'ನಟಸಾರ್ವಭೌಮ'ನ ಅಬ್ಬರ ಶುರುವಾಯ್ತು; ಮೊದಲ ಪ್ರದರ್ಶನವೇ ಹೌಸ್​ಫುಲ್​!

ಮೊದಲ ದಿನ 100ಕ್ಕೂ ಹೆಚ್ಚು ಶೋಗಳಲ್ಲಿ 'ನಟಸಾರ್ವಭೌಮ' ಅಬ್ಬರಿಸಲಿದ್ದಾನೆ. ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ಗೆ ಜೋಡಿಯಾಗಿ ರಚಿತಾ ರಾಮ್​ ಅಭಿನಯಿಸಿದ್ದಾರೆ. ರಣವಿಕ್ರಮ ಸಿನಿಮಾದ ನಂತರ ಪವನ್​ ಒಡೆಯರ್​ ಅಪ್ಪುಗೆ ಮತ್ತೆ ಆ್ಯಕ್ಷನ್​, ಕಟ್​ ಹೇಳಿರುವುದರಿಂದ ನಿರೀಕ್ಷೆಗಳು ಕೂಡ ಹೆಚ್ಚೇ ಇವೆ.

sushma chakre | news18
Updated:February 6, 2019, 10:28 PM IST
'ನಟಸಾರ್ವಭೌಮ'ನ ಅಬ್ಬರ ಶುರುವಾಯ್ತು; ಮೊದಲ ಪ್ರದರ್ಶನವೇ ಹೌಸ್​ಫುಲ್​!
ನಟಸಾರ್ವಭೌಮ
sushma chakre | news18
Updated: February 6, 2019, 10:28 PM IST
ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ 'ನಟಸಾರ್ವಭೌಮ' ವೀಕ್ಷಿಸಲು ಅಭಿಮಾನಿಗಳು ಸಾಕಷ್ಟು ದಿನಗಳಿಂದ ಕಾಯುತ್ತಿದ್ದರು. ಟ್ರೈಲರ್​ನಿಂದ ಇನ್ನಷ್ಟು ಕುತೂಹಲ ಸೃಷ್ಟಿಸಿದ್ದ ನಟಸಾರ್ವಭೌಮನನ್ನು ಕಣ್ತುಂಬಿಕೊಳ್ಳಲು ಹೆಚ್ಚು ಹೊತ್ತು ಕಾಯಬೇಕಾಗಿಲ್ಲ. ಯಾಕೆಂದರೆ,  ಈಗಾಗಲೇ ಸಿನಿಮಾದ ಮೊದಲ ಶೋ ಶುರುವಾಗಿದೆ!

ಶುಕ್ರವಾರದ ಬದಲು ಗುರುವಾರವೇ ಅಂದರೆ ನಾಳೆ 'ನಟಸಾರ್ವಭೌಮ' ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಅದರಂತೆ, ಅಪ್ಪು ಅಭಿಮಾನಿಗಳು ಇಂದು ಮಧ್ಯರಾತ್ರಿ 12 ಗಂಟೆಗೆ  ಮೊದಲ ಶೋ ಹಾಕಬೇಕೆಂದು ಒತ್ತಾಯ ಮಾಡಿದ್ದರಿಂದ ಊರ್ವಶಿ ಚಿತ್ರಮಂದಿರದಲ್ಲಿ ರಾತ್ರಿ 12 ಗಂಟೆಗೆ ಅಭಿಮಾನಿಗಳಿಗಾಗಿ ಸ್ಪೆಷಲ್  ಸಿನಿಮಾ ಪ್ರದರ್ಶನ ಏರ್ಪಡಿಸಲಾಗಿತ್ತು.ನಟಸಾರ್ವಭೌಮ ಚಿತ್ರ ವೀಕ್ಷಣೆಗಾಗಿ ರಜೆ ಕೋರಿದ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್..!

ಆದರೆ, ಅಪ್ಪು ಸಿನಿಮಾ ಎಂದಮೇಲೆ ಕೇಳಬೇಕಾ? ನಟಸಾರ್ವಭೌಮನನ್ನು ಇಂದು ಮಧ್ಯರಾತ್ರಿಯೇ ಬರಮಾಡಿಕೊಳ್ಳಲು ರಾಜ್ಯದೆಲ್ಲೆಡೆ ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದರು.  12 ಗಂಟೆಯ ಶೋಗೋ ಮೊದಲೇ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಇಂದು ರಾತ್ರಿ 10 ಗಂಟೆಗೆ ನಟಸಾರ್ವಭೌಮ ಸಿನಿಮಾದ ಶೋ ಏರ್ಪಡಿಸಲಾಗಿದೆ. ಅಲ್ಲಿಗೆ, ಇಂದೇ ನಟಸಾರ್ವಭೌಮ ತೆರೆಗೆ ಬಂದಿದ್ದಾನೆ. ಅಭಿಮಾನಿಗಳಿಗಾಗಿ ವಿಶೇಷವಾಗಿ ಆಯೋಜಿಸಿರುವ ಈ ಶೋ ವೀಕ್ಷಿಸಲು ಪುನೀತ್​ ರಾಜ್​ಕುಮಾರ್​ ಬರಲಿದ್ದಾರೆ ಎಂಬ ಮಾಹಿತಿಯೂ ಇದೆ. ಈಗಾಗಲೇ ಪ್ರಸನ್ನ ಥಿಯೇಟರ್​ನಲ್ಲಿ ಮೊದಲ ಶೋ ಶುರುವಾಗಿದ್ದು ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ.'ನಟಸಾರ್ವಭೌಮ'ನಿಗೆ ಕೋಟೆ ಕಟ್ಟಿದ ಅಭಿಮಾನಿಗಳು : ರಿಲೀಸ್‍ಗೂ ಮೊದಲೇ ಅಭಿಮಾನಿಗಳ ಹಬ್ಬ ಶುರು !
Loading...

ಸಾಮಾನ್ಯವಾಗಿ ಸಿನಿಮಾ ಬಿಡುಗಡೆಗೂ ಮೊದಲು ಚಿತ್ರತಂಡದವರು ಸೆಲೆಬ್ರಿಟಿ ಮತ್ತು ಮಾಧ್ಯಮಗಳಿಗೆಂದು ಪ್ರೀಮಿಯರ್​ ಶೋ ಆಯೋಜಿಸುತ್ತಾರೆ. ಆದರೆ, ಇದೇ ಮೊದಲ ಬಾರಿಗೆ ಸಿಂಗಲ್​ ಸ್ಕ್ರೀನ್​ನಲ್ಲಿ ನಿಗದಿಯಾದ ದಿನಕ್ಕೂ ಮೊದಲೇ ಅಭಿಮಾನಿಗಳಿಗಾಗಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಹಾಗೇ, ಊರ್ವಶಿ ಥಿಯೇಟರ್​ನಲ್ಲಿ ಇಂದು ಮಧ್ಯರಾತ್ರಿ 12 ಗಂಟೆಯಿಂದ 24 ಗಂಟೆಗಳ ಕಾಲ ಸತತವಾಗಿ 'ನಟಸಾರ್ವಭೌಮ' ಸಿನಿಮಾ ಪ್ರದರ್ಶನವಾಗಲಿದೆ.ಮೊದಲ ದಿನವೇ 100ಕ್ಕೂ ಹೆಚ್ಚು ಶೋಗಳಲ್ಲಿ 'ನಟಸಾರ್ವಭೌಮ' ಅಬ್ಬರಿಸಲಿದ್ದಾನೆ. ಸಿನಿಮಾದಲ್ಲಿ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪುನೀತ್​ ರಾಜ್​ಕುಮಾರ್​ಗೆ ಜೋಡಿಯಾಗಿ ರಚಿತಾ ರಾಮ್​ ಅಭಿನಯಿಸಿದ್ದಾರೆ. ಇನ್ನು, ರಣವಿಕ್ರಮ ಸಿನಿಮಾದ ನಂತರ ಪವನ್​ ಒಡೆಯರ್​ ಅಪ್ಪುಗೆ ಮತ್ತೆ ಆ್ಯಕ್ಷನ್​, ಕಟ್​ ಹೇಳಿರುವುದರಿಂದ ನಿರೀಕ್ಷೆಗಳು ಕೂಡ ಹೆಚ್ಚೇ ಇವೆ.

First published:February 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...