Naseeruddin Shah: ಹಿರಿಯ ನಟ ನಾಸೀರುದ್ದೀನ್​ ಶಾಗೆ ನ್ಯುಮೋನಿಯಾ; ಆಸ್ಪತ್ರೆಗೆ ದಾಖಲು

ಶಾ ಅವರ ಶ್ವಾಸಕೋಶದಲ್ಲಿ ಒಂದು ಪ್ಯಾಚ್​ ಕಂಡುಬಂದಿದೆ. ಹೀಗಾಗಿ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಬೇಕಾಯಿತು. ಅವರ ಆರೋಗ್ಯ ಸ್ಥಿರವಾಗಿದೆ. ಜೊತೆಗೆ ಶಾ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಅವರ ಮ್ಯಾನೇಜರ್​​ ಹೇಳಿದ್ದಾರೆ.

ನಾಸೀರುದ್ದೀನ್​ ಶಾ

ನಾಸೀರುದ್ದೀನ್​ ಶಾ

 • Share this:
  ಹಿರಿಯ ನಟ ನಾಸೀರುದ್ದೀನ್​ ಶಾ ನ್ಯುಮೋನಿಯಾ ತೊಂದರೆಯಿಂದಾಗಿ ಮುಂಬೈನ ಹಿಂದೂಜ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಾ ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಅವರ ಮ್ಯಾನೇಜರ್​ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

  ನಾಸೀರುದ್ದೀನ್​ ಶಾ ಅವರು ಎರಡು ದಿನಗಳ ಕಾಲ ಮೆಡಿಕಲ್​ ಅಬ್ಸರ್ವೇಷನ್​ನಲ್ಲಿ ಇರಬೇಕೆಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಶಾ ಅವರ ಶ್ವಾಸಕೋಶದಲ್ಲಿ ಒಂದು ಪ್ಯಾಚ್​ ಕಂಡುಬಂದಿದೆ. ಹೀಗಾಗಿ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಬೇಕಾಯಿತು. ಅವರ ಆರೋಗ್ಯ ಸ್ಥಿರವಾಗಿದೆ. ಜೊತೆಗೆ ಶಾ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಅವರ ಮ್ಯಾನೇಜರ್​​ ಹೇಳಿದ್ದಾರೆ.

  ಅವರ ಪತ್ನಿ ರತ್ನ ಪಾಠಕ್ ಷಾ ಮತ್ತು ಮಕ್ಕಳು ಸೇರಿದಂತೆ ಅವರ ಕುಟುಂಬ ಶಾ ಜೊತೆಯಲ್ಲಿದೆ. ಕಳೆದ ವರ್ಷ, ನಾಸೀರುದ್ದೀನ್​ ಶಾ ಅವರ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡಿದ್ದವು. ಏಕೆಂದರೆ ಆ ಸಮಯದಲ್ಲಿ ಇರ್ಫಾನ್​ ಖಾನ್ ಮತ್ತು ರಿಷಿ ಕಪೂರ್ ಸಾವನ್ನಪ್ಪಿದ್ದರು. ಆ ಬಳಿಕ ಇವರ ಆರೋಗ್ಯ ಕ್ಷೀಣಿಸುತ್ತಿರುವ ಸುದ್ದಿಯೂ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡಿತ್ತು.

  ಇದನ್ನೂ ಓದಿ:Cabinet Reshuffle: ಕೇಂದ್ರ ಸಚಿವ ಸಂಪುಟ ಪುನರ್ರಚನೆ; ರಾಜ್ಯದಿಂದ ಯಾರಿಗೆ ಸಿಗುತ್ತೆ ಕೇಂದ್ರ ಸಚಿವ ಸ್ಥಾನ?

  ಬಳಿಕ ನಾಸೀರುದ್ದೀನ್ ಶಾ ಅವರು ಎಲ್ಲಾ ವದಂತಿಗಳಿಗೆ ತೆರೆ ಎಳೆದು, ನಾನು ಆರೋಗ್ಯವಾಗಿದ್ದೇನೆ. ದೇಶವ್ಯಾಪಿ ಲಾಕ್​ಡೌನ್​ ಇರುವುದರಿಂದ ಹೋಂ ಅಬ್ಸರ್ವೇಷನ್​ನಲ್ಲಿದ್ದೇನೆ ಎಂದು ಹೇಳಿದ್ದರು.

  ನಾಸೀರುದ್ದೀನ್​ ಶಾ ಖ್ಯಾತ ನಟರಲ್ಲಿ ಒಬ್ಬರು. ಇವರು 1970ರಲ್ಲಿ ನ್ಯಾಷನಲ್​ ಸ್ಕೂಲ್​ ಆಫ್​ ಡ್ರಾಮಾ ಕೋರ್ಸ್​ ಮುಗಿಸಿದರು. ಬಳಿಕ ಟೆಲಿವಿಷನ್​ ಇನ್ಸ್​​ಟಿಟ್ಯೂಟ್​ ಆಫ್​ ಇಂಡಿಯಾದಲ್ಲಿ ಅಭ್ಯಾಸ ಮಾಡಿದರು. ಅವರಿಗೆ ಭಾರತ ಸರ್ಕಾರವು ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ತಮ್ಮ 70ನೇ ವಯಸ್ಸಿನಲ್ಲೂ ಷಾ ಅವರು ಅಭಿನಯಿಸುತ್ತಿದ್ದಾರೆ. ಕಮರ್ಷಿಯಲ್ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

  ನಿಶಾಂತ್, ಜಾನೆ ಭಿ ದೊ ಯಾರೋ, ಇಜಾಜತ್, ಬಜಾರ್, ಕಥಾ, ಮಸೂಮ್ ಮತ್ತು ಮಿರ್ಚ್​ ಮಸಾಲ ಸಿನಿಮಾಗಳಲ್ಲಿ ನಸೀರುದ್ದೀನ್​ ಷಾ ಅಭಿನಯಿಸಿದ್ದಾರೆ. ಜೊತೆಗೆ ಕಮರ್ಷಿಯಲ್ ಫಿಲ್ಮ್​​ಗಳಾದ ಹೀರೋ ಹಿರಾಲಲ್, ಕರ್ಮ, ತ್ರಿದೇವ್, ವಿಶ್ವಾತ್ಮ , ಚಮತ್ಕಾರ್​ ಮತ್ತು ಮೊಹ್ರಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಂಡಿಶ್​ ಬಂಡಿತ್ಸ್​ ಮತ್ತು ಮೀ ರಕ್ವಾಸಂ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

  ಇದನ್ನೂ ಓದಿ:ಎಲ್ಲಾ ಆಸ್ತಿಯಲ್ಲಿ ಮಹಿಳೆಯರಿಗೆ ಸಮನಾದ ಹಕ್ಕು; ಕರ್ನಾಟಕ ರಾಜ್ಯ ಸರ್ಕಾರದಿಂದ ಚಿಂತನೆ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Latha CG
  First published: