ಕೊನೆ ಹಂತದ ಚಿತ್ರೀಕರಣದಲ್ಲಿ ನಟಸಾರ್ವಭೌಮ ತಂಡ: ದೀಪಾವಳಿಗೆ ಚಿತ್ರ ತೆರೆ ಕಾಣುತ್ತಾ..?

news18
Updated:September 4, 2018, 5:55 PM IST
ಕೊನೆ ಹಂತದ ಚಿತ್ರೀಕರಣದಲ್ಲಿ ನಟಸಾರ್ವಭೌಮ ತಂಡ: ದೀಪಾವಳಿಗೆ ಚಿತ್ರ ತೆರೆ ಕಾಣುತ್ತಾ..?
news18
Updated: September 4, 2018, 5:55 PM IST
ರಕ್ಷಾ ಜಾಸ್ಮೀನ್​, ನ್ಯೂಸ್ 18 ಕನ್ನಡ

'ನಟಸಾರ್ವಭೌಮ' ಪವನ್ ಒಡೆಯಾರ್ ನಿರ್ದೇಶನದಲ್ಲಿ ಬರುತ್ತಿರುವ ಸಿನಿಮಾ. ಈ ಚಿತ್ರ ತನ್ನ ಫಸ್ಟ್ ಲುಕ್, ಟೀಸರ್ ಮೂಲಕ ಸಖತ್ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ. ಹೆಚ್ಚಾಗಿ ಪುನೀತ್ ಅಭಿನಯದ ಸಿನಿಮಾ ಆಗಿರುವುದರಿಂದ ಅಪ್ಪು ಅಭಿಮಾನಿಗಳಿಗೆ ಸಿನಿಮಾ ಯಾವಾಗಪ್ಪ ನೋಡುವುದು ಅಂತ ದಿನ ಕಳೆಯುತ್ತಿದ್ದಾರೆ. ಹೀಗಿರಬೇಕಾದರೇನೆ 'ನಟಸಾರ್ವಭೌಮ'ನ ಚಿತ್ರೀಕರಣ ಕೂಡ ಕೊನೆ ಹಂತಕ್ಕೆ ತಲುಪಿದ್ದು, ಹಾಡಿನ ಶೂಟಿಂಗ್ ಜೊತೆಗೆ ಸಣ್ಣ ಪುಟ್ಟ ಕೆಲಸಗಳಷ್ಟೆ ಬಾಕಿ ಇವೆ.

ಟಾಕಿ ಪೋಷನ್ಸ್ ಮುಗಿಸಿರುವ ಚಿತ್ರತಂಡ ಸದ್ಯ ಕೊಂಚ ಬ್ರೇಕ್ ಪಡೆದುಕೊಂಡಿದೆ. ಹಾಗೇ ಇದೇ ತಿಂಗಳ 16 ಕೊಲ್ಕತ್ತಾ ವಿಮಾನ ಹತ್ತಲಿರೋ ತಂಡ ಅಲ್ಲಿ ಹಾಡಿನ ಚಿತ್ರೀಕರಣ ನಡೆಸಲಿದೆ. ನಟಿ ಅನುಪಮ ಪರಮೇಶ್ವರ್ ಜೊತೆಗಿನ ಲವ್ ಸೀನ್ಸ್ ಒಂದಷ್ಟು ಬಾಕಿ ಇದ್ದು, ಇದರೊಂದಿಗೆ ಸಿನಿಮಾದ ಮಾಂಟೇಜ್ ಹಾಡಿನ ಚಿತ್ರೀಕರಣ ನಡೆಯಲಿದೆ.

ರಚಿತಾ ರಾಮ್ ಜೊತೆಗೊಂದು ಡ್ಯುಯೆಟ್ ಹಾಡು, ಅಪ್ಪು ಅವರನ್ನು ಪರಿಚಿಸುವ ಹಾಡಿನ ಚಿತ್ರೀಕರಣ ಸಹ  ಇನ್ನೂ ಆಗಿಲ್ಲ. ಇದರ ಶೂಟಿಂಗ್ ಕೂಡ ಆದಷ್ಟು ಬೇಗ ನಡೆಯಲಿದೆ. ಬೆಂಗಳೂರು ಸುತ್ತಮುತ್ತಲೇ ಇದರ ಚಿತ್ರೀಕರಣ ನಡೆಯಲಿದೆ. ಇವೆಲ್ಲ ಮುಗಿದ ಮೇಲೆ ಕುಂಬಳಕಾಯಿ ಒಡೆಯೊದೊಂದೆ ಬಾಕಿ.

ಅಲ್ಲದೇ ಸಿಜಿ ಕೆಲಸಗಳು ಮತ್ತು ಡಬ್ಬಿಂಗ್ ಈಗಾಗಲೇ ಆರಂಭವಾಗಿದ್ದು, ಸೆ.16ರ ಒಳಗಾಗಿ ಇವೆಲ್ಲವೂ ಕಂಪ್ಲೀಟ್ ಆಗಲಿದೆ. ಹಾಗೆ ಅಂದುಕೊಂಡಂತೆ ಎಲ್ಲ ಕೆಲಸಗಳು ನಡೆದರೆ, ಮೊದಲೇ ಪ್ರಕಟಿಸಿದಂತೆ ದೀಪಗಳ ಹಬ್ಬ ದೀಪಾವಳಿಗೆ 'ನಟಸಾರ್ವಭೌಮ'ನ ದರ್ಶನ ಅಭಿಮಾನಿಗಳಿಗೆ ಸಿಗೋದು ಖಚಿತ. ಅಪ್ಪು ಅಭಿಮಾನಿಗಳೂ ಕೂಡ ಇದನ್ನೇ ನಿರೀಕ್ಷಿಸುತ್ತಿದ್ದು, ದೀಪಾವಳಿ ಹಬ್ಬಕ್ಕೆ, ಚಿತ್ರ ತಂಡದಿಂದ ಸಿಹಿ ಸುದ್ದಿ ಸಿಗಲಪ್ಪಾ ಎನ್ನುತ್ತಿದ್ದಾರೆ.

 
First published:September 4, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ