ಟಾರ್(Lady Superstar) ಗುಟ್ಟಾಗಿ ಮದುವೆ(Marriage)ಯಾಗಿದ್ದಾರೆ ಎಂಬ ಗುಸುಗುಸು ಹರಿದಾಡುತ್ತಿರುವ ಬೆನ್ನಲೇ ಪ್ರಸ್ತುತ ಮತ್ತೊಂದು ಸುದ್ದಿ ಹೊರಬಿದ್ದಿದೆ. ಚಲನಚಿತ್ರ ನಿರ್ಮಾಪಕ(Producer) ವಿಘ್ನೇಶ್ ಶಿವನ್ ಅವರೊಂದಿಗೆ ನಟಿ ರಹಸ್ಯ ಈಗಾಗಲೇ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರು ಸೀಕ್ರೇಟ್ ಆಗಿ ಮದುವೆ ಆಗಿದ್ದು, ಶೀಘ್ರದಲ್ಲೇ ಬಾಡಿಗೆ ತಾಯಿ(Baby Via Surrogacy) ಮೂಲಕ ಮಗು ಪಡೆಯಲು ಪ್ಲ್ಯಾನ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಕೇಳಿಬಂದಿದೆ. ವಿವಾಹ ಆಗಿದ್ದಾರೆ ಎಂದು ವರದಿಯಾದ ಒಂದು ವಾರದಲ್ಲಿಯೇ ನಯನತಾರಾ ಬಾಡಿಗೆ ತಾಯ್ತನವನ್ನು ಆರಿಸಿಕೊಳ್ಳಲು ಯೋಜಿಸುತ್ತಿದ್ದಾರೆ ಎಂಬ ವದಂತಿ ಕೇಳಿ ಬರುತ್ತಿದೆ.

ಬಾಡಿಗೆ ತಾಯಿ ಮೂಲಕ ಮಗು ಪಡೀತಾರಾ ನಟಿ?

ಸದ್ಯಕ್ಕೆ ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ ಮತ್ತು ಇದಕ್ಕೆ ಸಂಬಂಧಿಸಿದಂತೆ ನಯನತಾರಾ, ವಿಘ್ನೇಶ್ ಶಿವನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಹಲವು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಬಗ್ಗೆ ಇವರಿಬ್ಬರು ಸಹ ಯಾವುದೇ ಮುಚ್ಚು ಮರೆಮಾಡದೇ ಹಲವು ಭಾರಿ ತಮ್ಮ ರಿಲೇಷನ್‌ಶಿಪ್‌ ಬಗ್ಗೆ ಹೇಳಿಕೊಂಡಿದ್ದಾರೆ. ವಿಘ್ನೇಶ್ ಶಿವನ್ ಮತ್ತು ನಯನತಾರಾ ಸುಮಾರು ಆರು ವರ್ಷಗಳ ಕಾಲ ಡೇಟಿಂಗ್ ನಡೆಸಿ ನಂತರ 2021ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಮದುವೆ ಬಗ್ಗೆ ಮಾತ್ರ ಯಾವುದೇ ಸುಳಿವನ್ನು ಇವರಿಬ್ಬರು ನೀಡಿಲ್ಲ.

ಗುಟ್ಟಾಗಿ ಮದುವೆಯಾಗಿದ್ದರಂತೆ ನಯನತಾರಾ-ವಿಘ್ನೇಶ್​!

ಇದೆಲ್ಲದರ ಮಧ್ಯೆ ನಯನತಾರಾ ಮತ್ತು ವಿಘ್ನೇಶ್ ಇತ್ತೀಚೆಗೆ ಕಾಳಿಗಂಬಾಳ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಮತ್ತು ಅಭಿಮಾನಿಗಳು ನಯನತಾರಾ ಹಣೆಯ ಮೇಲೆ ಸಿಂಧೂರ ಇರುವುದನ್ನು ಗಮನಿಸಿ ಇಬ್ಬರು ಗುಟ್ಟಾಗಿ ಮದುವೆ ಮಾಡಿಕೊಂಡಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿ ಬಂದಿದೆ.

ಮದುವೆ ವಿಚಾರ ನಿಜ ಅಲ್ವಂತೆ ಸುಳ್ಳಂತೆ!

ಆದರೆ, ಪಿಂಕ್‌ವಿಲ್ಲಾದ ಹೊಸ ವರದಿಯ ಪ್ರಕಾರ ಮದುವೆಯ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಸೂಚಿಸುತ್ತದೆ. ನಯನತಾರಾ ಶಾರುಖ್ ಖಾನ್ ಅಭಿನಯದ ಅಟ್ಲಿ ಸೇರಿದಂತೆ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿದ್ದಾರೆ. ಪ್ರಸ್ತುತ ಅವರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮದುವೆ, ಮಕ್ಕಳು ಎಲ್ಲಾ ವದಂತಿಗಳಷ್ಟೇ ಎಂದು ನಯನತಾರಾಳ ಹತ್ತಿರದ ಕೆಲವು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಬಾಹುಬಲಿ ಸಿನಿಮಾ ನನ್ನ ವೃತ್ತಿ ಜೀವನದ ಗೇಮ್ ಚೇಂಜರ್ ಎಂದ ಸೌತ್ ಸೂಪರ್ ಸ್ಟಾರ್..!

ತಿಂಗಳಿಗೊಮ್ಮೆ ಕೇಳಿ ಬರುತ್ತೆ ಹೊಸ ಗಾಸಿಪ್​!

‘ಈ ಜೋಡಿಯ ಬಗ್ಗೆ ಮೂರು ತಿಂಗಳಿಗೊಮ್ಮೆ ಈ ರೀತಿ ಗಾಸಿಪ್‌ಗಳು ಕೇಳಿಬರುತ್ತಲೇ ಇರುತ್ತವೆ. ಸಿನಿಮಾಗಳಲ್ಲಿ ನಯನತಾರಾ ಬ್ಯುಸಿ ಆಗಿದ್ದಾರೆ. ಸದ್ಯಕ್ಕಂತೂ ಮದುವೆ ಆಲೋಚನೆ ಇಲ್ಲ. ಮದುವೆ, ಮಕ್ಕಳ ಕುರಿತ ಗಾಸಿಪ್ ಕೇಳಿ ನಾವು ನಗುತ್ತಿದ್ದೇವೆ’ ಎಂದು ನಯನತಾರಾ ಅವರ ಆಪ್ತ ಮೂಲಗಳು ಹೇಳಿವೆ. ನಯನತಾರಾ ಮತ್ತು ವಿಘ್ನೇಶ್ ಏಳು ವರ್ಷಗಳಿಂದ ಒಟ್ಟಿಗೆ ಇದ್ದಾರೆ. ಕಳೆದ ವರ್ಷ ಒಂದು ಫೋಟೋ ಅಪ್ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ನಿಶ್ಚಿತಾರ್ಥದ ಬಗ್ಗೆ ಈ ಜೋಡಿ ಹಕ್ಕಿಗಳು ಸಂದೇಶ ನೀಡಿದ್ದವು.

ಇದನ್ನು ಓದಿ: Puneeth Rajkumarರವರ 'ಜೇಮ್ಸ್'ಗೆ ಅಡ್ಡಿಯಾಗುತ್ತಾ 'The Kashmir files'? ಈ ಬಗ್ಗೆ ನಿರ್ಮಾಪಕರು ಹೇಳಿದ್ದೇನು?

ಕಳೆದ ವರ್ಷ, ದಂಪತಿಗಳು ತಮ್ಮ ಮುಖಗಳನ್ನು ಕಾಣಿಸದ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ತಮ್ಮ ನಿಶ್ಚಿತಾರ್ಥವನ್ನು ಸೂಕ್ಷ್ಮವಾಗಿ ಘೋಷಿಸಿದರು. ನಯನತಾರಾ ತನ್ನ ವಿಶಿಷ್ಟವಾದ ನಿಶ್ಚಿತಾರ್ಥದ ಉಂಗುರವನ್ನು ವಿಘ್ನೇಶ್ ಅವರ ಎದೆಯ ಮೇಲೆ ಕೈ ಇರಿಸಿ ಅಭಿಮಾನಿಗಳಿಗೆ ತೋರಿಸಿದ್ದರು.
Published by:Vasudeva M
First published: