Nayanthara Wedding: ತಾರಾ ಜೋಡಿಯ ಮದುವೆಯಲ್ಲಿ ಭೂರಿ ಭೋಜನ! 18 ಸಾವಿರ ಅನಾಥ ಮಕ್ಕಳಿಗೂ ಊಟ ಕೊಟ್ಟ ನಯನ-ವಿಘ್ನೇಶ್

Nayanthara and Vignesh Shivan Wedding: ಮದುವೆಯ ಊಟದ ಮೆನುವಿನ ಫೋಟೋ ಸೋರಿಕೆಯಾಗಿದ್ದು, ಫುಲ್ ವೈರಲ್ ಆಗುತ್ತಿದೆ. ಅವರು ಮದುವೆಗೆ ಸಸ್ಯಾಹಾರಿ ಆಹಾರವನ್ನು ಆಯ್ಕೆ ಮಾಡಿದ್ದು,ತಮಿಳುನಾಡು ಮತ್ತು ಕೇರಳ ಶೈಲಿಯ ರುಚಿಕರವಾದ ಆಹಾರ ಪದಾರ್ಥಗಳನ್ನು ಮಾಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಹುಭಾಷಾ ನಟಿ ನಯನತಾರಾ (Nayanthara)  ಗೆಳೆಯ ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan) ಜೊತೆ ಸಪ್ತಪದಿ ತುಳಿದಿದ್ದು, ಮದುವೆಯಲ್ಲಿ (wedding)  ವಿವಿಧ ಭಾಷೆಯ ಸ್ಟಾರ್​ಗಳು ಭಾಗವಹಿಸಿದ್ದು, ಮದುವೆಯ ಸುದ್ದಿ  ಭಾರೀ ಚರ್ಚೆಯಾಗುತ್ತಿದೆ. ಈ ಮದುವೆಯ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲ ವಿಚಾರಗಳು ಇಲ್ಲಿದೆ. ಮಹಾಬಲಿಂಪುರಂನ ಖಾಸಗಿ ಹೋಟೆಲ್​ನಲ್ಲಿ ವಿವಾಹವಾಗಿರುವ ಜೋಡಿ ಅಚ್ಚುಕಟ್ಟಾಗಿ ಮದುವೆ ಸಿದ್ದತೆಯನ್ನು ಮಾಡಿದೆ. ಮದುವೆ ನಡೆಯುತ್ತಿರುವ ಹೋಟೆಲ್​ ಸುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ರೀತಿಯ ಸಮಸ್ಯೆಗಳು ಬರದಂತೆ, ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

18 ಸಾವಿರ ಮಕ್ಕಳಿಗೆ ಊಟದ ವ್ಯವಸ್ಥೆ

ಇನ್ನು ವರದಿಗಳ ಪ್ರಕಾರ, ತಮ್ಮ ವಿವಾಹದ ಆಚರಣೆಯ ಭಾಗವಾಗಿ, ನಯನತಾರಾ ಮತ್ತು ವಿಗೇಶ್ ಶಿವನ್ ಅವರು ಜೂನ್ 9 ರಂದು ತಮಿಳುನಾಡಿನಾದ್ಯಂತ ಸುಮಾರು 18,000 ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಅನಾಥ ಮಕ್ಕಳಿಗೆ ಈ ರೀತಿ ಊಟದ ವ್ಯವಸ್ತೆ ಮಾಡಿದ್ದು, ನಯನತಾರಾ ಹಾಗೂ ವಿಘ್ನೇಶ್​ ಅವರ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಇನ್ನು ಮದುವೆಗೆ ಬಂದ ಅತಿಥಿಗಳಿಗೆ ಮೊಬೈಲ್ ಫೋನ್ ಬಳಕೆ ಅಥವಾ ಅದನ್ನು ಮದುವೆಗೆ ತರಲು ನಿಷೇಧ ಹೇರಲಾಗಿದೆ. ಯಾವುದೇ ಕಾರಣಕ್ಕೂ ಫೋಟೋ ಹಾಗೂ ವಿಡಿಯೋ ಕೂಡ ಲೀಕ್​ ಆಗದಂತೆ ಎಚ್ಚರವಹಿಸಲಾಗಿದೆ. ದಂಪತಿಗಳು ಮದುವೆಯ ಫೋಟೋಗಳನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಮದುವೆಯ ಊಟದ ಮೆನುವಿನ ಫೋಟೋ ಸೋರಿಕೆಯಾಗಿದ್ದು, ಫುಲ್ ವೈರಲ್ ಆಗುತ್ತಿದೆ. ಅವರು ಮದುವೆಗೆ ಸಸ್ಯಾಹಾರಿ ಆಹಾರವನ್ನು ಆಯ್ಕೆ ಮಾಡಿದ್ದು,ತಮಿಳುನಾಡು ಮತ್ತು ಕೇರಳ ಶೈಲಿಯ ರುಚಿಕರವಾದ ಆಹಾರಗಳನ್ನು ಮಾಡಿಸಿದ್ದಾರೆ.



ಊಟದ ಮೆನು ವೈರಲ್ 

ಕಥಾಲ್ ಬಿರಿಯಾನಿ ಅಂದರೆ ಹಲಸಿನ ಕಾಯಿಯ ಬಿರಿಯಾನಿ, ಪನೀರ್ ಪತ್ತಾನಿ ಕರಿ, ಅವಿಯಲ್, ಮೋರ್ ಕೊಝಂಬು, ಮಿಕ್ಕನ್ ಚೆಟ್ಟಿನಾಡ್ ಕರಿ, ಚೇಪಕೆಜ್ಜು ಪುಳಿ ಕೊಜಾಂಬು, ಪೂಂಡು ಮಿಲಗು ರಸಂ, ರೊಟ್ಟಿ ಹಲ್ವಾ, ಎಳನೀರ್ ಪಾಯಸ ಹೀಗೆ ವಿವಿಧ ಬಗೆಯ ಆಹಾರ ಪದಾರ್ಥಗಳಿದೆ.

ಇದನ್ನೂ ಓದಿ: ವಿಘ್ನೇಶ್​ ಬಾಳಲ್ಲಿ ತಾರೆಯಾದ ನಯನ, ಸ್ಟಾರ್ ಜೋಡಿ ಮದುವೆಯ ಎಕ್ಸ್​ಕ್ಲೂಸಿವ್ ಫೋಟೋ

ಈ ತಾರಾ ಮದುವೆಗೆ ಬಾಲಿವುಡ್​ ಬಾದ್​ ಶಾ ಶಾರುಖ್ ಖಾನ್​, ಸೂಪರ್ ಸ್ಟಾರ್ ರಜನಿಕಾಂತ್, ನಟರಾದ ದಳಪತಿ ವಿಜಯ್, ಸೂರ್ಯ, ಕಾರ್ತಿ ಸೇರಿದಂತೆ ಹಲವಾರು ಜನರು ಭಾಗವಹಿಸಿದ್ದಾರೆ. ಸ್ಯಾಂಡಲ್​ವುಡ್​ನಿಂದ ಹಿಡಿದು ದಕ್ಷಿಣ ಭಾರತದ ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ನಯನತಾರಾ ಹಸೆಮಣೆ ಏರಿದ್ದು, ಅಭಿಮಾನಿಗಳು ಮದುವೆಯ ಫೋಟೋಗಾಗಿ ಕಾಯುತ್ತಿದ್ದಾರೆ.

ಸಿನಿಮಾ ಶೂಟಿಂಗ್ ಸಮಯದಲ್ಲಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ನಡುವಿನ ಸ್ನೇಹ ಪ್ರೇಮಕ್ಕೆ ತಿರುಗಿ ಇದೀಗ ಸತಿಪತಿಗಳಾಗಿದ್ದು, ಈ ಅದ್ಧೂರಿ ಮದುವೆಗೆ ದಕ್ಷಿಣ ಭಾರತದ ಚಿತ್ರರಂಗ ಸಾಕ್ಷಿಯಾಗಿದೆ. ಇನ್ನು ಮದುವೆಗೂ ಮೊದಲು ವಿಘ್ನೇಶ್​ ಶಿವನ್ ಪ್ರೀತಿಯ ಹುಡುಗಿಗೆ ಒಲವಿನ ಪತ್ರ ಬರೆದಿದ್ದು, ಅವರ ಜೊತೆ ಇದ್ದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ನಯನತಾರಾ ಮದುವೆಗೆ ಹೋಗ್ತಿಲ್ವಾ ಉಪ್ಪಿ? ಆಹ್ವಾನ ಇದಿಯೋ, ಇಲ್ವೋ?

ನನ್ನ ಜೀವನದ ಪ್ರತಿಕ್ಷಣದಲ್ಲಿ ಜೊತೆ ಇದ್ದವರಿಗೆ ಧನ್ಯವಾದಗಳು. ಒಳ್ಳೆಯ ಮನುಷ್ಯರನ್ನು ನನ್ನ ಜೀವನದಲ್ಲಿ ನೀಡಿದ ದೇವರಿಗೆ ಸಹ ಧನ್ಯವಾದಗಳು. ಪ್ರತಿ ಒಳ್ಳೆಯ ಕ್ಷಣ,  ಪ್ರತಿ ಆಶೀರ್ವಾದ ಜೀವನವನ್ನು ಸುಂದರವಾಗಿಸಿದೆ. ಎಲ್ಲದಕ್ಕೂ ನಾನು ಋಣಿಯಾಗಿದ್ದೇನೆ ಎಂದಿದ್ದಾರೆ. ಈಗ, ಇದೆಲ್ಲವೂ ನನ್ನ ಪ್ರೀತಿಗೆ ಸಮರ್ಪಿತ! ಕೆಲವೇ ಗಂಟೆಗಳಲ್ಲಿ ನಿನ್ನನ್ನ ವಧುವಾಗಿ ನೋಡಲು ಕಾಯುತ್ತಿದ್ದೇನೆ. ಹೊಸ ಬದುಕಿಗೆ ಕುಟುಂಬ ಮತ್ತು ಸ್ನೇಹಿತರ ಮುಂದೆ ಹೆಜ್ಜೆ ಇಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
Published by:Sandhya M
First published: