ಕಳೆದ ಒಂದು ವಾರದಿಂದ ಕನ್ನಡ (Kannada) ಚಿತ್ರರಂಗದ ಪವಿತ್ರ ಲೋಕೇಶ್ (Pavitra Lokesh) ಹಾಗೂ ಮಹೇಶ್ ಬಾಬು (Mahesh Babu ಅಣ್ಣ ನರೇಶ್ (Naresh) ಮದುವೆ (Marriage) ವಿಚಾರ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಎಲ್ಲಿ ನೋಡಿದರೂ ಇವರಿಬ್ಬರ ಮದುವೆ ವಿಚಾರದ್ದೆ ಮಾತು. ತಮ್ಮ ಅಭಿನಯದ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ್ದರು. ಕೇವಲ ಕನ್ನಡ ಚಿತ್ರರಂಗಷ್ಟೇ ಅಲ್ಲದೇ, ತಮಿಳು (Tamil), ತೆಲುಗು (Telugu) , ಸಿನಿಮಾಗಳಲ್ಲೂ ತಮ್ಮ ಪ್ರಭಾವ ಬೀರುತ್ತಿದ್ದಾರೆ. ಪವಿತ್ರ ಲೋಕೇಶ್ ಒಬ್ಬ ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ನಟಿ. ರಂಗಭೂಮಿ ಮತ್ತು ಚಲನಚಿತ್ರ ನಟ ಮೈಸೂರು ಲೋಕೇಶ್ (Mysore Lokesh) ಅವರ ಮಗಳು. ಪವಿತ್ರ ಲೋಕೇಶ್ ತನ್ನ 16 ನೇ ವಯಸ್ಸಿನಲ್ಲಿ ಅಭಿನಯಿಸಿ ಎಲ್ಲರ ಮನಸ್ಸು ಗೆದ್ದಿದ್ದರು. 150 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಇತ್ತೀಚೆಗೆ ವೈಯಕ್ತಿಕ ವಿಚಾರಕ್ಕೆ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ನರೇಶ್ ಮತ್ತು ಪವಿತ್ರ ಲೋಕೇಶ್ ಒಟ್ಟಿಗೆ ಇದ್ದಾರೆ ಎಂದು ನರೇಶ್ ಮೂರನೇ ಪತ್ನಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನರೇಶ್ ಜೊತೆಯಲ್ಲೇ ಇದ್ದಾರಂತೆ ಪವಿತ್ರ!
ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಪತಿ ಬಗ್ಗೆ ಸ್ಪೋಟಕ ಮಾಹಿತಿಯನ್ನು ನೀಡಿದ್ದಾರೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಈಗಾಗಲೇ ಮದುವೆಯಾಗಿದ್ದಾರೆ ಎನ್ನುವ ಮಾತು ಟಾಲಿವುಡ್‌ನಲ್ಲಿ ಜೋರಾಗಿ ಚರ್ಚೆಯಾಗುತ್ತಿದೆ. ಇನ್ನೂ ಮೂರನೇ ಪತ್ನಿಗೆ ವಿಚ್ಛೇದನ ನೀಡದೆ ನಾಲ್ಕನೇ ಮದುವೆಯಾಗಿದ್ದಾರೆ ಎನ್ನುವ ಸುದ್ದಿಯಾಗಿತ್ತು. ಆದರೆ, ಈ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಈಗ ಸ್ವತ: ನರೇಶ್ ಮೂರನೇ ಪತ್ನಿ ರಮ್ಯಾ ಪತಿಯ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ನರೇಶ್ ಯಾವ ರೀತಿಯ ವ್ಯಕ್ತಿ ಎಂದು ಎಲ್ಲರ ಮುಂದೆ ತೆರೆದಿಟ್ಟಿದ್ದಾರೆ.
ನರೇಶ್ ಒಬ್ಬ ಹೆಣ್ಣು ಬಾಕ ಎಂದು ಮೂರನೇ ಪತ್ನಿ!
ಬೆಂಗಳೂರು ಮೂಲದ ರಮ್ಯಾ ರಘುಪತಿ ಎಂಬುವವರನ್ನು ನರೇಶ್ ಮದುವೆಯಾಗಿದ್ದರು. ಕನ್ನಡ ನ್ಯೂಸ್ ಚಾನೆಲ್ ಪವರ್ ಟಿವಿ ಸಂದರ್ಶನದಲ್ಲಿ ರಮ್ಯಾ ರಘುಪತಿ ತಮ್ಮ ಬಗ್ಗೆ ಮಾಹಿತಿ ನೀಡಿದ್ದಾರೆ. ಜೊತೆ ತಮ್ಮ ಪತಿ ನಟ ನರೇಶ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 'ನರೇಶ್ ಒಬ್ಬ ಹೆಣ್ಣುಬಾಕ. ಆತ ಹೆಣ್ಣುಬಾಕ ಅನ್ನುವುದು ಮದುವೆಯಾದ ಮೂರು ವರ್ಷಕ್ಕೆ ತಿಳಿದಿತ್ತು. ನಮ್ಮ ಅತ್ತೆಯವರದ್ದು ತುಂಬು ಕುಟುಂಬ. ಎಲ್ಲರೂ ಒಟ್ಟಿಗೆ ಇರುತ್ತೇವೆ. ಪ್ರತಿಯೊಂದು ಕ್ಷಣವನ್ನು ಅನುಭವಿಸೋಣ ಅವರು ಹೇಳಿದ್ದರು. ಇವರು ನೋಡಿದರೆ, ಹೆಂಗಸರು ಅಂದರೆ ಬಾಯಿ ಬಿಡುತ್ತಿದ್ದರು. ಎಲ್ಲ ರೀತಿಯಲ್ಲೂ ನಾನು ಕೇಳಿಕೊಂಡಿದ್ದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಹೇಶ್ ಬಾಬು ಸಹೋದರನನ್ನು ಮದುವೆಯಾಗಿದ್ದರಂತೆ ಪವಿತ್ರಾ ಲೋಕೇಶ್
ಪವಿತ್ರ ಲೋಕೇಶ್ -ನರೇಶ್ ಮದ್ವೆ ಕನ್ಫರ್ಮ್ ಎಂದ ರಮ್ಯಾ!
ಪವಿತ್ರಾ ಲೋಕೇಶ್ ಹಾಗೂ ಪತಿ ನರೇಶ್ ಬಗ್ಗೆನೂ ರ ರಮ್ಯಾ ರಘುಪತಿ ಸ್ಟೋಟಕ ಹೇಳಿಕೆ ಕೊಟ್ಟಿದ್ದಾರೆ. 'ಪವಿತ್ರಾ ಲೋಕೇಶ್ ಹಾಗೂ ನರೇಶ್ ಕಳೆದ 6 ವರ್ಷಗಳಿಂದ ಲಿವ್ ಇನ್ ರಿಲೇಷನ್‌ಶಿಫ್‌ನಲ್ಲಿದ್ದಾರೆ. ಈಗ ಅವರು ಮದುವೆ ಆಗಲು ಹೊರಟಿದ್ದಾರೆ' ಎಂದು ಅವರು ಆರೋಪ ಮಾಡಿದ್ದಾರೆ.
ಯಾರು ಈ ನರೇಶ್? ಅವರ ಹಿನ್ನೆಲೆ ಏನು?
ಟಾಲಿವುಡ್ ಸೂಪರ್ ಸ್ಟಾರ್ ಕೃಷ್ಣ ಅವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಮಹೇಶ್ ಬಾಬು ಅವರ ತಂದೆ ಕೃಷ್ಣ ಒಂದಾನೊಂದು ಕಾಲದಲ್ಲಿ ತೆಲುಗು ಚಿತ್ರರಂಗವನ್ನು ಆಳಿದವರು. ಕೃಷ್ಣ ಅವರ ಎರಡನೇ ಹೆಂಡತಿ ಮಗ ಈ ನರೇಶ್. ಕೃಷ್ಣ ಅವರ ಮೊದಲನೇ ಹೆಂಡತಿ ಹೆಸರು ಇಂದಿರಾ ದೇವಿ. ಕೃಷ್ಣ ಅವರ ಎರಡನೇ ಹೆಂಡತಿ ಹೆಸರು ವಿಜಯ ನಿರ್ಮಲ. ವಿಜಯ ನಿರ್ಮಲ ಅವರ ಮಗನೇ ನರೇಶ್. ನೀವೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ನರೇಶ್ ಅವರನ್ನು ನೋಡಿದ್ದೀರಾ. ತೆಲುಗು ಚಿತ್ರರಂಗದಲ್ಲೂ ಸಾಕಷ್ಟು ಹೆಸರು ಮಾಡಿದ್ದಾರೆ ನರೇಶ್. ನರೇಶ್ ತಾಯಿ ಅಂದರೆ ವಿಜಯ ನಿರ್ಮಲಾ ಹಾಗೂ ಅವರ ಮೊದಲ ಕೆ.ಎಸ್.ಮೂರ್ತಿ ಅವರ ಮಗ ನರೇಶ್, ಕೆ.ಎಸ್ ಮೂರ್ತಿ ಅವರ ಜೊತೆ ಡಿವೋರ್ಸ್ ಪಡೆದು ಕೃಷ್ಣ ಅವರನ್ನು ಮದುವೆಯಾಗಿದ್ದರು.
ಇದನ್ನೂ ಓದಿ: Pavitra Lokesh ಮದುವೆಯಾಗಿರುವ ಆ ನಟನ ಆಸ್ತಿ 6000 ಕೋಟಿಯಂತೆ! ಆತನಿಗೆ ಇದು ನಾಲ್ಕನೇ ಮದುವೆ
ನರೇಶ್ ಅವರ ಒಟ್ಟು ಆಸ್ತಿ 6000 ಕೋಟಿಯಂತೆ!
ಹೌದು, ನರೇಶ್ ಹೇಳಿ ಕೇಳಿ ದೊಡ್ಡ ಮನೆಯಲ್ಲಿ ಹುಟ್ಟಿದವರು. ಮೊದಲ ಅಪ್ಪ ಕೂಡ ಸಾಕಷ್ಟು ಹಣ ಮಾಡಿದ್ದರು. ಎರಡನೇ ಅಪ್ಪ ಕೂಡ ಸೂಪರ್ ಸ್ಟಾರ್. ಇನ್ನೇನು ಕೇಳಬೇಕಾ? ಹುಟ್ಟಿದಾಗಿನಿಂದಲೂ ಗೋಲ್ಡನ್ ಸ್ಪೂನ್ ಇಟ್ಟುಕೊಂಡೇ ಬಂದವರು. ನರೇಶ್ ಒಟ್ಟು ಆಸ್ತಿ 6 ಸಾವಿರ ಕೋಟಿ ಎಂದು ಹೇಳಲಾಗುತ್ತಿದೆ. ಜೊತೆಗೆ ನರೇಶ್ ಅವರಿಗೂ ಇದು ನಾಲ್ಕನೇ ಮದುವೆ ಎಂದು ಹೇಳಲಾಗುತ್ತಿದೆ. 62 ವರ್ಷದ ನರೇಶ್ ಇದೀಗ 43 ವರ್ಷದ ಪವಿತ್ರಾ ಲೋಕೇಶ್ ಅವರನ್ನು ಮದುವೆಯಾಗುತ್ತಿದ್ದಾರಂತೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ