ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಟನ ಸಂಸಾರದಲ್ಲಿ ದೊಡ್ಡ ಬಿರುಗಾಳಿಯೇ ಎದ್ದಿದೆ. ನಟನ ವಿರುದ್ಧ ಪತ್ನಿ ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೇ ದಿನಕ್ಕೊಂದು ಹೊಸ ಹೊಸ ವಿಚಾರಗಳು ಹೊರಬೀಳುತ್ತಿವೆ. ನಟನ ಪತ್ನಿ ಆಲಿಯಾ (Aaliya) ಗಂಡನಿಂದ ಆದ ಅನ್ಯಾಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿದ್ದಾರೆ. ಆಲಿಯಾ ಪೋಸ್ಟ್‌ಗಳು ಸಖತ್ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ನವಾಜುದ್ದೀನ್ ಹಾಗೂ ಆತನ ಮನೆಯವರು ನನಗೆ ಕಿರುಕುಳ ನೀಡಿದ್ದಾರೆ ಎಂದು ಆಲಿಯಾ ಆರೋಪಿಸಿದ್ದರು. ಇದೀಗ ತನ್ನ ಪತಿಯೇ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಅತ್ಯಾಚಾರದ ದೂರು ಕೊಟ್ಟ ಆಲಿಯಾ
ಸಿದ್ದಿಕಿ ಪತ್ನಿ ಆಲಿಯಾ ಪೊಲೀಸರಿಗೆ ಅತ್ಯಾಚಾರದ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ನವಾಜ್ ತಮ್ಮ ಮಕ್ಕಳನ್ನು ಅವರ ಬಳಿಯೇ ಉಳಿಸಿಕೊಳ್ಳಲು ಹೊರಟಿದ್ದಾರೆ ಎಂದು ಆಲಿಯಾ ಆರೋಪಿಸಿದ್ದಾರೆ. ಈ ವಿಡಿಯೋದಲ್ಲಿ ಆಲಿಯಾ ತನ್ನ ಸ್ಥಿತಿಯ ಬಗ್ಗೆ ಅಳುತ್ತಾ ಹೇಳಿಕೊಂಡಿದ್ದಾರೆ. ಆರ್ಥಿಕ ಸಮಸ್ಯೆ ಎದುರಿಸುತ್ತಿರುವುದಾಗಿಯೂ ಕಣ್ಣೀರು ಹಾಕಿದ್ದಾರೆ.
View this post on Instagram
ಮಕ್ಕಳನ್ನು ತಾಯಿಗೆ ನೀಡಬೇಕು ಎನ್ನುವ ವಿಚಾರದಲ್ಲಿ ಆಲಿಯಾ ಪರ ವಕೀಲರು ವಾದ ಮಂಡನೆ ಮಾಡುತ್ತಿದ್ದಾರೆ. ನವಾಜುದ್ದೀನ್ ಮಕ್ಕಳನ್ನು ತಮಗೆ ನೀಡಬೇಕು ಎಂದು ಕೋರಿದ್ದಾರೆ. ಅವರಿಗೆ ಡೈಪರ್ ಅನ್ನು ಹೇಗೆ ಬದಲಿಸಬೇಕು ಎಂಬುದು ತಿಳಿದಿಲ್ಲ. ಇಂದು ನನ್ನಿಂದ ಮಕ್ಕಳನ್ನು ಕದ್ದು ಅವರು ಒಳ್ಳೆಯ ತಂದೆ ಎಂದು ತೋರಿಸಲು ಬಯಸುತ್ತಿದ್ದಾರೆ. ಹೇಡಿ ತಂದೆ. ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಾಯಿಯಿಂದ ಮಕ್ಕಳನ್ನು ಕಸಿದು ಕೊಳ್ತಿದ್ದಾರೆ. ಆದರೆ ಸರ್ವಶಕ್ತನಿಗೆ ದೊಡ್ಡ ಶಕ್ತಿ ಇದೆ ಎಂದು ಅವರಿಗೆ ತಿಳಿದಿಲ್ಲ’ ಎಂದು ಆಲಿಯಾ ಹೇಳಿದ್ದಾರೆ.
ಈ ಕ್ರೂರನ ಕೈಗೆ ಮಕ್ಕಳನ್ನು ಕೊಡುವುದಿಲ್ಲ
ಅವನ ತಾಯಿ ನನ್ನ ಮುಗ್ಧ ಮಕ್ಕಳನ್ನು ಮಗನ ಮಕ್ಕಳಲ್ಲ ಎಂದು ಕರೆಯುತ್ತಾರೆ. ಈ ವೇಳೆ ಈತ (ನವಾಜುದ್ದೀನ್) ಮೌನವಾಗಿರುತ್ತಾನೆ. ನಿನ್ನೆ ವರ್ಸೋವಾ ಪೊಲೀಸ್ ಠಾಣೆಯಲ್ಲಿ ನವಾಜುದ್ದೀನ್ ವಿರುದ್ಧ ಸಾಕ್ಷ್ಯದೊಂದಿಗೆ ಅತ್ಯಾಚಾರದ ಪ್ರಕರಣವನ್ನು ದಾಖಲಿಸಿದ್ದೇನೆ. ಏನೇ ಆಗಲಿ ನನ್ನ ಮುಗ್ಧ ಮಕ್ಕಳನ್ನು ಈ ಕ್ರೂರ ಕೈಗೆ ಕೊಡುವುದಿಲ್ಲ ಎಂದು ಹೇಳಿದರು.
ನಾನು ನಷ್ಟದಲ್ಲಿದ್ದು, ಅನೇಕ ಸಮಸ್ಯೆ ಎದುರಿಸುತ್ತಿದ್ದೇನೆ
ಅದೇ ವಿಡಿಯೋದಲ್ಲಿ ಆಲಿಯಾ, 'ನೀವು ನನ್ನನ್ನು ನಿಮ್ಮ ಹೆಂಡತಿ ಎಂದು ಪರಿಗಣಿಸಲಿಲ್ಲ, ಆದರೆ ನಾನು ಯಾವಾಗಲೂ ನಿಮ್ಮನ್ನು ನನ್ನ ಪತಿ ಎಂದೇ ನೋಡಿದ್ದೇನೆ. ಪ್ರತಿ ಡಾಕ್ಯುಮೆಂಟ್‌ನಿಂದ ಹಿಡಿದು ಎಲ್ಲದಕ್ಕೂ ನಾನು ನನ್ನನ್ನು ನಿಮ್ಮ ಹೆಂಡತಿ ಎಂದು ಪರಿಗಣಿಸಿದೆ. ನನಗೆ ಹಣದ ಸಮಸ್ಯೆ ಇದೆ. ಆರ್ಥಿಕವಾಗಿ ನಾನು ನಷ್ಟದಲ್ಲಿದ್ದೇನೆ. ನಾನು ಇದೀಗ ತೊಂದರೆಯಲ್ಲಿದ್ದೇನೆ ಎಂದಿದ್ದಾರೆ. ನನಗೆ ನ್ಯಾಯ ಸಿಗುತ್ತೆ ಎಂದು ನಂಬಿದ್ದೇನೆ.
ತೀರ್ಪು ನನ್ನ ಪರವಾಗಿ ಬರುತ್ತವೆ ಎಂದು ನ್ಯಾಯಾಲಯದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಆಲಿಯಾ ಹೇಳಿದರು. ಈ ಪ್ರಕರಣ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ವಿಚಾರದಲ್ಲಿ ನವಾಜುದ್ದೀನ್ ಅವರು ನೇರವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಿಗೆ ‘ನನಗೆ ನನ್ನ ಮಕ್ಕಳು ಬೇಕು ಅಷ್ಟೇ. ಯಾರು ಏನೇ ಹೇಳಿದರೂ ತೊಂದರೆ ಇಲ್ಲ’ ಎಂದಷ್ಟೇ ನವಾಜುದ್ದೀನ್ ಪ್ರತಿಕ್ರಿಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ