• Home
  • »
  • News
  • »
  • entertainment
  • »
  • Ante Sundaraniki: ‘ಅಂಟೇ ಸುಂದರಾನಿಕಿ’ ಚಿತ್ರದ ಟ್ರೈಲರ್ ಔಟ್; ಹಾಗಿದ್ರೆ ಸಿನೆಮಾ ರಿಲೀಸ್ ಯಾವಾಗ?

Ante Sundaraniki: ‘ಅಂಟೇ ಸುಂದರಾನಿಕಿ’ ಚಿತ್ರದ ಟ್ರೈಲರ್ ಔಟ್; ಹಾಗಿದ್ರೆ ಸಿನೆಮಾ ರಿಲೀಸ್ ಯಾವಾಗ?

‘ಅಂಟೇ ಸುಂದರಾನಿಕಿ’ ಸಿನೆಮಾದ ಟ್ರೈಲರ್ ಔಟ್

‘ಅಂಟೇ ಸುಂದರಾನಿಕಿ’ ಸಿನೆಮಾದ ಟ್ರೈಲರ್ ಔಟ್

ತೆಲುಗು ಚಲನಚಿತ್ರೋದ್ಯಮದಲ್ಲಿ ನ್ಯಾಚುರಲ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟ ನಾನಿ ಯಾವುದೇ ಪಾತ್ರದಲ್ಲಿ ಅಭಿನಯಿಸಿದರೂ ಅದು ತುಂಬಾನೇ ನ್ಯಾಚುರಲ್ ಆಗಿ ಮೂಡಿಬರುತ್ತದೆ ಮತ್ತು ಅಭಿಮಾನಿಗಳು ಇದನ್ನೇ ಇಷ್ಟ ಪಡುತ್ತಾರೆ ಕೂಡ. ಈಗ ನಟ ನಾನಿಯ ಅಭಿಮಾನಿಗಳು ಅವರ ಮುಂದಿನ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಇದೆ ನೋಡಿ.

ಮುಂದೆ ಓದಿ ...
  • Share this:

ತೆಲುಗು ಚಲನಚಿತ್ರೋದ್ಯಮದಲ್ಲಿ (Telugu Film Industry) ನ್ಯಾಚುರಲ್ ಸ್ಟಾರ್ (Natural Star) ಎಂದೇ ಖ್ಯಾತಿ ಪಡೆದಿರುವ ನಟ ನಾನಿ (Actor Nani) ಯಾವುದೇ ಪಾತ್ರದಲ್ಲಿ ಅಭಿನಯಿಸಿದರೂ ಅದು ತುಂಬಾನೇ ನ್ಯಾಚುರಲ್ ಆಗಿ ಮೂಡಿಬರುತ್ತದೆ ಮತ್ತು ಅಭಿಮಾನಿಗಳು (Fans) ಇದನ್ನೇ ಇಷ್ಟ ಪಡುತ್ತಾರೆ ಕೂಡ. ಈಗ ನಟ ನಾನಿಯ ಅಭಿಮಾನಿಗಳು ಅವರ ಮುಂದಿನ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಇದೆ ನೋಡಿ. ನಾನಿ ಅಭಿನಯದ ‘ಅಂಟೇ ಸುಂದರಾನಿಕಿ’ (Ante Sundaraniki ) ಚಿತ್ರದ ಟ್ರೈಲರ್ (Trailer) ಇದೀಗ ಬಿಡುಗಡೆಯಾಗಿದೆ.


ಕಳೆದ ವಾರವಷ್ಟೆ ಚಿತ್ರದ ‘ರಂಗೋ ರಂಗಾ’ ಎಂಬ ಶೀರ್ಷಿಕೆಯ ಮೂರನೇ ಹಾಡನ್ನು ಬಿಡುಗಡೆ ಮಾಡಿದ್ದರು. ಈ ಹಾಡು ನಾನಿ ಚಿತ್ರದಲ್ಲಿ ನಟಿಸಿದ ಸುಂದರ್ ಪಾತ್ರದ ಉಲ್ಲಾಸಕರ ಜೀವನವನ್ನು ಒಳಗೊಂಡಿತ್ತು. ವಿವೇಕ್ ಸಾಗರ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಎನ್ ಸಿ ಕಾರುಣ್ಯ ಈ ಹಾಡನ್ನು ಹಾಡಿದ್ದರು. ಸನಾಪತಿ ಭಾರದ್ವಾಜ್ ಪತ್ರುಡು ಈ ಹಾಡಿಗೆ ಸಾಹಿತ್ಯ ಬರೆದಿದ್ದರು.


ನಟ ನಾನಿ ಹಾಗೂ ನಟಿ ನಜ್ರಿಯಾ ನಜೀಮ್ ಅಭಿನಯದ 'ಅಂಟೇ ಸುಂದರಾನಿಕಿ'
ಈ ‘ರಂಗೋ ರಂಗಾ’ ಹಾಡು ಅಭಿಮಾನಿಗಳಿಗೆ ಒಂದು ವಿನೋದಮಯ ಹಾಡಾಗಿ ತುಂಬಾನೇ ಇಷ್ಟವಾಗಿತ್ತು ಎಂದು ಹೇಳಬಹುದು. ಈಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ನಟ ನಾನಿ ಮತ್ತು ಮಲಯಾಳಂ ನಟಿ ನಜ್ರಿಯಾ ನಜೀಮ್ ಅವರ ಜೋಡಿ ತುಂಬಾನೇ ಚೆನ್ನಾಗಿ ಮೂಡಿಬಂದಿದೆ ಎಂದು ಹೇಳಲಾಗುತ್ತಿದೆ.


ಈ ಚಿತ್ರದಲ್ಲಿ ಈ ಇಬ್ಬರು ನಟರು ಎರಡು ಸಂಪೂರ್ಣ ವಿಭಿನ್ನ ಕುಟುಂಬದ ಹಿನ್ನೆಲೆಗಳಿಂದ ಬಂದ ಪ್ರೇಮಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ರೊಮ್ಯಾಂಟಿಕ್ ಡ್ರಾಮಾ ಇದೇ ಜೂನ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದ್ದಂತೆ, ಈ ಬಹುನಿರೀಕ್ಷಿತ ಚಿತ್ರದ ನಿರ್ಮಾಪಕರು ಥಿಯೇಟರ್ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದಾರೆ.
ಟ್ರೈಲರ್ ನಲ್ಲಿ ಏನಿದೆ?
ಈ ಟ್ರೈಲರ್ ನಲ್ಲಿ ಜೀವಮಾನದಲ್ಲಿ ಒಮ್ಮೆಯಾದರೂ ಅಮೆರಿಕಾಗೆ ಹೋಗುವ ಕನಸು ಕಾಣುತ್ತಿರುವ ಒಬ್ಬ ಮಧ್ಯಮವರ್ಗದ ಕುಟುಂಬದಲ್ಲಿ ಬೆಳೆದ ಹುಡುಗ ಸುಂದರ್ ನನ್ನು ಪರಿಚಯಿಸುವ ಮೂಲಕ ಕ್ಲಿಪ್ ಪ್ರಾರಂಭವಾಗುತ್ತದೆ. ಲೀಲಾ ಥಾಮಸ್ ಪಾತ್ರದಲ್ಲಿ ನಟಿಸುತ್ತಿರುವ ನಟಿ ನಜ್ರಿಯಾ ನಜೀಮ್ ಒಬ್ಬ ಛಾಯಾಗ್ರಾಹಕಿಯಾಗಿದ್ದು, ಸುಂದರ್ ಈಕೆಯನ್ನು ಭೇಟಿಯಾದಾಗ ಅವನ ಜೀವನ ತಿರುವು ಪಡೆಯುತ್ತದೆ. ಇನ್ನೊಂದೆಡೆ ವಿಶ್ವದ ಮೊದಲ ಮಹಿಳಾ ಛಾಯಾಗ್ರಾಹಕಿ ತನ್ನ ಮೊದಲ ಛಾಯಾಚಿತ್ರವನ್ನು ಸೆರೆಹಿಡಿದ ಸ್ಥಳದಲ್ಲಿಯೇ ಮದುವೆಯಾಗಲು ಬಯಸುತ್ತಾಳೆ.


ಇದನ್ನೂ ಓದಿ:  Thurthu Nirgamana: 12 ವರ್ಷಗಳ ನಂತರ ಸ್ಯಾಂಡಲ್​ವುಡ್​ಗೆ ಸುನೀಲ್ ರಾವ್ ರೀ ಎಂಟ್ರಿ, ‘ತುರ್ತು ನಿರ್ಗಮನ‘ ಟ್ರೈಲರ್​ಗೆ ಭಾರೀ ಮೆಚ್ಚುಗೆ


ಈ ಇಬ್ಬರು ಸಾಂಪ್ರದಾಯಿಕ ಕುಟುಂಬಗಳಿಂದ ಬಂದವರು ಮತ್ತು ಅವರ ಪೋಷಕರು ಅಂತರ್ಜಾತಿಯ ವಿವಾಹವನ್ನು ಸಂಪೂರ್ಣವಾಗಿ ವಿರೋಧಿಸುತ್ತಾರೆ. ತಮ್ಮ ಪ್ರೀತಿಪಾತ್ರರ ಮನವೊಲಿಸಲು ಈ ಇಬ್ಬರು ಏನೆಲ್ಲಾ ಮಾಡುತ್ತಾರೆ, ಅದು ಹೇಗೆ ನಗೆಯ ಸವಾರಿಗೆ ಕಾರಣವಾಗುತ್ತದೆ ಎನ್ನುವುದೇ ಚಿತ್ರದ ಕಥೆಯಾಗಿರುತ್ತದೆ. ಟ್ರೈಲರ್ ಕೊನೆಯಲ್ಲಿ, ಸುಂದರ್ ಟಿವಿಯಲ್ಲಿ ಏನೋ ನೋಡುತ್ತಿರುವುದನ್ನು ಕಾಣಬಹುದು ಆದರೆ ನಂತರ ಅವರ ಕುಟುಂಬವು ಅವನಿಗೆ ದಿಟ್ಟಿಸುತ್ತಿದ್ದಂತೆ ಹಿಂದೂ ಆಧ್ಯಾತ್ಮಿಕ ಹಾಡಿಗೆ ಅದನ್ನು ಬದಲಾಯಿಸುತ್ತಾನೆ.


ಮೈತ್ರಿ ಮೂವಿ ಮೇಕರ್ಸ್ ಅಡಿಯಲ್ಲಿ ಸಿನೆಮಾ ನಿರ್ದೇಶನ
‘ಅಂಟೇ ಸುಂದರಾನಿಕಿ’ ಚಿತ್ರವನ್ನು ವಿವೇಕ್ ಆತ್ರೇಯ ಅವರು ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಮೈತ್ರಿ ಮೂವಿ ಮೇಕರ್ಸ್ ಅಡಿಯಲ್ಲಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಹರ್ಷ ವರ್ಧನ್, ಸುಹಾಸ್, ನಧಿಯಾ, ರಾಹುಲ್ ರಾಮಕೃಷ್ಣ, ನರೇಶ್, ಶ್ರೀಕಾಂತ್ ಅಯ್ಯಂಗಾರ್, ರೋಹಿಣಿ ಮತ್ತು ಪೃಥ್ವಿ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.. ಚಿತ್ರಕ್ಕೆ ನಿಕೇತ್ ಬೊಮ್ಮಿರೆಡ್ಡಿ ಛಾಯಾಗ್ರಹಣ ಮಾಡಿದ್ದು, ಹಿನ್ನೆಲೆ ಸಂಗೀತ ಮತ್ತು ಹಾಡುಗಳನ್ನು ವಿವೇಕ್ ಸಾಗರ್ ನೀಡಿದ್ದಾರೆ.


ಇದನ್ನೂ ಓದಿ:  Justin Bieber: ಭಾರತಕ್ಕೆ ಬರಲಿದ್ದಾರಂತೆ ಪಾಪ್ ಸ್ಟಾರ್ ಜಸ್ಟಿನ್ ಬೈಬರ್! ಯಾವಾಗ ಎಲ್ಲಿ ಗೊತ್ತಾ?


ನಟ ನಾನಿ ಅವರಮುಂದಿನ ಸಿನೆಮಾ
ಕೆಲಸದ ವಿಷಯಕ್ಕೆ ಬಂದರೆ, ನಟ ನಾನಿ ಅವರ ಇತರ ಸಾಹಸ ಚಿತ್ರಗಳಲ್ಲಿ ಶ್ರೀಕಾಂತ್ ಒಡೆಲಾ ಅವರ ಆಕ್ಷನ್ ಡ್ರಾಮಾ, ‘ದಸರಾ’ ಸೇರಿದೆ. ಮುಂಬರುವ ಈ ಚಿತ್ರಕ್ಕಾಗಿ ಅವರು ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಅವರೊಂದಿಗೆ ಜೋಡಿಯಾಗಿದ್ದಾರೆ. ಈ ಚಿತ್ರದಲ್ಲಿ ನಾನಿ ‘ಧರಣಿ’ ಎಂಬ ಹೆಸರಿನ ಒರಟಾದ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Published by:Ashwini Prabhu
First published: