Rashmika Mandanna: ನಾನು ಗಂಡಾಗಿ ಹುಟ್ಟಬೇಕಿತ್ತು, ರಶ್ಮಿಕಾ ಹೀಗಂದಿದ್ದು ಕೇಳಿ ಫ್ಯಾನ್ಸ್ ಶಾಕ್! ಏನಾಯ್ತಂತೆ ಶ್ರೀವಲ್ಲಿಗೆ?

ಈ ಸಿನಿಮಾಗಾಗಿ ವಿಭಿನ್ನ ಕಾಸ್ಟ್ಯೂಮ್‍ಗಳನ್ನು ಹಾಕಿ ನಾನು ನಿಜಕ್ಕೂ ಸುಸ್ತಾಗಿದ್ದೇನೆ. ಹೀಗಾಗಿ ನಾನು ನನ್ನ ಮುಂದಿನ ಜನ್ಮದಲ್ಲಿ ಗಂಡಾಗಿ ಹುಟ್ಟಲು ಬಯಸುತ್ತೇನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊಡಗಿನ ಬೆಡಗಿ, ನ್ಯಾಷನಲ್ ಕ್ರಷ್ (National crush) ನಟಿ ರಶ್ಮಿಕಾ ಮಂದಣ್ಣ (Rashmika mandanna) ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ನಡುವೆ ರಶ್ಮಿಕಾ ಒಂದಲ್ಲಾ ಒಂದು ರೀತಿಯಲ್ಲಿ ಯಾವಗಾಲೂ ಸುದ್ದಿಯಲ್ಲಿರುತ್ತಾರೆ. ಸದ್ಯ ರಶ್ಮಿಕಾ ತಿರುಮಲಾ ಕಿಶೋರ್ (Tirumala Kishore) ನಿರ್ದೇಶನದ ’ಆಡವಾಳ್ಳು ಮೀಕು ಜೋಹಾರ್ಲು’ ಸಿನಿಮಾದ (Movie) ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ನಡುವೆ ಚಿತ್ರದ ಬಿಡುಗಡೆ ಸಮಾರಂಭದಲ್ಲಯೂ ಸಹ ಭಾಗಿಯಾಗಿದ್ದರು. ಇವರೊಂದಿಗೆ ತಿರುಮಲ ಕಿಶೋರ್, ಸುಧಾಕರ್ ಚೆರುಕುರಿ ,ಜಾನ್ಸಿ ಮತ್ತು ಸುಜಿತ್ ಸಾರಂಗ್ ಸಹ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದೇ ಮೊದಲ ಬಾರಿಗೆ ಶರ್ವಾನಂದ್ ಅವರ ಜೊತೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಇನ್ನು, ಸಮಾರಂಭದಲ್ಲಿ ಮಾತನಾಡಿದ ರಶ್ಮಿಕಾ, ’ಈ ಸಿನಿಮಾಗಾಗಿ ವಿಭಿನ್ನ ಕಾಸ್ಟ್ಯೂಮ್‍ಗಳನ್ನು ಹಾಕಿ ನಾನು ನಿಜಕ್ಕೂ ಸುಸ್ತಾಗಿದ್ದೇನೆ. ಹೀಗಾಗಿ ನಾನು ನನ್ನ ಮುಂದಿನ ಜನ್ಮದಲ್ಲಿ ಗಂಡಾಗಿ ಹುಟ್ಟಲು ಬಯಸುತ್ತೇನೆ’ ಎಂದು ಹೇಳಿದರು.

ಹೆಂಗಸರು ಶಿಳ್ಳೆ ಹೊಡೆಯುತ್ತಾರೆ:

ಪ್ರೇಕ್ಷಕರು ಕುಟುಂಬ ಸಮೇತರಾಗಿ ಚಿತ್ರವನ್ನು ವೀಕ್ಷಿಸಲು ಬಂದು, ಅಂತಹ ಪ್ರೇಕ್ಷಕರಿಂದ ಚಿತ್ರ ಮಂದಿರಗಳು ತುಂಬುವುದನ್ನು ನೋಡಬೇಕೆಂಬುವುದು ತನ್ನ ಆಸೆ. ಅಲ್ಲದೇ ಇದು ಕೇವಲ ಕೌಟುಂಬಿಕ ಮನರಂಜನಾ ಸಿನಿಮಾವಲ್ಲ, ಇದು ಯುವಜನರಲ್ಲೂ ಉತ್ಸಾಹ ತುಂಬುತ್ತದೆ. ರಶ್ಮಿಕಾ ಮತ್ತು ಖುಷ್ಬು ಅವರ ಬಾಂಧವ್ಯ ಒಂದು ವಿಭಿನ್ನ ಅನುಭವವನ್ನು ನೀಡುತ್ತದೆ.

ಇದರೊಂದಿಗೆ ಪ್ರೇಕ್ಷಕರು ವಿಭಿನ್ನ ಸಮಯಗಳಲ್ಲಿ, ವಿಭಿನ್ನ ಪಾತ್ರಗಳಿಗೆ ಕನೆಕ್ಟ್ ಆಗುತ್ತಾರೆ. ಜೊತೆಗೆ ಮುಖ್ಯವಾಗಿ ಮಧ್ಯಂತರ ದೃಶ್ಯಕ್ಕೆ ಹೆಂಗಸರು ಶಿಳ್ಳೆ ಹೊಡೆಯುತ್ತಾರೆ. ಇದು ಪ್ರೇಕ್ಷಕರಿಗೆ ಥಿಯೇಟರ್‌ನಲ್ಲಿ ಸುಂದರವಾದ ಅನುಭವವನ್ನು ನೀಡುತ್ತದೆ’ ಎಂದು ಆಡಾವಳ್ಳು ಮೀಕು ಜೋಹಾರ್ಲು ಸಿನಿಮಾದ ನಿರ್ದೇಶಕ ತಿರುಮಲಾ ಕಿಶೋರ್ ಹೇಳಿದರು.

ಇದನ್ನೂ ಓದಿ: Rashmika Mandanna: ಮದುವೆಯ ಬಗ್ಗೆ ನಟಿ ರಶ್ಮಿಕಾ ಹೇಳಿದ್ದೇನು ಗೊತ್ತೇ..? ವಿಜಯ್‌ ಜತೆ ಮದುವೆಯ ಬಗ್ಗೆ ಖಡಕ್ ಉತ್ತರ..!

ಅನವಶ್ಯಕ ಹೈಪ್ ಇಲ್ಲ:

ಚಿತ್ರದ ನಾಯಕ ಶರ್ವಾನಂದ್ ತನ್ನ ಪಾತ್ರಕ್ಕೆ ಅನಾವಶ್ಯಕ ಹೈಪ್ ನೀಡುವ ಅಂಶಗಳನ್ನು ಸೇರಿಸಲು ಇಷ್ಟಪಡುವುದಿಲ್ಲ. ಜೊತೆಗೆ ಟೈಟಲ್ ಕಾರ್ಡ್‍ನಲ್ಲಿ ಹೆಸರು ಹಾಕುವುದರಲ್ಲೂ ಶರ್ವಾ ಮಹಿಳೆಯರಿಗೆ ಮೊದಲ ಆದ್ಯತೆ ಕೊಟ್ಟಿದ್ದರು. ನೀವು ಹಿರಿಯ ನಟಿಯರ ಹೆಸರು ಮೊದಲಲ್ಲಿ ಮತ್ತು ಸಿನಿಮಾದಲ್ಲಿರುವ ಎಲ್ಲಾ ಪ್ರಮುಖ ಮಹಿಳೆಯರ ಹೆಸರಿನ ಬಳಿಕವಷ್ಟೇ ಶರ್ವಾನಂದ್ ಅವರ ಹೆಸರು ಬರುವುದನ್ನು ನೀವು ನೋಡಬಹುದು  ಎಂದು ತಿರುಮಲಾ ಕಿಶೋರ್ ಹೇಳಿದರು.

ರಶ್ಮಿಕಾ ಮಂದಣ್ಣ ಸಿನಿಮಾದ ಕುರಿತು ತುಂಬಾ ಸಂತೋಷವಾಗಿದೆ. ಅಲ್ಲದೇ ಬಿಡುಗಡೆಗಾಗಿ ಎದುರು ನೋಡಿತ್ತಿದ್ದೆನೆ. ’ಈ ಸಿನಿಮಾವನ್ನು ಎಲ್ಲಾ ವಯೋಮಾನದವರಿಗಾಗಿ ನಿರ್ಮಿಸಲಾಗಿದೆ. ಈ ಸಿನಿಮಾದಲ್ಲಿ ಹಲವಾರು ನೈಜ್ಯ ದೃಶ್ಯಗಳಿವೆ. ಬಹಳಷ್ಟು ಹಾಸ್ಯ ಭಾವನೆಗಳು ಮತ್ತು ವಾಸ್ತವ ಸನ್ನಿವೇಶಗಳಿವೆ. ನಾವು ಈ ಎಲ್ಲಾ ಅಂಶಗಳನ್ನು ಹೊಂದಿರುವುದರಿಂದ, ಕೌಟುಂಬ ವರ್ಗದ ಪ್ರೇಕ್ಷಕರು ಖಂಡಿತಾ ಅದನ್ನು ಕಂಡು ಆನಂದಿಸುತ್ತಾರೆ. ನಿಮ್ಮ ಕುಟುಂಬದವರನ್ನು ಚಿತ್ರಮಂದಿರಗಳಿಗೆ ಕರೆ ತನ್ನಿ’ ಎಂದು ರಶ್ಮಿಕಾ ಅವರು ಕೇಳಿಕೊಂಡರು.

ಮುಂದಿನ ಜನ್ಮದಲ್ಲಿ ಗಂಡಾಗಿ ಹುಟ್ಟಲು ಬಯಸುತ್ತೇನೆ..!
ನಾನು ನನ್ನ ಮುಂದಿನ ಜನ್ಮದಲ್ಲಿ ಗಂಡಾಗಿ ಹುಟ್ಟಲು ಬಯಸುತ್ತೇನೆ. ಪುಷ್ಪಾ ಮತ್ತು ಆಡವಾಳ್ಳು ಮೀಕು ಜೋಹಾರ್ಲುವಿನಂತಹ ಸಿನಿಮಾಗಳನ್ನು ಮಾಡಿದ ನಂತರ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಹೌದು, ಈ ಸಿನಿಮಾಗಳಿಗಾಗಿ ವಿಭಿನ್ನ ಕಾಸ್ಟ್ಯೂಮ್‍ಗಳನ್ನು ಹಾಕಿ ನಾನು ನಿಜಕ್ಕೂ ಸುಸ್ತಾಗಿದ್ದೇನೆ’ ಎಂದರು ರಶ್ಮಿಕಾ.

ಇದನ್ನೂ ಓದಿ: Rashmika Mandanna: ಮದ್ವೆ ಟ್ರೋಲ್ಸ್​ಗೆಲ್ಲ ಟಕ್ಕರ್​ ಕೊಟ್ರಾ ರಶ್ಮಿಕಾ? ಇದನ್ನು ಕುಡಿದು ಆರಾಮಾಗಿರಿ ಅಂದಿದ್ಯಾಕೆ ಕಿರಿಕ್​ ಬ್ಯೂಟಿ?

ಯಾರ ಜೊತೆಯೂ ಡೇಟಿಂಗ್ ಮಾಡುತ್ತಿಲ್ಲ: ರಶ್ಮಿಕಾ
ಇದೇ ಸಂದರ್ಭದಲ್ಲಿ ರಶ್ಮಿಕಾ ಅವರು, ತಮ್ಮ ಪ್ರೇಮ ಸಂಬಂಧದ ಕುರಿತ ವದಂತಿಗಳನ್ನು ತಳ್ಳಿ ಹಾಕಿ, ಅದಕ್ಕೆ ಸ್ಪಷ್ಟನೆ ನೀಡಿದರು. ತಾನು ಸದ್ಯಕ್ಕೆ ಯಾರ ಜೊತೆಯೂ ಡೇಟಿಂಗ್ ಮಾಡುತ್ತಿಲ್ಲ ಮತ್ತು ತನ್ನ ಮದುವೆಗೆ ಇನ್ನೂ ತುಂಬಾ ಸಮಯ ಬಾಕಿ ಇದೆ ಎಂದು ಹೇಳಿದರು.

ಆಡವಾಳ್ಳು ಮೀಕು ಜೋಹಾರ್ಲು, ಮದುವೆಯ ಕುರಿತ ಕಥಾಹಂದರವನ್ನು ಹೊಂದಿರುವ ಸಿನಿಮಾ. ಈ ಸಿನಿಮಾದಲ್ಲಿ, ಹಿರಿಯ ನಟಿಯರಾದ ಖುಷ್ಬು, ರಾಧಿಕ ಶರತ್ ಕುಮಾರ್, ಊರ್ವಶಿ ಅವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದ ತಾರಾಗಣದಲ್ಲಿ ವೆನ್ನಲಾ ಕಿಶೋರ್, ರವಿಶಂಕರ್, ಕಲ್ಯಾಣಿ ನಟರಾಜನ್ ಮುಂತಾದವರಿದ್ದಾರೆ. ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾ ಇಂದು ಬಿಡುಗಡೆಯಾಗಿದೆ.
Published by:shrikrishna bhat
First published: