Naseeruddin Shah| ನಾಸೀರುದ್ದೀನ್ ಷಾ ಭಾನುವಾರ ಡಿಸ್ಚಾರ್ಜ್: ಅಭಿಮಾನಿಗಳಿಗೆ ಭರವಸೆ

ಹಿಂದಿ ಚಿತ್ರರಂಗದ ಅತ್ಯುತ್ತಮ ಪ್ರತಿಭೆಗಳಲ್ಲಿ ಒಬ್ಬರಾದ ಅನುಭವಿ ನಟ ಷಾರವರು, ಕೊನೆಯ ಬಾರಿಗೆ ಈ ವರ್ಷದ ಆರಂಭದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದ ರಾಮ್‌ಪ್ರಸಾದ್ ಕಿ ತೇರ್ವಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ನಾಸೀರುದ್ದೀನ್ ಷಾ.

ನಾಸೀರುದ್ದೀನ್ ಷಾ.

  • Share this:
ಬಾಲಿವುಡ್ ನಟ ನಸೀರುದ್ದೀನ್ ಷಾ ಅವರನ್ನು ನ್ಯುಮೋನಿಯಾ ರೋಗದಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರು ಈದೀಗ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅವರ ಶ್ವಾಸಕೋಶದ ಮೂಲೆಯಲ್ಲಿ ಒಂದು ನ್ಯುಮೋನಿ ಯಾದ ಪ್ಯಾಚ್ ಕಂಡುಬಂದ ಕಾರಣ ಅವರನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸುವುದು ಅನಿವಾರ್ಯವಾಗಿತ್ತು ಎಂದು ಹೇಳುವ ಮೂಲಕ ನಸೀರುದ್ದೀನ್ ಷಾ ಹಾಗೂ ಅವರ ಪತ್ನಿ ರತ್ನಾ ಪಠಕ್‌ ಷಾ ಅವರು ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಗುಣಮುಖರಾಗಲು ಒಂದೆರಡು ದಿನಗಳು ಬೇಕಾಗುತ್ತದೆ ಎಂದು ನಟ ಮಾಹಿತಿ ನೀಡಿದ್ದಾರೆ ಹಾಗೂ ಚಿಕಿತ್ಸೆಗೆ ಇನ್ನೂ ಸಮಯ ಬೇಕು ಅಂದರೆ ನಾನು ಭಾನುವಾರದಂದು ಅಂದರೆ ಜುಲೈ 4 ರೊಳಗೆ ಡಿಸ್ಚಾರ್ಜ್ ಆಗಬೇಕೆಂದು ನಿರೀಕ್ಷಿಸುತ್ತಿದ್ದೇನೆ ಎಂದು ಷಾ ತಮ್ಮ ಅಭಿಲಾಷೆಯನ್ನು ಹಂಚಿಕೊಂಡರು.

“ಭಾನುವಾರದ ಹೊತ್ತಿಗೆ ನಾನು  ಡಿಸ್ಚಾರ್ಜ್ ಆಗಲು ಬಯುಸುತ್ತಿದ್ದೇನೆ (ಡಿಸ್ಚಾರ್ಜ್ ಮಾಡಲಾಗುವುದು). ನಿಮ್ಮ ಕಾಳಜಿ ಹಾಗೂ ಪ್ರೀತಿಗೆ ನಾನು ಧನ್ಯ", ಎಂದು  ಪತ್ರಕರ್ತರಿಗೆ ತಿಳಿಸಿದ್ದಾರೆ. ಈ ವಿಷಯವನ್ನು ಕೇಳಿದ ಅವರು ಅಭಿಮಾನಿಗಳು ತುಂಬ ಖುಷಿಗೊಂಡಿ ದ್ದಾರೆ. ಈ ಕಷ್ಟದ ಸಮಯದಲ್ಲಿ ಅವರ ಪತ್ನಿ ನಟಿ ರತ್ನ ಪಾಠಕ್ ಷಾ ಮತ್ತು ಮಕ್ಕಳು ಅವರೊಂದಿಗೆ ಇದ್ದಾರೆ.

ಷಾ ಅವರ ಮ್ಯಾನೇಜರ್ ಅವರ ಆರೋಗ್ಯ ಸ್ಥಿತಿಯನ್ನು ಕುರಿತು ಷಾ ಅವರ ಹಿತೈಷಿಗಳಿಗೆ ಮಾಹಿತಿಯನ್ನು ಅಪ್‌ಡೇಟ್‌ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ಷಾ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಹಾಗೂ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಷಾರವರ ಮ್ಯಾನೇಜರ್ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದರು.

ಷಾರವರ ಪತ್ನಿ ಪಿಂಕ್‌ವಿಲ್ಲಾದೊಂದಿಗೆ ಸಂದರ್ಶನ ನೀಡುತ್ತಾ, ಅದೃಷ್ಟವಶಾತ್, ನ್ಯುಮೋನಿಯಾದ ಪ್ಯಾಚ್ ಶ್ವಾಸಕೋಶದ ಒಂದು ಮೂಲೆಯಲ್ಲಿದೆ ವೈದ್ಯರು ಬಹಿರಂಗವಾಗಿ ಹೇಳಿದರು. ಆದ್ದರಿಂದ, ಷಾರವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವುದಿಲ್ಲ ಎಂದು ವೈದ್ಯರು ಖಾತ್ರಿಪಡಿಸಿದ್ದರು. ಇದೀಗ ಷಾರವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಆರೋಗ್ಯದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡುಕೊಂಡಿದ್ದಾರೆ ಎರಡು ದಿನಗಳಲ್ಲಿ ಡಿಸ್ಚಾರ್ಜ್ ಅಗುತ್ತಾರೆ ಎಂದು ಮಾಹಿತಿ ನೀಡಿದರು.

ಹಿಂದಿ ಚಿತ್ರರಂಗದ ಅತ್ಯುತ್ತಮ ಪ್ರತಿಭೆಗಳಲ್ಲಿ ಒಬ್ಬರಾದ ಅನುಭವಿ ನಟ ಷಾರವರು, ಕೊನೆಯ ಬಾರಿಗೆ ಈ ವರ್ಷದ ಆರಂಭದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದ ರಾಮ್‌ಪ್ರಸಾದ್ ಕಿ ತೇರ್ವಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಸುಪ್ರಿಯಾ ಪಾಠಕ್, ಕೊಂಕಣ ಸೇನ್ ಶರ್ಮಾ, ವಿಕ್ರಾಂತ್ ಮಾಸ್ಸಿ, ಪರಂಬ್ರತಾ ಚಟ್ಟೋಪಾಧ್ಯಾಯ ಮತ್ತು ವಿನಯ್ ಪಾಠಕ್ ನಟಿಸಿದ್ದಾರೆ. ಕಳೆದ ವರ್ಷ, ಬ್ಯಾಂಡಿಷ್ ಬ್ಯಾಂಡಿಟ್ಸ್ ಎಂಬ ವೆಬ್ ಪ್ರದರ್ಶನದಲ್ಲಿ ಷಾ ಅವರ ಅಭಿನಯವು ಅವರ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು ಮತ್ತು ವಿಮರ್ಶಕರಿಂದ ಪ್ರಶಂಸೆ ಗಳಿಸಿತು.

ಇದನ್ನೂ ಓದಿ: Ranveer Singh| ಕಿರುತೆರೆಗೆ ಬಾಲಿವುಡ್‍ನ ಗಲ್ಲಿಬಾಯ್: ಕಲರ್ಸ್ ವಾಹಿನಿಯಲ್ಲಿ  ‘ದ ಬಿಗ್ ಪಿಕ್ಚರ್’ ನಿರೂಪಿಸಲಿದ್ದಾರೆ ರಣ್‍ವೀರ್ ಸಿಂಗ್

ಷಾರವರಿಗೆ ಇದೀಗ 70 ವರ್ಷವಾಗಿದ್ದು,ತಮ್ಮ ವೃತ್ತಿಜೀವನದ ಬಹುತೇಕ ಎಲ್ಲಾ ಪಾತ್ರಗಳನ್ನು ನಿರ್ವಹಿಸಿದ್ದಾರೆ ಹಾಗೂ ಎಲ್ಲಾ ರಂಗದಲ್ಲೂ ಕಣಿಸಿಕೊಂಡಿದ್ದಾರೆ ಮತ್ತು ಕೆಲವು ಜಾಹಿರಾತಿನಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರು ಬಹುತೇಕ ಮೆಚ್ಚುಗೆ ಪಡೆದ ಚಿತ್ರಗಳಲ್ಲಿ ನಟಿಸಿದ್ದಾರೆ, ಸಮಾನಾಂತರ ಚಲನಚಿತ್ರ ಚಳವಳಿಯ ಮುಂಚೂಣಿಯಲ್ಲಿದ್ದಾರೆ ಮತ್ತು ಸ್ಟ್ರೀಮಿಂಗ್ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ. ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಟ ಷಾ ಅವರಿಗೆ ಗೌರವಾನ್ವಿತ ಪದ್ಮಶ್ರೀ ಮತ್ತು ಪದ್ಮಭೂಷಣವನ್ನು ಭಾರತ ಸರ್ಕಾರ ನೀಡಿ ಗೌರಿಸಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published: