Rashmika Mandanna: ಟಾಲಿವುಡ್​ನಲ್ಲಿ ರಶ್ಮಿಕಾ ಮಂದಣ್ಣಗೆ ಮೊದಲ ಸೋಲು? ಕಿರಿಕ್​ ಬ್ಯೂಟಿಗೆ ಯಾಕ್​ ಬೇಕಿತ್ತು ಈ ಸಿನಿಮಾ ಎಂದ ಫ್ಯಾನ್ಸ್​!

ಸಿನಿಮಾ ನೋಡಿದ ಮಂದಿ ರಶ್ಮಿಕಾ ಈ ಸಿನಿಮಾ ಮಾಡಲೇಬಾರದಿತ್ತು ಎನ್ನುವ ಮಾತನ್ನು ಸಹ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಸಿನಿಮಾರಂಗಕ್ಕೆ ಬಂದಾಗಿನಿಂದಲೂ ಸೋಲನ್ನೇ ಕಂಡಿರಲಿಲ್ಲ. ಈ ಸಿನಿಮಾ ರಶ್ಮಿಕಾ ಮಂದಣ್ಣ ಅವರಿಗೆ ಸೋಲಿನ ರುಚಿ ತೋರಿಸಿದೆ ಎಂದು ಫ್ಯಾನ್ಸ್​ ಮಾತನಾಡಿಕೊಳ್ಳುತ್ತಿದ್ದಾರೆ.

ರಶ್ಮಿಕಾ ಮಂದಣ್ಣ, ಶರ್ವಾನಂದ್​

ರಶ್ಮಿಕಾ ಮಂದಣ್ಣ, ಶರ್ವಾನಂದ್​

  • Share this:
ನಟಿ ರಶ್ಮಿಕಾ ಮಂದಣ್ಣ(Rashmika Mandanna) ಟಾಲಿವುಡ್(Tollywood)​, ಬಾಲಿವುಡ್(Bollywood)​ ಚಿತ್ರರಂಗದಲ್ಲಿ ಸಖತ್​ ಬ್ಯುಸಿಯಾಗಿರವ ನಟಿ. ಸ್ಟಾರ್​ ನಟನ ಜೊತೆ ನಟಿಸುವ ಮೂಲಕ ತಾನೆಂಥ ನಟಿ ಎಂಬುಂದನ್ನು ಸಾಬೀತು ಪಡಿಸಿದ್ದಾರೆ. ದಕ್ಷಿಣದಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ತಾನೊಬ್ಬ ಅದೃಷ್ಟವಂತ ನಟಿ ಎಂದು ಸಾಬೀತು ಮಾಡಿದ್ದಾರೆ.  ಹಿಂದಿ(Hindi)ಯಲ್ಲಿ ರಶ್ಮಿಕಾ ಅಭಿನಯದ ಎರಡು ಸಿನಿಮಾಗಳು ಬಿಡುಗಡೆಗೆ ಕಾದಿವೆ. ಈ ನಡುವೆ ತೆಲುಗು ಚಿತ್ರರಂಗದ ಸ್ಟಾರ್ ನಟ ಅಲ್ಲು ಅರ್ಜುನ್(Allu Arjun) ಜೊತೆಗೆ ‘ಪುಷ್ಪ’(Pushpa) ಸಿನಿಮಾದಲ್ಲಿ ನಟಿಸಿದ ನಂತರ ಪ್ಯಾನ್ ಇಂಡಿಯಾ ಸ್ಟಾರ್(Pan India Star) ಆಗಿ ಮತ್ತಷ್ಟು ಜನಪ್ರಿಯತೆಯನ್ನು ರಶ್ಮಿಕಾ ತನ್ನದಾಗಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತಾಗಿದೆ. ನಿರ್ಮಾಪಕರು ರಶ್ಮಿಕಾ ಡೇಟ್ಸ್​ಗಾಗಿ ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ಟಾಲಿವುಡ್​ನಲ್ಲಿ ರಶ್ಮಿಕಾ ಮಂದಣ್ಣಗೆ ಮೊದಲ ಸೋಲಾಗಿದೆ ಎಂದು ಸಿನಿ ಪಂಡಿತರು ಮಾತನಾಡಿಕೊಳ್ಳುತ್ತಿದ್ದಾರೆ. 

ಟಾಲಿವುಡ್​​ನಲ್ಲಿ ರಶ್ಮಿಕಾ ಮಂದಣ್ಣಗೆ ಮೊದಲ ಸೋಲು?

ರಶ್ಮಿಕಾ ಮಂದಣ್ಣ ಅಭಿನಯದ ತೆಲುಗು ಸಿನಿಮಾ, ನಟ ಶರ್ವಾನಂದ್ ನಾಯಕನಾಗಿ ಕಾಣಿಸಿಕೊಂಡಿರುವ ಸಿನಿಮಾ ‘ಆಡವಾಳ್ಳು ಮೀಕು ಜೋಹಾರ್ಲು’ ಎನ್ನುವ ಹೆಸರಿನ ಹೊಸ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾದ ಬಗ್ಗೆ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ನೋಡಿದ ಮಂದಿ ರಶ್ಮಿಕಾ ಈ ಸಿನಿಮಾ ಮಾಡಲೇಬಾರದಿತ್ತು ಎನ್ನುವ ಮಾತನ್ನು ಸಹ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಸಿನಿಮಾರಂಗಕ್ಕೆ ಬಂದಾಗಿನಿಂದಲೂ ಸೋಲನ್ನೇ ಕಂಡಿರಲಿಲ್ಲ. ಈ ಸಿನಿಮಾ ರಶ್ಮಿಕಾ ಮಂದಣ್ಣ ಅವರಿಗೆ ಸೋಲಿನ ರುಚಿ ತೋರಿಸಿದೆ ಎಂದು ಫ್ಯಾನ್ಸ್​ ಮಾತನಾಡಿಕೊಳ್ಳುತ್ತಿದ್ದಾರೆ.

ಮೊದಲ ದಿನವೇ ಕಲೆಕ್ಷನ್​ ಮಾಡದ ರಶ್ಮಿಕಾ ಸಿನಿಮಾ!

ಮಾರ್ಚ್ 04 ರಂದು ತೆರೆಕಂಡ ‘ಆಡುವಾಳ್ಳು ಮೀಕು ಜೋಹಾರ್ಲು’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುತ್ತಿಲ್ಲ. ಮೊದಲ ದಿನದ ಕಲೆಕ್ಷನ್ ಹೇಳಿಕೊಳ್ಳುವಂತಿಲ್ಲ. ಈ ಕಾರಣಕ್ಕೆ ರಶ್ಮಿಕಾ ಮಂದಣ್ಣ ಮೊದಲ ಸೋಲು ರುಚಿಯನ್ನು ಕಾಣಬೇಕಾಗುತ್ತೆ ಎಂದು ಭವಿಷ್ಯ ಟಾಲಿವುಡ್ ಮಂದಿ ನುಡಿಯುತ್ತಿದ್ದಾರೆ. ರಶ್ಮಿಕಾ, ಶರ್ವಾನಂದ್, ಖುಷ್ಬು ಈ ಸಿನಿಮಾದಲ್ಲಿ ನಟಿಸಿದ್ದರೂ, ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುವಲ್ಲಿ ಸೋತಿದೆ. ಈ ಸಿನಿಮಾ ಮೊದಲ ದಿನ ಕೇವಲ 3.60 ಕೋಟಿ ರೂಪಾಯಿ ಗಳಿಸಿದೆ. ಇದರಲ್ಲಿ ನಿರ್ಮಾಪಕ ಕೈ ಸೇರಿದ್ದು ಕೇವಲ 1.92 ಕೋಟಿ ರೂಪಾಯಿಯಂತೆ.

ಇದನ್ನೂ ಓದಿ: KGF Chapter 2 ಟ್ರೈಲರ್​ ನೋಡಿದ ಸೆನ್ಸಾರ್​ ಸದಸ್ಯ ಹೇಳಿದ್ದೇನು? ತಡೆಯೋಕೆ ಸಾಧ್ಯನಾ ಧುಮ್ಮಿಕ್ಕಿ ಬರುವಂತ ಅಲೆಯನ್ನ!

ಕರ್ನಾಟಕದಲ್ಲಿ ಕೇವಲ 12 ಲಕ್ಷ ಕಲೆಕ್ಷನ್!

ತೆಲುಗು ಸಿನಿಮಾಗಳು ಕರ್ನಾಟಕದಲ್ಲಿ ಒಳ್ಳೆಯ ಕಲೆಕ್ಷನ್​ ಮಾಡುತ್ತೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ರಶ್ಮಿಕಾ ಮಂದಣ್ಣಗೆ ನಮ್ಮ ರಾಜ್ಯದಲ್ಲಿ ಅಭಿಮಾನಿಗಳ ಬಳಗ ದೊಡ್ಡದಾಗಿದೆ. ಹೀಗಾಗಿ ‘ಆಡುವಾಳ್ಳು ಮೀಕು ಜೋಹಾರ್ಲು’ ಸಿನಿಮಾ ಕರ್ನಾಟಕದಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತೆ ಅಂತ ನಿರೀಕ್ಷೆ ಮಾಡಲಾಗಿತ್ತು. ಆದರೆ, ರಾಜ್ಯದಲ್ಲಿ ಕೇವಲ 12 ಲಕ್ಷ ಕಲೆಕ್ಷನ್​ ಮಾಡಿದೆ ಈ ಸಿನಿಮಾ. ಕರ್ನಾಟಕದಲ್ಲಿ 1.60 ಕೋಟಿಗೆ ಈ ಸಿನಿಮಾ ಸೇಲ್ ಆಗಿತ್ತು. ಆದರೆ, ಈಗ ಆ ಹಣ ವಾಪಸ್​ ಬರುತ್ತಾ ಅನ್ನುವ ಅನುಮಾನ ಶುರುವಾಗಿದೆ.

ಇದನ್ನೂ ಓದಿ: ಡಿವೋರ್ಸ್ ಬಳಿಕ ವಿಜಯ್​ ದೇವರಕೊಂಡ ಜೊತೆ ಸಮಂತಾ ರೊಮ್ಯಾನ್ಸ್​! ಹಾಗಿದ್ರೆ ರಶ್ಮಿಕಾ ಕಥೆಯೇನು?

13 ಸಿನಿಮಾಗಳ ಬಳಿಕ ರಶ್ಮಿಕಾಗೆ ಸೋಲು

‘ಕಿರಿಕ್ ಪಾರ್ಟಿ’ಯಿಂದ ಸಕ್ಸಸ್ ಕಂಡಿರುವ ರಶ್ಮಿಕಾ ‘ಪುಷ್ಪ’ವರೆಗೂ 13 ಸಿನಿಮಾಗಳಲ್ಲಿ ನಟಿಸಿದ್ದರು. ಮಧ್ಯದಲ್ಲಿ ಚಲೋ, ಡಿಯರ್ ಕಾಮ್ರೇಡ್, ದೇವದಾಸ್, ಭೀಷ್ಮ, ತಮಿಳಿನ ಸುಲ್ತಾನ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಕಮಾಲ್​ ಮಾಡಿರಲಿಲ್ಲ. ಆದರೂ ಸಿನಿಮಾ ಸೋತಿರಲಿಲ್ಲ, ರಶ್ಮಿಕಾ ಮಂದಣ್ಣ ಅಭಿನಯದ 14ನೇ ಸಿನಿಮಾ ‘ಆಡವಾಳ್ಳು ಮೀಕು ಜೋಹಾರ್ಲು‘ ಸಿನಿಮಾ ಸೋತಿದೆ ಎಂದು ಸಿನಿ ಪಂಡಿತರು ಹೇಳುತಿದ್ದಾರೆ.
Published by:Vasudeva M
First published: