• Home
  • »
  • News
  • »
  • entertainment
  • »
  • Naseeruddin Shah: ಈ ಮೂವರು 'ಖಾನ್'ಗಳ ಬಗ್ಗೆ ನಾಸಿರುದ್ದೀನ್ ಶಾ ಇಷ್ಟೊಂದು ವ್ಯಂಗ್ಯವಾಡಿದ್ದು ಯಾಕೆ?

Naseeruddin Shah: ಈ ಮೂವರು 'ಖಾನ್'ಗಳ ಬಗ್ಗೆ ನಾಸಿರುದ್ದೀನ್ ಶಾ ಇಷ್ಟೊಂದು ವ್ಯಂಗ್ಯವಾಡಿದ್ದು ಯಾಕೆ?

ಹಿರಿಯ ನಟ ನಾಸಿರುದ್ದೀನ್ ಶಾ

ಹಿರಿಯ ನಟ ನಾಸಿರುದ್ದೀನ್ ಶಾ

ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿರುವುದು ಈಗ ಅಂತಾರಾಷ್ಟ್ರೀಯ ಮಟ್ಟದ ವಿವಾದವನ್ನು ಸೃಷ್ಟಿಸಿದೆ. ಎಲ್ಲಡೆ ಈ ಕುರಿತು ಚರ್ಚೆ ಆಗುತ್ತಿರುವ ಈ ಸಂದರ್ಭದಲ್ಲಿ ಜನಪ್ರಿಯ ಹಿರಿಯ ನಟ ನಾಸಿರುದ್ದೀನ್ ಶಾ ಅವರು ಕೂಡ ಆ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ ...
  • Share this:

ಬಿಜೆಪಿ ವಕ್ತಾರೆ ನೂಪುರ್ ಶರ್ಮಾ (Nupur Sharma) ಅವರು, ಪ್ರವಾದಿ ಮಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಮಾತುಗಳನ್ನು (Derogatory speech) ಆಡಿರುವುದು ಈಗ ಅಂತಾರಾಷ್ಟ್ರೀಯ ಮಟ್ಟದ ವಿವಾದವನ್ನು ಸೃಷ್ಟಿಸಿದೆ. ಎಲ್ಲಡೆ ಈ ಕುರಿತು ಚರ್ಚೆ ಆಗುತ್ತಿರುವ ಈ ಸಂದರ್ಭದಲ್ಲಿ ಜನಪ್ರಿಯ ಹಿರಿಯ ನಟ ನಾಸಿರುದ್ದೀನ್ ಶಾ (Naseeruddin Shah) ಅವರು ಕೂಡ ಆ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಾಶ್ಮೀರಿ ಫೈಲ್ಸ್ (Kashmir Files) ಸಿನಿಮಾವನ್ನು ‘ಹುಸಿ -ದೇಶ ಭಕ್ತಿಯ’ ಸಿನಿಮಾ ಎಂದು ಕೂಡ ಅವರು ಕರೆದಿದ್ದಾರೆ. ಇತ್ತೀಚಿಗೆ ಟಿವಿ ಸುದ್ದಿ ಚರ್ಚೆ ಒಂದರಲ್ಲಿ ನೂಪುರ್ ಶರ್ಮಾ ಅವರು, ಪ್ರವಾದಿ ಮಹಮ್ಮದರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಕುರಿತು ಮಧ್ಯಪ್ರಾಚ್ಯ ರಾಷ್ಟ್ರಗಳು ಅಧಿಕೃತವಾಗಿಯೇ ತಮ್ಮ ಅಸಮಧಾನವನ್ನು ಹೊರ ಹಾಕಿದ್ದವು.


ಹಾಗಾಗಿ ಬಿಜೆಪಿ ಆಕೆಯನ್ನು ಪಕ್ಷದಿಂದ ಅಮಾನತುಗೊಳಿಸಿದ್ದು, ಪ್ರವಾದಿ ಮಹಮ್ಮದರ ಕುರಿತ ಅವರ ಹೇಳಿಕೆಗಳಿಗೂ ಪಕ್ಷದ ಅಭಿಪ್ರಾಯಗಳಿಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಹೇಳಿದೆ.


ಬಾಲಿವುಡ್‍ನ ಮೂವರು ಖಾನ್‍ಗಳ ಬಗ್ಗೆ ಹೇಳಿದ್ದೇನು
ನಾಸಿರುದ್ದೀನ್ ಶಾ ಅವರು, ಬಾಲಿವುಡ್‍ನ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಮೂವರು ಖಾನ್‍ಗಳ ಬಗ್ಗೆ ಮಾತನಾಡುತ್ತಾ, “ನಾನು ಅವರ ಪರವಾಗಿ ಮಾತನಾಡಲಾರೆ. ಅವರು ಇರುವ ಸ್ಥಿತಿಯಲ್ಲಿ ನಾನಿಲ್ಲ. ಅವರು ತಾವು ತುಂಬಾ ಅಪಾಯಕ್ಕೆ ಒಳಗಾಗುತ್ತಿದ್ದೇವೆ ಎಂದು ಭಾವಿಸುತ್ತಿದ್ದಾರೆ ಎಂದು ನನಗೆ ಅನಿಸುತ್ತದೆ.


ಬಳಿಕ ಅವರು ಈ ಬಗ್ಗೆ ತಮ್ಮ ಆತ್ಮಸಾಕ್ಷಿಗೆ ಯಾವ ರೀತಿ ಉತ್ತರಿಸುತ್ತಾರೆ ಎಂಬುವುದು ನನಗೆ ಗೊತ್ತಿಲ್ಲ. ಆದರೆ, ಅವರು ಅತ್ಯಂತ ಹೆಚ್ಚಿನದನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ಇದ್ದಾರೆ ಎಂದು ನನಗೆ ಅನಿಸುತ್ತದೆ” ಎಂದು ಹೇಳಿದ್ದಾರೆ.


ಶಾರುಖ್ ಖಾನ್ ಮತ್ತು ಮಗ ಆರ್ಯನ್ ಬಗ್ಗೆ ಮಾತನಾಡಿದ ನಾಸಿರುದ್ದೀನ್ ಶಾ
ಅವರು ಇಲ್ಲಿ, ‘ವಿಚ್ -ಹಂಟ್’ ಕುರಿತು ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಅವರ ಬಂಧನದ ಘಟನೆಯ ಉದಾಹರಣೆ ನೀಡಿದ್ದಾರೆ. “ಶಾರುಖ್ ಖಾನ್ ಅವರ ವಿಷಯದಲ್ಲಿ ಏನಾಯಿತು ಮತ್ತು ಅವರು ಅದನ್ನು ಎದುರಿಸಿದ ರೀತಿ ಪ್ರಶಂಸಾರ್ಹ. ಅದು ‘ವಿಂಚ್ -ಹಂಟ್’ ಅಲ್ಲದೇ ಬೇರೇನೂ ಅಲ್ಲ. ಅವರು ತಮ್ಮ ಬಾಯಿ ಮುಚ್ಚಿಕೊಂಡಿದ್ದಾರೆ. ಅವರು ಮಾಡಿದ್ದಿಷ್ಟೆ, ತೃಣಮೂಲಕ್ಕೆ ಬೆಂಬಲ ನೀಡಿದ್ದು ಮತ್ತು ಮಮತಾ ಬ್ಯಾನರ್ಜಿಯನ್ನು ಹೊಗಳಿದ್ದು. ಸೋನು ಸೂದ್ ಮೇಲೆ ದಾಳಿ ನಡೆಯಿತು. ಯಾರಾದರೂ ಏನಾದರೂ ಹೇಳಿಕೆ ನೀಡಿದರೆ, ಅಂತವರಿಗೆ ಪ್ರತಿಕ್ರಿಯೆ ಸಿಗುತ್ತದೆ. ಬಹುಷಃ ಮುಂದಿನ ಸರದಿ ನನ್ನದಾಗಿರಬಹುದು, ನನಗೆ ಗೊತ್ತಿಲ್ಲ. ಆದರೂ ಅವರಿಗೆ ಏನೂ ಸಿಗುವುದಿಲ್ಲ ಬಿಡಿ” ಎಂದು ಶಾ ಹೇಳಿದ್ದಾರೆ.


ಇದನ್ನೂ ಓದಿ: Sidhu Moosewala: ಸಿಧು ಫೋಟೋ ಇರೋ ಉಚಿತ ಮೊಬೈಲ್ ಕವರ್ ವಿತರಣೆ! ಭಾವುಕರಾದ ಅಭಿಮಾನಿಗಳು


ಕಳೆದ ವರ್ಷ ಗೋವಾಗೆ ತೆರಳುತ್ತಿದ್ದ ಕ್ರೂಸ್ ಹಡಗಿನಲ್ಲಿ, ಡ್ರಗ್ಸ್ ಪತ್ತೆಯಾಗಿದ್ದ ಸಂದರ್ಭದಲ್ಲಿ, ಅದಕ್ಕೆ ಸಂಬಂಧಿಸಿದಂತೆ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್‍ನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಂಧಿಸಿತ್ತು. ಆರ್ಯನ್ ಹಲವಾರು ವಾರಗಳ ಕಾಲ ಜೈಲಿನಲ್ಲಿ ಕೈದಿಯಾಗಿದ್ದರು. ನಂತರ ಅವರಿಗೆ ಜಾಮೀನು ಸಿಕ್ಕಿತು. ಇತ್ತೀಚೆಗೆ, ‘ಸಾಕಷ್ಟು ಸಾಕ್ಷಾಧಾರಗಳ ಕೊರತೆಯ’ ಕಾರಣ ನೀಡಿ, ಎನ್‍ಸಿಬಿಯು ಆರ್ಯನ್ ಮತ್ತು ಇತರ ಐದು ಮಂದಿಗೆ ತನ್ನ ಚಾರ್ಜ್‍ಶೀಟ್‍ನಲ್ಲಿ ಕ್ಲೀನ್ ಚಿಟ್ ನೀಡಿದೆ.


ಭವಿಷ್ಯದಲ್ಲಿ ‘ಹುಸಿ -ದೇಶ ಪ್ರೇಮ’ ದ ಸಿನಿಮಾಗಳು ಇನ್ನಷ್ಟು ಹೆಚ್ಚಲಿವೆ
ಇದೇ ಸಂದರ್ಭದಲ್ಲಿ, ರಾಷ್ಟ್ರ ಪ್ರೇಮದ ಸಿನಿಮಾಗಳು ಎಂದು ಪರಿಗಣಿಸಲ್ಪಡುವ ಪ್ರಾಜೆಕ್ಟುಗಳಲ್ಲಿ ತೊಡಗಿಕೊಂಡಿರುವ ನಟರು ಮತ್ತು ಸಿನಿಮಾ ನಿರ್ಮಾಪಕರ ಬಗ್ಗೆಯೂ ನಸಿರುದ್ದೀನ್ ಶಾ ತಮ್ಮ ಅನಿಸಿಕೆ ವ್ಯಕ್ತಪಡಿಸುವಲ್ಲಿ ಹಿಂಜರಿದಿಲ್ಲ. ಅಕ್ಷಯ್ ಕುಮಾರ್ ಅವರ ಇತ್ತೀಚಿನ ಸಿನಿಮಾ ಮತ್ತು ವಿವೇಕ್ ಅಗ್ನಿಹೋತ್ರಿ ಅವರ ಬ್ಲಾಕ್ ಬಸ್ಟರ್ ಸಿನಿಮಾ, ದ ಕಶ್ಮೀರ್ ಫೈಲ್ಸ್ ಕುರಿತು ಅವರು ಮಾತನಾಡುತ್ತಾ, “ಅವರು ಗೆಲ್ಲುವ ಪಕ್ಷದ ಕಡೆ ಇರಲು ಬಯಸುತ್ತಾರೆ” ಎಂದಿದ್ದಾರೆ. ದ ಕಶ್ಮೀರ್ ಫೈಲ್ಸ್ ಸಿನಿಮಾ ‘ಕಾಶ್ಮೀರಿ ಹಿಂದುಗಳ ಸಂಕಟದ ಬಹುತೇಕ ಕಾಲ್ಪನಿಕ ಆವೃತ್ತಿ’ ಯಾಗಿದ್ದು, ಸರಕಾರ ಅದನ್ನು ಪ್ರಚಾರ ಮಾಡುತ್ತಿದೆ ಎಂಬ ಅಭಿಪ್ರಾಯ ನಾಸಿರುದ್ದೀನ್ ಅವರದ್ದು.


ಇದನ್ನೂ ಓದಿ: Jai Jagadish: ನಟ ಜೈ ಜಗದೀಶ್​ ಮೇಲೆ ಹಲ್ಲೆ ಆರೋಪ, ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು


ಶಾ ಕೂಡ ವಿವೇಕ್ ಅಗ್ನಿಹೋತ್ರಿ ಅವರ ಈ ಹಿಂದಿನ ವಿವಾದಾತ್ಮಕ ಸಿನಿಮಾ ತಾಷ್ಕೆಂಟ್ ಫೈಲ್ಸ್ ನಲ್ಲಿ ಕೆಲಸ ಮಾಡಿದ್ದಾರೆ. ಆದರೆ ಆ ಚಿತ್ರ ಯಶಸ್ವಿಯಾಗಿರಲಿಲ್ಲ. ಭವಿಷ್ಯದಲ್ಲಿ ‘ಹುಸಿ -ದೇಶ ಪ್ರೇಮ’ ದ ಸಿನಿಮಾಗಳು ಇನ್ನಷ್ಟು ಹೆಚ್ಚಲಿವೆ ಎಂಬುವುದು ಶಾ ಅವರ ಊಹೆಯಾಗಿದೆ.

Published by:Ashwini Prabhu
First published: