ರಶ್ಮಿಕಾ ಮಂದಣ್ಣ(Rashmika Mandanna) ಸದ್ಯ ಟಾಕ್ ಆಫ್ ದಿ ಟೌನ್(Talk of the Town) ಆಗಿದ್ದಾರೆ. ಎಷ್ಟೇ ಟ್ರೋಲ್(Troll) ಆದರೂ ಪರವಾಗಿಲ್ಲ, ತನ್ನ ಪಾಡಿಗೆ ತಾನು ಕೆಲಸ ಮಾಡಿ ತೋರಿಸುತ್ತೇನೆ ಎಂದು ನಟಿ ಹೇಳಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಕಿರಿಕ್ ಪಾರ್ಟಿ (Kirik Party) ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಈ ಬ್ಯೂಟಿ, ಕರ್ನಾಟಕ ಕ್ರಶ್ (Karnataka Crush) ಎನಿಸಿಕೊಂಡಿದ್ದರು. ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಿ ಇದೀಗ ನ್ಯಾಷನಲ್ ಕ್ರಶ್ (National Crush) ಆಗಿದ್ದಾರೆ. ರಶ್ಮಿಕಾ ಮಂದಣ್ಣ ಏನ್ ಮಾಡಿದರು ಸುದ್ದಿಯಾಗುತ್ತೆ. ಅದರಲ್ಲೂ ಕನ್ನಡ ಬಗ್ಗೆ ನಟಿ ತೋರಿಸಿರುವ ನಿರ್ಲಕ್ಷ್ಯ ಮಾತ್ರ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಕಡಿಮೆ ಸಮಯದಲ್ಲಿ ಸೂಪರ್ ಸ್ಟಾರ್(Super Star)ಗಳ ಜೊತೆ ನಟಿಸುವ ಅವಕಾಶ ಪಡೆದುಕೊಂಡರು. ಕನ್ನಡದಲ್ಲಿ ಪುನೀತ್ ರಾಜ್ಕುಮಾರ್(Puneeth Rajkumar) ತೆಲುಗಿನಲ್ಲಿ ಮಹೇಶ್ ಬಾಬು(Mahesh Babu), ಅಲ್ಲು ಅರ್ಜುನ್(Allu Arjun), ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಇವರು ನಟಿಸಿರುವ ಪುಷ್ಟ ಸಿನಿಮಾ ತೆರೆಕಂಡಿದೆ. ಸಿನಿಮಾ ಬಗ್ಗೆ ನೆಗೆಟಿವ್ ಕಮೆಂಟ್ಸ್ ಬಂದರೂ, ರಶ್ಮಿಕಾ ಮಂದಣ್ಣ ಅವರ ಅಭಿನಯಕ್ಕೆ ಫುಲ್ ಮಾರ್ಕ್ಸ್(Full Marks) ಸಿಕ್ಕಿದೆ. ಇದೀಗ ಮತ್ತೊಬ್ಬ ಸ್ಟಾರ್ ನಟರೊಂದಿಗೆ ನಟಿಸುವುದು ಪಕ್ಕಾ ಆಗಿದೆ. ಈ ವಿಚಾರ ತಿಳಿದು ಫ್ಯಾನ್ಸ್ ಈಕೆಯದ್ದು ಏನ್ ಲಕ್ ಗುರೂ ಅಂತ ಮಾತನಾಡಿಕೊಳ್ಳುತ್ತಿದ್ದಾರೆ.
‘ದಳಪತಿ’ ವಿಜಯ್ ಜೊತೆ ಕೊಡಗಿನ ಕುವರಿ?
ಹೌದು, ಕಾಲಿವುಡ್ ಹೀರೋ ‘ದಳಪತಿ’ ವಿಜಯ್ ನಟನೆಯ ಹೊಸ ಚಿತ್ರಕ್ಕೆ ನಾಯಕಿ ಆಗಲಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದೆ.ಒಂದಕ್ಕಿಂತ ಒಂದು ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ದಳಪತಿ ವಿಜಯ್ ಜತೆ ತೆರೆ ಹಂಚಿಕೊಳ್ಳಬೇಕು ಎಂಬುದು ಬಹುತೇಕ ನಟಿಯರ ಆಸೆ. ರಶ್ಮಿಕಾ ಕೂಡ ಅಂಥ ಆಸೆಯನ್ನು ಈ ಮೊದಲು ವ್ಯಕ್ತಪಡಿಸಿದ್ದುಂಟು. ಆನಂತರ ವಿಜಯ್ ಅವರ ಯಾವುದೇ ಹೊಸ ಸಿನಿಮಾ ಅನೌನ್ಸ್ ಆದರೂ ರಶ್ಮಿಕಾ ಹೆಸರು ಕೇಳಿಬರುವುದು ಸಹಜ ಆಗಿ ಬಿಟ್ಟಿದೆ. ಈಗ ಮತ್ತೆ ಅದು ಮರುಕಳಿಸಿದೆ. ಇದೀಗ ವಿಜಯ್ ಬೀಸ್ಟ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ಮುಂದಿನ ಸಿನಿಮಾಗೆ ವಿಜಯ್ ಜೊತೆ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಇದನ್ನು ಓದಿ : ಟ್ರೋಲ್ನಿಂದ ತಪ್ಪಿಸಿಕೊಳ್ಳಲು ಅಪ್ಪು ಫೋಟೋ ಶೇರ್ ಮಾಡಿದ `ಶ್ರೀವಲ್ಲಿ’!
ತೆಲುಗು, ತಮಿಳಿನಲ್ಲಿ ‘ದಳಪತಿ 66’ ಸಿನಿಮಾ
ಖ್ಯಾತ ನಿರ್ದೇಶಕ ವಂಶಿ ಪೈಡಿಪಲ್ಲಿ ಜೊತೆ ವಿಜಯ್ ಸಿನಿಮಾ ಮಾಡಲಿದ್ದಾರೆ. ಆ ಚಿತ್ರಕ್ಕೆ ತಾತ್ಕಾಲಿಕವಾಗಿ ‘ದಳಪತಿ 66’ ಎಂದು ಕರೆಯಲಾಗುತ್ತಿದೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಚಿತ್ರಕ್ಕೆ ಪಾತ್ರವರ್ಗದ ಆಯ್ಕೆ ನಡೆಯುತ್ತಿದೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುವ ಸಾಧ್ಯತೆ ಇದು ಎಂಬ ಸುದ್ದಿ ಹರಿದಾಡುತ್ತಿದೆ.ಈ ಸಿನಿಮಾ ತೆಲುಗು ಮತ್ತು ತಮಿಳಿನಲ್ಲಿ ಏಕಕಾಲಕಕ್ಕೆ ನಿರ್ಮಾಣ ಆಗಲಿದೆ. ಹಾಗಾಗಿ ಎರಡೂ ಭಾಷೆಯ ಚಿತ್ರರಂಗಕ್ಕೆ ಸೂಕ್ತ ಆಗುವಂತಹ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲು ಪ್ಲ್ಯಾನ್ ಮಾಡಲಾಗಿದೆ. ರಶ್ಮಿಕಾ ಮಂದಣ್ಣ ಸೌತ್ ಇಂಡಿಯಾದಲ್ಲಿ ಈಗಾಗಲೇ ಎಲ್ಲರ ಮನೆಮಾತಾಗಿದ್ದಾರೆ. ರಶ್ಮಿಕಾ ಮಂದಣ್ಣ ಅವರನ್ನೇ ಫೈನಲ್ ಮಾಡುವ ಸಾಧ್ಯತೆ ಹೆಚ್ಚಿದೆ.
ಇದನ್ನು ಓದಿ : ನಟಿಸೋಕೆ ತುಂಬಾ ಇಷ್ಟ.. ಒಂದೇ ಒಂದು ಚಾನ್ಸ್ ಕೊಡಿ ಅಂದಿದ್ಯಾಕೆ ಜಗ್ಗೇಶ್: ಇಲ್ಲಿದೆ ವಿಡಿಯೋ..
ಪುಷ್ಪ ಸಕ್ಸಸ್ ಅಲೆಯಲ್ಲಿ ತೆಲುತ್ತಿರೋ ರಶ್ಮಿಕಾ
ಬಹುನಿರೀಕ್ಷಿತ ಪುಷ್ಪ ಸಿನಿಮಾ ರಿಲೀಸ್ ಆಗಿದೆ. ಆದರೆ ಹೇಳಿಕೊಳ್ಳುವ ಮಟ್ಟಕ್ಕೆ ಸಕ್ಸಸ್ ಆಗಿಲ್ಲ. ಆದರೆ ಕಲೆಕ್ಷನ್ ವಿಚಾರದಲ್ಲಿ ದಾಖಲೆ ಬರೆದಿದೆ. ಪುಷ್ಪ ಸಿನಿಮಾ ಎರಡೇ ದಿನಕ್ಕೆ ಈ ಚಿತ್ರ ವಿಶ್ವಾದ್ಯಂತ ಬರೋಬ್ಬರಿ 116 ಕೋಟಿ ಕಲೆಕ್ಷನ್ ಮಾಡಿದೆ. ರಶ್ಮಿಕಾ ಅವರ ಪಾತ್ರಕ್ಕೆ ಸಿನಿರಸಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೊದಲ ಬಾರಿಗೆ ಡಿ-ಗ್ಲಾಮರ್ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಶ್ರೀವಲ್ಲಿ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ, ಕನ್ನಡಿಗರು ಮಾತ್ರ ರಶ್ಮಿಕಾ ಮಂದಣ್ಣ ವಿರುದ್ಧ ಗರಂ ಆಗಿದ್ದಾರೆ. ಇದಲ್ಲದೇ, ಅಮಿತಾಭ್ ಬಚ್ಚನ್ ಜತೆ ‘ಗುಡ್ಬೈ’, ಸಿದ್ದಾರ್ಥ್ ಮೆಲ್ಹೋತ್ರಾ ಜೊತೆ ಮಿಷನ್ ಮಜ್ನು ಸಿನಿಮಾಗಳಲ್ಲಿ ರಶ್ಮಿಕಾ ನಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ