ವಿಮರ್ಶೆ : ಮತ್ತೆ ಮದುವೆ
ನಟರು : ನರೇಶ್, ಪವಿತ್ರ ಲೋಕೇಶ್, ಶರತ್ ಬಾಬು, ಜಯಸುಧಾ, ಅನನ್ಯ ನಾಗಲ್ಲ, ವನಿತಾ ವಿಜಯ್ ಕುಮಾರ್, ಭದ್ರಂ ಮುಂತಾದವರು.
ಛಾಯಾಗ್ರಹಣ : ಬಾಲ್ ರೆಡ್ಡಿ
ಸಂಗೀತ : ಸುರೇಶ್ ಬೊಬ್ಬಿಲಿ
ನಿರ್ಮಾಪಕ : ವಿಜಯ ಕೃಷ್ಣ ಮೂವೀಸ್ (ನರೇಶ್.ವಿ.ಕೆ)
ನಿರ್ದೇಶನ : ವೈ.ವೈ. ಅರಸ
ನರೇಶ್ (Naresh) ಮತ್ತು ಪವಿತ್ರಾ ಲೋಕೇಶ್ (Pavitra Lokesh) ಕಳೆದ ಒಂದು ವರ್ಷದಿಂದ ಭಾರೀ ಸುದ್ದಿಯಲ್ಲಿದ್ದಾರೆ. ಇವರಿಬ್ಬರ ಲಿವಿಂಗ್ ರಿಲೇಶನ್ ಶಿಪ್ (Living Relationship) ಬಗ್ಗೆ ಮಾಧ್ಯಮಗಳು ನಾನಾ ಸುದ್ದಿಗಳನ್ನು ಬಿತ್ತರಿಸಿವೆ. ಇವೆಲ್ಲದಕ್ಕೂ ಟಾಂಗ್ ಎನ್ನುವಂತೆ ನರೇಶ್ ‘ಮತ್ತೆ ಮದುವೆ’ (Matte Maduve) ಸಿನಿಮಾ ಮಾಡಿದ್ದಾರೆ. ಅವರ ಜೀವನದಲ್ಲಿ ನಡೆದ ಕೆಲವು ನೈಜ ಘಟನೆಗಳನ್ನು ತಮ್ಮದೇ ಶೈಲಿಯಲ್ಲಿ ಜನರ ಮುಂದೆ ತಂದಿದ್ದಾರೆ. ಸಿನಿಮಾ ಟೀಸರ್ ಮತ್ತು ಟ್ರೇಲರ್ ನಿಂದಲೇ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಮೂಡಿತ್ತು. ಅಷ್ಟೇ ಅಲ್ಲ ಈ ಚಿತ್ರದ ಮೇಲೆ ವಿವಾದವೂ ತಲೆದೋರಿತ್ತು. ಈ ಸಿನಿಮಾ ಹೇಗಿದೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ನರೇಂದ್ರ -ಪಾರ್ವತಿಯ ಪ್ರೇಮ ಕಥೆ
ನರೇಂದ್ರ (ವಿಕೆ ನರೇಶ್) ಒಬ್ಬ ಸಿನಿಮಾ ನಟನಾಗಿದ್ದು, ಶೂಟಿಂಗ್ ವೇಳೆ ಪಾರ್ವತಿಯನ್ನು (ಪವಿತ್ರಾ ಲೋಕೇಶ್) ನೋಡ್ತಾನೆ. ಪಾರ್ವತಿಯನ್ನು ನೋಡಿದ ಮೊದಲ ನೋಟದಲ್ಲೇ ನರೇಂದ್ರ ಪ್ರೀತಿಯಲ್ಲಿ ಬೀಳುತ್ತಾನೆ. ನರೇಂದ್ರ ಈಗಾಗಲೇ ಮೂರು ಮದುವೆಯಾಗಿರುತ್ತಾನೆ. ಮೂರನೇ ಪತ್ನಿ ಸೌಮ್ಯಾ ಸೇತುಪತಿ (ವನಿತಾ ವಿಜಯ್ ಕುಮಾರ್) ನರೇಂದ್ರನಿಗೆ ಹಣಕ್ಕಾಗಿ ಕಿರುಕುಳ ನೀಡುತ್ತಾಳೆ. ಇನ್ನೊಂದು ಕಡೆ ಪಾರ್ವತಿಗೆ ಗಂಡನಿಂದ ಕಿರುಕುಳ ಹೆಚ್ಚಾಗಿರುತ್ತದೆ. ಈ ಟೈಮ್ ನಲ್ಲೇ ಇಬ್ಬರು ಪ್ರೀತಿಯಲ್ಲಿ ಬೀಳುತ್ತಾರೆ. ಕಥೆಗೆ ಸುಖಾಂತ್ಯವಿದೆಯೋ ಇಲ್ಲವೋ ಎಂಬುದು 'ಮತ್ತೆ ಮದುವೆ'ಯ ಕಥೆಯಾಗಿದೆ.
ನರೇಶ್ ಜೀವನದಲ್ಲಿ ನಿಜಕ್ಕೂ ನಡೆದಿದ್ದೇನು?
ಮತ್ತೆ ಮದುವೆ ಚಿತ್ರದ ನಾಯಕ ನರೇಶ್ ಜೀವನದಲ್ಲಿ ನಡೆದ ಘಟನೆಗಳನ್ನೇ ಆಧರಿಸಿದೆ. ಇದನ್ನು ಬಯೋಪಿಕ್ ಎಂದು ಕರೆಯಲು ಆಗಲ್ಲ. ನರೇಶ್ ಮೂರನೇ ಮದುವೆಯಿಂದ ಹಿಡಿದು ಪವಿತ್ರಾ ಲೋಕೇಶ್ ಜೊತೆಗಿನ ಪ್ರೇಮ ಪ್ರಕರಣದವರೆಗಿನ ಎಲ್ಲವನ್ನೂ ನಾಯಕ ನರೇಶ್ ತಮ್ಮದೇ ಆ್ಯಂಗಲ್ ನಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ.
ಪವಿತ್ರಾ ಲವ್ ಸ್ಟೋರಿ ಬಟಾಬಯಲು
ನಿರ್ದೇಶಕ ವೈ.ವೈ.ರಾಜು. ನರೇಶ್ ತಮ್ಮ ಮೊದಲ ಮತ್ತು ಎರಡನೇ ಹೆಂಡತಿಗೆ ವಿಚ್ಛೇದನ ನೀಡಿದ ನಂತರ ಮೂರನೇ ಹೆಂಡತಿ ರಮ್ಯಾ ರಘುಪತಿಯನ್ನು ಹೇಗೆ ಪ್ರೀತಿಸುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದಾರೆ. ಅದರಲ್ಲಿ ಎಷ್ಟು ಸತ್ಯ, ಎಷ್ಟು ಸುಳ್ಳು ಎಂಬುದು ಯಾರಿಗೂ ತಿಳಿದಿಲ್ಲ.ಒಟ್ಟು ಮೂರು ಮದುವೆಗಳ ನಂತರ ಪವಿತ್ರಾ ಲೋಕೇಶ್ ಜೊತೆಗಿನ ಲವ್ ಸ್ಟೋರಿಯನ್ನು ಸಿನಿಮಾದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಪವಿತ್ರಾ ಲೋಕೇಶ್‌ಗೆ ಸುಚೇಂದ್ರ ಪ್ರಸಾದ್ ಕೊಟ್ರಾ ಟಾರ್ಚರ್?
ಪವಿತ್ರಾ ಲೋಕೇಶ್ ಲವ್ ಸ್ಟೋರಿಯ ಜೊತೆಗೆ ಆಕೆಯ ಗಂಡ ಸುಚೇಂದ್ರ ಪ್ರಸಾದ್ ತನ್ನ ಪತ್ನಿಗೆ ಕೊಟ್ಟ ಟಾರ್ಚರ್ ಬಗೆಗಿನ ಕೆಲ ದೃಶ್ಯಗಳು ಸಿನಿಮಾದಲ್ಲಿದೆ. ಪವಿತ್ರಾ ಲೋಕೇಶ್ ಸುಚೇಂದ್ರ ಪ್ರಸಾದ್ ಜೊತೆಗಿನ ಜಗಳ, ಮನಸ್ತಾಪದಿಂದಾಗಿ ನಟ ನರೇಶ್ಗೆ ಹತ್ತಿರವಾಗ್ತಾರೆ ಎಂದು ಸಿನಿಮಾದಲ್ಲಿ ತೋರಿಸಲಾಗಿದೆ. ಮತ್ತೊಂದೆಡೆ ನರೇಶ್ ಮತ್ತು ಪವಿತ್ರಾ ಲೋಕೇಶ್ ಸಂಬಂಧವನ್ನು ಬಹಿರಂಗಪಡಿಸಲು ನರೇಶ್ ಮೂರನೇ ಹೆಂಡತಿ ಮಾಡಿದ ಪ್ರಯತ್ನಗಳೇನು? ಅದಕ್ಕೆ ಸಹಾಯ ಮಾಡಿದ ಮಾಧ್ಯಮ ಯಾವುದು ಎನ್ನುವ ಬಗ್ಗೆ ಕೂಡ ಈ ಸಿನಿಮಾದಲ್ಲಿ ತೋರಿಸಲಾಗಿದೆ.
ಇದನ್ನೂ ಓದಿ: Deepika Das: ಬಿಸಿಲ ತಾಪ ತಾಳಲಾರದೆ ನೀರಿಗಿಳಿದ 'ನಾಗಿಣಿ', ಬೀಚ್ನಲ್ಲಿ ದೀಪಿಕಾ ದಾಸ್ ಮಸ್ತಿ!
ಇಬ್ಬರ ಸಂಬಂಧಕ್ಕೆ ಸಿಕ್ತು ಗ್ರೀನ್ ಸಿಗ್ನಲ್
ಮತ್ತೆ ಮದುವೆ ಸಿನಿಮಾದಲ್ಲಿ ನರೇಶ್, ಪವಿತ್ರಾ ಲೋಕೇಶ್ ರೊಮ್ಯಾನ್ಸ್ ಸೀನ್ಗಳು ಹೆಚ್ಚಾಗಿದೆ. ನಟಿ ಜಯ ಸುಧಾ ನರೇಶ್ ತಾಯಿ ಪಾತ್ರದಲ್ಲಿ ತಮ್ಮದೇ ಆದ ಅಭಿನಯ ತೋರಿದ್ದಾರೆ. ಕೊನೆಗೆ ನರೇಶ್ ಮತ್ತು ಪವಿತ್ರಾ ಸಂಬಂಧಕ್ಕೆ ನರೇಶ್ ತಂದೆ ನಟ ಕೃಷ್ಣ ಓಕೆ ಹೇಳಿದ್ದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ