RRR Movie: ತ್ರಿಬಲ್​ ಆರ್​ `ಹಳ್ಳಿ ನಾಟು’ ಸಾಂಗ್​ ಕನ್ನಡದಲ್ಲೂ ವಕೌರ್ಟ್​, ಫ್ಯಾನ್ಸ್​ ದಿಲ್​ಖುಷ್​!

RRR Movie: ‘ಮೆಕ್ಕೆಜೋಳ ರೊಟ್ಟಿಯಲ್ಲಿ ಕೆಂಪು ಗೊಜ್ಜು ಬೇರೆಸಿದಂತೆ.. ನಮ್ಮಾಟ ನೋಡು.. ನಮ್ಮಾಟ ನೋಡು..ನಾಟು.. ನಾಟು.. ನಾಟು.. ಹಳ್ಳಿ ನಾಟು’ ಎಂಬ ಲಿರಿಕ್ಸ್​​ಗೆ ಕನ್ನಡಿಗರು ಫಿದಾ ಆಗಿದ್ದಾರೆ

ಆರ್​ಆರ್​​ಆರ್​ ಸಿನಿಮಾ

ಆರ್​ಆರ್​​ಆರ್​ ಸಿನಿಮಾ

  • Share this:
ಭಾರತೀಯ ಸಿನಿಮಾ ರಂಗ(Indian Film Industry)ದ ಬಹು ನಿರೀಕ್ಷಿತ ಸಿನಿಮಾ(Most Expected Movie) ಆರ್‌ಆರ್‌ಆರ್(RRR). ಈ ಸಿನಿಮಾಗೆ ಇಷ್ಟು ಹೈಪ್ ಬರಲು ಕಾರಣ ಜೂ,ಎನ್​ಟಿಆರ್(J.NTR)​ ಹಾಗೂ ರಾಮ್​ಚರಣ್(Ram Charan)​. ಇವರಿಬ್ಬರು ಈ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಈ ಚಿತ್ರಕ್ಕೆ ರಾಜಮೌಳಿ(Rajmouli) ನಿರ್ದೇಶನ ಮಾಡಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ. ಸಿನಿಮಾದ ರಿಲೀಸ್​ ಡೇಟ್(Release Date)​ ಕೂಡ ಅನೌನ್ಸ್​ ಆಗಿದೆ. ಜನವರಿ 7 2022ರಂದು ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಅಭಿಮಾನಿ(Fans)ಗಳು ಯಾವಾಗ ಮುಂದಿನ ವರ್ಷ ಬರುತ್ತೋ ಅಂತ ಕಾಯುತ್ತಿದ್ದಾರೆ. ನಿನ್ನೆಯಷ್ಟೇ ಆರ್​ಆರ್​ಆರ್​ ಸಿನಿಮಾದ ಮತ್ತೊಂದು ಸಾಂಗ್​(Song) ಬಿಡುಗಡೆಯಾಗಿದೆ. ಈಗ ಹೊಸ ಹಾಡಿನ ಮೂಲಕ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ. ಚಿತ್ರದ ಹಾಡಿನಲ್ಲಿ ಆರ್‌ಆರ್‌ಆರ್ ಜೋಡಿ ರಾಮ್‌ ಚರಣ್‌ ತೇಜ ಮತ್ತು ಜೂ.ಎನ್‌ಟಿಆರ್ ಮಸ್ತ್‌ ಡ್ಯಾನ್ಸ್‌(Dance) ಮಾಡಿದ್ದಾರೆ. ಹಾಡು ರಿಲೀಸ್‌ ಆದ ಕೂಡಲೇ ವೈರಲ್‌ ಆಗಿದೆ. ಎಲ್ಲರೂ ರಾಮ್‌ ಚರಣ್‌ ತೇಜ ಮತ್ತು ಜೂ.ಎನ್‌ಟಿಆರ್ ಮಸ್ತ್‌ ಡ್ಯಾನ್ಸ್​​ಗೆ ಫಿದಾ ಆಗಿದ್ದಾರೆ. ಇವರಿಬ್ಬರ  ನೃತ್ಯದ ಬಿಟ್​ಗಳನ್ನು ಮಾತ್ರ ಇಲ್ಲಿ ತೋರಿಸಲಾಗಿದೆ.  

ಕನ್ನಡದ ಲಿರಿಕ್ಸ್​​ ಕಂಡು ಕನ್ನಡಿಗರು ಖುಷ್​!

ನಾಟು ನಾಟು ಅನ್ನೋ ಈ ಹಾಡಿನ ಲಿರಿಕಲ್‌ ವೀಡಿಯೋ ಮಾತ್ರ ರಿಲೀಸ್‌ ಆಗಿದೆ. ಹಾಡಿನಲ್ಲಿ ಮೇಕಿಂಗ್‌ ದೃಶ್ಯಗಳು ಕೂಡ ಗಮನ ಸೆಳೆಯುತ್ತವೆ. ರೆಟ್ರೋ ಕಾಸ್ಟ್ಯೂಂನಲ್ಲಿ ರಾಮ್‌ ಚರಣ್ ಮತ್ತು ಜೂ.ಎನ್‌ಟಿಆರ್‌ ಮಿಂಚಿದ್ದಾರೆ. ಇನ್ನೂ ಅದ್ದೂರಿ ಸೆಟ್‌ ಮತ್ತು ನೂರಾರು ನೃತ್ಯ ಕಲಾವಿದರು ಹಾಡಿನ ಹೈಲೈಟ್. ಈ ಹಾಡಿಗೆ ಖ್ಯಾತ ನೃತ್ಯ ನಿರ್ದೇಶನ ಪ್ರೇಮ್ ರಕ್ಷಿತ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಇದು ಲಿರಿಕಲ್ ವೀಡಿಯೋ ಆಗಿರುವುದರಿಂದ 2 ರಿಂದ 3 ನೃತ್ಯ ದೃಶ್ಯಗಳು ಮಾತ್ರ ಇವೆ. ಇದುವೆ ಹಾಡಿನ ಬಗ್ಗೆ ನಿರೀಕ್ಷೆ ಹೆಚ್ಚಿದೆ.  ಐದು ಭಾಷೆಗಳಲ್ಲೂ ಈ ಸಾಂಗ್​ ಬಿಡುಗಡೆಯಾಗಿದೆ. ಕನ್ನಡದಲ್ಲೂ ತುಂಬಾ ಅದ್ಭುತವಾಗಿ ಲಿರಿಕ್ಸ್​ ಮ್ಯಾಚ್​ ಆಗಿದ್ದು ಸಖತ್​ ಕ್ಯಾಚಿಯಾಗಿದೆ. ​ಕನ್ನಡದಲ್ಲಿ ಸಾಂಗ್​ ನೋಡಿದ ಪ್ರತಿಯೊಬ್ಬರು ಮೆಚ್ಚುಗೆ  ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಒಂದು ದಿನದ ಅಂತರದಲ್ಲಿ ರಿಲೀಸ್​ ಆಗಲಿವೆ ಆಲಿಯಾ ಭಟ್ Alia Bahtt ಅಭಿನಯದ 2 ಸಿನಿಮಾಗಳು

‘ಹಳ್ಳಿ ನಾಟು’ ಸಾಂಗ್​ ಕನ್ನಡದಲ್ಲೂ ವರ್ಕೌಟ್​!

‘ಮೆಕ್ಕೆಜೋಳ ರೊಟ್ಟಿಯಲ್ಲಿ ಕೆಂಪು ಗೊಜ್ಜು ಬೇರೆಸಿದಂತೆ..ನಮ್ಮಾಟ ನೋಡು..ನಮ್ಮಾಟ ನೋಡು..ನಾಟು.. ನಾಟು.. ನಾಟು.. ಹಳ್ಳಿ ನಾಟು’ ಎಂಬ ಲಿರಿಕ್ಸ್​​ಗೆ ಕನ್ನಡಿಗರು ಫಿದಾ ಆಗಿದ್ದಾರೆ. ಸೇಮ್​ ಹಳ್ಳಿ ಸೊಗಡಿನಲ್ಲಿ ಲಿರಿಕ್ಸ್​ ಬರೆದಿರುವುದು ಸಖತ್ ಮಜಾ ನೀಡುತ್ತಿದೆ.3 ನಿಮಿಷ 28 ಸೆಕೆಂಡು ಇರುವ ಈ ಹಾಡು ನೋಡುಗರನ್ನ ಒಂದು ಸೆಕೆಂಡು ಅತ್ತಿತ್ತ ಅಲ್ಲಾಡಲು ಬಿಡುವುದಿಲ್ಲ. ಅಷ್ಟರ ಮಟ್ಟಿಗೆ ಎಂ.ಎಂ. ಕೀರವಾಣಿ ಸಂಗೀತ ಗುಂಗು ಹಿಡಿಸುತ್ತದೆ. ಸೋಷಿಯಲ್​ ಮೀಡಿಯಾದಲ್ಲಿ ಕನ್ನಡಿಗರು ಒಳ್ಳೆಯ ರೆಸ್ಪಾನ್ಸ್​ ನೀಡಿದ್ದಾರೆ. ಈ ರೀತಿ ಕನ್ನಡ ಲಿರಿಕ್ಸ್​ ಜೊತೆಯೇ ಸಾಂಗ್​ ರಿಲೀಸ್​ ಮಾಡಿರುವುದು ಡಬಲ್​ ಖುಷಿ ಕೊಟ್ಟಿದೆ.

ಹಳ್ಳಿ ಸೊಗಡು ಮರೆಯದ ರಾಜಮೌಳಿ

ಆರ್​ಆರ್​ಆರ್​ ಸಿನಿಮಾವನ್ನು ನೋಡಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ರಾಜಮೌಳಿ ನಿರ್ದೇಶನದಲ್ಲಿ ಬಾಹುಬಲಿ ನಂತರ ಬರುತ್ತಿರುವ ಸಿನಿಮಾ ಇದು. ಹಾಗಾಗಿ ನಿರೀಕ್ಷೆ ಹೆಚ್ಚಾಗಿದೆ. ಆದರೆ ಇದು ಯಾವುದೋ ಒಂದು ಭಾಷೆಗೆ ಸೀಮಿತ ಆಗಿರುವ ಸಿನಿಮಾ ಅಲ್ಲ.ಯಾವ ಭಾಷೆಯ ಸಿನಿಮಾವಾದರೂ ರಾಜಮೌಳಿ ಹಳ್ಳಿ ಸೊಗಡನ್ನು ಮರೆತಿಲ್ಲ. ಕನ್ನಡದ ಲಿರಿಕ್ಸ್​​ನಲ್ಲಿ ಅದು ಗೊತ್ತಾಗುತ್ತದೆ. ಈ ಹಿಂದೆ ಹಲವಾರು  ದೊಡ್ಡ ದೊಡ್ಡ ಸಿನಿಮಾಗಳು ಕನ್ನಡಕ್ಕ ಡಬ್​ ಆಗಿದ್ದವು. ಆದರೆ ನಮ್ಮ ಸೊಗಡಿಗೆ ತಕ್ಕ ಹಾಗೇ ಲಿರಿಕ್ಸ್​ ಕಾಣಿಸುತ್ತಿರಲಲ್ಲ. ಆದರೆ ಈ ಆರ್​ಆರ್​ಆರ್​ `ನಾಟು’ ಕನ್ನಡದಲ್ಲಿ ಇಷ್ಟು ಅದ್ಭುತವಾಗಿ ಮೂಡಿಬಂದಿರುವುದು ಖುಷಿಯ ವಿಚಾರ.

ಇದನ್ನು ಓದಿ : ಜನವರಿಯಲ್ಲಿ ತೆರೆಗೆ ಅಪ್ಪಳಿಸಲಿದೆ ಬಹುನಿರೀಕ್ಷಿತ ರಾಜಮೌಳಿಯ RRR ಸಿನಿಮಾ

ಚಿತ್ರದಲ್ಲಿದೆ ಅದ್ಧೂರಿ ತಾರಾಗಣ

ರಾಮ್ ಚರಣ್, ಜೂನಿಯರ್ ಎನ್ ಟಿ ಆರ್, ಆಲಿಯಾ ಭಟ್, ಅಜಯ್ ದೇವಗನ್‌, ಹೀಗೆ ದೊಡ್ಡ ದೊಡ್ಡಕಲಾವಿದರು ಆರ್​ಆರ್​ಆರ್​ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಲುಕ್‌ ಮತ್ತು ಪಾತ್ರದ ಪರಿಚಯ ಕೂಡ ಚಿತ್ರತಂಡ ಮಾಡಿಕೊಟ್ಟಿದೆ.
Published by:Vasudeva M
First published: