ತೆಲುಗು ಸೂಪರ್‌ಸ್ಟಾರ್‌ಗಳಾದ ನಾನಿ (Nanu) ಮತ್ತು ರಾಣಾ ದಗ್ಗುಬಾಟಿ (Rana Daggubati) ಅವರು ಸೋನಿ ಲೈವ್‌ನಲ್ಲಿ ನಿರೂಪಕಿ ಮತ್ತು ಗಾಯಕಿ ಸ್ಮಿತಾ ಅವರು ನಡೆಸಿಕೊಡುವ ನಿಜಮ್ ವಿತ್ ಸ್ಮಿತಾ ಶೋಗೆ ಆಗಮಿಸಿ ಮಾತುಕತೆ, ಹರಟೆ, ಹಾಸ್ಯ ಮಾಡಿದ್ದಾರೆ. ಹೀಗೆ ಸಿನಿಮಾ ಬ್ಯಾಗ್ರೌಂಡ್‌ನಿಂದ ಬಾರದ ನಾನಿಗೆ ನೆಪೊಟಿಸಂ(ಸ್ವಜನಪಕ್ಷಪಾತ) (Nepotism) ಕುರಿತು ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸುವಾಗ ನಾನಿ ತಮ್ಮನ್ನು ರಾಮ್ ಚರಣ್ (Ram Charan) ಜೊತೆ ಹೋಲಿಸಿಕೊಂಡು ಉತ್ತರಿಸಿದ್ದಾರೆ.
ನೆಪೋಟಿಸಂ ಪ್ರೋತ್ಸಾಹಿಸುವ ಜವಾಬ್ದಾರಿ ಪ್ರೇಕ್ಷಕರದ್ದೇ ಆಗಿದೆ
ನಾನಿ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಸಿನಿ ಕ್ಷೇತ್ರಕ್ಕೆ ಬಂದವರು. ಇನ್ನೂ ರಾಮ್‌ಚರಣ್ ಹೇಳಿ ಕೇಳಿ ಮೆಗಾಸ್ಟಾರ್ ಚಿರಂಜೀವಿ ಪುತ್ರ. ಹೀಗೆ ಸ್ವಜನಪಕ್ಷಪಾತದ ಬಗ್ಗೆ ಚಾಟ್ ಶೋನ ನಿರೂಪಕಿ ಸ್ಮಿತಾ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ನಾನಿ, ಈ ವಿಷಯದಲ್ಲಿ ನಾನು ನನ್ನ ಜೊತೆ ರಾಮ್ ಚರಣ್ ಅವರನ್ನು ಹೋಲಿಸಿಕೊಳ್ಳುತ್ತೇನೆ.
ನನ್ನ ಮೊದಲ ಸಿನಿಮಾ 1 ಲಕ್ಷ ಜನ ಮಾತ್ರ ನೋಡಿದ್ದಾರೆ
ನಾವಿಬ್ಬರು ಸಿನಿಮಾ ಮಾಡಿದ್ದೇವೆ. ನನ್ನ ಮೊದಲ ಸಿನಿಮಾವನ್ನು ಕೇವಲ ಒಂದು ಲಕ್ಷ ಜನ ನೋಡಿದ್ದಾರೆ. ಇದೇ ವೇಳೆ ರಾಮ್ ಚರಣ್ ಮೊದಲ ಚಿತ್ರವನ್ನು ಒಂದು ಕೋಟಿ ಜನ ವೀಕ್ಷಿಸಿದ್ದಾರೆ. ವೀಕ್ಷಕರು ಯಾವಾಗಲೂ ತಮ್ಮ ಸ್ಟಾರ್ ನಟರನ್ನು ನೋಡಲು ಬಯಸುತ್ತಾರೆ.
ಅವರ ನೆಚ್ಚಿನ ಸ್ಟಾರ್ ಮಕ್ಕಳ ಚಿತ್ರವನ್ನೇ ಹೆಚ್ಚು ವೀಕ್ಷಿಸುತ್ತಾರೆ. ಅವರ ಪುತ್ರ-ಪುತ್ರಿಯರನ್ನು ಥೊಯೇಟರ್ನಲ್ಲಿ ನೋಡಲು ಬಯಸುತ್ತಾರೆ. ಸ್ವಜನಪಕ್ಷಪಾತವನ್ನು ಪ್ರೋತ್ಸಾಹಿಸುವ ವಿಚಾರದಲ್ಲಿ ಪ್ರೇಕ್ಷಕರದ್ದೇ ಜವಾಬ್ದಾರಿ ಹೆಚ್ಚಿದೆ ಎಂದು ನಾನಿ ಹೇಳಿದ್ದಾರೆ.
ರಾಣಾ ದಗ್ಗುಬಾಟಿ ನೆಪೋಟಿಸಂ ಬಗ್ಗೆ ಏನಂದ್ರು?
ಖ್ಯಾತ ಚಲನಚಿತ್ರ ನಿರ್ಮಾಪಕ ಡಿ. ಸುರೇಶ್ ಬಾಬು ಅವರ ಪುತ್ರರಾಗಿರುವ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಕೂಡ ನೆಪೋಟಿಸಂ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಪರಂಪರೆಯನ್ನು ಸಾಗಿಸುವುದು ಪ್ರೇಕ್ಷಕರಿಗೆ ಹೆಮ್ಮೆಯ ಸಂಗತಿ. ನಿಮ್ಮ ಹೆತ್ತವರ ಸಾಧನೆ ಮತ್ತು ಪರಂಪರೆಯನ್ನು ನೀವು ಮುಂದುವರಿಸಲು ಸಾಧ್ಯವಾಗದಿದ್ದರೆ, ನೀವು ನಿಮ್ಮ ಕುಟುಂಬಕ್ಕೆ ಅಪಚಾರ ಮಾಡುತ್ತಿದ್ದೀರಿ ಎಂದರ್ಥ ಬರುತ್ತದೆ ಎಂದು ರಾಣಾ ದಗ್ಗುಬಾಟಿ ನೆಪೋಟಿಸಂ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.
ನಿಜಮ್ ವಿತ್ ಸ್ಮಿತಾ ಪ್ರೋಮೋ ವೈರಲ್
ಸದ್ಯ ನಿಜಮ್ ವಿತ್ ಸ್ಮಿತಾ ಕಾರ್ಯಕ್ರಮದಲ್ಲಿ ಗಾಯಕಿ ಮತ್ತು ನಿರೂಪಕಿ ಸ್ಮಿತಾ ಕೇಳಿದ ಪ್ರಶ್ನೆಯನ್ನು ಕಾರ್ಯಕ್ರಮದ ಪ್ರೋಮೋದಲ್ಲಿ ಬಿಡುಗಡೆ ಮಾಡಿದ್ದು. ಇಬ್ಬರು ನಟರ ಹೇಳಿಕೆಯ ಪ್ರೋಮೋ ಸಖತ್ ವೈರಲ್ ಆಗುತ್ತಿದೆ.
39ನೇ ವಸಂತಕ್ಕೆ ಕಾಲಿಟ್ಟ ನಾನಿ
ಇನ್ನೂ ಫೆಬ್ರವರಿ 24 ರಂದು 39 ನೇ ಹುಟ್ಟುಹಬ್ಬವನ್ನು ಟಾಲಿವುಡ್ ಯಂಗ್ ಹೀರೋ, ನ್ಯಾಚುರಲ್ ಸ್ಟಾರ್ ನಾನಿ ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ವೇಳೆ ಪ್ರೇಕ್ಷಕ ಪ್ರಭುಗಳಿಗೆ ನಾನಿ ಧನ್ಯವಾದ ಅರ್ಪಿಸಿದ್ದಾರೆ. ಇನ್ನೂ ಮುಂಬರುವ ದಸರಾ ಸಿನಿಮಾವನ್ನು ನೋಡುವಂತೆ ಪ್ರೇಕ್ಷಕರನ್ನು ಕೇಳಿದ್ದಾರೆ.
ಇದನ್ನೂ ಓದಿ: Simbu: ಬರೋಬ್ಬರಿ 7 ನಟಿಯರ ಜೊತೆ ಡೇಟಿಂಗ್, ಸಿಂಬು ಲವ್-ಬ್ರೇಕಪ್ ಸ್ಟೋರಿ!
ದಸರಾ ಸಿನಿಮಾದಲ್ಲಿ ಮಾಸ್ ಅವತಾರದಲ್ಲಿ ಮಿಂಚಿರುವ ನಾನಿಗೆ ಈ ಚಿತ್ರ ಹಿಟ್ ಕೊಡುತ್ತದೆ ಎಂದು ಸಿನಿ ಮೂಲಗಳು ಮಾತಾಡಿಕೊಳ್ಳುತ್ತಿವೆ. ಈ ಆಕ್ಷನ್-ಪ್ಯಾಕ್ಡ್ ದಸರಾ ಸಿನಿಮಾ ಟ್ರೈಲರ್ ಮತ್ತು ಹಾಡುಗಳು ಈಗಾಗಲೇ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿವೆ.
ಇನ್ನೂ ಹುಟ್ಟುಹಬ್ಬದ ಪಾರ್ಟಿ ಭರ್ಜರಿಯಾಗಿ ನಡೆದಿದ್ದು, ಪತ್ನಿ ಅಂಜಲಿ ಮತ್ತು ಅವರ ಸ್ನೇಹಿತರ ಬಳಗದ ಜೊತೆ ನಾನಿ ಪಾರ್ಟಿ ಮಾಡಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗಿದೆ.
ಟಾಲಿವುಡ್‌ನಲ್ಲಿ ಹೆಸರಾಂತ ನಟರ ಪಟ್ಟಿಯಲ್ಲಿರುವ ನಾನಿ 15 ವರ್ಷಗಳ ಅದ್ಭುತ ಸಿನಿಮಾ ಜರ್ನಿಯಲ್ಲಿ 28 ಸಿನಿಮಾ ಮಾಡಿದ್ದಾರೆ. ಈಗ ಸಿನಿಮಾ ಇವರಿಗೆ ಬಿಗ್ ಹಿಟ್ ನೀಡಿತ್ತು. ಜಂಟಲ್‌ಮೆನ್, ಜರ್ಸಿ, ಗ್ಯಾಂಗ್‌ಲೀಡರ್ ಹೀಗೆ ಹಲವು ಸಿನಿಮಾಗಳಲ್ಲಿ ನಾನಿ ನಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ