ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತಾಗಿದೆ. ರಶ್ಮಿಕಾ ಮಂದಣ್ಣ(Rashmika Mandanna), ದಕ್ಷಿಣ ಭಾರತದ (South India) ಖ್ಯಾತ ನಟಿ. ಕರ್ನಾಟಕದ ಬ್ಯೂಟಿ. ಕನ್ನಡ ಅಲ್ಲದೇ ಪರಭಾಷೆಗಳಲ್ಲೂ ಮಿಂಚುತ್ತಿರುವ ಚೆಲುವೆ. ಕನ್ನಡ, ತೆಲಗು, ತಮಿಳು ಚಿತ್ರರಂಗದಲ್ಲಿ ರಶ್ಮಿಕಾರದ್ದೇ ಹವಾ. ಇನ್ನೊಂದು ಮೈಲಿಗಲ್ಲು(Milestone) ಎನ್ನುವಂತೆ ಈಕೆ ಬಾಲಿವುಡ್ನಲ್ಲೂ(Bollywood) ಸಿನಿಮಾ ಮಾಡ್ತಿದ್ದು ಅಲ್ಲಿಯೂ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಸೌಂದರ್ಯ, ನಟನೆ, ಡ್ಯಾನ್ಸ್ಗೆ ಅಭಿಮಾನಿಗಳು ಫಿಧಾ ಆಗಿಬಿಟ್ಟಿದ್ದಾರೆ. ಮೊದಲು ಕರ್ನಾಟಕ ಕ್ರಶ್ ಎಂದೆನಿಸಿಕೊಂಡಿದ್ದ ರಶ್ಮಿಕಾ ಈಗ ನ್ಯಾಶನಲ್ ಕ್ರಶ್(National Crush) ಆಗಿಬಿಟ್ಟಿದ್ದಾರೆ. ಎಲ್ಲಿ ನೋಡಿದರೂ ರಶ್ಮಿಕಾ ಮಂದಣ್ಣ ಅವರದ್ದೇ ಸುದ್ದಿ. ಅವರು ಏನೇ ಮಾಡಿದರೂ ಅದು ಭಾರೀ ಚರ್ಚೆಯಾಗುತ್ತೆ. ಸಿನಿಮಾರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ದೊಡ್ಡ ದೊಡ್ಡ ಸ್ಟಾರ್( Big Stars)ಗಳ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಕೆ ಜೊತೆ ಸಿನಿಮಾ ಮಾಡಲು ನಿರ್ಮಾಪಕರು(Producers) ಕ್ಯೂ ನಿಂತಿದ್ದಾರೆ. ಇತ್ತೀಚೆಗೆ ದಳಪತಿ ವಿಜಯ್ ಅವರ ಮುಂದಿನ ಸಿನಿಮಾಗೆ ರಶ್ಮಿಕಾ ನಾಯಕಿ ಅಂತ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್ ನಟ(Star Actor)ನ ಕೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಕಿರಿಕ್ ಬೆಡಗಿ.
ರಾಮ್ಚರಣ್ ಸಿನಿಮಾಗೆ ರಶ್ಮಿಕಾ ನಾಯಕಿ!
ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಪುಷ್ಪ 2 ಚಿತ್ರ ಮಾಡಲಿದ್ದಾರೆ. ಇದರ ನಂತರ ತೆಲುಗಿನ ಮತ್ತೊಬ್ಬ ಸ್ಟಾರ್ ನಟನೊಂದಿಗೂ ರಶ್ಮಿಕಾ ಅವರು ತೆರೆಹಂಚಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.
ನಟ ರಾಮ್ ಚರಣ್ ಸದ್ಯ RRR ಚಿತ್ರದ ರಿಲೀಸ್ಗಾಗಿ ಕಾಯುತ್ತಿದ್ದಾರೆ. ಈ ಸಿನಿಮಾದ ಬಳಿಕ ನಿರ್ದೇಶಕ ರಾಮ್ ಚರಣ್ ಶಂಕರ್ ಚಿತ್ರದಲ್ಲಿ ರಾಮ್ಚರಣ್ ಕಾಣಿಸಿಕೊಳ್ಳಲಿದ್ದಾರೆ. ನಂತರ ತಮ್ಮ 16ನೇ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ರಾಮ್ ಚರಣ್ಗೆ ನಾಯಕಿ ಆಗಿ ಅಭಿನಯಿಸಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.
ಇದನ್ನೂ ಓದಿ: ಎಷ್ಟು ದಿನ ಈ ಬಿರುದು ಇರುತ್ತೋ ಅಷ್ಟು ದಿನ ಮಜಾ ಮಾಡೋದು! ರಶ್ಮಿಕಾ ಹೀಗಂದಿದ್ಯಾಕೆ?
ದಿಶಾ ಜಾಗಕ್ಕೆ ಬಂದ ರಶ್ಮಿಕಾ ಮಂದಣ್ಣ!
ರಾಮ್ ಚರಣ್ 16ನೇ ಚಿತ್ರಕ್ಕೆ ತಾತ್ಕಾಲಿಕವಾಗಿ 'RC16' ಎಂದು ಹೆಸರಿಡಲಾಗಿದೆ ನಿರ್ದೇಶಕ ಗೌತಮ್ ತಿನ್ನನೂರಿ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಯುವಿ ಕ್ರಿಯೇಷನ್ಸ್, ಎನ್ವಿಆರ್ ಸಿನಿಮಾ ಸಹಯೋಗದಲ್ಲಿ ಚಿತ್ರ ನಿರ್ಮಾಣ ಆಗಲಿದೆ. ಮೊದಲು ಈ ಸಿನಿಮಾಗೆ ಬಾಲಿವುಡ್ನ ಬಿಕಿನಿ ಕ್ವೀನ್ ದಿಶಾ ಪಾಟ್ನಿ ಅವರು ರಾಮ್ಚರಣ್ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ದಿಶಾ ಪಾಟ್ನಿ ಜಾಗಕ್ಕೆ ರಶ್ಮಿಕಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
ಇದನ್ನೂ ಓದಿ: ಇದೇನ್ ಈ ಪಾಟಿ ಸಂಭಾವನೆ ಹೆಚ್ಚಿಸಿಕೊಳ್ಳೋದಾ? ಇಷ್ಟು ದುಡ್ಡು ಕೇಳಿದ್ರೆ ಪ್ರೊಡ್ಯೂಸರ್ ಕಥೆಯೇನು?
‘ದಳಪತಿ’ ವಿಜಯ್ ಜೊತೆ ಕೊಡಗಿನ ಕುವರಿ?
ಇನ್ನೂ, ಕಾಲಿವುಡ್ ಹೀರೋ ‘ದಳಪತಿ’ ವಿಜಯ್ ನಟನೆಯ ಹೊಸ ಚಿತ್ರಕ್ಕೆ ನಾಯಕಿ ಆಗಲಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದೆ.ಒಂದಕ್ಕಿಂತ ಒಂದು ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ದಳಪತಿ ವಿಜಯ್ ಜತೆ ತೆರೆ ಹಂಚಿಕೊಳ್ಳಬೇಕು ಎಂಬುದು ಬಹುತೇಕ ನಟಿಯರ ಆಸೆ. ರಶ್ಮಿಕಾ ಕೂಡ ಅಂಥ ಆಸೆಯನ್ನು ಈ ಮೊದಲು ವ್ಯಕ್ತಪಡಿಸಿದ್ದುಂಟು. ಆನಂತರ ವಿಜಯ್ ಅವರ ಯಾವುದೇ ಹೊಸ ಸಿನಿಮಾ ಅನೌನ್ಸ್ ಆದರೂ ರಶ್ಮಿಕಾ ಹೆಸರು ಕೇಳಿಬರುವುದು ಸಹಜ ಆಗಿ ಬಿಟ್ಟಿದೆ. ಈಗ ಮತ್ತೆ ಅದು ಮರುಕಳಿಸಿದೆ. ಇದೀಗ ವಿಜಯ್ ಬೀಸ್ಟ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ಮುಂದಿನ ಸಿನಿಮಾಗೆ ವಿಜಯ್ ಜೊತೆ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ