Nayanthara: ಪೆ ಪೆ ಪೆ - ಡುಂ ಡುಂ! ಶೀಘ್ರದಲ್ಲೇ ಹಸೆಮಣೆ ಏರ್ತಿದ್ದಾರೆ ಲೇಡಿ ಸೂಪರ್​ಸ್ಟಾರ್, ಮದುವೆ ದಿನಾಂಕ ಕೂಡ ಫಿಕ್ಸ್

ನಿನ್ನೆ ಮೊನ್ನೆ ತಾನೇ ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan) ಜೊತೆ ಲೇಡಿ ಸೂಪರ್ ಸ್ಟಾರ್ (Lady Superstar) ಗುಟ್ಟಾಗಿ ಮದುವೆ(Marriage)ಯಾಗಿದ್ದಾರೆ ಎಂಬ ಗುಸುಗುಸು ಹರಿದಾಡುತ್ತಿರುವ ಬೆನ್ನಲೇ ಪ್ರಸ್ತುತ ಮತ್ತೊಂದು ಸುದ್ದಿ ಹೊರಬಿದ್ದಿದೆ. ಜೂನ್​ 9 ಕ್ಕೆ ನಯನತಾರಾ  ಮದುವೆಯಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ನಯನತಾರಾ, ವಿಘ್ನೇಶ್​

ನಯನತಾರಾ, ವಿಘ್ನೇಶ್​

  • Share this:
ಕಾಲಿವುಡ್ ನಟಿ (Kollywood Actress) ನಯನತಾರಾ (Nayanthara) ಇತ್ತೀಚಿನ ಕೆಲ ವರ್ಷಗಳಲ್ಲಿ ಸಿನಿಮಾಗಿಂತ ಹೆಚ್ಚಾಗಿ ಅವರ ವೈಯಕ್ತಿಕ ಬದುಕಿನಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ನಿನ್ನೆ ಮೊನ್ನೆ ತಾನೇ ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan) ಜೊತೆ ಲೇಡಿ ಸೂಪರ್ ಸ್ಟಾರ್ (Lady Superstar) ಗುಟ್ಟಾಗಿ ಮದುವೆ(Marriage)ಯಾಗಿದ್ದಾರೆ ಎಂಬ ಗುಸುಗುಸು ಹರಿದಾಡುತ್ತಿರುವ ಬೆನ್ನಲೇ ಪ್ರಸ್ತುತ ಮತ್ತೊಂದು ಸುದ್ದಿ ಹೊರಬಿದ್ದಿದೆ. ಜೂನ್​ 9 ಕ್ಕೆ ನಯನತಾರಾ  ಮದುವೆಯಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಬಾರಿ ಇದು ಕೇವಲ ವದಂತಿ ಅಲ್ಲ. ನಿಜವಾಗಲು ನಯನತಾರಾ, ವಿಘ್ನೇಶ್​ ಮದುವೆ (Marriage) ಯಾಗಲಿದ್ದಾರೆ  ಎಂದು ಅವರ ಕುಟುಂಬಸ್ಥರು ಹೇಳಿದ್ದಾರಂತೆ. ಈ ಮೊದಲು, ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೂನ್ 5 ರಂದು ವಿವಾಹವಾಗಲಿದ್ದಾರೆ ಎನ್ನಲಾಗಿತ್ತು. ಆದರೆ ದಿನಾಂಕ ಬದಲಾಗಿದ್ದು, ಜೂನ್ 5 ರ ಬದಲಿಗೆ ಜೂನ್ 09 ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಜೂನ್​ 9ಕ್ಕೆ ನಯನತಾರಾ ಮದುವೆ!

ನಯನತಾರಾ ಹಾಗೂ ವಿಘ್ನೇಶ್​ ಇಬ್ಬರು ಕೆಲ ವರ್ಷಗಳಿಂದ ಲಿವಿಂಗ್​ ಟು ಗೆದರ್​​ ರಿಲೆಷನ್​ಶಿಫ್​ನಲ್ಲಿದ್ದಾರೆ. ಇವರ ಮದುವೆ ವಿಚಾರ ಸಾಕಷ್ಟು ಬಾರಿ ಚರ್ಚೆಯಾಗಿತ್ತು. ಕೆಲ ದಿನಗಳ ಹಿಂದೆ ಇಬ್ಬರು ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬೆನ್ನಲ್ಲೇ ಇದೀಗ ಅಧಿಕೃತವಾಗಿ ಮಾಹಿತಿ ಹೊರಬಂದಿದೆ. ಜೂನ್​ 9ಕ್ಕೆ ನಯನತಾರಾ ಹಾಗೂ ವಿಘ್ನೇಶ್​ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.ಈ ಜೋಡಿಯು ತಿರುಪತಿಯಲ್ಲಿ ವಿವಾಹವಾಗಲಿದೆ ಎನ್ನಲಾಗಿತ್ತು. ಆದರೆ ಮದುವೆ ಸ್ಥಳ ಸಹ ಬದಲಾವಣೆಗೊಂಡಿದ್ದು, ತಮಿಳಿನಾಡಿನ ಮಹಾಬ್ಸ್ ರೆಸಾರ್ಟ್‌ ನಲ್ಲಿ ಈ ಜೋಡಿ ವಿವಾಹ ಬಂಧಕ್ಕೆ ಒಳಗಾಗಲಿದೆ.

ಆಪ್ತರು ಹಾಗೂ ಕುಟುಂಬಸ್ದರಿಗೆ ಮಾತ್ರ ಆಹ್ವಾನ?

ಮದುವೆ ಕಾರ್ಯಕ್ರಮದಲ್ಲಿ ಆಪ್ತ ಗೆಳೆಯರು ಹಾಗೂ ಸಂಬಂಧಿಕರು ಮಾತ್ರವೇ ಭಾಗಿಯಾಗಲಿದ್ದಾರೆ. ಆ ನಂತರ ಚೆನ್ನೈನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ಅನ್ನು ಆಯೋಜಿಸಲಿದ್ದಾರೆ. ರಿಸೆಪ್ಷನ್‌ಗೆ ಚಿತ್ರರಂಗದ ಹಲವು ಗಣ್ಯರು ಆಗಮಿಸಲಿದ್ದಾರೆ. ತಮಿಳು ಚಿತ್ರರಂಗ ಮಾತ್ರವೇ ಅಲ್ಲದೆ, ಹಲವು ಚಿತ್ರರಂಗದ ಗಣ್ಯರುಗಳು ರಿಸೆಪ್ಷನ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. . ನಯನತಾರಾ ಶಾರುಖ್ ಖಾನ್ ಅಭಿನಯದ ಅಟ್ಲಿ ಸೇರಿದಂತೆ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿದ್ದಾರೆ. ಪ್ರಸ್ತುತ ಅವರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: ಕೆಜಿಎಫ್ ತಾತನಿಗೆ ಒಲಿದ ಅದೃಷ್ಟ, ಮುದುಕನ ಲವ್ ಸ್ಟೋರಿ ಚಿತ್ರಕ್ಕೆ ಅವರೇ ಹೀರೋ!

ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಯನತಾರಾ!


ಕಳೆದ ವರ್ಷ, ದಂಪತಿಗಳು ತಮ್ಮ ಮುಖಗಳನ್ನು ಕಾಣಿಸದ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದ್ದರು. ನಯನತಾರಾ ತನ್ನ ವಿಶಿಷ್ಟವಾದ ನಿಶ್ಚಿತಾರ್ಥದ ಉಂಗುರವನ್ನು ವಿಘ್ನೇಶ್ ಅವರ ಎದೆಯ ಮೇಲೆ ಕೈ ಇರಿಸಿ ಅಭಿಮಾನಿಗಳಿಗೆ ತೋರಿಸಿದ್ದರು. ಇದಾದ ಬಳಿಕ ಹಲವು ಬಾರಿ ಮದುವೆಯಾಗಲಿದ್ದಾರೆ ಅನ್ನುವ ಗಾಸಿಪ್ ಹರಡಿತ್ತು. ಇದೀಗ ಈ ಬಾರಿ ನಿಜವಾಗಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Laal Singh Chaddha ಟ್ರೈಲರ್​ ರಿಲೀಸ್​, ಇದಕ್ಕೆ ಇವ್ರನ್ನು ಮಿಸ್ಟರ್​ ಪರ್ಫೆಕ್ಷನಿಸ್ಟ್ ಅನ್ನೋದು!

ಲೇಡಿ ಸೂಪರ್​ ಸ್ಟಾರ್ ನಯನತಾರಾ ಫುಲ್​ ಬ್ಯುಸಿ!

ಲೇಡಿ ಸೂಪರ್​ ಸ್ಟಾರ್​​, ನಟಿ ನಯನತಾರಾ ತಮಿಳು ಚಿತ್ರರಂಗದಲ್ಲಿ ಮುಂಚೂಣಿಯಲ್ಲಿರುವ ನಟಿ. ಇವರು ಮಲಯಾಳಂ ಮತ್ತು ತೆಲುಗಿನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.  2015ರಲ್ಲಿ ತೆರೆಕಂಡ ‘ನಾನುಮ್ ರೌಡಿ ಧಾನ್’ ಚಿತ್ರದಲ್ಲಿ ಕಾದಂಬರಿಯಾಗಿ ನಯನತಾರಾ ನಟಿಸಿದ್ದರು. ಚಿತ್ರವು ದೊಡ್ಡ ಯಶಸ್ಸನ್ನು ಕಂಡಿತ್ತು.ಈ ಸಿನಿಮಾದ ಮೂಲಕ ಇವರ ಡಿಮ್ಯಾಂಡ್​ ಮತ್ತಷ್ಟು ಹೆಚ್ಚಾಯ್ತು. ವಿಘ್ನೇಶ್ ಶಿವನ್ ನಿರ್ದೇಶಿಸಿ ನಯನತಾರಾ ನಟಿಸಿರುವ 'ಕಾತು ವಾಕುಲ ರೆಂಡು ಕಾದಲ್' ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ.

Published by:Vasudeva M
First published: