• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Jaggesh: ಸೋಶಿಯಲ್ ಮೀಡಿಯಾದಲ್ಲಿ ವಂದೇ ಮಾತರಂ ಹವಾ, ಜಗ್ಗೇಶ್ ನಿರ್ಮಾಣದ ವಿಡಿಯೋಗೆ ಮೋದಿ ಶ್ಲಾಘನೆ

Jaggesh: ಸೋಶಿಯಲ್ ಮೀಡಿಯಾದಲ್ಲಿ ವಂದೇ ಮಾತರಂ ಹವಾ, ಜಗ್ಗೇಶ್ ನಿರ್ಮಾಣದ ವಿಡಿಯೋಗೆ ಮೋದಿ ಶ್ಲಾಘನೆ

ವಂದೇ ಮಾತರಂ ಮ್ಯೂ,ಸಿಕಲ್ ವಿಡಿಯೋ

ವಂದೇ ಮಾತರಂ ಮ್ಯೂ,ಸಿಕಲ್ ವಿಡಿಯೋ

 ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭಕ್ಕಾಗಿ ಹಿರಿಯ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್‌ ಅವರು ನಿರ್ಮಾಣ ಮಾಡಿದ್ದ ವಂದೇ ಮಾತರಂ ಮ್ಯೂಸಿಕಲ್ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಈ ಮ್ಯೂಸಿಕಲ್ ಈ ವಿಡಿಯೊವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೂ ಮೆಚ್ಚಿಕೊಂಡಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು: 75ನೇ ಸ್ವಾತಂತ್ರ್ಯೋತ್ಸವದ (75th Independence Day) ಸಂಭ್ರಮ ಇನ್ನೂ ಮುಗಿದಿಲ್ಲ. ನಿನ್ನೆಯಷ್ಟೇ ಇಡೀ ದೇಶಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು (Azadika Amrit Mahotsav) ಆಚರಿಸಲಾಗಿತ್ತು. ಈ ವೇಳೆ ಸೋಶಿಯಲ್ ಮೀಡಿಯಾಗಳಲ್ಲಿ (Social media) ಎಲ್ಲರ ಡಿಪಿ (DP), ಸ್ಟೇಟಸ್ (Status) ಎಲ್ಲವೂ ತಿರಂಗಾ (Tri-Colors) ಮಯವಾಗಿತ್ತು. ಇನ್ನು ಅನೇಕರು ವಂದೇ ಮಾತರಂ (Vande Mataram) ಸೇರಿದಂತೆ ರಾಷ್ಟ್ರಭಕ್ತಿಯನ್ನು ಸಾರುವ ವಿಡಿಯೋಗಳನ್ನು (Video) ಮಾಡಿದ್ದರು. ಈ ಪೈಕಿ ಕರ್ನಾಟಕದಲ್ಲಿ (Karnataka) ಸದ್ದು ಮಾಡಿದ್ದು ವಂದೇ ಮಾತರಂ ವಿಡಿಯೋ. ಹಿರಿಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ (Jaggesh) ನಿರ್ಮಾಣ ಮಾಡಿದ ಈ ಮ್ಯೂಸಿಕಲ್ ವಿಡಿಯೋ (Musical Video) ಭಾರೀ ಸದ್ದು ಮಾಡುತ್ತಿದೆ. ಖ್ಯಾತ ಗಾಯಕ ವಿಜಯ್ ಪ್ರಕಾಶ್ (Vijay Prakash) ಹಾಡಿದ್ದ ಈ ಮ್ಯೂಸಿಕಲ್ ವಿಡಿಯೋದಲ್ಲಿ ಖುದ್ದು ಜಗ್ಗೇಶ್ ಜೊತೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಶ್ರೀಮುರಳಿ, ಅನಂತನಾಗ್, ರವಿಚಂದ್ರನ್ ಸೇರಿದಂತೆ ಹಿರಿ-ಕಿರಿಯ ನಟರು ಅಭಿನಯಿಸಿದ್ದರು. ರಾಷ್ಟ್ರಭಕ್ತಿಯನ್ನು ಸಾರಿದ್ದ ಈ ಮ್ಯೂಸಿಕಲ್ ವಿಡಿಯೋಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ (PM Narendra Modi) ಈ ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ.


 ವಂದೇ ಮಾತರಂ ಮ್ಯೂಸಿಕಲ್ ವಿಡಿಯೋ ಮೆಚ್ಚಿಕೊಂಡ ಮೋದಿ


 ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭಕ್ಕಾಗಿ ಹಿರಿಯ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್‌ ಅವರು ನಿರ್ಮಾಣ ಮಾಡಿದ್ದ ವಂದೇ ಮಾತರಂ ಮ್ಯೂಸಿಕಲ್ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಈ ಮ್ಯೂಸಿಕಲ್ ಈ ವಿಡಿಯೊವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೂ ಮೆಚ್ಚಿಕೊಂಡಿದ್ದಾರೆ.




ಬೊಮ್ಮಾಯಿ ಹಂಚಿಕೊಂಡಿದ್ದ ವಿಡಿಯೋ


ಈ ವಿಡಿಯೊವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದನ್ನು ಪ್ರಧಾನಿ ನರೇಂದ್ರ ಮೋದಿ ರೀ ಟ್ವೀಟ್ ಮಾಡಿದ್ದಾರೆ. ‘ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆಗೈದ ಕರ್ನಾಟಕದ ಅಪ್ರತಿಮ ಸಾಧಕರ ಅತ್ಯುತ್ತಮ ಪ್ರಯತ್ನ’ ಎಂದು ಕನ್ನಡದಲ್ಲಿಯೇ ಶೀರ್ಷಿಕೆ ನೀಡಿ ಪ್ರಧಾನಿ ನರೇಂದ್ರ ಮೋದಿ ರಿಟ್ವೀಟ್‌ ಮಾಡಿದ್ದಾರೆ.


ಇದನ್ನೂ ಓದಿ: Doresani: ಸತ್ಯವತಿಗೆ ಆನಂದ್ ತನ್ನ ಮಗ ಎಂದು ಗೊತ್ತಾಯ್ತಾ? ಎದುರಿಗೇ ಇದ್ದರೂ ಮಾತನಾಡಿಸುತ್ತಿಲ್ಲ ಏಕೆ?


 ಈ ವಿಡಿಯೋ ಬಗ್ಗೆ ಜಗ್ಗೇಶ್ ಹೇಳಿದ್ದೇನು?


ವಿಡಿಯೊ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಜಗ್ಗೇಶ್‌, ‘ನನಗೆ ‘ಮಿಲೇ ಸುರ್ ಮೇರಾ ತುಮಾರ’ ಹಾಡೆಂದರೆ ಚಿಕ್ಕವಯಸ್ಸಿನಲ್ಲೇ ಬಲು ಇಷ್ಟ. ಇಂತಹದೊಂದು ಹಾಡನ್ನು ನಮ್ಮ ಕನ್ನಡ ಕಲಾವಿದರ ಸಮಾಗಮದಲ್ಲಿ ಮಾಡಬೇಕೆಂಬ ಆಸೆಯಿತ್ತು. ಗೆಳೆಯ ಶ್ರೀನಿಧಿ ಅವರು ಕೆಲವು ದಿನಗಳ ಹಿಂದೆ ಈ ಹಾಡಿನ ಬಗ್ಗೆ ಪ್ರಸ್ತಾಪಿಸಿದರು. ನಾನು ನಿರ್ಮಾಣಕ್ಕೆ ಮುಂದಾದೆ. ಕೇವಲ ಹದಿಮೂರು ದಿನಗಳಲ್ಲಿ ಈ ಹಾಡು ನಿರ್ಮಾಣವಾಗಿದೆ. ಜೊತೆಗೆ ಅದ್ಭುತವಾಗಿ ಮೂಡಿಬಂದಿದೆ’ ಎಂದಿದ್ದಾರೆ.



ಹಾಡಿನಲ್ಲಿ ಘಟಾನುಘಟಿಗಳ ಅಭಿನಯ


ಖ್ಯಾತ ನಿರ್ದೇಶಕ, ರಾಜಕುಮಾರ ಖ್ಯಾತಿಯ ಸಂತೋಷ್‌ ಆನಂದರಾಮ್‌ ಅವರೇ ಈ ವಂದೇ ಮಾತರಂ ಮ್ಯೂಸಿಕಲ್ ವಿಡಿಯೋ ನಿರ್ದೇಶನ ಮಾಡಿದ್ದಾರೆ. ಈ ಹಾಡಿಗೆ ಪ್ರವೀಣ್ ಡಿ. ರಾವ್ ಸಂಗೀತ ನೀಡಿದ್ದು, ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. ಶ್ರೀಶ ಕುದವಳ್ಳಿ ಛಾಯಾಗ್ರಹಣ ಈ ಹಾಡಿಗಿದೆ.


ಇದನ್ನೂ ಓದಿ: Prashanth Neel: ಸಾಧನೆ ಶಿಖರ ಏರಿದ್ದರೂ ಹುಟ್ಟೂರು ಮರೆಯದ ಪ್ರಶಾಂತ್ ನೀಲ್, ಕಣ್ಣಿನ ಆಸ್ಪತ್ರೆಗೆ 50 ಲಕ್ಷ ಕೊಟ್ಟ ಕೆಜಿಎಫ್ ಡೈರೆಕ್ಟರ್!


ನಟರಾದ ಜಗ್ಗೇಶ್, ಸುದೀಪ್‌, ಶಿವರಾಜಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್, ಅನಂತನಾಗ್, ಅರ್ಜುನ್ ಸರ್ಜಾ, ಗಣೇಶ್, ಶ್ರೀಮುರಳಿ, ಧನಂಜಯ, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಸಾಹಿತಿ ಎಸ್.ಎಲ್. ಭೈರಪ್ಪ, ಸಾಲುಮರದ ತಿಮ್ಮಕ್ಕ, ಜೋಗತಿ ಮಂಜಮ್ಮ ಹಾಗೂ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ಸೇರಿದಂತೆ ಘಟಾನುಘಟಿಗಳು ಅಭಿನಯಿಸಿದ್ದಾರೆ.

Published by:Annappa Achari
First published: