• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Rashmika Mandanna: ಮದ್ವೆ ಟ್ರೋಲ್ಸ್​ಗೆಲ್ಲ ಟಕ್ಕರ್​ ಕೊಟ್ರಾ ರಶ್ಮಿಕಾ? ಇದನ್ನು ಕುಡಿದು ಆರಾಮಾಗಿರಿ ಅಂದಿದ್ಯಾಕೆ ಕಿರಿಕ್​ ಬ್ಯೂಟಿ?

Rashmika Mandanna: ಮದ್ವೆ ಟ್ರೋಲ್ಸ್​ಗೆಲ್ಲ ಟಕ್ಕರ್​ ಕೊಟ್ರಾ ರಶ್ಮಿಕಾ? ಇದನ್ನು ಕುಡಿದು ಆರಾಮಾಗಿರಿ ಅಂದಿದ್ಯಾಕೆ ಕಿರಿಕ್​ ಬ್ಯೂಟಿ?

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ

ಭಾರತದ ಅತ್ಯಂತ ಜನಪ್ರಿಯ ತಾರೆಗಳಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸಹ ಒಬ್ಬರು ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ರಶ್ಮಿಕಾ ಸದ್ಯಕ್ಕೆ ಟಾಕ್​ ಆಫ್​ ದಿ ಟೌನ್ (Talk Of The Town)​ ಆಗಿದ್ದಾರೆ. ಕೆಲ ದಿನಗಳಿಂದ ಅವರ ಮದುವೆ ವಿಚಾರ ಸಖತ್​ ಸೌಂಡ್​ ಮಾಡುತ್ತಿದೆ. 

ಮುಂದೆ ಓದಿ ...
  • Share this:

ರಶ್ಮಿಕಾ.. ರಶ್ಮಿಕಾ.. ರಶ್ಮಿಕಾ.. ಯಾರನ್ನೇ ಕೇಳಲಿ ರಶ್ಮಿಕಾ ಮಂದಣ್ಣ.. ಎಲ್ಲೇ ನೋಡಲಿ ರಶ್ಮಿಕಾ ಮಂದಣ್ಣ.. ಹೌದು, ಭಾರತೀಯ ಚಿತ್ರರಂಗ(Indian Film Industry)ದಲ್ಲಿ ಈಗ ರಶ್ಮಿಕಾ ಮಂದಣ್ಣ ಟಾಪ್(Top)​ನಲ್ಲಿದ್ದಾರೆ. ಕರ್ನಾಟಕ ಕ್ರಶ್ (Karnataka Crush), ಕಿರಿಕ್ ಬೆಡಗಿ, ಪ್ಯಾನ್​ ಇಂಡಿಯಾ (Pan India) ಸ್ಟಾರ್ ಹೀರೋಯಿನ್​.  ಒಂದಾ? ಎರಡಾ? ನಾನಾ ಬಿರುದುಗಳಿಂದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಅವರನ್ನು ಪ್ರೀತಿಯಿಂದ ಅವರ ಅಭಿಮಾನಿಗಳು ಕರಿತಾರೆ. ಇಲ್ಲ..ಇಲ್ಲ.. ಇವಾಗ ಇವರು ಕರುನಾಡ ಕ್ರಶ್​ ಅಲ್ಲ.. ನ್ಯಾಷನಲ್​ ಕ್ರಶ್ ​(National Crush) ಆಗಿದ್ದಾರೆ. ಈಗ ಭಾರತದ ಅತ್ಯಂತ ಜನಪ್ರಿಯ ತಾರೆಗಳಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸಹ ಒಬ್ಬರು ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ರಶ್ಮಿಕಾ ಸದ್ಯಕ್ಕೆ ಟಾಕ್​ ಆಫ್​ ದಿ ಟೌನ್ (Talk Of The Town)​ ಆಗಿದ್ದಾರೆ. ಕೆಲ ದಿನಗಳಿಂದ ಅವರ ಮದುವೆ ವಿಚಾರ ಸಖತ್​ ಸೌಂಡ್​ ಮಾಡುತ್ತಿದೆ. 


ಮದ್ವೆಯಾಗ್ತಾರಾ ವಿಜಯ್​-ರಶ್ಮಿಕಾ?


ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ಟಾಲಿವುಡ್ ನಟ ವಿಜಯ್ ದೇವರಕೊಂಡ (Vijay Deverakond) ಮದುವೆ ವಿಚಾರ ಕೆಲವು ದಿನಗಳಿಂದ ಭಾರೀ ಸುದ್ದಿ ಮಾಡುತ್ತಿದೆ. ಇಬ್ಬರೂ ಬಾಲಿವುಡ್​ನಲ್ಲಿ ಸಕ್ರಿಯರಾಗಿ ಈಗ ಮುಂಬೈಗೆ ಶಿಫ್ಟ್ ಆಗಿದ್ದಾರೆ. ಜೊತೆಯಾಗಿ ಜಿಮ್ ಮಾಡುವುದು, ಡಿನ್ನರ್ ಮಾಡುವುದನ್ನು ಮಾಡುತ್ತಲೇ ಇದ್ದಾರೆ. ಈ ಜೋಡಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎನ್ನಲಾಗಿದೆ. ಸಹನಟರಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿವೆ.




ಇದನ್ನೂ ಓದಿ: ರಶ್ಮಿಕಾಳ ಹಿಂದಿನ 5 ಸಿನಿಮಾಗಳ ಕಲೆಕ್ಷನ್ ಎಷ್ಟು ಗೊತ್ತಾ? ಕೋಟಿಗಳಿಗೆ ಬೆಲೆನೇ ಇಲ್ವಾ ಗುರೂ..!


ಟ್ರೋಲ್ಸ್​​ಗೆಲ್ಲ ತಲೆ ಕೆಡಿಸಿಕೊಳ್ಳುತ್ತಿಲ್ವಂತೆ ರಶ್ಮಿಕಾ!


ಹೌದು, ಇವರ ಮತ್ತು ದೇವರಕೊಂಡ ಮದುವೆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್​ ಆಗುತ್ತಿದೆ. ಇದೇ ಸಮಯದಲ್ಲಿ ರಶ್ಮಿಕಾ ಮಂದಣ್ಣ ರೀಲ್ಸ್​ವೊಂದನ್ನು ಮಾಡಿದ್ದಾರೆ. ನನ್ನ ಖುಷಿಯ ಸೀಕ್ರೆಟ್​ ಇಲ್ಲಿದೆ ನೋಡಿ ಅಂತ ಬರೆದುಕೊಂಡು ಆ ರೀಲ್ಸ್​ ಪೋಸ್ಟ್​ ಮಾಡಿದ್ದಾರೆ. ನೀರನ್ನು ಕುಡಿದು ನನ್ನ ಕೆಲಸವನ್ನು ಮಾತ್ರ ನೋಡಿಕೋ ಎಂದು ಸಾಹಿತ್ಯವಿರುವ ಹಾಡಿಗೆ ರಶ್ಮಿಕಾ ರೀಲ್ಸ್ ಮಾಡಿದ್ದು, ಈ ವಿಡಿಯೋ ಅವರ ವೈಯಕ್ತಿಕ ಜೀವನ ಬಗ್ಗೆ ಚರ್ಚೆ ಮಾಡುತ್ತಿರುವವರಿಗೆ ಪರೋಕ್ಷವಾಗಿ ಠಕ್ಕರ್​ ಕೊಟ್ಟಂತೆ ಇದೆ. ಈ ವಿಡಿಯೋ ಕೂಡ ಸೋಷಿಯಲ್​ ಮೀಡಿಯಾದಲ್ಲಿ ಟ್ರೋಲ್​ ಆಗುತ್ತಿದೆ.


ಇದನ್ನೂ ಓದಿ: ರಶ್ಮಿಕಾ ಜೊತೆ ಮದುವೆ, ಕೊನೆಗೂ ಮೌನ ಮುರಿದ ದೇವರಕೊಂಡ


2016 ಕಿರಿಕ್ ಪಾರ್ಟಿ ಸಿನಿಮಾದ ನಂತರ ರಶ್ಮಿಕಾ ಮುಟ್ಟಿದ್ದೆಲ್ಲಾ ಚಿನ್ನ(Gold)ವಾಗಿದೆ. ದೇಶದ ಮೂಲೆ ಮೂಲೆಯಲ್ಲೂ ಅಭಿಮಾನಿ(Fans)ಗಳ ಹೊಂದಿರುವ ರಶ್ಮಿಕಾಗೆ ಹುಟ್ಟುರು ಕರುನಾಡಲ್ಲಿ ಹೊಗಳಿಕೆಗಿನ್ನ ತೆಗಳಿಕೆ ಜಾಸ್ತಿ.‌‌‌ ಅದರಲ್ಲೂ ಟ್ರೋಲ್ (Troll) ಪೇಜ್​ಗಳಿಗೆ ರಶ್ಮಿಕಾ ಮಂದಣ್ಣ ರಂಜಾನ್​ ಬಿರಿಯಾನಿ (Biriyani) ಆಗಿ ಬಿಟ್ಟಿದ್ದಾರೆ. ಅವರು ಏನೇ ಮಾಡಿದರೂ ಕೂಡ ಟ್ರೋಲಿಗರ ಕಣ್ಣಿಗೆ ಗುರಿಯಾಗುತ್ತಾರೆ. ಈಗಲೂ ನೀರು ಕುಡಿದು ನನ್ನ ಕೆಲಸ ನಾನು ಮಾಡುವುದರಿಂದ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ.


ಮದ್ವೆ ಬಗ್ಗ ಕೊನೆಗೂ ಮೌನ ಮುರಿದ ದೇವರಕೊಂಡ!

top videos


    ಇನ್ನೂ ವಿಜಯ್​ ದೇವರಕೊಂಡ ಹಾಗೂ ರಶ್ಮಿಕಾ ವಂದತಿ ಹಬ್ಬುತ್ತಿದ್ದಂತೆ, ಈ ಬಗ್ಗೆ ನಟ ವಿಜಯ್​ ದೇವಕೊಂಡ ಟ್ವೀಟ್​ ಮಾಡಿದ್ದಾರೆ. ‘ಇದೆಲ್ಲ ಬರಿ ನಾನ್​ಸೆನ್ಸ್​​ ಆದರೂ ಈ ವದಂತಿಯನ್ನು​​ ನಾನು ಇಷ್ಟಪಡುತ್ತೇನೆ’ ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಕಂಡ ನೆಟ್ಟಿಗರು ನಾನ್​ಸೆನ್ಸ್​ ಅಂತೀರಾ, ಜೊತೆಗೆ ಇಷ್ಟ ಪಡುತ್ತಿದ್ದೇನೆ ಅಂತೀರಾ. ಯಾವುದಾದರೂ ಒಂದನ್ನು ಹೇಳಿ ಎಂದು ಕಮೆಂಟ್​ ಮಾಡಿದ್ದಾರೆ.

    First published: