• Home
  • »
  • News
  • »
  • entertainment
  • »
  • Nayantara: ಪುಟ್ಟ ಮಕ್ಕಳನ್ನು ಎತ್ತಿಕೊಂಡು ದೀಪಾವಳಿ ಶುಭಾಶಯ ತಿಳಿಸಿದ ನಯನತಾರಾ

Nayantara: ಪುಟ್ಟ ಮಕ್ಕಳನ್ನು ಎತ್ತಿಕೊಂಡು ದೀಪಾವಳಿ ಶುಭಾಶಯ ತಿಳಿಸಿದ ನಯನತಾರಾ

ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇತ್ತೀಚೆಗಷ್ಟೇ ಮುದ್ದಾದ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಈಗ ಪುಟ್ಟ ಮಕ್ಕಳನ್ನು ಎತ್ತಿಕೊಂಡು ದೀಪಾವಳಿ ಶುಭಾಶಯ ತಿಳಿಸಿದ್ದಾರೆ.

ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇತ್ತೀಚೆಗಷ್ಟೇ ಮುದ್ದಾದ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಈಗ ಪುಟ್ಟ ಮಕ್ಕಳನ್ನು ಎತ್ತಿಕೊಂಡು ದೀಪಾವಳಿ ಶುಭಾಶಯ ತಿಳಿಸಿದ್ದಾರೆ.

ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇತ್ತೀಚೆಗಷ್ಟೇ ಮುದ್ದಾದ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಈಗ ಪುಟ್ಟ ಮಕ್ಕಳನ್ನು ಎತ್ತಿಕೊಂಡು ದೀಪಾವಳಿ ಶುಭಾಶಯ ತಿಳಿಸಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ಸೌತ್​ನ ಸ್ಟಾರ್ ಸೆಲೆಬ್ರಿಟಿ ಕಪಲ್ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೋಡಿಯಾಗಿ ದೀಪಾವಳಿಗೆ ಶುಭ ಕೋರಿದ್ದಾರೆ. ತಮ್ಮ ಪುಟ್ಟ ಮಕ್ಕಳನ್ನು ಜೊತೆಗೆ ಹಿಡಿದುಕೊಂಡು ವಿಡಿಯೋ ಮಾಡಿ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಸರೋಗಸಿ ಮೂಲಕ ತಾವು ಇಬ್ಬರು ಮಕ್ಕಳಿಗೆ ಪೋಷಕರಾಗಿರುವ ವಿಚಾರವನ್ನು ಈ ಜೋಡಿ ಶೇರ್ ಮಾಡಿದ್ದರು. ಮುದ್ದಾಗ ಅವಳಿ ಮಕ್ಕಳಿಗೆ ತಾವು ಪೋಷಕರಾಗಿದ್ದು ತಮಗೆ ಆಶೀರ್ವಾದ ಮಾಡುವಂತೆ ಕೇಳಿದ್ದರು. ಈಗ ಮಕ್ಕಳನ್ನು ಎತ್ತಿಕೊಂಡು ವಿಡಿಯೋ ಒಂದನ್ನು ಮಾಡಿದ್ದಾರೆ. ವಿಘ್ನೇಶ್ ಅವರು ಈ ವಿಡಿಯೋವನ್ನು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್ ಪೇಜ್​​ನಲ್ಲಿ ಶೇರ್ ಮಾಡಿದ್ದಾರೆ. ಇದರಲ್ಲಿ ಮಕ್ಕಳ ಮುಖವನ್ನು ತೋರಿಸಿಲ್ಲ.


ಟ್ರೆಡೀಷನಲ್ ಲುಕ್​​ನಲ್ಲಿ ಜೋಡಿ


ವಿಘ್ನೇಶ್ ಹಾಗೂ ನಯನತಾರಾ ಇಬ್ಬರೂ ಟ್ರೆಡೀಷನಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದು ನಯನತಾರಾ ಅವರು ಪೀಚ್ ಕಲರ್ ಸೀರೆ ಹಾಗೂ ವಿಘ್ನೇಶ್ ಅವರು ಪಂಚೆ ಶರ್ಟ್ ಧರಿಸಿ ಪೋಸ್ ಕೊಟ್ಟಿದ್ದಾರೆ. ವಿಘ್ನೇಶ್ ವಿಶ್ ಮಾಡುವಾಗ ನಯನತಾರಾ ಕೂಡಾ ಜೊತೆಯಲ್ಲಿ ಸಾಥ್ ಕೊಟ್ಟಿದ್ದಾರೆ.


ವಿಡಿಯೋ ವೈರಲ್


ಈ ಮುದ್ದಾದ ಫ್ಯಾಮಿಲಿ ವಿಡಿಯೋಗೆ 88 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಒಂದು ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ವಿಡಿಯೋಗೆ ಕಮೆಂಟ್ ಮಾಡಿ ಸ್ಟಾರ್ ದಂಪತಿಗೆ ಬೆಳಕಿನ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.




ಜೀವನದಲ್ಲಿ ಬರುವ ಎಲ್ಲಾ ಅಡೆತಡೆಗಳ ನಡುವೆಯೂ ನಿಮ್ಮೆಲ್ಲರಿಗೂ ಸಂತೋಷ ಮತ್ತು ಶಾಂತಿಯನ್ನು ಮಾತ್ರ ನಾವು ಬಯಸುತ್ತೇನೆ. ಪ್ರೀತಿಯು ಪ್ರತಿಯೊಬ್ಬರಲ್ಲೂ ನಾವು ಹೊಂದಬಹುದು. ಪ್ರೀತಿಯೇ ಈ ಜೀವನವನ್ನು ಸುಂದರ ಮತ್ತು ಸಮೃದ್ಧಗೊಳಿಸುತ್ತದೆ! ದೇವರಲ್ಲಿ ನಂಬಿಕೆ ಪ್ರೀತಿಯಲ್ಲಿ ನಂಬಿಕೆ ಇರಲಿ. ಒಳ್ಳೆಯತನದಲ್ಲಿ ನಮಗಿರುವ ನಂಬಿಕೆ ಮತ್ತು ವಿಶ್ವಾಸ ಯಾವಾಗಲೂ ಎಲ್ಲವನ್ನೂ ಸುಂದರವಾಗಿಸುತ್ತದೆ ಎಂದಿದ್ದಾರೆ.


ಇದನ್ನೂ ಓದಿ: Nayanthara Vignesh Baby: ನಯನತಾರಾ ದಂಪತಿಗೆ ಅವಳಿ ಮಕ್ಕಳು! ಕ್ಯೂಟ್ ಕಂದಮ್ಮಗಳ ಫೋಟೊ ನೋಡಿ


ಅಭಿಮಾನಿಗಳ ಆಶೀರ್ವಾದ ಕೇಳಿದ ಜೋಡಿ


ತಾವು ಪೋಷಕರಾದ ಬಗ್ಗೆ ಬರೆದಿರುವ ವಿಘ್ನೇಶ್ ನಯನ ಮತ್ತು ನಾನು ಅಮ್ಮ ಮತ್ತು ಅಪ್ಪ ಆಗಿದ್ದೇವೆ. ನಮಗೆ ಅವಳಿ ಗಂಡು ಮಕ್ಕಳಾಗಿವೆ. ನಮ್ಮ ಎಲ್ಲಾ ಪ್ರಾರ್ಥನೆ, ನಮ್ಮ ಪೂರ್ವಜರ ಆಶೀರ್ವಾದ ಎಲ್ಲಾ ಒಳ್ಳೆಯ ಅಭಿವ್ಯಕ್ತಿಗಳ ಹಾರೈಕೆಯ ಫಲವಾಗಿ ನಮಗೆ ಈ ಮಕ್ಕಳಾಗಿವೆ. ನಿಮ್ಮೆಲ್ಲರ ಆಶೀರ್ವಾದ ನಮಗೆ ಬೇಕು ಎಂದಿದ್ದಾರೆ.


ಮದುವೆಯಾಗಿ 4 ತಿಂಗಳಲ್ಲಿ ಮಕ್ಕಳು


ನಯನತಾರಾ ಹಾಗೂ ವಿಘ್ನೇಶ್ ಪೋಷಕರಾದಾಗ ಮದುವೆಯಾಗಿ 4 ತಿಂಗಳಲ್ಲಿ ಇವರು ಪೋಷಕರಾಗಿದ್ದು ಹೇಗೆ ಎಂಬ ಪ್ರಶ್ನೆ ಚರ್ಚೆಯಾಗಿತ್ತು. ಈ ಜೋಡಿಯು ಸರೋಗಸಿ ಮೂಲಕ ಮಗುವನ್ನು ಪಡೆದಿದೆ ಎಂದು ಹೇಳಿದ್ದರು. ಆದರೂ ಇದು ವಿವಾದವಾಗಿತ್ತು. ಈ ನಿಟ್ಟಿನಲ್ಲಿ ನಯತನಾತಾರ ಹಾಗೂ ವಿಘ್ನೇಶ್ ವರದಿಯನ್ನೂ ಸಲ್ಲಿಸಬೇಕಾಯಿತು. ಅಂತೂ ಈ ಪ್ರಕರಣ ಸುಖಾಂತ್ಯವಾಗಿದ್ದು ತಾವಿಬ್ಬರೂ ವರ್ಷಗಳ ಮೊದಲೇ ರಿಜಿಸ್ಟರ್ ಮದುವೆಯಾಗಿದ್ದೆವು ಎನ್ನುವುದನ್ನು ಜೋಡಿ ರಿವೀಲ್ ಮಾಡಿದ್ದಾರೆ.


ನಯನತಾರಾ ನೆಕ್ಸ್ಟ್ ಮೂವೀಸ್ ಯಾವುದು?


ನಯನತಾರಾ ಶಾರುಖ್ ಖಾನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಅಟ್ಲಿ ನಿರ್ದೇಶನದ ಜವಾನ್ ಚಿತ್ರದಲ್ಲಿ ನಯನತಾರಾ ನಾಯಕಿಯಾಗಿದ್ದಾರೆ. ಇದರಲ್ಲಿ ವಿಜಯ್ ಸೇತುಪತಿ ವಿಲನ್ ಆಗಿ ನಟಿಸಲಿದ್ದು, ದಳಪತಿ ವಿಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜವಾನ್ ಚಿತ್ರದ ಶೂಟಿಂಗ್ ಕೆಲ ದಿನಗಳ ಹಿಂದೆ ಮುಗಿದಿದೆ. ಈ ಚಿತ್ರ 2023ರಲ್ಲಿ ಬಿಡುಗಡೆಯಾಗಲಿದೆ. ನಯನ ಹಾಗೂ ವಿಘ್ನೇಶ್ ಮದುವೆಗೂ ಶಾರೂಖ್ ಬಂದಿದ್ದರು.

Published by:Divya D
First published: