Rashmika Mandanna: ರಶ್ಮಿಕಾಗೆ ಕ್ಯೂಟಿ ಅಂದ್ರು ಫ್ಯಾನ್ಸ್​.. ಕೆನ್ನೆ ಕೆಂಪಾಗಿ ಹಿರಿ ಹಿರಿ ಹಿಗ್ಗಿದ `ಕಿರಿಕ್​ ಬ್ಯೂಟಿ’!

ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಅವರು ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಪಾಪರಾಜಿಗಳ ಜೊತೆ ಮಾತನಾಡಿದ್ದಾರೆ. ಆಗ ಅವರು ರಶ್ಮಿಕಾ ಮಂದಣ್ಣಗೆ ಕ್ಯೂಟ್ ಎಂದಿದ್ದು, ರಶ್ಮಿಕಾ ಫುಲ್ ಖುಷಿಯಾಗಿದ್ದಾರೆ.

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ

  • Share this:
ರಶ್ಮಿಕಾ.. ರಶ್ಮಿಕಾ.. ರಶ್ಮಿಕಾ.. ಯಾರನ್ನೇ ಕೇಳಲಿ ರಶ್ಮಿಕಾ ಮಂದಣ್ಣ.. ಎಲ್ಲೇ ನೋಡಲಿ ರಶ್ಮಿಕಾ ಮಂದಣ್ಣ.. ಹೌದು, ಭಾರತೀಯ ಚಿತ್ರರಂಗ(Indian Film Industry)ದಲ್ಲಿ ಈಗ ರಶ್ಮಿಕಾ ಮಂದಣ್ಣ ಟಾಪ್(Top)​ನಲ್ಲಿದ್ದಾರೆ. ಕರ್ನಾಟಕ ಕ್ರಶ್ (Karnataka Crush), ಕಿರಿಕ್ ಬೆಡಗಿ, ಪ್ಯಾನ್​ ಇಂಡಿಯಾ (Pan India) ಸ್ಟಾರ್ ಹೀರೋಯಿನ್​.  ಒಂದಾ? ಎರಡಾ? ನಾನಾ ಬಿರುದುಗಳಿಂದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಅವರನ್ನು ಪ್ರೀತಿಯಿಂದ ಅವರ ಅಭಿಮಾನಿಗಳು ಕರಿತಾರೆ. ಇಲ್ಲ..ಇಲ್ಲ.. ಇವಾಗ ಇವರು ಕರುನಾಡ ಕ್ರಶ್​ ಅಲ್ಲ.. ನ್ಯಾಷನಲ್​ ಕ್ರಶ್ ​(National Crush) ಆಗಿದ್ದಾರೆ.ಈಗ ಭಾರತದ ಅತ್ಯಂತ ಜನಪ್ರಿಯ ತಾರೆಗಳಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸಹ ಒಬ್ಬರು ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ರಶ್ಮಿಕಾ ಸದ್ಯಕ್ಕೆ ಟಾಕ್​ ಆಫ್​ ದಿ ಟೌನ್ (Talk Of The Town)​ ಆಗಿದ್ದಾರೆ.

ಮುಂಬೈ ಏರ್​​ಪೋರ್ಟ್​ನಲ್ಲಿ ಕಾಣಿಸಿಕೊಂಡ ನಟಿ!

ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಅವರು ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಪಾಪರಾಜಿಗಳ ಜೊತೆ ಮಾತನಾಡಿದ್ದಾರೆ. ಆಗ ಅವರು ರಶ್ಮಿಕಾ ಮಂದಣ್ಣಗೆ ಕ್ಯೂಟ್ ಎಂದಿದ್ದು, ರಶ್ಮಿಕಾ ಫುಲ್ ಖುಷಿಯಾಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ಕ್ರಾಪ್ ಟಾಪ್, ಬೆಲ್ ಬಾಟಮ್ ಜೀನ್ಸ್, ಜಾಕೆಟ್ ಧರಿಸಿ ರಶ್ಮಿಕಾ ಮಿಂಚಿದ್ದಾರೆ. ಈ ವಿಡಿಯೋಗೆ ಮಿಶ್ರ ರೀತಿಯಲ್ಲಿ ಕಮೆಂಟ್​ಗಳು ಬರುತ್ತಿವೆ. ಕೆಲವರು ನಿಮ್ಮ ಕಣ್ಣುಗಳಿಗೆ ಏನಾಗಿದೆ ಈಕೆಯನ್ನು ಕ್ಯೂಟ್ ಅನ್ನುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ.



ಇದನ್ನೂ ಓದಿ: ಮದ್ವೆ ಟ್ರೋಲ್ಸ್​ಗೆಲ್ಲ ಟಕ್ಕರ್​ ಕೊಟ್ರಾ ರಶ್ಮಿಕಾ? ಇದನ್ನು ಕುಡಿದು ಆರಾಮಾಗಿರಿ ಅಂದಿದ್ಯಾಕೆ ಕಿರಿಕ್​ ಬ್ಯೂಟಿ?

ಟ್ರೋಲ್ಸ್​​ಗೆಲ್ಲ ತಲೆ ಕೆಡಿಸಿಕೊಳ್ಳುತ್ತಿಲ್ವಂತೆ ರಶ್ಮಿಕಾ!

ಹೌದು, ಇವರ ಮತ್ತು ದೇವರಕೊಂಡ ಮದುವೆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್​ ಆಗುತ್ತಿದೆ. ಇದೇ ಸಮಯದಲ್ಲಿ ರಶ್ಮಿಕಾ ಮಂದಣ್ಣ ರೀಲ್ಸ್​ವೊಂದನ್ನು ಮಾಡಿದ್ದಾರೆ. ನನ್ನ ಖುಷಿಯ ಸೀಕ್ರೆಟ್​ ಇಲ್ಲಿದೆ ನೋಡಿ ಅಂತ ಬರೆದುಕೊಂಡು ಆ ರೀಲ್ಸ್​ ಪೋಸ್ಟ್​ ಮಾಡಿದ್ದಾರೆ. ನೀರನ್ನು ಕುಡಿದು ನನ್ನ ಕೆಲಸವನ್ನು ಮಾತ್ರ ನೋಡಿಕೋ ಎಂದು ಸಾಹಿತ್ಯವಿರುವ ಹಾಡಿಗೆ ರಶ್ಮಿಕಾ ರೀಲ್ಸ್ ಮಾಡಿದ್ದು, ಈ ವಿಡಿಯೋ ಅವರ ವೈಯಕ್ತಿಕ ಜೀವನ ಬಗ್ಗೆ ಚರ್ಚೆ ಮಾಡುತ್ತಿರುವವರಿಗೆ ಪರೋಕ್ಷವಾಗಿ ಠಕ್ಕರ್​ ಕೊಟ್ಟಂತೆ ಇದೆ. ಈ ವಿಡಿಯೋ ಕೂಡ ಸೋಷಿಯಲ್​ ಮೀಡಿಯಾದಲ್ಲಿ ಟ್ರೋಲ್​ ಆಗುತ್ತಿದೆ.

ಮಾರ್ಚ್​ 4ಕ್ಕೆ ‘ಆಡವಾಳ್ಳು ಮೀಕು ಜೋಹಾರ್ಲು’ ರಿಲೀಸ್​

ರಶ್ಮಿಕಾ ಮಂದಣ್ಣ ಸದ್ಯ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ.  ‘ಆಡವಾಳ್ಳು ಮೀಕು ಜೋಹಾರ್ಲು’ ಸಿನಿಮಾ ಮಾರ್ಚ್ 4ರಂದು ರಿಲೀಸ್ ಆಗುತ್ತಿದೆ. ಅಲ್ಲು ಅರ್ಜುನ್ ಜೊತೆಗೆ 'ಪುಷ್ಪ 2' ಚಿತ್ರದಲ್ಲಿ ರಶ್ಮಿಕಾ ಬಣ್ಣ ಹಚ್ಚಿದ್ದಾರೆ. ಸಿದ್ದಾರ್ಥ್ ಮಲ್ಹೋತ್ರ ಜೊತೆಗೆ 'ಮಿಷನ್ ಮಜ್ನು', ಅಮಿತಾಭ್ ಬಚ್ಚನ್ ಜೊತೆಗೆ 'ಗುಡ್‌ಬೈ' ಚಿತ್ರದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ರಶ್ಮಿಕಾಳ ಹಿಂದಿನ 5 ಸಿನಿಮಾಗಳ ಕಲೆಕ್ಷನ್ ಎಷ್ಟು ಗೊತ್ತಾ? ಕೋಟಿಗಳಿಗೆ ಬೆಲೆನೇ ಇಲ್ವಾ ಗುರೂ..!

2016 ಕಿರಿಕ್ ಪಾರ್ಟಿ ಸಿನಿಮಾದ ನಂತರ ರಶ್ಮಿಕಾ ಮುಟ್ಟಿದ್ದೆಲ್ಲಾ ಚಿನ್ನ(Gold)ವಾಗಿದೆ. ದೇಶದ ಮೂಲೆ ಮೂಲೆಯಲ್ಲೂ ಅಭಿಮಾನಿ(Fans)ಗಳ ಹೊಂದಿರುವ ರಶ್ಮಿಕಾಗೆ ಹುಟ್ಟುರು ಕರುನಾಡಲ್ಲಿ ಹೊಗಳಿಕೆಗಿನ್ನ ತೆಗಳಿಕೆ ಜಾಸ್ತಿ.‌‌‌ ಅದರಲ್ಲೂ ಟ್ರೋಲ್ (Troll) ಪೇಜ್​ಗಳಿಗೆ ರಶ್ಮಿಕಾ ಮಂದಣ್ಣ ರಂಜಾನ್​ ಬಿರಿಯಾನಿ (Biriyani) ಆಗಿ ಬಿಟ್ಟಿದ್ದಾರೆ. ಅವರು ಏನೇ ಮಾಡಿದರೂ ಕೂಡ ಟ್ರೋಲಿಗರ ಕಣ್ಣಿಗೆ ಗುರಿಯಾಗುತ್ತಾರೆ
Published by:Vasudeva M
First published: