ಪ್ರಶಸ್ತಿ ಸ್ವೀಕರಿಸಿದ ನಟ ನಾನಿಯ ಕಾಲೆಳೆದ Samantha: ಅಮೀರ್​ ಖಾನ್​ಗೆ ಧನ್ಯವಾದ ತಿಳಿಸಿದ Naga Chaitanya..!

ಸಮಂತಾ ನಟ ನಾನಿ ಅವರಿಗೆ ತಮಾಷೆಯಾಗಿ ಧನ್ಯವಾದ ಹೇಳಲು ಟ್ರೋಫಿಯ ಫೋಟೋವನ್ನು ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಮಂತಾ 'ಅತ್ಯುತ್ತಮ ನಟಿ' ಪ್ರಶಸ್ತಿ ನಿಮಗೆ ಸಿಗುತ್ತದೆ ಎಂದು ಎಂದಾದರೂ ನೀವು ಭಾವಿಸಿದ್ದೀರಾ ಎಂದು ನಾನಿಯನ್ನು ಕೇಳಿದ್ದಾರೆ.

ನಾಗಚೈತನ್ಯ-ಸಮಂತಾ

ನಾಗಚೈತನ್ಯ-ಸಮಂತಾ

  • Share this:
ದಕ್ಷಿಣ ಭಾರತದ ಚಿತ್ರೋದ್ಯಮದ ಪ್ರತಿಷ್ಠಿತ ಸೈಮಾ ಪ್ರಶಸ್ತಿ ಸಮಾರಂಭವು ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ದಕ್ಷಿಣ ಭಾರತದ ಚಿತ್ರರಂಗದ ಅನೇಕ ತಾರೆಯರು ಈ ಸಮಾರಂಭದಲ್ಲಿ ಭಾಗವಹಿಸಿ ಈ ಪ್ರಶಸ್ತಿ ಸಮಾರಂಭಕ್ಕೆ ಮತ್ತಷ್ಟು ಮೆರಗನ್ನು ನೀಡಿದ್ದರು. ಅದರಲ್ಲಿ ಕೆಲ ನಟ ನಟಿಯರು ತಮ್ಮ ವೈಯಕ್ತಿಕ ಕಾರಣಗಳಿಂದ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಹಾಗೆಯೇ ನಟಿ ಸಮಂತಾ ಅಕ್ಕಿನೇನಿ ಸಹ ಇದಕ್ಕೆ ಗೈರಾಗಿದ್ದರು. ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೆ ಇದ್ದುದ್ದರಿಂದ ಟಾಲಿವುಡ್​ ನಟಿ ಸಮಂತಾ ಅಕ್ಕಿನೇನಿ (Samanth Akkineni) ಅವರಿಗೆ ಲಭಿಸಿದ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಅವರ ಪರವಾಗಿ ಒಬ್ಬ ನಟ ಸ್ವೀಕರಿಸಿದ್ದಾರೆ.

ನಟಿ ಸಮಂತಾರಿಗೆ ಲಭಿಸಿದ ಪ್ರಶಸ್ತಿಯನ್ನು ಯಾವ ನಟ ವೇದಿಕೆ ಮೇಲೆ ಹೋಗಿ ಸ್ವೀಕರಿಸಿದ್ದಾರೆ ಅಂತೀರಾ..? ಆ ನಟ ಬೇರೆ ಯಾರು ಅಲ್ಲ, ತೆಲುಗು ಚಿತ್ರರಂಗದ ನಟ ನಾನಿ (Nani). ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಸಮಂತಾರಿಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವರ ಪರವಾಗಿ, ನಾನಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.


View this post on Instagram


A post shared by S (@samantharuthprabhuoffl)


ಈಗ, ಸಮಂತಾ ನಟ ನಾನಿ ಅವರಿಗೆ ತಮಾಷೆಯಾಗಿ ಧನ್ಯವಾದ ಹೇಳಲು ಟ್ರೋಫಿಯ ಫೋಟೋವನ್ನು ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಮಂತಾ 'ಅತ್ಯುತ್ತಮ ನಟಿ' ಪ್ರಶಸ್ತಿ ನಿಮಗೆ ಸಿಗುತ್ತದೆ ಎಂದು ಎಂದಾದರೂ ನೀವು ಭಾವಿಸಿದ್ದೀರಾ ಎಂದು ನಾನಿಯನ್ನು ಕೇಳಿದ್ದಾರೆ.

ಇದನ್ನೂ ಓದಿ: Nani: ಮೊದಲ ದಿನ ಚಿತ್ರೀಕರಣದ ಸೆಟ್​ನಲ್ಲಿ ತೆಗೆದ ಫೋಟೋ ಹಂಚಿಕೊಂಡ ನಟ ನಾನಿ..!

ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ‘ಜೆರ್ಸಿ’ ಚಿತ್ರದಲ್ಲಿ ಅಭಿನಯಕ್ಕಾಗಿ ‘ಎಂಟರ್​ಟೈನರ್ ಆಫ್​ ದಿ ಇಯರ್’ ಪ್ರಶಸ್ತಿಯನ್ನು ಪಡೆದ ನಾನಿಗೆ ಅಭಿನಂದನೆಗಳನ್ನು ಸಹ ಹೇಳಿದ್ದಾರೆ. ಜೆರ್ಸಿ ಚಿತ್ರದಲ್ಲಿ ನೀವು ತುಂಬಾ ಚೆನ್ನಾಗಿ ಅಭಿನಯಿಸಿದ್ದೀರಾ ಎಂದು ಸಮಂತಾ ತಮ್ಮ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಮತ್ತೊಂದೆಡೆ, ಲವ್ ಸ್ಟೋರಿ ಚಿತ್ರದ ಪ್ರೀ-ಲಾಂಚ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಮತ್ತು ತೆಲುಗಿನ ನಟ ಚಿರಂಜೀವಿ ಇಬ್ಬರು ಬಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದಕ್ಕೆ ನಟ ನಾಗ ಚೈತನ್ಯ ಇಬ್ಬರು ದಿಗ್ಗಜ ನಟರಿಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಚಿತ್ರದ ಪ್ರೀ-ಲಾಂಚ್ ಸಮಾರಂಭದ ಕೆಲವು ಫೋಟೋಗಳನ್ನು ಹಂಚಿಕೊಂಡು ಅವರಿಗೆ ಧನ್ಯವಾದವನ್ನು ಹೇಳಿದ್ದಾರೆ.
ನಾಗ ಚೈತನ್ಯ ಚಿರಂಜೀವಿ ಮತ್ತು ಅಮೀರ್ ಖಾನ್‌ರೊಂದಿಗೆ ಸಮಾರಂಭದಲ್ಲಿ ಪಾಲ್ಗೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮುಂಬರುವ ಚಿತ್ರ ಲವ್ ಸ್ಟೋರಿಯ ಪ್ರೀ-ಲಾಂಚ್ ಸಮಾರಂಭಕ್ಕೆ ಮೆರುಗು ನೀಡಿದರು, ಇದು ನಿನ್ನೆ ರಾತ್ರಿ ಹೈದರಾಬಾದ್‌ನಲ್ಲಿ ನಡೆಯಿತು.

ಇದನ್ನೂ ಓದಿ: Nani: ನ್ಯಾಚುರಲ್ ಸ್ಟಾರ್ ​ನಾನಿಗೆ ವಿಲನ್​ ಆದ್ರಾ ಈ ಬಾಲಿವುಡ್​ ನಟಿ..!

ನಟ ನಾಗ ಚೈತನ್ಯ ತಮ್ಮ ಟ್ವೀಟ್‌ನಲದಲಿ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಯಶಸ್ಸು ಮಾಡಿದ್ದಕ್ಕಾಗಿ ಚಿರು ಸರ್ ಮತ್ತು ಅಮೀರ್ ಸರ್ ಇಬ್ಬರಿಗೂ ಧನ್ಯವಾದಗಳು. ನಿಮ್ಮ ಮಾತುಗಳು ನಮ್ಮೆಲ್ಲರನ್ನೂ ಪ್ರೇರೇಪಿಸಿವೆ" ಎಂದು ಬರೆದಿದ್ದಾರೆ.

ನಾಗ ಚೈತನ್ಯ ಮಾಡಿರುವ ಟ್ವೀಟ್​ ಲಿಂಕ್​...ಅಮೀರ್ ಖಾನ್ ವಿಶೇಷವಾಗಿ ನಾಗ ಚೈತನ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೈದರಾಬಾದ್‌ಗೆ ಬಂದಿದ್ದರು ಮತ್ತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಚಯ್ ಒಬ್ಬ ಒಳ್ಳೆಯ ವ್ಯಕ್ತಿ ಎಂದು ಹೇಳಿ, ಅವರ ಹೆತ್ತವರನ್ನು ಭೇಟಿಯಾದರು. ಈ ಕಾರ್ಯಕ್ರಮದಲ್ಲಿ ಅಮೀರ್ ಖಾನ್ ತಮ್ಮ ಬಹುನಿರೀಕ್ಷಿತ ಸಿನಿಮಾ ‘ಲಾಲ್ ಸಿಂಗ್ ಚಡ್ಡಾ’ದ ಸಹ ನಟ ನಾಗ ಚೈತನ್ಯ ನಟನೆಯ ಬಗ್ಗೆ ಮತ್ತು ವ್ಯಕ್ತಿತ್ವದ ಬಗ್ಗೆ ಶ್ಲಾಘಿಸಿದರು.
Published by:Anitha E
First published: