ಕರ್ನಾಟಕ ಕ್ರಶ್ (Karnataka Crush), ಕಿರಿಕ್ ಬೆಡಗಿ, ಪ್ಯಾನ್ ಇಂಡಿಯಾ (Pan India) ಸ್ಟಾರ್ ಹೀರೋಯಿನ್. ಒಂದಾ? ಎರಡಾ? ನಾನಾ ಬಿರುದುಗಳಿಂದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಅವರನ್ನು ಪ್ರೀತಿಯಿಂದ ಅವರ ಅಭಿಮಾನಿಗಳು ಕರಿತಾರೆ. 2016 ಕಿರಿಕ್ ಪಾರ್ಟಿ ಸಿನಿಮಾದ ನಂತರ ರಶ್ಮಿಕಾ ಮುಟ್ಟಿದ್ದೆಲ್ಲಾ ಚಿನ್ನ(Gold)ವಾಗಿದೆ. ದೇಶದ ಮೂಲೆ ಮೂಲೆಯಲ್ಲೂ ಅಭಿಮಾನಿ(Fans)ಗಳ ಹೊಂದಿರುವ ರಶ್ಮಿಕಾಗೆ ಹುಟ್ಟುರು ಕರುನಾಡಲ್ಲಿ ಹೊಗಳಿಕೆಗಿನ್ನ ತೆಗಳಿಕೆ ಜಾಸ್ತಿ. ಅದರಲ್ಲೂ ಟ್ರೋಲ್ (Troll) ಪೇಜ್ಗಳಿಗೆ ರಶ್ಮಿಕಾ ಮಂದಣ್ಣ ರಂಜಾನ್ ಬಿರಿಯಾನಿ (Biriyani) ಆಗಿ ಬಿಟ್ಟಿದ್ದಾರೆ. ಕರ್ನಾಟಕದಲ್ಲಿ ಹುಟ್ಟಿ ಬೇರೆ ಭಾಷೆಯಲ್ಲಿ ಮಿಂಚುತ್ತಿರುವ ಶ್ರೀವಲ್ಲಿ ಸನ್ಮಾನಕ್ಕಿಂತ ಅವಮಾನವೇ ಜಾಸ್ತಿ ಅಂತಿದೆ ಅವರ ಅಭಿಮಾನಿ ಬಳಗ. ಅಷ್ಟಕ್ಕೂ ರಶ್ಮಿಕಾ ಅಂದರೆ ಕರ್ನಾಟಕದ ಜನರು ಮೂತಿ ಮುರಿಯೋದ್ಯಾಕೆ ಅಂದರೆ ರಶ್ಮಿಕಾ ಕನ್ನಡಕ್ಕೆ ಗೌರವ ಕೊಡಲ್ಲ ಅನ್ನೋದು ಒಂದಾದರೆ, ಸ್ಟಾರ್ ಪಟ್ಟವನ್ನು ಪಟ್ಟಾಭಿಷೇಕ ಮಾಡಿಕೊಟ್ಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Simple Star Rakshit Shetty)ಗೆ ರಶ್ಮಿಕಾ ಮೋಸ ಮಾಡಿದ್ದಾರೆ ಅನ್ನುವುದು ಮತ್ತೊಂದು ರೀಸನ್.
ಯಾವುದಕ್ಕೂ ಕೇರ್ ಮಾಡದ ನ್ಯಾಷನಲ್ ಕ್ರಶ್!
ಆದರೆ ರಶ್ಮಿಕಾ ಇದ್ಯಾವುದಕ್ಕೂ ಕ್ಯಾರೆ ಅನ್ನದೆ ಸದ್ಯ ಹೈದರಾಬಾದ್ನಲ್ಲಿ ಸೆಟಲ್ ಆಗಿದ್ದಾರೆ. ಆದರೆ, ಈಗ ಮತ್ತೆ ಕೊಡಗಿನ ಕಿತ್ತಳೆ ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿ ಬ್ರೇಕ್ ಅಪ್ ಸುದ್ದಿ ಸದ್ದು ಮಾಡುತ್ತಿದೆ. ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಬ್ರೇಕ್ ಅಪ್ ಆಗಿ ಬರೋಬರಿ 4 ವರ್ಷಗಳು ಕಂಪ್ಲೀಟ್ ಆಗಿವೆ. ಆದರೂ ಇವಾಗ ಯಾಕೆ ಈ ವಿಚಾರ ಮತ್ತೆ ಮುನ್ನೆಲೆಗೆ ಬಂತಪ್ಪ ಅಂದರೆ ರಶ್ಮಿಕಾ ಕೊಟ್ಟಿರುವ ಆ ಒಂದು ಹೇಳಿಕೆ. ಹೌದು ಇತ್ತೀಚಿಗೆ ಖಾಸಗಿ ಸಂದರ್ಶನ ಒಂದರಲ್ಲಿ ರಶ್ಮೀಕಾ ಮಂದಣ್ಣ ಮದುವೆ ವಿಚಾರವಾಗಿ ಒಪನ್ ಆಗಿ ಮಾತನಾಡಿದ್ದಾರೆ.
ಚಿಕ್ಕವಳು ಮದುವೆ ಬೇಡ ಎಂದಿದ್ದ ರಶ್ಮಿಕಾ!
ಮದುವೆ ಯಾವಾಗ ಅನ್ನುವ ಪ್ರಶ್ನೆ ಕೇಳಿದ್ದಕ್ಕೆ, ನಾನು ಇನ್ನೂ ಚಿಕ್ಕವಳು ಮದುವೆ ಬಗ್ಗೆ ಯೋಚನೆ ಮಾಡುವಷ್ಟು ದೊಡ್ಡವಳಾಗಿಲ್ಲ ಎಂದು ಮಾತನಾಡಿದ್ದಾರೆ. ಇನ್ನೂ ರಶ್ಮಿಕಾ ಉತ್ತರ ಈಗ ಎಲ್ಲ ಕಡೆ ವೈರಲ್ ಆಗಿದೆ. ಜೊತೆಗೆ ಕಿರಿಕ್ ಹುಡುಗಿ ಪರೋಕ್ಷವಾಗಿ ರಕ್ಷಿತ್ ಶೆಟ್ಟಿ ಬ್ರೇಕ್ ಅಪ್ ಆಗಿದ್ದಕ್ಕೆ ರೀಸನ್ ಕೊಟ್ಟಿದ್ದಾರೆ ಅನ್ನುವ ವಿಷಯ ಸೋಷಿಯಲ್ ಮೀಡಿಯಾ ಅನ್ನುವ ಸಾಗರದಲ್ಲಿ ಈಜಾಡುತ್ತಿದೆ. ಹೌದು, ಈ ತರ ಚರ್ಚೆ ಆಗುವಯದಕ್ಕೂ ಗಟ್ಟಿ ಕಾರಣ ಇದೆ.
ಇದನ್ನೂ ಓದಿ: ಈ ವರ್ಷದ ಕೊನೆಗೆ ರಶ್ಮಿಕಾ-ದೇವರಕೊಂಡ ಮದುವೆ?
ಈ ಗುಸುಗುಸುಗೂ ಒಂದು ಕಾರಣವಿದೆ!
2017 ಜುಲೈ 3ನೇ ತಾರೀಖು ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅದ್ದೂರಿಯಾಗಿ ಉಂಗುರು ಬದಲಿಸಿ ಕೊಂಡಿದ್ದರು. ಈ ಜೋಡಿ ನಿಶ್ಚಿತಾರ್ಥದ ಬಳಿಕ ರಶ್ಮಿಕಾ ಮತ್ತು ರಕ್ಷಿತ್ ವಯಸ್ಸಿನ ಅಂತರದ ಸಾಕಷ್ಟು ಚರ್ಚೆಗಳಾಗಿದ್ವು. ರಕ್ಷಿತ್ ಶೆಟ್ಟಿ ಹಾಗೂ ರಶ್ಮೀಕಾ ನಡುವೆ 14 ವರ್ಷಗಳ ಅಂತರವಿದೆ ಅನ್ನೋ ವಿಚಾರ ಸದ್ದು ಮಾಡಿತ್ತು.. ಆದರೆ, ಈ ಜೋಡಿ ಕ್ಯಾರೇ ಅನ್ನದೆ ಪ್ರಣಯ ಪಕ್ಷಿಗಳಾಗಿ ತೆರೆಮರೆಯಲ್ಲೇ ಮರ ಸುತ್ತುತ್ತಿದ್ರು.. ಆದರೆ, ಈ ಲವ್ ಬರ್ಡ್ಸ್ಗಳ ಮೇಲೆ ಅದ್ಯಾವ ಮಸಣಿ ಕಣ್ ಬಿತ್ತೋ ಗೊತ್ತಿಲ್ಲ. 2018 ಅಕ್ಟೋವರ್ನಲ್ಲಿ ರಶ್ಮಿಕಾ ಸಡನ್ ಆಗಿ ರಕ್ಚಿತ್ಗೆ ಶಾಕ್ ಕೊಟ್ಟಿದ್ದರು.
4 ವರ್ಷಗಳ ಬಳಿಕ ರೀಸನ್ ಹೇಳಿದ್ರಾ ರಶ್ಮಿಕಾ?
ರಕ್ಷಿತ್ ಶೆಟ್ಟಿ ಜೊತೆ ಬ್ರೇಕ್ ಅಪ್ ಆಗಿದಕ್ಕೆ ಕಾರಣ ಏನು ಎಂಬುದ ರಶ್ಮಿಕಾ ಮತ್ತು ರಕ್ಷಿತ್ ಈ ವರೆಗೂ ಎಲ್ಲೂ ಹೇಳಿಲ್ಲ. ಆದರೆ ಈಗ ಬ್ರೇಕಪ್ ಅದ 4 ವರ್ಷಗಳ ನಂತರ ಮದುವೆ ಬಗ್ಗೆ ಮಾತನಾಡಿರುವ ರಶ್ಮಿಕಾ ನಾನಿನ್ನು ಚಿಕ್ಕವಳು ಅಂತ ಹೇಳಿದ್ದಾರೆ. ಹಾಗಿದ್ದರೆ 2017ರಲ್ಲಿ ರಶ್ಮಿಕಾ ಎಂಗೇಜ್ಮೆಂಟ್ ಆದಾಗ ಅವರಿಗೆ 20 ವರ್ಷ. ಆಗ ಯಾಕೆ ರಶ್ಮಿಕಾ ಎಂಗೇಜ್ಮೆಂಟ್ ಆದರು ಅನ್ನುವ ಚರ್ಚೆ ಶುರುವಾಗಿದೆ.
ಇದನ್ನೂ ಓದಿ: ಮದ್ವೆ ಮನೆಯಲ್ಲಿ ಫರ್ಹಾನ್ ಜೊತೆ ಹೃತಿಕ್ ಮಸ್ತ್ ಡ್ಯಾನ್ಸ್.. `ಸೆನೊರಿಟಾ’ ಎಂದ ಕುಚಿಕು ದೋಸ್ತಿಗಳು!
ಅಲ್ಲದೆ ರಶ್ಮಿಕಾ ಮದುವೆ ವಿಚಾರ ಮಾತನಾಡುವ ನೆಪದಲ್ಲಿ ಪರೋಕ್ಷವಾಗಿ ರಕ್ಷಿತ್ ಶೆಟ್ಟಿ ಜೊತೆ ಬ್ರೇಕ್ ಅಪ್ ಅಗಿದ್ದಕ್ಕೆ ರೀಸನ್ ಕೊಟ್ಟಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿವೆ ಅಲ್ಲದೆ ಸದ್ಯ ರಶ್ಮಿಕಾ ಮಂದಣ್ಣ ಹೆಸರು ಟಾಲಿವುಟ್ ನಟ ವಿಜಯ್ ದೇವರಕೊಂಡ ಜೊತೆ ತಳುಕು ಹಾಕಿ ಕೊಂಡಿದೆ. ಆದರೆ, ಈ ಜೋಡಿ ಇದುವರೆಗೂ ಎಲ್ಲೂ ನಾವು ಪ್ರೇಮಿಗಳು ಅಂತ ಬಾಯ್ಬಿಟ್ಟಿಲ್ಲ. ಆದರೂ ಕದ್ದು ಮುಚ್ಚಿ ಡೇಟಿಂಗ್ ಮಾಡಿ ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದಿದ್ದಾರೆ.
(ವರದಿ: ಸತೀಶ್ ಎಂ.ಬಿ) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ