ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಪುನೀತ್ ಸಿಹಿ ಸುದ್ದಿ!; ‘ನಟಸಾರ್ವಭೌಮ’ನ ಕಡೆಯಿಂದ ಬರಲಿದೆ ಆಡಿಯೋ

ಚಿತ್ರದಲ್ಲಿ ನಾಲ್ಕು ಹಾಡುಗಳು ಇರಲಿವೆಯಂತೆ. ಒಂದು ಹಾಡಿಗೆ ನಿರ್ದೇಶಕ ಪವನ್​ ಒಡೆಯರ್​ ಅವರೇ ಸಾಹಿತ್ಯ ಬರೆದಿದ್ದಾರೆ. ಉಳಿದಂತೆ, ಯೋಗರಾಜ್​ ಭಟ್​, ಜಯಂತ್​ ಕಾಯ್ಕಿಣಿ ಹಾಗೂ ಕವಿರಾಜ್​ ತಲಾ ಒಂದು ಹಾಡಿಗೆ ಸಾಹಿತ್ಯ ನೀಡಿದ್ದಾರೆ.

Rajesh Duggumane | news18
Updated:December 4, 2018, 12:01 PM IST
ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಪುನೀತ್ ಸಿಹಿ ಸುದ್ದಿ!; ‘ನಟಸಾರ್ವಭೌಮ’ನ ಕಡೆಯಿಂದ ಬರಲಿದೆ ಆಡಿಯೋ
ಪುನೀತ್
  • News18
  • Last Updated: December 4, 2018, 12:01 PM IST
  • Share this:
ಪುನೀತ್​ ರಾಜ್​ಕುಮಾರ್​ ಅಭಿನಯದ ‘ನಟಸಾರ್ವಭೌಮ’ ಸಿನಿಮಾದ ಶೂಟಿಂಗ್ ಮುಗಿಸಿಕೊಂಡಿರುವ ಚಿತ್ರತಂಡ, ಪೋಸ್ಟ್​​ ಪ್ರೊಡಕ್ಷನ್​ ಕೆಲಸಗಳಿಗೆ ಚಾಲನೆ ನೀಡಿದೆ. ಗಣರಾಜ್ಯೋತ್ಸವದ ನಿಮಿತ್ತ ಈ ಸಿನಿಮಾ ಜನವರಿ 23ರಂದು ತೆರೆಕಾಣುವ ಸಾಧ್ಯತೆ ಇದೆಯಂತೆ. ಅದಕ್ಕೂ ಮೊದಲು ಆಡಿಯೋ ರಿಲೀಸ್​ ಮಾಡಿಕೊಳ್ಳಲು ಚಿತ್ರತಂಡ ನಿರ್ಧರಿಸಿದೆ.

ಚಿತ್ರದ ಟೀಸರ್​ ಮೂಲಕ ಗಮನ ಸೆಳೆದಿದ್ದ ‘ನಟಸಾರ್ವಭೌಮ’, ಅಭಿಮಾನಿಗಳಿಗೆ ಹೊಸ ಆಫರ್​ ಒಂದನ್ನು ನೀಡಿತ್ತು. ಟೀಸರ್​ ಮಾದರಿಯಲ್ಲೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಬೇಕು. ಅದರಲ್ಲಿ ಆಯ್ಕೆ ಆದವರಿಗೆ ಆಡಿಯೋ ರಿಲೀಸ್​ ಕಾರ್ಯಕ್ರಮದಲ್ಲಿ ಪುನೀತ್​ ಜೊತೆ ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡುವುದಾಗಿ ಚಿತ್ರತಂಡ ಘೋಷಿಸಿತ್ತು. ಈಗ ಕೇಳಿ ಬರುತ್ತಿರುವ ಮಾತೇನೆಂದರೆ, ಡಿ.23ರಂದು ಚಿತ್ರತಂಡ ಧ್ವನಿ ಸುರುಳಿ ಬಿಡುಗಡೆ ಮಾಡಿಕೊಳ್ಳಲು ನಿರ್ಧರಿಸಿದೆ. ಈ ಮೂಲಕ ಅಭಿಮಾನಿಗಳಿಗೆ ಹೊಸ ವರ್ಷದ ಗಿಫ್ಟ್​ ನೀಡಲು ‘ನಟಸಾರ್ವಭೌಮ’ ನಿರ್ಧರಿಸಿದ್ದಾನೆ.

ಇದನ್ನೂ ಓದಿ: ‘ಪವರ್​ ಸ್ಟಾರ್​’ ಪುನೀತ್ ಜೊತೆ ವೇದಿಕೆ ಹಂಚಿಕೊಳ್ಳಲು ನಿಮಗೂ ಸಿಗಬಹುದು ಅವಕಾಶ! ; ಅದಕ್ಕಾಗಿ ನೀವು ಮಾಡಬೇಕಾಗಿದ್ದು ಇಷ್ಟೇ

ಚಿತ್ರದಲ್ಲಿ ನಾಲ್ಕು ಹಾಡುಗಳು ಇರಲಿವೆಯಂತೆ. ಒಂದು ಹಾಡಿಗೆ ನಿರ್ದೇಶಕ ಪವನ್​ ಒಡೆಯರ್​ ಅವರೇ ಸಾಹಿತ್ಯ ಬರೆದಿದ್ದಾರೆ. ಉಳಿದಂತೆ, ಯೋಗರಾಜ್​ ಭಟ್​, ಜಯಂತ್​ ಕಾಯ್ಕಿಣಿ ಹಾಗೂ ಕವಿರಾಜ್​ ತಲಾ ಒಂದು ಹಾಡಿಗೆ ಸಾಹಿತ್ಯ ನೀಡಿದ್ದಾರೆ. ಚಿತ್ರದಲ್ಲಿ ಪುನೀತ್​ಗೆ ಜೊತೆಯಾಗಿ ರಚಿತಾ ರಾಮ್ ಹಾಗೂ ಅನುಪಮಾ ಪರಮೇಶ್ವರನ್​ ಕಾಣಿಸಿಕೊಂಡಿದ್ದಾರೆ. ರವಿಶಂಕರ್​ ಹಾಗೂ ಚಿಕ್ಕಣ್ಣ ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಲಹರಿ ಸಂಸ್ಥೆ ಚಿತ್ರದ ಆಡಿಯೋ ಹಕ್ಕನ್ನು ಪಡೆದುಕೊಂಡಿದೆ. ಪವನ್​ ಒಡೆಯರ್​ ನಿರ್ದೇಶನ ಇರುವ ಈ ಚಿತ್ರಕ್ಕೆ, ರಾಕ್​ಲೈನ್​ ವೆಂಕಟೇಶ್​ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ:  ಪುನೀತ್​ಗೆ ಸಿಹಿ ಮುತ್ತಿಟ್ಟ ಪುಟ್ಟ ಅಭಿಮಾನಿ ಯಾರು ಗೊತ್ತಾ..?

First published:December 4, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading