ಹೆಂಡತಿ-ಮಕ್ಕಳೊಂದಿಗೆ ವಿದೇಶಿ ಪ್ರವಾಸಕ್ಕೆ ಹೊರಟು ನಿಂತಿದ್ದಾರೆ ನವಾಜುದ್ದೀನ್ ಸಿದ್ದಿಕಿ..!

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಆಲಿಯಾ ಅವರೇ ಖುದ್ದಾಗಿ ತಾವು ಮತ್ತು ತಮ್ಮ ಪತಿ ನವಾಜುದ್ದೀನ್ ಸಿದ್ದಿಕಿ ಅವರು ಇಬ್ಬರು ಮಕ್ಕಳೊಂದಿಗೆ ದುಬೈಗೆ ಪ್ರವಾಸಕ್ಕೆಂದು ತೆರಳಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ನವಾಜುದ್ದೀನ್​ ಹಾಗೂ ಆಲಿಯಾ

ನವಾಜುದ್ದೀನ್​ ಹಾಗೂ ಆಲಿಯಾ

  • Share this:
ಬಾಲಿವುಡ್ ಚಿತ್ರರಂಗದಲ್ಲಿ ನಟ ನಟಿಯರು ಪ್ರೇಮಿಸುವುದು. ವಿವಾಹವಾಗುವುದು ನಂತರ ವಿಚ್ಛೇದನೆಯಾಗುವುದು ಎಲ್ಲವೂ ಸಾಮಾನ್ಯವಾದ ಸಂಗತಿಯಾಗಿದೆ. ಇಲ್ಲಿ ಒಬ್ಬ ನಟ ಇನ್ನೇನು ತನ್ನ ಹೆಂಡತಿಯೊಂದಿಗೆ ವಿವಾಹ ವಿಚ್ಛೇದನೆ ಆಗಿಯೇ ಬಿಟ್ಟಿತು ಎನ್ನುವಷ್ಟರಲ್ಲಿ ಮತ್ತೆ ಒಂದಾಗಿದ್ದು ಅದೇ ಖುಷಿಯಲ್ಲಿ ಒಂದು ಪ್ರವಾಸಕ್ಕೂ ಹೋಗಲು ತಯಾರಾಗಿದ್ದಾರೆ. ಆ ನಟ ಯಾರು ಅಂತೀರಾ..? ಅವರು ಬೇರೆ ಯಾರು ಅಲ್ಲ ಅವರೇ ನವಾಜುದ್ದೀನ್ ಸಿದ್ದಿಕಿ. ಮತ್ತೆ ಒಂದಾದ ಖುಷಿಯಲ್ಲಿ ಹೆಂಡತಿ ಆಲಿಯಾ ಮತ್ತು ಅವರು ಇಬ್ಬರು ಮಕ್ಕಳೊಂದಿಗೆ ದುಬೈಗೆ ಪ್ರವಾಸಕ್ಕೆ ಹೋಗುತ್ತಿರುವುದಾಗಿ ಆಲಿಯಾ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಕಳೆದ ವರ್ಷ ದಂಪತಿಗಳ ನಡುವೆ ಮನಸ್ತಾಪ ಉಂಟಾಗಿ ಸಂಬಂಧದಲ್ಲಿ ಬಿರುಕು ಉಂಟಾಗಿ, ನ್ಯಾಯಾಲಯ ಮೆಟ್ಟಿಲೇರುವ ಮುನ್ನವೇ ಮತ್ತೆ ಎಲ್ಲವೂ ಸರಿಹೋಗಿ ಮತ್ತೆ ದಂಪತಿಗಳು ಒಂದಾಗಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಆಲಿಯಾ ಅವರೇ ಖುದ್ದಾಗಿ ತಾವು ಮತ್ತು ತಮ್ಮ ಪತಿ ನವಾಜುದ್ದೀನ್ ಸಿದ್ದಿಕಿ ಅವರು ಇಬ್ಬರು ಮಕ್ಕಳೊಂದಿಗೆ ದುಬೈಗೆ ಪ್ರವಾಸಕ್ಕೆಂದು ತೆರಳಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ನಾವು ದುಬೈ ಗೆ ತೆರಳಲು ಇನ್ನೇನು ವಿಮಾನದ ಟಿಕೇಟ್ ಅನ್ನು ಸಹ ಮಾಡಿಸಲಾಗುತ್ತಿದೆ ಎಂದು ಇವರು ಹೇಳಿದ್ದಾರೆ.
 ನಮ್ಮ ಇಬ್ಬರು ಮಕ್ಕಳಾದ ಶೋಹಾ ಮತ್ತು ಯಾನಿ ದುಬೈ ಅಲ್ಲಿಯೇ ಉಳಿಯಲಿದ್ದು ನಾನು ಮತ್ತು ನವಾಜುದ್ದೀನ್ ಇಬ್ಬರು ಮರಳಿ ಭಾರತಕ್ಕೆ ಬರುತ್ತೇವೆ. ನಮ್ಮ ಮಕ್ಕಳು ಆನ್‌ಲೈನ್ ತರಗತಿಯನ್ನು ಇಷ್ಟ ಪಡುತ್ತಿಲ್ಲ ಹಾಗಾಗಿ ಅವರು ಖುದ್ದು ಶಾಲೆಗೆ ಹೋಗಿ ಓದಲು ಇಚ್ಛೆ ಪಡುತ್ತಿದ್ದಾರೆ, ಆದ್ದರಿಂದ ಮಕ್ಕಳನ್ನು ಅಲ್ಲಿಯೇ ಶಾಲೆಗೆ ಸೇರಿಸಲಿದ್ದೇವೆ. ಏಕೆಂದರೆ ಭಾರತದಲ್ಲಿ ಸದ್ಯದ ಸ್ಥಿತಿ ನೋಡಿದರೆ ಶಾಲೆಗಳು ಪ್ರಾರಂಭವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ ಮತ್ತು ಶಾಲೆಗೆ ಹೋದರೆ ಏನು ಕಲಿಯಲು ಸಿಗುತ್ತದೆಯೋ ಅದು ಆನ್‌ಲೈನ್ ತರಗತಿಯಲ್ಲಿ ಕಲಿಯಲು ಸಿಗುವುದಿಲ್ಲ. ಮಕ್ಕಳು ಆನ್‌ಲೈನ್ ತರಗತಿಯಲ್ಲಿ ಶಾಲೆಗೆ ಹೋಗಿ ಓದಿದ ಹಾಗೆ ಆಗುವುದಿಲ್ಲ ಮತ್ತು ಅವರ ವರ್ತನೆಯಲ್ಲಿಯೂ ತುಂಬಾ ಬದಲಾವಣೆಗಳು ಕಾಣುತ್ತಿವೆ. ಅದಕ್ಕಾಗಿ ಅವರನ್ನು ದುಬೈ ಅಲ್ಲಿಯೇ ಶಾಲೆಗೆ ದಾಖಲಿಸಿ ಬರುವುದಾಗಿ ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ವಿಚ್ಛೇದನೆ ಪಡೆಯಲು ಇಚ್ಛಿಸಿದ್ದ ಆಲಿಯಾ ಮತ್ತೆ ನವಾಜ್ ಅವರೊಂದಿಗೆ ಮತ್ತೆ ಸೇರಿದ್ದು, ನವಾಜ್ ಸಹ ಸಂದರ್ಶನವೊಂದರಲ್ಲಿ "ನಾನು ನನ್ನ ವೈಯುಕ್ತಿಕ ಜೀವನದ ಬಗ್ಗೆ ಎಲ್ಲಿಯೂ ಮಾತಾಡಲು ಇಚ್ಛಿಸುವುದಿಲ್ಲ. ಏಕೆಂದರೆ ನನಗೆ ಯಾರ ಬಗ್ಗೆಯೂ ಕೆಟ್ಟದಾಗಿ ಬಿಂಬಿಸಿ ಮಾತನಾಡುವುದು ಇಷ್ಟವಿಲ್ಲ ಮತ್ತು ಆಲಿಯಾ ಇವತ್ತಿಗೂ ನನ್ನ ಎರಡು ಮಕ್ಕಳಿಗೆ ತಾಯಿ ಮತ್ತು ಅವರನ್ನು ನೋಡಿಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ ಎಂದು ಹೇಳಿದ್ದರು.
ನಾನು ಯಾರ ಬಗ್ಗೆಯೂ ಮಾತಾಡಿ ನಕಾರಾತ್ಮಕ ವಾತಾವರಣವನ್ನು ಸೃಷ್ಟಿ ಮಾಡಲು ಬಯಸುವುದಿಲ್ಲ. ನಾವು ಇಬ್ಬರು ಹತ್ತು ವರ್ಷ ಒಟ್ಟಿಗೆ ಸಂಸಾರ ಮಾಡಿದ್ದೇವೆ ಮತ್ತು ನಮ್ಮ ನಿರ್ಧಾರಗಳು ಮಕ್ಕಳ ಮೇಲೆ ಯಾವುದೇ ಕೆಟ್ಟ ಪರಿಣಾಮವನ್ನು ಬೀರಬಾರದು. ಏಕೆಂದರೆ ನಮ್ಮ ಮಕ್ಕಳು ನಮಗೆ ಮೊದಲ ಆದ್ಯತೆಯಾಗಿದ್ದು, ನಾನು ಒಬ್ಬ ಒಳ್ಳೆಯ ತಂದೆ ಆಗಬೇಕೆಂದುಕೊಂಡಿದ್ದೇನೆ ಎಂದು ನವಾಜ್ ಅವರು ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದರು.


First published: