• Home
  • »
  • News
  • »
  • entertainment
  • »
  • Naveen Padil Injured ಕಾಂತಾರ ನಟನಿಗೆ ಚಿತ್ರೀಕರಣ ಸಂದರ್ಭ ಪೆಟ್ಟು! 3 ತಿಂಗಳು ನೋ ಶೂಟಿಂಗ್

Naveen Padil Injured ಕಾಂತಾರ ನಟನಿಗೆ ಚಿತ್ರೀಕರಣ ಸಂದರ್ಭ ಪೆಟ್ಟು! 3 ತಿಂಗಳು ನೋ ಶೂಟಿಂಗ್

ನವೀನ್ ಡಿ ಪಡೀಲ್

ನವೀನ್ ಡಿ ಪಡೀಲ್

ಕಾಂತಾರ ನಟ ನವೀನ್ ಡಿ ಪಡೀಲ್ ಅವರಿಗೆ ಶೂಟಿಂಗ್ ಮಧ್ಯೆ ಪೆಟ್ಟಾಗಿದ್ದು ವೈದ್ಯರು ಅವರಿಗೆ 3 ತಿಂಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ಕಿರುತೆರೆಯಲ್ಲಿ ಗುಂಡುಮಾಮನಾಗಿ (Gundumama) ಫೇಮಸ್ ಆಗಿರುವ ನಟ ನವೀನ್ ಡಿ ಪಡೀಲ್ (Naveen D Padil) ಆಸ್ಪತ್ರೆಗೆ (Hospital) ದಾಖಲಾಗಿದ್ದಾರೆ. ಕಾಂತಾರದಲ್ಲಿ ಲಾಯರ್ ಪಾತ್ರವನ್ನು ಮಾಡಿದ್ದ ಕೋಸ್ಟಲ್​ವುಡ್ (Coastalwood) ಸ್ಟಾರ್ ಪಡೀಲ್ ಅವರು ಚಿತ್ರೀಕರಣ ವೇಳೆ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಪರಿಶೀಲಿಸಿದ ವೈದ್ಯರು (Doctors) ಮೂರು ತಿಂಗಳು ವಿಶ್ರಾಂತಿ (Rest) ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ತುಳು ಚಿತ್ರರಂಗದ ಖ್ಯಾತ ನಟ ನವೀನ್ ಡಿ ಪಡೀಲ್ ಅವರ ತೊಡೆಗೆ ಪೆಟ್ಟು ಬಿದ್ದಿದೆ. ಸದ್ಯ ನಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಡಂತ್ಯಾರಿನಲ್ಲಿ ಸಿನಿಮಾ  (Cinema) ಶೂಟಿಂಗ್ ಸಂದರ್ಭ ನಟನಿಗೆ ಪೆಟ್ಟಾಗಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ (Treatment) ನೀಡಲಾಗುತ್ತಿದೆ.


ಶೂಟಿಂಗ್ ಮಾಡುವಾಗ ನವೀನ್ ಅವರು ಬಿದ್ದ ಕಾರಣ ತೊಡೆ ಮುರಿದ ಹಾಗಾಗಿದೆ. ಅವರು ಮೂರು ತಿಂಗಳು ರೆಸ್ಟ್ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ.




ಹಲವು ಭಾಷೆಗಳಲ್ಲಿ ರಿಲೀಸ್ ಆಗ್ತಿರೋ ಸಿನಿಮಾ


ನವೀನ್ ಪಡೀಲ್ ಅವರು ಸದ್ಯ ನಟಿಸುತ್ತಿದ್ದ ಸಿನಿಮಾ ಮೂರು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಇದರಲ್ಲಿ ನವೀನಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಪ್ರಮುಖ ಸಿನಿಮಾ ಶೂಟಿಂಗ್ ಸಂದರ್ಭವೇ ಅವಘಡ ಸಂಭವಿಸಿದ್ದು ಇನ್ನು ಕನಿಷ್ಠ ಮೂರು ತಿಂಗಳು ನಟ ಶೂಟಿಂಗ್​ನಲ್ಲಿ ಭಾಗವಹಿಸುವುದಿಲ್ಲ.


ನವೀನ್ ಅವರಿಗೆ ಈಗ 53 ವರ್ಷ ವಯಸ್ಸು. ಚಾಲಿ ಪೋಲಿಲು, ಕುಡ್ಲ ಕೆಫೆ, ಗಿರ್ಗಿಟ್ ಸೇರಿದಂತೆ ಹಲವು ಪ್ರಮುಖ ಸಿನಿಮಾಗಳಲ್ಲಿ ನವೀನ್ ನಟಿಸಿದ್ದಾರೆ. ತುಳು ಸಿನಿಮಾಗಳಲ್ಲಿ ಕ್ರೇಜ್ ಸೃಷ್ಟಿಸಿದ ನಟ ಜರಾಸಂಧ, ಚೆಲ್ಲಾ ಪಿಲ್ಲಿ, ಹ್ಯಾಪಿ ಜರ್ನಿ, ಅನಂತು ವರ್ಸಸ್ ನುಸ್ರತ್, ರಾಬರ್ಟ್, ಕಾಂತಾರ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.


ಇದನ್ನೂ ಓದಿ: Kantara: ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕಿಡ್ನಾಪ್!


ತುಳು ಪ್ರೇಕ್ಷಕರ ನೆಚ್ಚಿನ ಹಾಸ್ಯ ಕಲಾವಿದ


ನವೀನ್ ಡಿ ಪಡೀಲ್ ಅವರ ಮಾತಿನ ವರಸೆ ಚಿಕ್ಕ ಮಕ್ಕಳಿಂದ ದೊಡ್ಡವರಿಗೆ ಭಾರೀ ಅಚ್ಚುಮೆಚ್ಚು. ತುಳುನಾಡಿನಲ್ಲಿ ಸಖತ್ ಫೇಮಸ್ ಆಗಿರುವ ಇವರ ಡಯಲಾಗ್​​ಗೆ ಜನ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ಇವರ ಸಿನಿಮಾಗಳನ್ನು ಜನ ಪದೇ ಪದೇ ನೋಡುತ್ತಾರೆ. ಕಿರಿಯರಿಂದ ಹಿರಿಯರ ತನಕ ಎಲ್ಲರಿಗೂ ಇವರು ಫೇವರೇಟ್ ನಟ.


ಈಗ ಸ್ಯಾಂಡಲ್​​ವುಡ್​ನಲ್ಲಿಯೂ ಫೇಮಸ್


ನಟ ನವೀನ್ ಅವರು ಈಗ ಕನ್ನಡ ಕಿರುತೆರೆಯ ಮೂಲಕ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದ್ದಾರೆ. ಅವರ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿವೆ. ಅದೇ ರೀತಿ ಕಾಮಿಡಿ ಶೋ ಮೂಲಕ ಕನ್ನಡ ಹಾಸ್ಯ ಪ್ರೇಮಿಗಳಿಗೆ ನವೀನ್ ಈಗ ಫೇವರೇಟ್ ಆಗಿದ್ದಾರೆ.

Published by:Divya D
First published: