Rashmika Mandanna: ಮದ್ವೆಯಾದ್ರೆ ಇವ್ರನ್ನೇ ಅಂತಿದ್ದಾರೆ ರಶ್ಮಿಕಾ.. `ಕಿರಿಕ್​ ಬ್ಯೂಟಿ’ ಮನಸ್ಸು ಗೆದ್ದ ಚೆಲುವ ಇವ್ರೇನಾ?

ಈಗಾಗಲೇ ಅನೇಕ ತೆಲುಗು(Telugu) ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ಸದ್ಯಕ್ಕೆ ಪುಷ್ಪ ಚಿತ್ರದಿಂದ ಸಿಕ್ಕಂತಹ ಯಶಸ್ಸನ್ನು ಆನಂದಿಸುತ್ತಿದ್ದಾರೆ ಎಂದು ಹೇಳಬಹುದು.

ನಟಿ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ

  • Share this:
ಕನ್ನಡ ಚಿತ್ರರಂಗದ ನಟಿ ರಶ್ಮಿಕಾ ಮಂದಣ್ಣ(Rashmika Mandanna) ಅವರು ತಮ್ಮ ಪುಷ್ಪ: ದಿ ರೈಸ್(Pushpa: The Rise) ಪ್ಯಾನ್ ಇಂಡಿಯಾ ಚಿತ್ರದಿಂದ ದೇಶಾದ್ಯಂತ ಸುದ್ದಿಯಾಗಿರುವ ನಟಿ ಎಂದರೆ ತಪ್ಪಾಗುವುದಿಲ್ಲ. ಈಗಾಗಲೇ ಅನೇಕ ತೆಲುಗು(Telugu) ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ಸದ್ಯಕ್ಕೆ ಪುಷ್ಪ ಚಿತ್ರದಿಂದ ಸಿಕ್ಕಂತಹ ಯಶಸ್ಸನ್ನು ಆನಂದಿಸುತ್ತಿದ್ದಾರೆ ಎಂದು ಹೇಳಬಹುದು. ಈ ನಟಿಯನ್ನು ಈಗ ಬಹುಭಾಷಾ ಚಿತ್ರ ತಾರೆ ಎಂದು ಕರೆಯಬಹುದು, ಇವರು ಇತ್ತೀಚೆಗೆ ಅರ್ಜುನ್ ರೆಡ್ಡಿ(Arjun Reddy) ಚಿತ್ರದ ತೆಲುಗು ನಟ ವಿಜಯ್ ದೇವರಕೊಂಡ(Vijay Deverakonda) ಅವರ ಜೊತೆ ತುಂಬಾನೇ ಕಾಣಿಸಿಕೊಂಡಿದ್ದನ್ನು ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಮತ್ತು ಫೋಟೋ(Photo) ಹಾಗೂ ವಿಡಿಯೋಗಳಲ್ಲಿ ನೋಡಿದ್ದಾರೆ. ರಶ್ಮಿಕಾ ಅವರು ಸದ್ಯಕ್ಕೆ ತುಂಬಾನೇ ಬ್ಯುಸಿ ಆಗಿರುವ ಮತ್ತು ತುಂಬಾನೇ ಬೇಡಿಕೆ ಇರುವ ನಟಿ ಎಂದು ಹೇಳಬಹುದು. ಆದರೆ, ಇವರ ಕೆಲಸದ ಹೊರತಾಗಿ, ರಶ್ಮಿಕಾ ಅವರ ವೈಯಕ್ತಿಕ ಜೀವನ(Personal Life)ವೂ ಸಹ ಅನೇಕ ಬಾರಿ ಸುದ್ದಿಯಾಗಿ ಸದ್ದು ಮಾಡಿದೆ. ಈ ಹಿಂದೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಇಬ್ಬರು ಸಂಬಂಧ(Relationship)ದಲ್ಲಿದ್ದಾರೆ ಎಂಬ ವದಂತಿ ಜೋರಾಗಿಯೇ ಹಬ್ಬಿತ್ತು.

ರಶ್ಮಿಕಾ ಮದುವೆಯಾಗೋ ಗಂಡು ಹೀಗೆ ಇರಬೇಕಂತೆ!

ವಿಜಯ್​ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರೂ ಅಂತಹ ವರದಿಗಳನ್ನು ನಿರಾಕರಿಸಿದ್ದಾರೆ. ಈಗ, ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಸಂದರ್ಭದಲ್ಲಿ, ರಶ್ಮಿಕಾ ಅವರು ಪ್ರೀತಿ ಮತ್ತು ಸಂಬಂಧಗಳ ಬಗ್ಗೆ ಮತ್ತು ಅವರು ಯಾವ ರೀತಿಯ ಪುರುಷನನ್ನು ಮದುವೆಯಾಗುತ್ತಾರೆ ಎಂಬುದರ ಬಗ್ಗೆ ಅವರ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. "ನನಗೆ, ಒಬ್ಬರಿಗೊಬ್ಬರು ಗೌರವ ನೀಡುವವರು, ಸಮಯ ಕೊಡುವವರು ಮತ್ತು ನೀವು ಅವರ ಜೊತೆಗೆ ಇದ್ದರೆ ನನಗೆ ಸುರಕ್ಷಿತವೆಂದು ಭಾವಿಸಿದಾಗ ಮಾತ್ರ ಪ್ರೀತಿ ಮಾಡುತ್ತೇನೆ’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಇದನ್ನೂ ಓದಿ: KGF 2 vs Jersey: ಬಾಲಿವುಡ್ ಜೊತೆಗಿನ ಯುದ್ಧಕ್ಕೆ ಕೆಜಿಎಫ್ ಸಜ್ಜು, ಯಾವ್ದೇ ಕಾರಣಕ್ಕೂ ಹಿಂದೆ ಸರಿಯೋ ಮಾತೇ ಇಲ್ಲ!

ಪ್ರೀತಿ ಎರಡು ಕಡೆ ಇದ್ದರೆ ಚೆಂದ ಎಂದ ನಟಿ ರಶ್ಮಿಕಾ!

ಈ ಪ್ರೀತಿಯನ್ನು ಇದಕ್ಕಿಂತಲೂ ಹೆಚ್ಚಿಗೆ ವಿವರಿಸುವುದು ಕಷ್ಟ, ಏಕೆಂದರೆ ಅದು ಭಾವನೆಗಳ ಪಿಸುಮಾತು. ಪ್ರೀತಿ ಕೇವಲ ಒಂದೇ ಕಡೆ ಇರದೇ, ಎರಡೂ ಕಡೆಯಿಂದಲೂ ಇದ್ದಾಗ ಮಾತ್ರ ಅದು ಚೆನ್ನಾಗಿರುತ್ತದೆ" ಎಂದು 25 ವರ್ಷದ ನಟಿ ಹೇಳುತ್ತಾರೆ. ಮದುವೆ ಎಂಬ ಮಧುರ ಬಾಂಧವ್ಯದ ಬಗ್ಗೆ ಮಾತನಾಡುತ್ತಾ ರಶ್ಮಿಕಾ ಅವರು "ಅದರ ಬಗ್ಗೆ ಏನು ಯೋಚಿಸಬೇಕೆಂದು ನನಗೆ ಇನ್ನೂ ತಿಳಿದಿಲ್ಲ, ಏಕೆಂದರೆ ನಾನು ಮದುವೆ ಆಗುವುದಕ್ಕೆ ಇನ್ನೂ ನಾನು ಚಿಕ್ಕವಳು. ನಾನು ಅದರ ಬಗ್ಗೆ ಇನ್ನೂ ಯೋಚಿಸಿಲ್ಲ. ಆದರೆ ನನಗೆ ಯಾವ ವ್ಯಕ್ತಿ ಜೊತೆ ಇರುವುದಕ್ಕೆ ಸಂತೋಷ ಏನಿಸುತ್ತದೆಯೋ, ಅಂತಹ ವ್ಯಕ್ತಿ ನನಗಿಷ್ಟ” ಎಂದು ಹೇಳಿದ್ದಾರೆ.

ಬಾಲಿವುಡ್​ನಲ್ಲಿ ರಶ್ಮಿಕಾ ಮಂದಣ್ಣ ಕಮಾಲ್!

ರಶ್ಮಿಕಾ ಮಂದಣ್ಣ ಅವರು ಈಗಾಗಲೇ ಎರಡು ಬಾಲಿವುಡ್ ಚಿತ್ರಗಳಲ್ಲಿ ನಟಿಸುವುದಾಗಿ ಸಹಿ ಮಾಡಿದ್ದಾರೆ. ಅವರು ‘ಮಿಷನ್ ಮಜ್ನು’ ಚಿತ್ರದಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಮತ್ತು ಬಿಗ್ ಬಿ ಅಮಿತಾಭ್ ಬಚ್ಚನ್ ಅವರೊಂದಿಗೆ ‘ಗುಡ್‌ಬೈ’ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ, ಇವರ ಸ್ನೇಹಿತ ಮತ್ತು ನಟ ವಿಜಯ್ ದೇವರಕೊಂಡ ಅವರು ನಟಿ ಅನನ್ಯ ಪಾಂಡೆ ಜೊತೆಗೆ ಬಹು ಭಾಷಾ ಚಿತ್ರ ‘ಲಿಗರ್’ ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಅಮೂಲ್ಯಗೆ ದುಬಾರಿ ಗಿಫ್ಟ್​ ಕೊಟ್ಟ ರಮ್ಯಾ! ‘ಪದ್ಮಾವತಿ‘ ಕೊಟ್ಟ ಉಡುಗೊರೆ ಏನು ಗೊತ್ತಾ?

ಪುಷ್ಪ 2 ಚಿತ್ರದ ಚಿತ್ರೀಕರಣ ಮಾರ್ಚ್‌ನಲ್ಲಿ ಆರಂಭ!

ಈ ವರ್ಷದ ಮಾರ್ಚ್ ತಿಂಗಳಲ್ಲಿ ಪುಷ್ಪ: ದಿ ರೂಲ್ (ಪುಷ್ಪಾ 2) ಎಂಬ ಶೀರ್ಷಿಕೆಯ ಪುಷ್ಪ: ದಿ ರೈಸ್ ಚಿತ್ರದ ಎರಡನೆಯ ಭಾಗ ಚಿತ್ರದ ಚಿತ್ರೀಕರಣವನ್ನು ಸಹ ರಶ್ಮಿಕಾ ಮಂದಣ್ಣ ಅವರು ಪ್ರಾರಂಭಿಸಲಿದ್ದಾರೆ. ರಶ್ಮಿಕಾ ಅವರು ಇತ್ತೀಚೆಗೆ ಸುದ್ದಿ ಮಾಧ್ಯಮಕ್ಕೆ ನೀಡಿದ ಒಂದು ಸಂದರ್ಶನದಲ್ಲಿ ಮಾತನಾಡುತ್ತಾ “ಮಾರ್ಚ್ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ತನಗೆ ತಿಳಿಸಲಾಗಿದೆ” ಎಂದು ನಟಿ ಬಹಿರಂಗಪಡಿಸಿದರು. ಈ ಚಿತ್ರವು ಈ ವರ್ಷದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಸಹ ರಶ್ಮಿಕಾ ಅವರು ಹೇಳಿದರು.
Published by:Vasudeva M
First published: