Naseeruddin Shah: ಬಾಲಿವುಡ್ ಖಾನ್​ಗಳು ರಾಜಕೀಯದ ಬಗ್ಗೆ ಮಾತನಾಡದಿರಲು ಕಾರಣ ಬಿಚ್ಚಿಟ್ಟ ನಸಿರುದ್ದೀನ್ ಷಾ..

Bollywood: ನಸಿರುದ್ದೀನ್ ಷಾ ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮರಳಿರುವುದನ್ನು ಸಂಭ್ರಮಪಡುತ್ತಿರುವವರ  ವಿರುದ್ಧ ಮಾತನಾಡುವಾಗ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

ನಸಿರುದ್ದೀನ್ ಷಾ

ನಸಿರುದ್ದೀನ್ ಷಾ

  • Share this:
ಇತ್ತೀಚಿಗೆ ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನವೊಂದರಲ್ಲಿ ನಸಿರುದ್ದೀನ್ ಷಾ(Naseeruddin Shah) ಅವರು ಸಾಮಾಜಿಕ-ರಾಜಕೀಯ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಶಾರುಖ್ ಖಾನ್, (Sharukh Khan)ಅಮೀರ್ ಖಾನ್ (Amir Khan)ಮತ್ತು ಸಲ್ಮಾನ್ ಖಾನ್(Salman Khan) ಅವರಂತಹ ಸೂಪರ್ ಸ್ಟಾರ್‌ಗಳು  ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಿದರೇ ಕಳೆದುಕೊಳ್ಳುವುದು ಬಹಳಷ್ಟಿದೆ ಎಂದಿದ್ದಾರೆ.  ಸಾಮಾಜಿಕ-ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಿದರೆ ಅವರಿಗೆ ಕಿರುಕುಳ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದಿದ್ದಾರೆ. ಈ ಕಾರಣದಿಂದಲ್ಲೇ ಅವರು ಚಿಂತಿತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.  

ನಾನು ಅವರ ಪರವಾಗಿ ಮಾತನಾಡಲು ಸಾಧ್ಯವಿಲ್ಲ ಆದರೆ ಅವರು ಕಳೆದುಕೊಳ್ಳುವುದು ತುಂಬಾ ಇದೆ ಎಂದು ನಾನು  ತಿಳಿಯಬಹುದು. ಅವರು ಎಲ್ಲಾ ರೀತಿಯ ಕಿರುಕುಳಗಳಿಗೆ ಒಳಗಾಗುತ್ತಾರೆ, ಕೇವಲ ಆರ್ಥಿಕವಾಗಿ ಮಾತ್ರವಲ್ಲದೇ ಅವರ ಸಂಸ್ಥೆಗಳು ಸೇರಿದಂತೆ ಸಂಪೂರ್ಣವಾಗಿ ಎಲ್ಲವೂ ತೊಂದರೆಗೀಡಾಗುತ್ತದೆ ಎಂದು ಷಾ ಹೇಳಿದ್ದಾರೆ.

ನಸಿರುದ್ದೀನ್ ಷಾ ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮರಳಿರುವುದನ್ನು ಸಂಭ್ರಮಪಡುತ್ತಿರುವವರ  ವಿರುದ್ಧ ಮಾತನಾಡುವಾಗ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊವೊಂದರಲ್ಲಿ, ನಾಸಿರುದ್ದೀನ್, “ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳುವುದು ಇಡೀ ವಿಶ್ವಕ್ಕೆ ಕಳವಳಕಾರಿಯಾಗಿದ್ದರೂ ಸಹ, ಕೆಲವು ವಿಭಾಗಗಳಲ್ಲಿ ಭಾರತೀಯ ಮುಸ್ಲಿಮರ ಅನಾಗರಿಕರ ಆಚರಣೆಗಳು ಕಡಿಮೆ ಅಪಾಯಕಾರಿ ಅಲ್ಲ ಎಂದಿದ್ದರು.

ಇದನ್ನೂ ಓದಿ:ಮಗು ಮಾಡಿಕೊಳ್ಳುವ ಪ್ಲ್ಯಾನ್​ನಲ್ಲಿದ್ರು ಸಮಂತಾ -ನಾಗ ಚೈತನ್ಯ..!

ಅಲ್ಲದೇ ಇಸ್ಲಾಂನಲ್ಲಿ ಸುಧಾರಣೆ ಮತ್ತು ಆಧುನಿಕತೆ  ಬೇಕೋ ಅಥವಾ ಕಳೆದ ಕೆಲವು ಶತಮಾನಗಳ ಅನಾಗರಿಕ ಮೌಲ್ಯಗಳು ಬೇಕೇ ಎಂದು ಪ್ರತಿಯೊಬ್ಬ ಭಾರತೀಯ ಮುಸ್ಲಿಂ ತಮ್ಮನ್ನು ಕೇಳಿಕೊಳ್ಳಬೇಕು. ಭಾರತೀಯ ಇಸ್ಲಾಂ ಯಾವಾಗಲೂ ಪ್ರಪಂಚದ ಇತರರಿಗಿಂತ ಭಿನ್ನ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.. ಹಿಂದುಸ್ತಾನಿ ಇಸ್ಲಾಂ ದುನಿಯಾ ಭರ್ ಕೆ ಇಸ್ಲಾಂ ಸೆ ಹಮೇಶ ಮುಖಾಲಿಫ್ ರಹಾ ಹೈ. ಖುದಾ ವೋ ವಕ್ತ್ ನ ಲಾಯೆ ಕಿ ವೋ ಇಟ್ನಾ ಬದಲ್ ಜಾಯೆ ಕಿ ಹಮ್ ಬಳಕೆ ಪೆಹ್ಚಾನ್ ಭೀ ನಾ ಸಾಕೆ)

ಖ್ಯಾತ ಕವಿ ಮಿರ್ಜಾ ಗಾಲಿಬ್ ಅವರ ಕವನವನ್ನೂ ತಮ್ಮ ವಿಡಿಯೋದಲ್ಲಿ ಉಲ್ಲೇಖಿಸಿರುವ 71 ವರ್ಷದ ನಟ ನಸೀರುದ್ದೀನ್ ಷಾ, "ಸರ್ವಶಕ್ತನೊಂದಿಗಿನ ನಮ್ಮ ಸಂಬಂಧವು ಅನೌಪಚಾರಿಕವಾಗಿದೆ. ಆದರೆ, ನನಗೆ ರಾಜಕೀಯ ಧರ್ಮದ ಅಗತ್ಯವಿಲ್ಲ" ಎಂದು ಒತ್ತಿ ಹೇಳಿದ್ದಾರೆ. ನಸೀರುದ್ದೀನ್ ಷಾ ಅವರ ಈ ವಿಡಿಯೋ ಹೇಳಿಕೆಯನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಸೀರುದ್ದೀನ್ ಷಾ ಅವರ ಹೇಳಿಕೆ ಸರಿ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಸಿರುದ್ದೀನ್ ಷಾ ಕೊನೆಯದಾಗಿ ಬೆಳ್ಳಿತೆರೆಯ ಮೇಲೆ 'ರಾಮಪ್ರಸಾದ್ ಕಿ ತೆಹ್ರ್ವಿ' ಯಲ್ಲಿ ಕಾಣಿಸಿಕೊಂಡಿದ್ದರು, ಅದರಲ್ಲಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ  ಅವರು ಅಮೆಜಾನ್‌ನ ಸಂಗೀತ ಕಾರ್ಯಕ್ರಮ 'ಬಂದಿಶ್ ಬ್ಯಾಂಡಿಟ್ಸ್' ನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು 2020 ರಲ್ಲಿ ಬಿಡುಗಡೆಯಾದ ಒಟಿಟಿ ಚಿತ್ರ 'ಮೀ ರಾಕ್ಸಾಮ್' ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇದನ್ನೂ ಓದಿ:ಪಡುಕೋಣೆ ಕುಟುಂಬದ ಹೆಸರಿನಲ್ಲಿದೆ ಒಂದು ವೈಶಿಷ್ಟ್ಯ, ಏನು ಗೊತ್ತಾ?

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: