ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ (Bigg Boss) ಈ ಬಾರಿ ಓಟಿಟಿಯಲ್ಲಿ (OTT) ಪ್ರಸಾರವಾಗ್ತಿದ್ದು, ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ತಮ್ಮ ಜೀವನ ಅನೇಕ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಹೀಗಾಗಿ ಎಲ್ಲೆಲ್ಲೂ ಬಿಗ್ ಬಾಸ್ ಸ್ಪರ್ಧಿಗಳ (Bigg Boss Contestants) ಕುರಿತ ಚರ್ಚೆಗಳು ಹೆಚ್ಚಾಗಿದೆ. ದೊಡ್ಮನೆಯಲ್ಲಿ ಲವ್ ಸ್ಟೋರಿ ಶುರು ಹೊಸದಲ್ಲ ಅನೇಕ ಪ್ರೇಮ ಕಥೆ ಹುಟ್ಟಿದೆ. ಆದ್ರೆ ಬಿಗ್ ಬಾಸ್ ಮನೆಯೊಳಗೆ ಪ್ರೇಮಿಗಳಾಗಿ ಬಂದು ನಂದು ಜಸ್ವಂತ್ ನಡುವೆ ಇದೀಗ ಮನಸ್ತಾಪ ಉಂಟಾಗಿದೆ. ಅದ್ಯಾಕೋ ಇಬ್ಬರು ಮುನಿಸಿಕೊಂಡಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಪ್ರೇಮಕಥೆ
ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ಲವ್ ಸ್ಟೋರಿಗಳು ಹುಟ್ಟಿಕೊಂಡಿವೆ. ಕೆಲವರು ಬಿಗ್ ಬಾಸ್ ಮನೆಯಲ್ಲಿ ಫೇಮಸ್ ಆಗಲು ಪ್ರೀತಿ-ಪ್ರೇಮದ ಆಟ ಆಡಿದರೆ ಇನ್ನೂ ಕೆಲವರು, ನಿಜವಾಗಿ ಪ್ರೀತಿಸಿ ಮನೆಯಿಂದ ಹೊರಬಂದು ಮದುವೆ ಆಗಿದ್ದಾರೆ. ಇದೀಗ ಓಟಿಟಿಯಲ್ಲಿ ಪ್ರಸಾರವಾಗ್ತಿರೋ ಬಿಗ್ಬಾಸ್ ಮನೆಯಲ್ಲಿ ಲವ್ ಬರ್ಡ್ಸ್ ಜಸ್ವಂತ್ ಹಾಗೂ ನಂದು ಇಬ್ಬರು ಈ ಹಿಂದೆ ಒಂದೇ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ಬಳಿಕ ಬಿಗ್ ಬಾಸ್ ಇಬ್ಬರನ್ನು ಬೇರೆ ಬೇರೆಯಾಗಿ ಸ್ಪರ್ಧಿಸುವಂತೆ ಹೇಳಿದೆ. ಇದೀಗ ಈ ಪ್ರೇಮಿಗಳ ನಡುವೆ ಮನಸ್ತಾಪ ಉಂಟಾಗಿದೆ.
ಸಾನ್ಯಾ ಪಕ್ಕದಲ್ಲಿ ಕೂತ ಜಶ್ವಂತ್
ಊಟಕ್ಕೆಂದು ಸಾನ್ಯಾ ಪಕ್ಕದಲ್ಲಿ ಕೂತಿದ್ದೇ ತಪ್ಪಾಗಿ ಹೋಗಿದೆ. ಬಿಗ್ ಬಾಸ್ ಮನೆಯಲ್ಲಿ ಅಡುಗೆ ಮಾಡೋಕೆ ಜಶ್ವಂತ್ಗೆ ಸೂಚನೆ ನೀಡಲಾಗಿದೆ. ಈ ವೇಳೆ ಜಶ್ವಂತ್ ಎಲ್ಲರಿಗೂ ಅಡುಗೆ ಮಾಡಿ ಕೊಟ್ಟಿದ್ದಾರೆ. ಅಡುಗೆ ಮಾಡಿದ ನಂತರ ಎಲ್ಲರೂ ಟೇಬಲ್ಗೆ ಬಂದು ಊಟ ಮಾಡೋಕೆ ಶುರು ಮಾಡಿದರು. ನಂದಿನಿ ಹಾಗೂ ಸಾನ್ಯಾ ಇಬ್ಬರ ಪಕ್ಕದಲ್ಲೂ ಕುರ್ಚಿ ಖಾಲಿ ಇದ್ದವು. ಆಗ ಜಶ್ವಂತ್ ಬಂದು ನಂದಿನಿ ಪಕ್ಕಾ ಕೂರದೇ ಸಾನ್ಯಾ ಪಕ್ಕ ಬಂದು ಕೂತಿದ್ದಾರೆ. ಇದ್ರಿಂದ ನಂದಿನಿ ಕೆಂಡಾಮಂಡಲರಾಗಿದ್ದಾರೆ.
ಸಾನ್ಯಾ- ಜಶ್ವಂತ್ ಫುಲ್ ಕ್ಲೋಸ್
ಸಾನ್ಯಾ ಅಯ್ಯರ್ ಹಾಗೂ ಜಶ್ವಂತ್ ಕ್ಲೋಸ್ ಆಗಿದ್ದಾರೆ ಎಂಬ ವಿಚಾರಕ್ಕೆ ನಂದಿನಿ ಅವರು ಸಿಟ್ಟು ಮಾಡಿಕೊಂಡು ಜಗಳ ತೆಗೆದಿದ್ದಾರೆ. ಸಾನ್ಯಾ ವಿಚಾರದಲ್ಲಿ ನಂದಿನಿ ಕೋಪಗೊಂಡಿದ್ದಾರೆ. ಜಶ್ವಂತ್ ನನ್ನು ನಂದಿನಿ ಪ್ರಶ್ನೆ ಮಾಡಿದ್ದಾರೆ. ಬಳಿಕ ಈ ವಿಚಾರಕ್ಕೆ ಅವರು ಸ್ಪಷ್ಟನೆ ನೀಡುವ ಕೆಲಸ ಮಾಡಿದರು. ಆದರೆ, ನಂದಿನಿ ಸಿಟ್ಟು ಮಾತ್ರ ಕಡಿಮಾಯಾಗಿಲ್ಲ ಸಾನ್ಯಾ ಎದುರಲ್ಲೂ ನಂದಿನಿ ಅವರು ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಮಾತಿಗೆ ಮಾತು ಕೂಡ ಬೆಳೆದಿದೆ.
ಇದನ್ನೂ ಓದಿ: Bigg Boss OTT: ರಾಕೇಶ್ ಜೊತೆ ಬೇರೆ ಹುಡುಗಿ ಮಾತಾಡಿದ್ರೆ ಈಕೆಗೆ ಉರಿಯುತ್ತಂತೆ, ಜೋಶ್ ಹುಡುಗನಿಗೆ ಜೋತುಬಿದ್ದ ಸೋನು!
View this post on Instagram
ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಹೋಗೋಕೆ ಕಾಫಿ ನಾಡು ಚಂದು ನಾನಾ ಕಸರತ್ತು! ಶುರುವಾಯ್ತು ಹೊಸ ಅಭಿಯಾನ
ನಂದು ಪ್ರಶ್ನೆಗೆ ಉತ್ತರಿಸಿದ ಸಾನ್ಯಾ, ನಮ್ಮಿಬ್ಬರ ನಡುವೆ ಫ್ರೆಂಡ್ಶಿಪ್ ಮಾತ್ರ ಇದೆ ಎಂದು ಹೇಳಿದ್ದಾರೆ. ಇದಕ್ಕೆ ನಂದಿನಿ ಬೇಸರ ಮಾಡಿಕೊಂಡರು. ನಿಮ್ಮಿಬ್ಬರ ನಡುವೆ ಏನೋ ಇದೆ ಎಂದು ನನಗೆ ಅನಿಸುತ್ತಿಲ್ಲ. ಆದರೆ, ಮನೆಯ ಮಂದಿ ಬೇರೆ ರೀತಿ ನೋಡುತ್ತಾರೆ. ಅದು ನನಗೆ ಇಷ್ಟ ಆಗಲ್ಲ. ಅವನಿಗೆ ಬಿಗ್ ಬಾಸ್ ಮನೆಯ ಹೊರಗೆ ಅನೇಕರು ಕ್ಲೋಸ್ ಇದ್ದಾರೆ. ಅದು ನನಗೆ ಮ್ಯಾಟರ್ ಆಗಲ್ಲ ಎಂದರು. ಕೆಲ ದಿನಗಳಿಂದ ಜಶ್ವಂತ್ ಸಾನ್ಯಾ ತುಂಬಾ ಕ್ಲೋಸ್ ಆಗ್ತಿದ್ದಾರೆ ಅನ್ನೋ ಬಗ್ಗೆ ಬಿಗ್ ಬಾಸ್ ಮನೆಯಲ್ಲೇ ಚರ್ಚೆಗಳು ಶುರುವಾಗಿದ್ವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ