• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Nawazuddin Siddiqui: ಬಾಲಿವುಡ್ ಸ್ಟಾರ್ ನಟನಿಗೆ ತನ್ನದೇ ಬಂಗಲೆ ಪ್ರವೇಶಿಸದಂತೆ ತಡೆ! ಅಮ್ಮನ ನೋಡೋಕಾಗದೆ ಭಾವುಕ

Nawazuddin Siddiqui: ಬಾಲಿವುಡ್ ಸ್ಟಾರ್ ನಟನಿಗೆ ತನ್ನದೇ ಬಂಗಲೆ ಪ್ರವೇಶಿಸದಂತೆ ತಡೆ! ಅಮ್ಮನ ನೋಡೋಕಾಗದೆ ಭಾವುಕ

ನಟ ನವಾಜುದ್ದೀನ್ ಸಿದ್ದಿಕಿ ಕೌಟುಂಬಿಕ ಸಮಸ್ಯೆ

ನಟ ನವಾಜುದ್ದೀನ್ ಸಿದ್ದಿಕಿ ಕೌಟುಂಬಿಕ ಸಮಸ್ಯೆ

ಬಾಲಿವುಡ್ ಸ್ಟಾರ್ ನಟನನ್ನು ತನ್ನದೇ ಮನೆಗೆ ಪ್ರವೇಶಿಸದಂತೆ ತಡೆದಿರುವ ಘಟನೆ ನಡೆದಿದೆ. ಹುಷಾರಿಲ್ಲದ ಅಮ್ಮನ ನೋಡಲು ಬಂದ ನಟ ಭಾವುಕರಾಗಿದ್ದಾರೆ.

 • News18 Kannada
 • 4-MIN READ
 • Last Updated :
 • Mumbai, India
 • Share this:

ಬಾಲಿವುಡ್ (Bollywood) ನಟ ನವಾಜುದ್ದೀನ್ ಸಿದ್ಧಿಕಿ (Nawazuddin Siddiqui) ತಮ್ಮ ತಾಯಿಯನ್ನು (Mother) ನೋಡಲು ಮುಂಬೈನ (Mumbai) ತಮ್ಮ ಬಂಗಲೆಗೆ ಬಂದಾಗ ಅವರನ್ನು ತಡೆದಿರುವ ವಿಡಿಯೋ (Video) ವೈರಲ್  (Viral) ಆಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅಮ್ಮನನ್ನು (Mother) ಭೇಟಿ ಮಾಡಲು ನಟ (Actor) ತಮ್ಮ ಬಂಗಲೆಗೆ ಬಂದಿದ್ದರು. ನಟ ಮನೆಯೊಳಗೆ ಪ್ರವೇಶಿಸಲು ಪ್ರಯತ್ನಿಸುವಾಗ ಅವರ ಸಹೋದರ  (Brother) ಫೈಜುದ್ದೀನ್ ಅವರು ತಡೆದಿದ್ದಾರೆ. ಗುರುವಾರ ರಾತ್ರಿ ನಟ ಮನೆಯೊಳಗೆ ಪ್ರವೇಶಿಸಲು ಪ್ರಯತ್ನಿಸಿದ್ದಾಗಿ ತಿಳಿದುಬಂದಿದೆ.


ನವಾಜುದ್ದೀನ್ ಅವರ ತಾಯಿಯ ಆರೋಗ್ಯ (Health) ಚೆನ್ನಾಗಿಲ್ಲ. ಅವರ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಹೇಳಲಾಗಿತ್ತು. ಹಾಗಾಗಿ ನಟ ತಮ್ಮ ಮನೆಯತ್ತ ಹೋಗಿದ್ದರು. ನಟ ಮಾಸ್ಕ್ (Mask) ಧರಿಸಿಕೊಂಡು ಹೋಗಿದ್ದು ತನ್ನ ತಾಯಿಯನ್ನು ಭೇಟಿಯಾಗಲು ಬಯಸಿದ್ದರು.


ಆದರೆ ಅವರು ತಮ್ಮ ಬಂಗಲೆ ಬಳಿ ಬರುತ್ತಿದ್ದಂತೆ ನಟನನ್ನು ಅವರ ತಮ್ಮ ಫೈಜುದ್ದೀನ್ ಹಾಗೂ ಇನ್ನೂ ಕೆಲವರು ತಡೆದು ನಿಲ್ಲಿಸಿದ್ದಾರೆ. ಈ ಸಂದರ್ಭ ನವಾಜುದ್ದೀನ್ ಅವರು ಮನೆಯೊಳಗೆ ಪ್ರವೇಶಿಸಲು, ಅವರಲ್ಲಿ ಕೇಳಿಕೊಳ್ಳುತ್ತಿರುವಾಗ ಅವರನ್ನು ಮನೆಯೊಳಗೆ ಬಾರದಂತೆ ತಡೆಯಲು ಕೆಲವರು ಪ್ರಯತ್ನಿಸಿದ್ದಾರೆ. ಅಲ್ಲಿದ್ದವರು ನಿನಗೆ ಈ ಮನೆಗೆ ಪ್ರವೇಶಿಸೋಕೆ ಅನುಮತಿ ಇಲ್ಲ ಎನ್ನುತ್ತಿರುವುದು ಕೂಡಾ ಕೇಳಿ ಬಂದಿತ್ತು.


ಪತಿ-ಪತ್ನಿ ಮಧ್ಯೆ ಬಿರುಕು


ನಟ ನವಾಜುದ್ದಿನ್ ಸಿದ್ಧಿಕಿ ಅವರು ಸದ್ಯ ಅವರ ಪತ್ನಿ ಆಲಿಯಾ ಸಿದ್ಧಿಕಿ ಜೊತೆಗಿನ ಜಗಳದಿಂದ ಸುದ್ದಿಯಲ್ಲಿದ್ದಾರೆ. ಅವರ ಪತ್ನಿ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆಲಿಯಾ ಅವರು ಕೋರ್ಟ್​ನಲ್ಲಿ ಅವರ ಪತಿ ಹಾಗೂ ತಾಯಿ ಕಿರುಕುಳ ನೀಡಿದ್ದಾರೆ ಆರೋಪಿಸಿದ್ದಾರೆ. ನವಾಜುದ್ದೀನ್ ಅವರು ತಮ್ಮ ಮಕ್ಕಳ ಕಸ್ಟಡಿಯನ್ನು ತಮಗೆ ನೀಡಬೇಕೆಂದು ಕೋರ್ಟ್ ಮೊರೆ ಹೋಗಿದ್ದಾರೆ.
ತನ್ನದೇ ಬಂಗಲೆಗೆ ನಟನಿಗಿಲ್ಲ ಎಂಟ್ರಿ


ನಟ ಬಾಂಬೆ ಹೈಕೋರ್ಟ್​ನಲ್ಲಿ ಇದೇ ವಿಚಾರವಾಗಿ ಮನವಿ ಮಾಡಿದ್ದಾರೆ. ಮಾರ್ಚ್ 3ರಂದು ಈ ಕೇಸ್​ನಲ್ಲಿ ವಿಚಾರಣೆ ಕೂಡಾ ನಿಗದಿಯಾಗಿತ್ತು. ನಟನನ್ನು ಬಲವಂತವಾಗಿ ಮನೆಯಿಂದ ಹೊರಗೆ ಕಳುಹಿಸಲಾಗಿದ್ದು ಅವರು ಮುಂಬೈನ ಹೋಟೆಲ್ ಒಂದರಲ್ಲಿ ಬದುಕುತ್ತಿದ್ದಾರೆ ಎನ್ನಲಾಗಿದೆ. ಆಲಿಯಾ ಜೊತೆಗಿನ ಜಗಳ ಮುಗಿದ ನಂತರವೇ ನಟ ತಮ್ಮ ಮನೆಗೆ ಮರಳಿದ್ದಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: Bollywood Actor: ಶಾರುಖ್ ಖಾನ್ ಮನೆ ಗೋಡೆ ಜಿಗಿದು 'ಮನ್ನತ್'​ಗೆ ನುಗ್ಗಿದ ಫ್ಯಾನ್ಸ್, ಅಭಿಮಾನಿಗಳ ಮೇಲೆ ದಾಖಲಾಯ್ತು ಕೇಸ್


ನವಾಜುದ್ದೀನ್ ತಮ್ಮ ಎರಡನೇ ಮಗುವನ್ನು ತಮ್ಮದಲ್ಲ ಎಂದು ನಿರಾಕರಿಸಿದ್ದಾರೆ ಎಂದು ಆಲಿಯಾ ಹೇಳಿಕೊಂಡಿದ್ದಾರೆ. ನಟನ ತಾಯಿ ಮೆಹರುನ್ನಿಸಾ ಅವರು ನಟನ ಮುಂಬೈ ಮನೆಗೆ ಪ್ರವೇಶ ನೀಡದೆ ಕಿರುಕುಳ ನೀಡಿದ್ದಾರೆ ಎಂದು ಅವರ ಪತ್ನಿ ಆರೋಪಿಸಿದ್ದಾರೆ. ಇತ್ತೀಚೆಗಷ್ಟೇ ಅತ್ಯಾಚಾರದ ಆರೋಪವನ್ನೂ ಮಾಡಿದ್ದಾರೆ.
ಆದರೆ ಈ ಎಲ್ಲ ಆರೋಪಗಳನ್ನು ಕೇಳಿಸಿಕೊಂಡು ನವಾಜುದ್ದೀನ್ ಸೈಲೆಂಟಾಗಿದ್ದಾರೆ. ಅವರು ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳಿಗೆ ಉತ್ತರ ಕೊಟ್ಟಿಲ್ಲ. ನನ್ನ ಮಕ್ಕಳ ಶಿಕ್ಷಣ ಮಾತ್ರ ನನ್ನ ಈಗಿನ ಮೊದಲ ಆದ್ಯತೆ ಎಂದು ನಟ ಹೇಳಿದ್ದಾರೆ.


ನಿಜ ಹೇಳಬೇಕೆಂದರೆ ನನಗೆ ಈ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸುವ ಮನಸಿಲ್ಲ. ಆದರೆ ಇವೆಲ್ಲ ಬೆಳವಣಿಗೆಗಳಿಂದ ನನ್ನ ಮಕ್ಕಳ ಶಿಕ್ಷಣಕ್ಕೆ ತೊಡಕಾಗುತ್ತಿದೆ. ನನ್ನ ಮಕ್ಕಳು ದುಬೈನಲ್ಲಿ ಕಲಿಯುತ್ತಿದ್ದಾರೆ. ಈಗ ಅವರಿಲ್ಲಿಗೆ ಬಂದು 1 ತಿಂಗಳಾಯಿತು. ನನ್ನ ಮಕ್ಕಳು ಶಾಲೆಗೆ ಹೋಗಬೇಕೆನ್ನುವುದಷ್ಟೆ ನನ್ನ ಮನವಿ ಎಂದು ಹೇಳಿದ್ದಾರೆ.

Published by:Divya D
First published: