ದೀಪಾವಳಿ ಹಬ್ಬದಂದು ಹೊಸ ಸಿನಿಮಾಗೆ ಸಹಿ ಹಾಕಿದ ಸಂಚಾರಿ ವಿಜಯ್

Sanchari Vijay: ಸಂಚಾರಿ ವಿಜಯ್ ಅವರ ಪಾತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು. ಹೊಸ ಅವತಾರದಲ್ಲಿ ಅವರನ್ನ ಕಾಣಲು ಸಿನಿ ಪ್ರೇಮಿಗಳು ಕಾಯಿತ್ತಿದ್ದಾರೆ. ಹೀಗಿರುವಾಗಲೇ ‘ಅವಸ್ಥಾಂತರ’ ಎಂಬ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ರಾಷ್ಟ್ರ ಪ್ರಶಸ್ತಿ ವಿಜೇತ ನಟ.

ಅವಸ್ಥಾಂತರ

ಅವಸ್ಥಾಂತರ

  • Share this:
ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಸ್ಯಾಂಡಲ್ ವುಡ್​ನ ಬ್ಯುಸಿಯೆಸ್ಟ್ ನಟ. ನಾಯಕ ನಟನಾಗಿ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡುತ್ತಾ ಇದ್ದಾರೆ. ವಿಭಿನ್ನ ಪಾತ್ರ ಪೋಷಣೆಯತ್ತ ಗಮನ ಕೊಡುವ ಸಂಚಾರಿ ವಿಜಯ್ ಬೇರೆ ಬೇರೆ ಪಾತ್ರಗಳ ಮೂಲಕ ರಂಜಿಸುತ್ತಿದ್ದಾರೆ.

ಈಗ ಆಕ್ಟ್ 1978 ಎಂಬ ಸಿನಿಮಾ ರಿಲೀಸ್ ಗೆ ಸಿದ್ದವಾಗಿದೆ. ಹರಿವು ಖ್ಯಾತಿಯ ಮಂಸೋರೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ನವೆಂಬರ್ 20ರಂದು ತೆರೆಗೆ ಬರಲು ಸನ್ನದ್ಧವಾಗಿದೆ‌‌. ಕೊರೋನಾ ಲಾಕ್ ಡೌನ್ ನಂತರ ರಿಲೀಸ್ ಆಗಲಿರೋ ಮೊದಲ ಹೊಸ ಸಿನಿಮಾ ಎಂಬುದು ಆಕ್ಟ್  1978 ಚಿತ್ರದ ಸ್ಪೆಷಾಲಿಟಿ.

ಸಂಚಾರಿ ವಿಜಯ್ ಅವರ ಪಾತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು. ಹೊಸ ಅವತಾರದಲ್ಲಿ ಅವರನ್ನ ಕಾಣಲು ಸಿನಿ ಪ್ರೇಮಿಗಳು ಕಾಯಿತ್ತಿದ್ದಾರೆ. ಹೀಗಿರುವಾಗಲೇ ‘ಅವಸ್ಥಾಂತರ’ ಎಂಬ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ರಾಷ್ಟ್ರ ಪ್ರಶಸ್ತಿ ವಿಜೇತ ನಟ.

ಅವಸ್ಥಾಂತರ


ಅವಸ್ಥಾಂತರ ಚಿತ್ರಕ್ಕೆ ಜಿ.ದೀಪಕ್ ಕುಮಾರ್ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ನಿರ್ದೇಶಕರಿಗೆ ಮೊದಲ ಸಿನಿಮಾ. ಆದರೆ ಮಠ ಗುರುಪ್ರಸಾದ್ ಗರಡಿಯಲ್ಲಿ ನಿರ್ದೇಶನದ ಎಬಿಸಿಡಿ ಪಾಠ ಕಲಿತಿರೋದು ಅವರ ಉತ್ಸಾಹವನ್ನ ಹೆಚ್ಚಿಸಿದೆ.

ಇನ್ನು ಇಬ್ಬರು ನಾಯಕಿಯರು ಈ ಚಿತ್ರದಲ್ಲಿ ಸಂಚಾರಿ ವಿಜಯ್ ಗೆ ಸಾಥ್ ಕೊಡಲಿದ್ದು, ಪುಟ್ ಗೌರಿ ಖ್ಯಾತಿಯ ರಂಜನಿ ರಾಘವನ್ ಒಬ್ಬರು ನಾಯಕಿಯಾದರೆ, ಮತ್ತೊಬ್ಬರು ದಿಶಾ ಕೃಷ್ಣಯ್ಯ. ಒಟ್ಟಾರೆ ಸಂಚಾರಿ ವಿಜಯ್ ಲಾಕ್ ಡೌನ್ ನಂತರ ಒಪ್ಪಿಕೊಂಡಿರೋ ಸಿನಿಮಾ ಇದಾಗಿದ್ದು, ದೀಪಾವಳಿ ಪ್ರಯುಕ್ತ ಪೋಸ್ಟರ್ ರಿಲೀಸ್ ಮಾಡಿ ಅನೌನ್ಸ್ ಮಾಡಲಾಗಿದೆ.
First published: