• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Nawazuddin Siddiqui: ಹೆಂಡತಿಗೆ ಊಟ ಕೊಡದೆ ಚಿತ್ರಹಿಂಸೆ ಕೊಡ್ತಿದ್ದಾರಂತೆ ನವಾಜುದ್ದೀನ್ ಸಿದ್ದಿಕಿ! ನಟ ವಿರುದ್ಧ ಗಂಭೀರ ಆರೋಪ

Nawazuddin Siddiqui: ಹೆಂಡತಿಗೆ ಊಟ ಕೊಡದೆ ಚಿತ್ರಹಿಂಸೆ ಕೊಡ್ತಿದ್ದಾರಂತೆ ನವಾಜುದ್ದೀನ್ ಸಿದ್ದಿಕಿ! ನಟ ವಿರುದ್ಧ ಗಂಭೀರ ಆರೋಪ

ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಗಂಭೀರ ಆರೋಪ

ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಗಂಭೀರ ಆರೋಪ

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರ ಕುಟುಂಬ ಸದಸ್ಯರು ಆಲಿಯಾ ಅವರನ್ನು ಮನೆಯಿಂದ ಹೊರಹಾಕಲು ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡಿದ್ದಾರೆ ಅಂತ ಆಲಿಯಾ ಪರ ವಕೀಲರಾದ ರಿಜ್ವಾನ್ ಸಿದ್ದಿಕಿ ಹೇಳಿದ್ದಾರೆ.

 • Trending Desk
 • 4-MIN READ
 • Last Updated :
 • Karnataka, India
 • Share this:

ಬಾಲಿವುಡ್ ನಲ್ಲಿ (Bollywood) ಇತ್ತೀಚೆಗೆ ಒಂದು ಸುದ್ದಿ ಸ್ವಲ್ಪ ಜೋರಾಗಿಯೇ ಹರಿದಾಡುತ್ತಿದೆ ಅಂತ ಹೇಳಬಹುದು. ಈ ಸುದ್ದಿ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಅವರದ್ದು ಅಂತ ಹೇಳಿದರೆ ಅನೇಕರಿಗೆ ಸ್ವಲ್ಪ ಆಶ್ಚರ್ಯವಾಗಬಹುದು. ಏಕೆಂದರೆ ನಟ ನವಾಜ್ ಸದಾ ತನ್ನ ಚಿತ್ರಗಳಲ್ಲಿ (Movies) ಅಭಿನಯಿಸಿದ ವಿಶಿಷ್ಟ ಪಾತ್ರಗಳಿಗೆ ಸುದ್ದಿ ಆಗುತ್ತಾರೆ ಅಂತ ಅವರ ಅಭಿಮಾನಿಗಳಿಗೂ ಮತ್ತು ಸಿನಿ ರಸಿಕರಿಗೂ ಗೊತ್ತು.


ಆದರೆ ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಪತ್ನಿ ಆಲಿಯಾ ಸಿದ್ದಿಕಿ ಅವರೊಂದಿಗಿನ ಪ್ರಕ್ಷುಬ್ಧ ಸಂಬಂಧವು ಆಗಾಗ್ಗೆ ಸುದ್ದಿಯಾಗುತ್ತಲೆ ಇದೆ. ಈಗ ಮತ್ತೊಮ್ಮೆ ಇವರಿಬ್ಬರ ಬಗ್ಗೆ ಒಂದು ಸುದ್ದಿ ಹೊರ ಬಂದಿದೆ ನೋಡಿ.


ನವಾಜ್ ಮತ್ತು ಪತ್ನಿ ಆಲಿಯಾ ಬಗ್ಗೆ ಎದ್ದಿರುವ ಹೊಸ ಸುದ್ದಿ ಏನು?


ನಟ ನವಾಜ್ ಅವರ ನಿವಾಸದಲ್ಲಿ ತನಗೆ ಕಿರುಕುಳ ನೀಡಲಾಗಿದೆ ಎಂದು ನಟನ ಪತ್ನಿ ಆಲಿಯಾ ಹೇಳಿಕೊಂಡ ಕೆಲವು ದಿನಗಳ ನಂತರ, ಅವರ ವಕೀಲರು ಈಗ ಕೆಲವು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ ನೋಡಿ.


ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರ ಪತ್ನಿಯ ವಕೀಲರಾದ ರಿಜ್ವಾನ್ ಸಿದ್ದಿಕಿ ಅವರು ನಟ ಮತ್ತು ಅವರ ಕುಟುಂಬ ಸದಸ್ಯರು ಆಲಿಯಾ ಅವರನ್ನು ಮನೆಯಿಂದ ಹೊರಹಾಕಲು ಏನೆಲ್ಲಾ ಮಾಡಬೇಕೋ, ಅದೆಲ್ಲವನ್ನೂ ಮಾಡಿದ್ದಾರೆ ಅಂತ ಹೇಳಿದ್ದಾರೆ. ಆಲಿಯಾ ಅವರಿಗೆ ನವಾಜ್ ಮತ್ತು ಅವರ ಕುಟುಂಬ ಆಹಾರ, ಹಾಸಿಗೆ ಮತ್ತು ಕನಿಷ್ಠ ಬಾತ್‌ರೂಮ್‌, ಟಾಯ್ಲೆಟ್ ಹೋಗುವುದಕ್ಕೂ ಸಹ ಅವಕಾಶ ನೀಡುತ್ತಿಲ್ಲವಂತೆ. ಒಟ್ಟಿನಲ್ಲಿ ಹೇಳುವುದಾದರೆ ಆಲಿಯಾ ಅವರ ಚಲನವಲನಗಳನ್ನು ಸೀಮಿತಗೊಳಿಸಿದ್ದಾರೆ ಎಂದು ವಕೀಲರು ಹೇಳಿದ್ದಾರೆ. ಅವರು ಸುದೀರ್ಘ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ, ಅದರಲ್ಲಿ ಆಲಿಯಾ ಎದುರಿಸುತ್ತಿರುವ ದೌರ್ಜನ್ಯಗಳ ಬಗ್ಗೆ ವಿವರವಾಗಿ ಎಲ್ಲವನ್ನೂ ಬರೆದು ತಿಳಿಸಿದ್ದಾರೆ.


Nawazuddin Siddiqui wife alleges harassment by husband torture by in laws
ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಗಂಭೀರ ಆರೋಪ


ಆಲಿಯಾ ವಕೀಲರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಏನಿದೆ?


ಆಲಿಯಾ ಅವರ ವಕೀಲರಾದ ರಿಜ್ವಾನ್ ಸಿದ್ದಿಕಿ ಅವರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ "ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬ ಸದಸ್ಯರು ಆಲಿಯಾ ಅವರನ್ನು ಮನೆಯಿಂದ ಓಡಿಸಲು ಎಲ್ಲವನ್ನೂ ಮಾಡಿದರು. ಅವರು ಅವಳ ವಿರುದ್ಧ ಕ್ರಿಮಿನಲ್ ದೂರನ್ನು ದಾಖಲಿಸಿದರು. ನಂತರ, ಪೊಲೀಸರ ಮೂಲಕ, ಅವರು ಅವಳನ್ನು ಬಂಧಿಸುವುದಾಗಿ ಬೆದರಿಕೆ ಹಾಕಿದರು ಮತ್ತು ಪ್ರತಿದಿನ ಸಂಜೆ ಹೊತ್ತಿಗೆ ಪೊಲೀಸ್ ಠಾಣೆಗೆ ಕರೆಯುತ್ತಿದ್ದರು.


ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬವು ಆಲಿಯಾಗೆ ಆಹಾರ, ಹಾಸಿಗೆ ಮತ್ತು ಸ್ನಾನಗೃಹಕ್ಕೆ ಪ್ರವೇಶವನ್ನು ನೀಡಿಲ್ಲ ಎಂದು ಅವರು ಆರೋಪಿಸಿದರು. "ಅವರು ನನ್ನ ಕ್ಲೈಂಟ್ ಸುತ್ತಲೂ ಅಸಂಖ್ಯಾತ ಪುರುಷ ಅಂಗರಕ್ಷಕರನ್ನು ಸಹ ನಿಯೋಜಿಸಿದ್ದಾರೆ ಮತ್ತು ನನ್ನ ಕ್ಲೈಂಟ್ ಪ್ರಸ್ತುತ ತನ್ನ ಅಪ್ರಾಪ್ತ ಮಕ್ಕಳೊಂದಿಗೆ ವಾಸಿಸುತ್ತಿರುವ ಮನೆಯ ಹಾಲ್ ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ" ಎಂದು ರಿಜ್ವಾನ್ ಹೇಳಿದರು.


ಆಲಿಯಾ ಅವರಿಗೆ ಪೊಲೀಸರಿಂದ ಯಾವುದೇ ಬೆಂಬಲ ಸಿಕ್ಕಿಲ್ವಂತೆ


ವಾಸ್ತವವಾಗಿ, ಆಲಿಯಾ ಅವರ ವಕೀಲರು ಪೊಲೀಸರಿಂದ ಯಾವುದೇ ಸಹಾಯವನ್ನು ಪಡೆದಿಲ್ಲ ಎಂದು ಹೇಳಿದರು. "ಪೊಲೀಸ್ ಇಲಾಖೆಯ ಕ್ರಮಗಳು ಮತ್ತು ವೈಫಲ್ಯಗಳನ್ನು ನಾನು ನೇರವಾಗಿ ಆಪಾದಿಸಲು ಬಯಸುವುದಿಲ್ಲ, ಆದರೂ ನನ್ನ ಕಕ್ಷಿದಾರರ ಹಕ್ಕುಗಳನ್ನು ರಕ್ಷಿಸಲು ಯಾವುದೇ ಪೊಲೀಸ್ ಅಧಿಕಾರಿ ಬರಲಿಲ್ಲ ಎಂಬುದು ಸತ್ಯ” ಎಂದು ಹೇಳಿದ್ದಾರೆ.
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನವಾಜುದ್ದೀನ್ ಸಿದ್ದಿಕಿ ಅವರ ತಾಯಿ ಕಳೆದ ವಾರ ಆಲಿಯಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ವಿಶೇಷವೆಂದರೆ, ಆಲಿಯಾ ಪ್ರಸ್ತುತ ಅಂಧೇರಿಯಲ್ಲಿರುವ ನಟನ ಮನೆಯಲ್ಲಿ ತನ್ನ ಮಕ್ಕಳಾದ ಯಾನಿ ಮತ್ತು ಶೋರಾ ಅವರೊಂದಿಗೆ ವಾಸಿಸುತ್ತಿದ್ದಾರೆ. ವರದಿಗಳ ಪ್ರಕಾರ, ನವಾಜ್ ಗೆ ಅವರ ಪತ್ನಿ 2021 ರಲ್ಲಿ ವಾಟ್ಸಾಪ್ ಮೂಲಕ ವಿಚ್ಛೇದನ ನೋಟಿಸ್ ಕಳುಹಿಸಿದ್ದಾರೆ.

Published by:ಪಾವನ ಎಚ್ ಎಸ್
First published: