ಕೊರೋನಾ ಭೀತಿಯಿಂದಾಗಿ ಇನ್ನೂ ಸಹ ಲಾಕ್ಡೌನ್ ಅನ್ನು ಸಂಪೂರ್ಣವಾಗಿ ಸಡಿಲಗೊಳಿಸಲಾಗಿಲ್ಲ. ಇದರಿಂದಾಗಿಯೇ ಚಿತ್ರಮಂದಿರಗಳು ಇನ್ನೂ ಲಾಕಾಗಿಯೇ ಇವೆ. ಇದೇ ಕಾರಣದಿಂದಾಗಿ ಸಾಕಷ್ಟು ಸಿನಿಮಾಗಳ ರಿಲೀಸ್ ದಿನಾಂಕ ಸಹ ಮುಂದಕ್ಕೆ ಹೋಗುತ್ತಲೇ ಇದೆ.
ಆದರೆ, ಕೆಲ ಫಿಲ್ಮ್ ಮೇಕರ್ಸ್ ಮಾತ್ರ ತಮ್ಮ ಸಿನಿಮಾಗಳನ್ನು ಒಟಿಟಿ ವೇದಿಕೆ ಮೂಲಕ ರಿಲೀಸ್ ಮಾಡುತ್ತಿದ್ದಾರೆ. ಬಾಲಿವುಡ್ನ ಸಾಕಷ್ಟು ಚಿತ್ರಗಳು ಈಗಾಗಲೇ ಒಟಿಟಿ ಮೂಲಕ ರಿಲೀಸ್ ಆಗಿವೆ. ಇನ್ನು ತೆರೆಕಾಣಲು ಹಲವಾರು ಸಿನಿಮಾಗಳು ಸಾಲುಗಟ್ಟಿವೆ. ಈಗ ಒಟಿಟಿ ಮೂಲಕ ಆಗೊಂದು ಈಗೊಂದು ತೆಲುಗು ಸಿನಿಮಾಗಳು ರಿಲೀಸ್ ಆಗುತ್ತಿದೆ. ಈ ಪಟ್ಟಿಗೆ ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ 'ವಿ' ಸಿನಿಮಾ ಸಹ ಸೇರಿಕೊಂಡಿದೆ.
View this post on Instagram
ನಾನಿ ಅಭಿನಯದ ವಿ ಸಿನಿಮಾವನ್ನು ನಿರ್ಮಾಪಕ ದಿಲ್ ರಾಜು 33 ಕೋಟಿಗೆ ಅಮೆಜಾನ್ ಪ್ರೈಂಗೆ ಮಾರಾಟ ಮಾರಿದ್ದಾರೆ ಎನ್ನಲಾಗುತ್ತಿದೆ. ಇನ್ನು ಉಳಿದಂತೆ ಟ್ಯಾಕ್ಸಿವಾಲಾ ಖ್ಯಾತಿಯ ನಿರ್ದೇಶಕ ರಾಹುಲ್ ಅವರು ಆ್ಯಕ್ಷನ್ ಕಟ್ ಹೇಳಿರುವ ಶ್ಯಾಮ್ ಸಿಂಗ ರಾಯ್ ಚಿತ್ರದಲ್ಲಿ ನಾನಿ ನಾಯಕನಾಗಿ, ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ವಿಲನ್ ಪಾತ್ರಕ್ಕಾಗಿ ಬಾಲಿವುಟ್ ನಟಿಯನ್ನು ಆಯ್ಕೆ ಮಾಡಲಾಗಿದೆಯಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ