'ನಟಸಾರ್ವಭೌಮ' ಅಪ್ಪು ಆರ್ಭಟ: 'ಕೆ.ಜಿ.ಎಫ್' ದಾಖಲೆ ಧೂಳೀಪಟ!

ಚಿತ್ರಕ್ಕೆ ಭರ್ಜರಿ ಒಪನಿಂಗ್ ಸಿಕ್ಕಿದ್ದು, 'ನಟಸಾರ್ವಭೌಮ'ನ ಆರ್ಭಟ ಈಗಾಗಲೇ ಅಭಿಮಾನಿಗಳು ಮನಗೆದ್ದಿದೆ. ಪುನೀತ್ ರಾಜ್​ ಕುಮಾರ್​ ಅವರ ಹೊಸ ಅವತಾರ, ಕಣ್ಣಾಟಗಳು ಪವರ್​ ಸ್ಟಾರ್​ ಫ್ಯಾನ್ಸ್​ಗಳನ್ನು ಮೋಡಿ ಮಾಡುವಲ್ಲಿ ಯಶಸ್ವಿಯಾಗಿದೆ.

zahir | news18
Updated:February 7, 2019, 12:12 PM IST
'ನಟಸಾರ್ವಭೌಮ' ಅಪ್ಪು ಆರ್ಭಟ: 'ಕೆ.ಜಿ.ಎಫ್' ದಾಖಲೆ ಧೂಳೀಪಟ!
@ನಟಸಾರ್ವಭೌಮ
zahir | news18
Updated: February 7, 2019, 12:12 PM IST
ಪವರ್​ ಸ್ಟಾರ್ ಪುನೀತ್​ ರಾಜ್​​ಕುಮಾರ್​​ ಅಭಿನಯದ 'ನಟಸಾರ್ವಭೌಮ' ಸಿನಿಮಾ ಮೊದಲ ದಿನವೇ ಅಬ್ಬರಿಸಿದೆ. ಮಧ್ಯರಾತ್ರಿಯಿಂದಲೇ ಪ್ರದರ್ಶನ ಆರಂಭಿಸಿದ್ದ 'ನಟಸಾರ್ವಭೌಮ'ನ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. 'ರಾಜಕುಮಾರ' ಚಿತ್ರದ ಮೂಲಕ ಒಂದಷ್ಟು ದಾಖಲೆಗಳನ್ನು ಸೃಷ್ಟಿಸಿದ್ದ ಅಪ್ಪು ಈ ಬಾರಿ ಕೂಡ ಹೊಸ ಇತಿಹಾಸ ಬರೆದು ಬಾಕ್ಸಾಫೀಸ್​ ಬೇಟೆ ಆರಂಭಿಸಿದ್ದಾರೆ.

ಅದು ಕೂಡ ಕನ್ನಡ ಚಿತ್ರರಂಗದ ಹೊಸ ಹೆಗ್ಗಳಿಕೆ ಕಾರಣವಾಗಿದ್ದ 'ಕೆ.ಜಿ.ಎಫ್'​ ಸಿನಿಮಾ ದಾಖಲೆ ಮುರಿಯುವ ಮೂಲಕ ಎಂಬುದು ವಿಶೇಷ. ದೇಶ ವಿದೇಶಗಳಲ್ಲಿ ರಿಲೀಸ್ ಆಗಿದ್ದ 'ಕೆ.ಜಿ.ಎಫ್' ಅನೇಕ ದಾಖಲೆಗಳನ್ನು ನಿರ್ಮಿಸಿತ್ತು. ಅದರಲ್ಲೂ ಬೆಂಗಳೂರು ಒಂದರಲ್ಲೇ ಮೊದಲ ದಿನ ಬರೋಬ್ಬರಿ 525 ಪ್ರದರ್ಶನ ತೆರೆಕಂಡು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆಯಿತು. ಆದರೆ ಇದೀಗ ಅಪ್ಪು ಅಭಿಮಾನಿಗಳು ಈ ದಾಖಲೆಯನ್ನು ಇತಿಹಾಸ ಪುಟಕ್ಕೆ ಸರಿಸಿದ್ದಾರೆ. 'ನಟಸಾರ್ವಭೌಮ' ಬೆಂಗಳೂರಿನಲ್ಲಿ ಬರೋಬ್ಬರಿ 550 ಪ್ರದರ್ಶನ ಕಾಣಲಿದೆ. ಗುರುವಾರ ತೆರೆಕಾಣಬೇಕಿದ್ದ ಚಿತ್ರವನ್ನು ಅಪ್ಪು ಫ್ಯಾನ್ಸ್​ ಬುಧವಾರ ರಾತ್ರಿಯೇ ಬಿಡುಗಡೆ ಮಾಡಿಸಿದ್ದಾರೆ.

ಚಿತ್ರಕ್ಕೆ ಭರ್ಜರಿ ಒಪನಿಂಗ್ ಸಿಕ್ಕಿದ್ದು, 'ನಟಸಾರ್ವಭೌಮ'ನ ಆರ್ಭಟ ಈಗಾಗಲೇ ಅಭಿಮಾನಿಗಳು ಮನಗೆದ್ದಿದೆ. ಪುನೀತ್​ ರಾಜ್​​ಕುಮಾರ್​​ ಅವರ ಹೊಸ ಅವತಾರ, ಕಣ್ಣಾಟಗಳು ಪವರ್​ ಸ್ಟಾರ್​ ಫ್ಯಾನ್ಸ್​ಗಳನ್ನು ಮೋಡಿ ಮಾಡುವಲ್ಲಿ ಯಶಸ್ವಿಯಾಗಿದೆ. ಅದರಂತೆ ಅಭಿಮಾನಿಗಳ ಒತ್ತಾಯದ ಮೇರೆಗೆ ಮೊದಲ ದಿನದ ಪ್ರದರ್ಶನ 550 ಅನ್ನು ದಾಟಲಿದೆ ಎಂದೂ ಕೂಡ ಹೇಳಲಾಗುತ್ತಿದೆ.

ಸಿನಿಮಾದಲ್ಲಿ ಪುನೀತ್​ ರಾಜ್​​ಕುಮಾರ್​​ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇವರಿಗೆ  ಜೋಡಿಯಾಗಿ ರಚಿತಾ ರಾಮ್ ಮತ್ತು ಅನುಪಮ ಪರಮೇಶ್ವರನ್ ಅಭಿನಯಿಸಿದ್ದಾರೆ. ಇನ್ನು, ರಣವಿಕ್ರಮ ಸಿನಿಮಾದ ನಂತರ ಪವನ್​ ಒಡೆಯರ್​ ಅಪ್ಪುಗೆ ಮತ್ತೆ ಆ್ಯಕ್ಷನ್​, ಕಟ್​ ಹೇಳಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಬ್ಯಾಟರಿ ಖಾಲಿ ಎಂದು ಹೇಳುವಂತಿಲ್ಲ: ಬರುತ್ತಿದೆ 18 ಸಾವಿರ mAh ಸಾಮರ್ಥ್ಯದ ಸ್ಮಾರ್ಟ್​ಫೋನ್

ಮೊದಲ ದಿನದಿಂದಲೇ ಹೊಸ ದಾಖಲೆ ಬರೆದಿರುವ ಪುನೀತ್​ ರಾಜ್​​ಕುಮಾರ್​ ಅವರ ಈ ಚಿತ್ರವು ಕೆ.ಜಿ.ಎಫ್​ ಚಿತ್ರದ ಅತಿ ಹೆಚ್ಚು ಗಳಿಕೆ, ಅಂತರಾಷ್ಟ್ರೀಯ ಮನ್ನಣೆ ಸೇರಿದಂತೆ ಹಲವು ದಾಖಲೆಯನ್ನು ಬದಿಗೊತ್ತಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಕ್ರಿಕೆಟ್​ ಜಗತ್ತಿನ ಅತ್ಯಂತ ಹೀನಾಯ ಪಂದ್ಯ: ಆಸ್ಟ್ರೇಲಿಯಾ ತಂಡ ಕೇವಲ 10 ರನ್​ಗೆ ಆಲೌಟ್!
Loading...

First published:February 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...