Samanvi: ತಾಯಿ ಮುಂದೆಯೇ ಮಗಳನ್ನು ಬಲಿ ಪಡೆದ ಜವರಾಯ.. ಮೊದಲ ಮಗು ಕಳೆದುಕೊಂಡಿದ್ದ ಅಮೃತಾಗೆ ಮತ್ತೆ ಆಘಾತ!

ಕಿರುತೆರೆ ಕಲಾವಿದೆ ಅಮೃತಾ(Amrutha) ಈ ಹಿಂದೆಯೂ ತನ್ನ ಮೊದಲ ಮಗವನ್ನು ಕಳೆದುಕೊಂಡಿದ್ದರು. ಇದೀಗ ಎರಡನೇ ಮಗುವು ಈ ರೀತಿ ದುರಂತಕ್ಕೆ ಮೃತಪಟ್ಟಿರುವುದು ಸಹಿಸಿಕೊಳ್ಳಲಾರದಂತಹ ನೋವು ತಂದಿದೆ.ಕಲರ್ಸ್​ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೇ ‘ನನ್ನಮ್ಮ ಸೂಪರ್ ಸ್ಟಾರ್’ (Nannamma Superstar) ರಿಯಾಲಿಟಿಶೋ ಆರಂಭಗೊಂಡಿದೆ. ಈ ಕಾರ್ಯಕ್ರಮಕ್ಕೆ 6  ವರ್ಷದ  ಸಮನ್ವಿ (Samanvi) ಸ್ಪರ್ಧಿಯಾಗಿ ತೆರಳಿದ್ದಳು.

ಅಮೃತಾ ನಾಯ್ಡು, ಸಮನ್ವಿ

ಅಮೃತಾ ನಾಯ್ಡು, ಸಮನ್ವಿ

  • Share this:
ನಗು(Smile)ವಿನ ಹಿಂದೆ ಅಳು ಇರುತ್ತೆ. ಹುಟ್ಟಿ(Birth)ನ ಹಿಂದೆ ಸಾವು(Death) ಆವರಿಸಿಕೊಂಡಿರುತ್ತಂತೆ. ಯಾರಯ, ಯಾವಾಗ, ಹೇಗೆ ಬೇಕಾದರೂ ಸಾಯಬಹುದು. ಆದರೆ, ಇಂಥ ಸಾವು, ಇಂಥ ದುರಂತ ಯಾರಿಗೂ ಬೇಡ. ನನ್ನಮ್ಮ ಸೂಪರ್​ ಸ್ಟಾರ್(Nannamma SuperStar) ರಿಯಾಲಿಟಿ ಶೋ ನಲ್ಲಿ ಮಿಂಚುತ್ತಿದ್ದ ಆರು ವರ್ಷದ ಬಾಲಕಿ ಸಮನ್ವಿ(Samanvi) ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಇದನ್ನು ಯಾರಿಂದಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ತಾಯಿ ಮುಂದೆ ಮಕ್ಕಳು ಮೃತಪಟ್ಟರೆ ತಾಯಿ ಪಾಡೇನು. ಅದನ್ನು ಆಕೆ ಹೇಗೆ ಸಹಿಸಿಕೊಳ್ಳುತ್ತಾಳೆ. ಪ್ರಪಂಚದಲ್ಲಿ ತಂದೆ-ತಾಯಿ  ಮುಂದೆ ಮಕ್ಕಳು ಮೃತಪಟ್ಟಾಗ ಆಗುವ ನೋವಿಗಿಂತ ಹೆಚ್ಚಿನ ನೋವು ಮತ್ತೊಂದಿಲ್ಲ. ಆದರೆ, ಇಲ್ಲಿ ತಾಯಿಗೆ ಎರಡನೇ ಬಾರಿ ಈ ರೀತಿಯ ದುರಂತ ನಡೆದಿರುವುದು. ಹೌದು, ಕಿರುತೆರೆ ಕಲಾವಿದೆ ಅಮೃತಾ(Amrutha) ಈ ಹಿಂದೆಯೂ ತನ್ನ ಮೊದಲ ಮಗವನ್ನು ಕಳೆದುಕೊಂಡಿದ್ದರು. ಇದೀಗ ಎರಡನೇ ಮಗುವು ಈ ರೀತಿ ದುರಂತಕ್ಕೆ ಮೃತಪಟ್ಟಿರುವುದು ಸಹಿಸಿಕೊಳ್ಳಲಾರದಂತಹ ನೋವು ತಂದಿದೆ.ಕಲರ್ಸ್​ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೇ ‘ನನ್ನಮ್ಮ ಸೂಪರ್ ಸ್ಟಾರ್’ (Nannamma Superstar) ರಿಯಾಲಿಟಿಶೋ ಆರಂಭಗೊಂಡಿದೆ. ಈ ಕಾರ್ಯಕ್ರಮಕ್ಕೆ 6  ವರ್ಷದ  ಸಮನ್ವಿ (Samanvi) ಸ್ಪರ್ಧಿಯಾಗಿ ತೆರಳಿದ್ದಳು. ಜನವರಿ 13ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಮನ್ವಿ ಮೃತಪಟ್ಟಿದ್ದಾಳೆ. ಇದು ಅವಳ ಅಭಿಮಾನಿಗಳಿಗೆ ದುಃಖ ತಂದಿದೆ. ಖ್ಯಾತ ಹರಿಕಥೆ ದಾಸ ಗುರುರಾಜ ನಾಯ್ಡುರ ಮೊಮ್ಮಗಳು ಸಮನ್ವಿ, ಚಿಕ್ಕ ವಯಸ್ಸಿಗೆ ಇಹಲೋಕ ಸೇರಿದ್ದಾಳೆ.

ಮೊದಲ ಮಗು ಮೃತಪಟ್ಟಾಗ ಪೇಪರ್​​ನಲ್ಲಿ  ಸುತ್ತು ಕೊಟ್ಟಿದ್ದ ಸಿಬ್ಬಂದಿ!

ಹೌದು, ಕನ್ನಡ 25ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಮೃತಾ ನಟಿಸಿದ್ದರು. ಈ ಹಿಂದೆ ಇವರ ಮೊದಲ ಮಗು ಕೂಡ ಎಷ್ಟೇ ಪ್ರಯತ್ನ ಪಟ್ಟರು ಬದುಕುಳಿದಿರಲಿಲ್ಲ. ತಾಯಿ ಅಮೃತಾ ಮಗುವನ್ನು ಉಳಿಸಿಕೊಳ್ಳಲು ಹರಸಾಹ ಪಟ್ಟಿದ್ದರು. ಆಸ್ಪತ್ರೆಯಲ್ಲಿ ಹಲವು ದಿನ ಚಿಕಿತ್ಸೆ ಕೊಡಿಸಿದರು ಮಗು ಉಳಿಯಲಿಲ್ಲ. ಆ ಮಗುವನ್ನು ಆಸ್ಪತ್ರೆ ಸಿಬ್ಬಂದಿ ಪೇಪರ್​ನಲ್ಲಿ ಸುತ್ತು ಕೊಟ್ಟಿದ್ದರಂತೆ. ಇದನ್ನು ಹೇಳಿಕೊಂಡು ಈ ಹಿಂದೆ ನನ್ನಮ್ಮ ಸೂಪರ್​ ಸ್ಟಾರ್​​ ವೇದಿಕೆಯಲ್ಲೇ ಅಮೃತಾ ಕಣ್ಣೀರು ಹಾಕಿದ್ದರು. 2ನೇ ಮಗು ಸಮನ್ವಿ ಬಂದ ಬಳಿಕ ಈ ನೋವನ್ನು ಕುಟುಂಬದವರು ಮರೆತಿದ್ದರು. ಇದೀಗ ಸಮನ್ವಿ ಕೂಡ ದುರಂತದಲ್ಲಿ ಮೃತಪಟ್ಟಿದ್ದಾಳೆ.

ಇದನ್ನು ಓದಿ : ಅಪ್ಪು ದೇವರು ಅನ್ನೋಕೆ ಈ ಫೋಟೋಗಳೇ ಸಾಕ್ಷಿ.. ನೋಡಿದವರ ಮನಸ್ಸು ಭಾರವಾಗುತ್ತೆ ಕಣ್ರಿ..!

ಈಗ ನಾಲ್ಕೂವರೆ ತಿಂಗಳು ಗರ್ಭಿಣಿ ಅಮೃತಾ!

ಅಮೃತಾಗೆ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಅವರಿಗೆ ಈಗ ನಾಲ್ಕೂವರೆ ತಿಂಗಳು. ಆದರೆ, 2ನೇ ಮಗು ಸಮನ್ವಿ ಸಾವು ಬರಸಿಡಿಲಿನಂತೆ ಬಂದು ಎರಗಿದ್ದು, ಎಲ್ಲರಿಗೂ ಆಘಾತ ತಂದಿಟ್ಟಿದೆ. ಮೊದಲ ಮಗು ಅನಾರೋಗ್ಯದಿಂದ ಮೃತಪಟ್ಟಿತ್ತು. ಎರಡನೇ ಮಗು ಅಪಘಾತದಲ್ಲಿ ಮೃತಪಟ್ಟಿದೆ. ನನ್ನಮ್ಮ ಸೂಪರ್​ ಸ್ಟಾರ್​ ಶೋನಲ್ಲಿ ಸದಾ ಸಮನ್ವಿ ಲವಲವಿಕೆಯಿಂದ ಇರುತ್ತಿದ್ದರು. ತನ್ನ ತಾಯಿ ಮನೆಯಿಂದ ಮನೆಗೆ ಹೋಗುವಾಗ ಅಮೃತಾ ಅವರ ಸ್ಕೂಟಿಗೆ ಟಿಪ್ಪರ್​ ಲಾರಿ ಹಿಂದೆಯಿಂದ ಡಿಕ್ಕಿ ಹೊಡೆದತ್ತು. ಸ್ಥಳದಲ್ಲೇ ಲಿಟಲ್​ ಸ್ಟಾರ್​ ಸಮನ್ವಿ ಕೊನೆಯುಸಿರೆಳೆದಿದ್ದಳು.

ಇದನ್ನು ಓದಿ : ಅಪಘಾತಕ್ಕೀಡಾದ ಧಾರವಾಹಿ ನಟಿ Amrutha Naiduರ ವಾಹನ: 6 ವರ್ಷದ ಮಗಳ ದುರ್ಮರಣ!

ಸಮನ್ವಿಯ ಮೃತದೇಹ ಇಂದು ಕುಟುಂಬಕ್ಕೆ ಹಸ್ತಾಂತರ

ಇನ್ನೂ ಇಂದು ಬೆಳಗ್ಗೆ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ. ಸದ್ಯ ಬಾಲಕಿಯ ಮೃತದೇಹ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿದೆ. ದ್ಯ ಮಗುವಿನ ತಾಯಿ ಅಮೃತಾ ನಾಯ್ದು(Amrutha Naidu) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಪುಟಾಣಿ ಸಮನ್ವಿಯ ನಿಧನಕ್ಕೆ ಸ್ಯಾಂಡಲ್​ಡವುಡ್​​= ನ ಕಲಾವಿದರಾದ ಕಿಚ್ಚ ಸುದೀಪ್(Kichcha Sudeepa), ತಾರಾ ಅನುರಾಧ್, ಅನುಪ್ರಭಾಕರ್, ಸೃಜನ್ ಲೋಕೇಶ್ ಸೇರಿದಂತೆ ಕಿರುತೆರೆ ಕಲಾವಿದರು ಕಂಬನಿ ಮಿಡಿದಿದ್ದಾರೆ.
Published by:Vasudeva M
First published: