ಈ ವರ್ಷದ ಏಪ್ರಿಲ್ ತಿಂಗಳು ನಿಜಕ್ಕೂ ಭಾರತೀಯ ಚಿತ್ರರಂಗದ ಪಾಲಿಗೆ ಕರಾಳ ತಿಂಗಳು ಎಂದೇ ಕರೆಯಲಾಗುತ್ತಿದೆ. ಮೊನ್ನೆ ನೈಜ ಅಭಿನಯದ ಸರಳ ವ್ಯಕ್ತಿತ್ವದ ನಟ ಇರ್ಫಾನ್ ಖಾನ್ ಹಾಗೂ ನಿನ್ನೆ ರಿಷಿ ಕಪೂರ್ ಬಾಲಿವುಡ್ ಅನ್ನು ಅನಾಥವನ್ನಾಗಿ ಮಾಡಿ ಹೋದರು. ಇವರ ಅಗಲಿಕೆಯ ಕಹಿ ಸತ್ಯವನ್ನು ಅರಗಿಸಿಕೊಳ್ಳುವ ಮುನ್ನವೇ ಮತ್ತೋರ್ವ ಹಿರಿಯ ನಟನ ಅನಾರೋಗ್ಯದ ಕುರಿತಾದ ಸುದ್ದಿಯೊಂದು ಹಡಿದಾಡುತ್ತಿದೆ.
ಹೌದು, ಆ ಹಿರಿಯ ನಟ ಮತ್ತಾರೂ ಅಲ್ಲ ನಾಸಿರುದ್ದೀನ್ ಶಾ. ವಿಭಿನ್ನ ಪಾತ್ರಗಳ ಮೂಲಕ ತಮ್ಮದೇ ಆದ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿಕೊಂಡಿರುವ ಪ್ರತಿಭಾನ್ವಿತ ನಟ. ಈ ನಟನ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ನಾಸಿರುದ್ದೀನ್ ಶಾ ಅವರ ಆರೋಗ್ಯ ಕುರಿತಾದ ವದಂತಿಗಳಿಗೆ ಅವರ ಮಗ ವಿವಾನ್ ಶಾ ಫುಲ್ ಸ್ಟಾಪ್ ಇಟ್ಟಿದ್ದಾರೆ. ನ್ಯೂಸ್ 18 ಜೊತೆ ಮಾತನಾಡಿರುವ ಅವರು, ತಮ್ಮ ತಂದೆ ಆರೋಗ್ಯದಿಂದಿದ್ದಾರೆ. ಮನೆಯಲ್ಲೇ ಆರಾಮಾಗಿದ್ದಾರೆ. ಸದ್ಯ ಹರಿದಾಡುತ್ತಿರುವ ಸುದ್ದಿಗಳೆಲ್ಲ ಸುಳ್ಳು ಸುದ್ದಿಗಳು ಎಂದು ಸ್ಪಷ್ಟನೆ ನೀಡಿದ್ದಾರೆ.
JUST IN : Nasiruddin shah has been admitted to hospital.
He was in treatment from past fue days.
God bless him with good health.#IrrfanKhan #RishiKapoorji#naseeruddinshahhttps://t.co/4Yjr01p5g3
— Samad. (@iSamadkhan_) April 30, 2020
All well everyone! Baba's just fine. All the rumours about his health are fake. He's keeping well 🙏Praying for Irfan Bhai and Chintu ji. Missing them a lot. Deepest condolences to their families. Our hearts go out to all of them. It's a devastating loss for all of us 😔🙏
— Vivaan Shah (@TheVivaanShah) April 30, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ