Motichoor Chaknachoor Trailer: ಸುನೀಲ್​ ಶೆಟ್ಟಿ ಮಗಳ ಜತೆ ನವಾಜುದ್ದೀನ್​ ಸಿದ್ದಿಕಿ ರೊಮ್ಯಾನ್ಸ್​..!

Motichoor Chaknachoor Trailer: ನವಾಜುದ್ದೀನ್​ ಹಾಗೂ ಅತಿಯಾ ಅಭಿನಯದ ಮೋತಿಚೂರ್​ ಚಕ್ನಾಚೂರ್​ ಸಿನಿಮಾದ ಟ್ರೈಲರ್​ ನಿನ್ನೆಯಷ್ಟೆ ಬಿಡುಗಡೆಯಾಗಿದೆ. ಈ ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಿದೆ.

Anitha E | news18-kannada
Updated:October 12, 2019, 2:30 PM IST
Motichoor Chaknachoor Trailer: ಸುನೀಲ್​ ಶೆಟ್ಟಿ ಮಗಳ ಜತೆ ನವಾಜುದ್ದೀನ್​ ಸಿದ್ದಿಕಿ ರೊಮ್ಯಾನ್ಸ್​..!
ಮೋತಿಚೂರ್ ಚಕ್ನಾಚೂರ್​ ಸಿನಿಮಾದಲ್ಲಿ ನವಾಜುದ್ಧೀನ್​ ಸಿದ್ದಿಕಿ ಹಾಗೂ ಅತಿಯಾ ಶೆಟ್ಟಿ
Anitha E | news18-kannada
Updated: October 12, 2019, 2:30 PM IST
ಪ್ರಯೋಗಾತ್ಮಕ ಪಾತ್ರಗಳೊಂದಿಗೆ ಕಮರ್ಷಿಯಲ್ ಸಿನಿಮಾಗಳಲ್ಲೂ ಅಭಿನಯಿಸುವ ಮೂಲಕ ತಮ್ಮದೇ ಆದ ಸ್ಥಾನ ಪಡೆದುಕೊಂಡಿರುವ ನಟ ನವಾಜುದ್ಧೀನ್​ ಸಿದ್ದಿಕಿ. ಪ್ರತಿಭಾವಂತ ನಟ ನವಾಜುದ್ಧೀನ್​ ಈಗ ಸುನೀಲ್​ ಶೆಟ್ಟಿ ಮಗಳು ಅತಿಯಾ ಶೆಟ್ಟಿ ಜತೆ ರೊಮ್ಯಾನ್ಸ್​ ಮಾಡುತ್ತಿದ್ದಾರೆ.

ಹೌದು, ನವಾಜುದ್ದೀನ್​ ಹಾಗೂ ಅತಿಯಾ ಅಭಿನಯದ 'ಮೋತಿಚೂರ್​ ಚಕ್ನಾಚೂರ್​' ಸಿನಿಮಾದ ಟ್ರೈಲರ್​ ನಿನ್ನೆಯಷ್ಟೆ ಬಿಡುಗಡೆಯಾಗಿದೆ. ಈ ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಿದೆ.



ನವಾಜುದ್ಧೀನ್​ರ ಕಾಮಿಡಿ ಪ್ರೇಕ್ಷಕರನ್ನು ನಡೆಗಡಲಲ್ಲಿ ತೇಲಿಸುತ್ತಿದೆ. ಅತಿಯಾ ಹಾಗೂ ನವಾಜುದ್ದೀನ್​ರ ಕಾಮಿಡಿ ರೊಮ್ಯಾನ್ಸ್​ ಪ್ರೇಕ್ಷಕರಿಗೆ ಕಚಗುಳಿ ಕೊಡುತ್ತಿದೆ. ಅತಿಯಾ ಶೆಟ್ಟಿ ಅನಿತಾ ಎಂಬ ವಿದ್ಯಾವಂತ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಎನ್​ಆರ್​ಐ ಅನ್ನು ಮದುವೆಯಾಗಲು ಕಾಯುತ್ತಿರುತ್ತಾಳೆ. ಇನ್ನು ನವಾಜುದ್ದೀನ್​ ವಿವಾಹದ ವಯಸ್ಸು ಮೀರಿ ವಿವಾಹವಾಗಲು ಹುಡುಗಿಗಾಗಿ ಹುಡುಕಾಟ ನಡೆಸುವ ಪುಷ್ಪಿಂಧರ್​ ಪಾಂಡೆ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಸ್ವಿಟ್ಜರ್​ಲೆಂಡ್​ನತ್ತ ಡಿಬಾಸ್​ ದರ್ಶನ್​: ವಿದೇಶದಲ್ಲಿ 'ಒಡೆಯ'ನ ಚಿತ್ರೀಕರಣ..!

ವಯಾಕಾಮ್​ 18  ಹಾಗೂ ವುಡ್​ಪೆಕ್ಕರ್ ಮೂವೀಸ್​  ನಿರ್ಮಿಸಿರುವ ಈ ಸಿನಿಮಾವನ್ನು ದೇಬಮಿತ್ರ ಬಿಸ್ವಾಸ್​ ನಿರ್ದೇಶಿಸಿದ್ದಾರೆ. ಈ ಸಿನಿಮಾದ ಬಹುತೇಕ ಭಾಗವನ್ನು ಭೋಪಾಲ್​ನಲ್ಲಿ ಚಿತ್ರೀಕರಿಸಲಾಗಿದ್ದಿ, ಇದೇ ನವೆಂಬರ್ 15ಕ್ಕೆ ಚಿತ್ರಮಂದಿರಕ್ಕೆ ಅಪ್ಪಳಿಸಲಿದೆ ಈ ಸಿನಿಮಾ.

 
Loading...

Madhubala: ಎವರ್​ಗ್ರೀನ್ ಸುಂದರಿ ಮಧುಬಾಲಾರನ್ನೇ ಹೋಲುವ ಸ್ಯಾಂಡಲ್​ವುಡ್​ ನಟಿ ಈಗ ಹೊಸ ಟಿಕ್ ಟಾಕ್ ಸ್ಟಾರ್


First published:October 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...